ಸಂಕ್ರಾಂತಿ ಹಿಂದೂಗಳ ಪವಿತ್ರ ಹಬ್ಬ – ಶ್ರೀಮತಿ ಕ್ಷಮಾ ಬಿ ಎಸ್

ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬವು ಎಳ್ಳು -ಬೆಲ್ಲದ ಸಮ್ಮಿಶ್ರಣದಂತೆ ಎಲ್ಲರ ಬಾಳಿನಲ್ಲೂ ಹೊಸ ಚೈತನ್ಯವನ್ನು
ಮೂಡಿಸಲಿ ಎಂದು ಶಾಲಾ ಮಾತೃಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕ್ಷಮಾ ಬಿ.ಎಸ್ ಇವರು  ಶಾಲೆಯಲ್ಲಿ ನಡೆದ ಮಕರ ಸಂಕ್ರಾಂತಿ ಆಚರಣೆಯ ಸಂದರ್ಭದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿಈ ಮೇಲಿನ ಮಾತನ್ನಾಡಿದರು.

ಅಭ್ಯಾಗತರಾಗಿ ಆಗಮಿಸಿದ ಶಾಲಾ ಪೋಷಕರಾದ ಶ್ರೀಮತಿ ದೀಪಿಕಾರವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ
ಬಹುಮಾನ ವಿತರಿಸಿದರು. ಪೂರ್ವಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳು ವಿವೇಕಾನಂದರ ಉಡುಗೆ – ತೊಡುಗೆಯಲ್ಲಿ
ಸಂಭ್ರಮಿಸಿದರು. ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಮಾತಂಗಿ
ಪ್ರಾರ್ಥಿಸಿ, ಯಜ್ಞ ಬಿ ಸ್ವಾಗತಿಸಿ, ಯಶಸ್ವಿ ವಿ ಎಸ್ ಧನ್ಯವಾದ ಗೈದ ಕಾರ್ಯಕ್ರಮವನ್ನು ಅದ್ವಿತ್ ಜಿ ನಿರೂಪಿಸಿದರು.

Highslide for Wordpress Plugin