ವೈಯಕ್ತಿಕ ಚಾಂಪಿಯನ್

ವೈಯಕ್ತಿಕ ಚಾಂಪಿಯನ್

Saturday, September 7th, 2013

ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ಮೈಸೂರಿನ ಕೆ.ಆರ್ ನಗರದಲ್ಲಿ ನಡೆದ ಪ್ರಾಂತೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಹಾಗೂ ವೀರಾಗ್ರಣಿ ಪ್ರಶಸ್ತಿ ಪಡೆದಿರುತ್ತಾರೆ. ಇವರಲ್ಲಿ ಕು|ವಾಣಿ  ವೈಯಕ್ತಿಕ ಚಾಂಪಿಯನ್ ಗಳಿಸಿ ವಿಶಾಖ ಪಟ್ಟಣದಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

ವಿವೇಕಾನಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು - ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ

ವಿವೇಕಾನಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು – ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ

Saturday, September 7th, 2013

ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ಮೈಸೂರಿನ ಕೆ.ಆರ್ ನಗರದಲ್ಲಿ ನಡೆದ ಪ್ರಾಂತೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಹಾಗೂ ವೀರಾಗ್ರಣಿ ಪ್ರಶಸ್ತಿ ಪಡೆಯುವುದರ ಮೂಲಕ ರಂಜಿತ್, ಯತೀಶ್, ವೀಣಾ, ವಾಣಿ, ಆಯಿಷಾ, ಸವಿತಾ, ಸೌಮ್ಯ, ಸಂಧ್ಯಾ,ಪೂಜಾ ವಿಶಾಖ ಪಟ್ಟಣದಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Monday, September 2nd, 2013

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಕು|ರಕ್ಷಿತ್.ಕೆ ಬಾಲವನ ಈಜುಕೊಳ ಪುತ್ತೂರು ಇಲ್ಲಿ ನಡೆದ ಹದಿನೇಳು ವರ್ಷದ ಮಯೋಮಿತಿಯ ಬಾಲಕರ 800ಮೀ ಪ್ರೀ ಸ್ಟೈಲ್ ಸ್ಪರ್ಧೆಯಲ್ಲಿ ದ್ವಿತೀಯ, 400 ಮೀ ವೈಯಕ್ತಿಕ ಮಿಡ್ಲೆಯಲ್ಲಿ ದ್ವಿತೀಯ, 400ಮೀ ಫ್ರೀಸ್ಟೈಲ್‌ನಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದ ಈಜುಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಖೋ-ಖೋ ಜಿಲ್ಲಾಮಟ್ಟಕ್ಕೆ ಆಯ್ಕೆ

ಖೋ-ಖೋ ಜಿಲ್ಲಾಮಟ್ಟಕ್ಕೆ ಆಯ್ಕೆ

Monday, September 2nd, 2013

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಂಗಳೂರು ಉಪನಿರ್ದೇಶಕರ ಕಚೇರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕೊಂಬೆಟ್ಟು ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 2013-14ನೇ ಸಾಲಿನ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ದಿನಾಂಕ 05.09.2013ರಂದು ಹಾಸನದಲ್ಲಿ ನಡೆಯುವ ವಿಭಾಗ ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ

ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ

Friday, August 30th, 2013

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ತಿಂಗಳಾಡಿಯಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ೧೭ರ ವಯೋಮಾನದ ಸ್ಪರ್ಧೆಯಲ್ಲಿ ಸುಮ ಪ್ರಥಮ, ಗ್ರೀಷ್ಮಾ ಪಂಚಮ ಹಾಗೂ ವಸುಧಾ ಪ್ರಥಮ, ಬಾಲಕರ ವಿಭಾಗದಲ್ಲಿ ಪೃಥ್ವಿನಾರಾಯಣ ಭಟ್ ಎಂ.ಜಿ ಪ್ರಥಮ ಸ್ಥಾನ ಪಡೆದು ದಿನಾಂಕ 12.09.2013ರಂದು ಸುಬ್ರಮಣ್ಯದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಯೋಗಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ವಾಲಿಬಾಲ್ ಪ್ರಥಮ

ವಾಲಿಬಾಲ್ ಪ್ರಥಮ

Friday, August 30th, 2013

ವಾಲಿಬಾಲ್ ಅಸೋಸಿಯೇಶನ್ ಪುತ್ತೂರು ಮತ್ತು ವಿದ್ಯಾರಶ್ಮಿ ಪ್ರೌಢಶಾಲೆ ಸವಣೂರು ಇವರ ವತಿಯಿಂದ ನಡೆದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕ ಶ್ರೀ ದಾಮೋದರ್ ತರಬೇತಿ ನೀಡಿರುತ್ತಾರೆ.

ರಾಜ್ಯಮಟ್ಟಕ್ಕೆ  ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Friday, August 30th, 2013

ರಾಮಕುಂಜ ಪ್ರೌಢಶಾಲೆ ಹಾಗೂ ವಿದ್ಯಾಭಾರತಿ ಕರ್ನಾಟಕ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಅಂತರ್ ಶಾಲಾ ಅತ್ಲೆಟಿಕ್ಸ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಹುಡುಗಿಯರು, ಕಿಶೋರವರ್ಗದ ಹುಡುಗರು, ಹುಡುಗಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 25 ವಿದ್ಯಾರ್ಥಿಗಳು ರಾಜ್ಯಮಟ್ಟದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಶೈಕ್ಷಣಿಕ ಸಹಮಿಲನ 2013-14

ಶೈಕ್ಷಣಿಕ ಸಹಮಿಲನ 2013-14

Monday, August 26th, 2013

ಪುತ್ತೂರು: ಜುಲೈ 13. ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸಹಮಿಲನ 2013-14 ಒಂದು ದಿನದ ಕಾರ್ಯಾಗಾರ ‘ಯಾದವಶ್ರೀ ಸಭಾಂಗಣ’ ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ನಡೆಯಿತು. ಶ್ರೀ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಆಧ್ಯಾತ್ಮ ಹಾಗೂ ಆದರ್ಶ ತತ್ವಗಳಿಂದ ಪ್ರೇರಿತವಾದ ಶಿಕ್ಷಣವು ವಿದ್ಯಾಭಾರತಿ ಸಂಸ್ಥೆಗಳಿಂದ ದೊರೆಯುತ್ತಿರುವುದು ಶ್ಲಾಘನೀಯ ಎಂದರು. ಆದರ್ಶಗಳು ವಿಚಾರಗಳು ಎಂದೂ ಸಾಯುವುದಿಲ್ಲ ಕನಸು ಕಾಣಬೇಕು. ಕನಸು ಕಂಡಾಗ ವಿಚಾರಗಳು ಬರುತ್ತವೆ. ವಿಚಾರಗಳು ತಿಳಿದಾಗ ವ್ಯವಹಾರಗಳು ಉತ್ತಮವಾಗುತ್ತವೆ. […]

ನೇತ್ರಾವತಿ ನದಿ ತಿರುವು - ಒಂದು ಚಿಂತನೆ

ನೇತ್ರಾವತಿ ನದಿ ತಿರುವು – ಒಂದು ಚಿಂತನೆ

Thursday, August 1st, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ  ದಿನಾಂಕ  27-07-2013ರಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ  ಡಾ. ಶ್ರೀಶ ಕುಮಾರ್‌ರವರು ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ  ಮಾತನಾಡಿ ಅದರ ಒಳಿತು ಕೆಡುಕುಗಳನ್ನು ಕೆಲವೊಂದು ಸಾಕ್ಷ್ಯ ಚಿತ್ರಗಳನ್ನು ತೋರಿಸುವ ಮೂಲಕ ಪರಿಚಯ ಮಾಡಿದರು. ಪರಿಸರ ಪ್ರೇಮಿಗಳಾದ ಸಮಾಜ ಬಾಂಧವರು ಈ ಯೋಜನೆಯು ಜಾರಿಗೊಳ್ಳದಂತೆ ಜಾಗೃತರಾಗಬೇಕೆಂದು ಕರೆ ಇತ್ತರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಗುರುಗಳು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಸ್ವಾತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಮಕ್ಕಳನ್ನು ರಂಜಿಸಿದ ಪೆಪ್ಪರಮೆಂಟ್ ಸುಬ್ಬಜ್ಜ

ಮಕ್ಕಳನ್ನು ರಂಜಿಸಿದ ಪೆಪ್ಪರಮೆಂಟ್ ಸುಬ್ಬಜ್ಜ

Thursday, August 1st, 2013

ದಿನಾಂಕ  20-07-2013ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ನಡೆಯುವ ಸಾಂಸ್ಕೃತಿಕ  ಚಟುವಟಿಕೆಗಳ ಅಂಗವಾಗಿ ಹಿರಿಯ ಶಿಶು ಸಾಹಿತಿ ಶ್ರೀ ಬೆಂಡರವಾಡಿ  ಸುಬ್ರಹ್ಮಣ್ಯ ಭಟ್‌ರವರು  ಪುಟಾಣಿ ಮಕ್ಕಳಿಗೆ ಕಥೆ, ಹಾಡುಗಳನ್ನು ಹೇಳುವುದರ ಮೂಲಕ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ದುರ್ಗಾದೇವಿಯವರು ಉಪಸ್ಥಿತರಿದ್ದರು.

ಕಾರ್ಗಿಲ್ ವಿಜಯೋತ್ಸವ ಮಾಹಿತಿ

ಕಾರ್ಗಿಲ್ ವಿಜಯೋತ್ಸವ ಮಾಹಿತಿ

Thursday, August 1st, 2013

ದಿನಾಂಕ 27-07-2013ರಂದು  ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾರ್ಗಿಲ್ ವಿಜಯೋತ್ಸವ  ದಿನಾಚರಣೆಯ ಕುರಿತು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ರೋಹಿಣಾಕ್ಷ ಶೀರ್ಲಾಲುರವರು, ಈ ದಿನಾಚರಣೆಯ ಮಹತ್ವ, ದೇಶಕ್ಕಾಗಿ ಹೋರಾಡಿದ ವೀರ ಯೋಧರ ತ್ಯಾಗ ಬಲಿದಾನಗಳ ಕುರಿತು ಹೃದಯಸ್ಪರ್ಶಿ ಮಾತುಗಳನ್ನಾಡುತ್ತಾ ನಮ್ಮ ಯುವಕರಿಗೆ ಸೇನೆಗೆ ಸೇರಲಿರುವ ಅವಕಾಶಗಳ ಕುರಿತು ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯಗುರುಗಳು, ಶಿಕ್ಷಕರು ಉಪಸ್ಥಿತರಿದ್ದರು.

ರಾಜ್ಯ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ರಾಜ್ಯ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Wednesday, July 31st, 2013

ದಿನಾಂಕ 24-07-2013ರಂದು ವಿದ್ಯಾಭಾರತಿ ಕರ್ನಾಟಕ ಮತ್ತು ಶುಭೋದಯ ಪ್ರೌಢಶಾಲೆ ಮೂಡುಶೆಡ್ಡೆಯಲ್ಲಿ ನಡೆದ 17 ವರುಷದ ಕಿಶೋರವರ್ಗದ ಬಾಲಕಿಯರ ವಿಭಾಗದ  ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಇವರಲ್ಲಿ ಸುಮಾ ರಾಜ್ಯಮಟ್ಟದಿಂದ ದಕ್ಷಿಣಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕಿಶೋರವರ್ಗದ ಬಾಲಕರ ವಿಭಾಗದಲ್ಲಿ  ಪೃಥ್ವಿನಾರಾಯಣ ಮತ್ತು ರಾಕೇಶ್ ರಾಜ್ಯಮಟ್ಟದಿಂದ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿ ಆಗಸ್ಟ್ 10,11 ಕ್ಕೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆಯುವ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.  

ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಆಚರಣೆ

Friday, July 26th, 2013

ದಿನಾಂಕ 26.07.2013ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ‘ಕಾರ್ಗಿಲ್ ವಿಜಯೋತ್ಸವ ಆಚರಣೆ’ ನಡೆಯಿತು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಗಿಲ್‌ನ ಯುದ್ಧದ ಬಗೆಗೆಗಿನ ಮಹತ್ವವನ್ನು ಮತ್ತು ದೇಶ ಭಕ್ತರನ್ನು ನೆನಪಿಸುವ ಸ್ವಾರಸ್ಯಕರ ವಿಷಯಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ರಾಜೇಶ್ ನೆಲ್ಲಿತ್ತಡ್ಕ ಇವರು ತಿಳಿಸಿದರು.  ನಂತರ ವಿದ್ಯಾರ್ಥಿಗಳಿಗೆ ಕಾರ್ಗಿಲ್ ವಿಜಯೋತ್ಸವದ ಸಾಕ್ಷ್ಯ ಚಿತ್ರಗಳನ್ನು ತೋರಿಸಲಾಯಿತು. ಈ ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ ಹಾಗೂ ವಂದನಾರ್ಪಣೆಯನ್ನು ಶ್ರೀ ರಾಜೇಶ್ ಪಿ.ಬಿ ರವರು […]

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Friday, July 26th, 2013

ವಿದ್ಯಾಭಾರತಿ ಕರ್ನಾಟಕ ಹಾಗೂ ಶಾರದಾ ವಿದ್ಯಾನಿಕೇತನ ತಲಪಾಡಿ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22.0.2013 ರಂದು ಶಾರದಾ ವಿದ್ಯಾನಿಕೇತನ ತಲಪಾಡಿ ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕಿಯರ ಕಿಶೋರವರ್ಗದ ಖೋ-ಖೋದಲ್ಲಿ ಮತ್ತು ಬಾಲವರ್ಗದ ಖೋ-ಖೋದಲ್ಲಿ , ಹಾಗೂ ವಿದ್ಯಾಭಾರತಿ ಕರ್ನಾಟಕ ಹಾಗೂ ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 18.07.2013 ರಂದು ಷಣ್ಮುಖ ದೇವ ಪ್ರೌಢ ಶಾಲೆ, ಪೆರ್ಲಂಪಾಡಿ ಇಲ್ಲಿ ನಡೆದ ಜಿಲ್ಲಾಮಟ್ಟದ 17ರ ವಯೋಮಾನದ ಬಾಲಕಿಯರ ಕಿಶೋರವರ್ಗದ […]

ಸ್ವಗೃಹದಲ್ಲಿ ಗುರುವಂದನೆ - ವಿಶಿಷ್ಠ ಆಚರಣೆ

ಸ್ವಗೃಹದಲ್ಲಿ ಗುರುವಂದನೆ – ವಿಶಿಷ್ಠ ಆಚರಣೆ

Tuesday, July 23rd, 2013

ಸಮಾಜಮುಖಿ ಕಾರ್ಯ ಹಾಗೂ ಗುರುತ್ವದ ಔಚಿತ್ಯ ಸ್ಮರಿಸಿಕೊಂಡಾಗ ಪುತ್ತೂರಿನ ವಿ.ಬಿ ಅರ್ತಿಕಜೆಯವರು ಕಣ್ಮುಂದೆ ಬರುತ್ತಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಪ್ರೇರಕ ಗುರುಗಳ ಸಾಲಿಗೆ ಬರುವ ಕೆಲವರಲ್ಲಿ ಒಬ್ಬರು. ಪ್ರಾಧ್ಯಾಪಕರಾಗಿ ವೃತ್ತಿಯಿಂದ ನಿವೃತ್ತಿ ಹೊಂದಿದರೂ, ಪ್ರವೃತ್ತಿಯಲ್ಲಿ ಮಕ್ಕಳೊಂದಿಗೆ ಮಾತು, ಶಿಕ್ಷಕರಿಗೆ ಕಿವಿಮಾತು, ಸಾಹಿತ್ಯ ಕಲಾ ಪೋಷಕರು ವಿಶೇಷವಾಗಿ ಮನೆಯಲ್ಲೇ ಗ್ರಂಥಾಲಯ ಹೊಂದಿದ್ದು ಗ್ರಂಥಾಲಯ ಮಾಡ ಬಯಸುವ ಮನೆ ಮನಗಳಿಗೆ ಸಹಕಾರ ಇನ್ನೂ ಅನೇಕ. ಗುರುಪೂರ್ಣಿಮೆಯಂದು ಶ್ರೀಯುತರನ್ನು ವಿವೇಕಾನಂದ ಕನ್ನಡ ಮಾಧ್ಯಮದ ಮಕ್ಕಳು ಹಾಗೂ ಶಿಕ್ಷಕ ವೃಂದ […]

ಹಿಂದೂ ಸಾಮ್ರಾಜೋತ್ಸವ

ಹಿಂದೂ ಸಾಮ್ರಾಜೋತ್ಸವ

Saturday, July 6th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 06.07.2013 ರಂದು ‘ಹಿಂದೂ ಸಾಮ್ರಾಜೋತ್ಸವ’ದ ಆಚರಣೆ ಜರುಗಿತು. ಈ ಕಾರ್ಯಕ್ರಮದಲ್ಲಿ ಶಿವಾಜಿಯ ಬಾಲ್ಯ, ದೇಶಭಕ್ತಿ ಎಂಬ ವಿಷಯದಡಿ ವಿವೇಕಾನಂದ ಡಿ.ಇಡಿ ಕಾಲೇಜಿನ ಉಪನ್ಯಾಸಕರಾದ ಶ್ರೀ ರಘುರಾಜ ಯು.ವಿ ರವರು ಮಕ್ಕಳಿಗೆ ಮನದಟ್ಟಾಗುವಂತೆ ಕಥೆ ಹೇಳಿದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ.ಬಿ ರವರು ನೆರವೇರಿಸಿದರು.

ಶಾಲಾ ಚುನಾವಣೆ

ಶಾಲಾ ಚುನಾವಣೆ

Tuesday, June 11th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ದಿನಾಂಕ 08.06.2013 ರಂದು ಶಾಲಾ ಚುನಾವಣೆ ನಡೆಯಿತು. ಪ್ರೌಢಶಾಲಾ ನಾಯಕಿಯಾಗಿ ಕು| ಪ್ರಜ್ಞಾ.ಪಿ.ಆರ್ ಮತ್ತು ಉಪನಾಯಕನಾಗಿ ಪೃಥ್ವಿನಾರಾಯಣ ಇವರು ಬಹುಮತದಿಂದ ಆಯ್ಕೆಯಾದರು. ಪ್ರಾಥಮಿಕ ಶಾಲಾ ನಾಯಕನಾಗಿ ಭವಿಷಿತ್, ಉಪನಾಯಕಿಯಾಗಿ ಕು| ವಿಭಾ ಆಚಳ್ಳಿಯವರು ಆಯ್ಕೆಯಾದರು. ಚುನಾವಣೆಯ ಮುಖ್ಯಗುರುಗಳ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ನಡೆಯಿತು.

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Tuesday, June 11th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 08.06.2013 ರಂದು 2012-13ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೋ|ವಿ.ಬಿ. ಅರ್ತಿಕಜೆಯವರು ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು ಎಂದರು, ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಉಪಸ್ಥಿತರಿದ್ದು, ಸಾಧನೆಗೆ ಸದಾ ಪ್ರಯತ್ನಶೀಲರು ನಾವಾಗಬೇಕು, ನಮ್ಮಲ್ಲಿ ಕನಸು ಇರಬೇಕು, ಆಗ ಮಾತ್ರ ಕನಸನ್ನು ನನಸಾಗಿಸಲು ಸಾಧ್ಯ ಎಂಬುದಾಗಿ […]

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

Monday, June 10th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 06.06.2013 ರಂದು ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸರಕಾರಿ ಪದವಿ ಕಾಲೇಜು ಬಂಟ್ವಾಳ ಇಲ್ಲಿನ ಉಪನ್ಯಾಸಕರಾದ ಡಾ.ಅಜಕ್ಕಳ ಗಿರೀಶ್ ಭಟ್ ರವರು ದೀಪ ಪ್ರಜ್ವಲಿಸಿ ಘೃತಾಹುತಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೋಷಕರೊಂದಿಗೆ ‘ಪರಿಣಾಮಕಾರಿ ಪೋಷಕತ್ವ’ದ ಬಗ್ಗೆ ಸಂವಾದ ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆ ಮತ್ತು ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ […]

ಪ್ರಜ್ಞಾ ಸಾಧಕ ಪ್ರಶಸ್ತಿ

ಪ್ರಜ್ಞಾ ಸಾಧಕ ಪ್ರಶಸ್ತಿ

Monday, June 10th, 2013

ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ (ರಿ.) ಸುಳ್ಯ ಇವರು ನಡೆಸಿದ ‘ಸದಾ ಸಿದ್ಧರಾಗಿರೋಣ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ’ – 2013 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ವಾತಿಕ್ ಶರ್ಮ ಬಿ.ಎಸ್ 5ನೇ ತರಗತಿಯಲ್ಲಿ ‘ಪ್ರಜ್ಞಾ ತಾಲೂಕು ಸಾಧಕ’ ಪ್ರಶಸ್ತಿಯೊಂದಿಗೆ ರೂ 2,000 ನಗದು, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪಡೆದಿರುತ್ತಾನೆ. ಈತನಿಗೆ ಅಭಿನಂದನೆಗಳು.

ಎಸ್.ಎಸ್.ಎಲ್.ಸಿ 2012-13 ಫಲಿತಾಂಶ 93%

ಎಸ್.ಎಸ್.ಎಲ್.ಸಿ 2012-13 ಫಲಿತಾಂಶ 93%

Tuesday, May 21st, 2013

2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 98 ವಿದ್ಯಾರ್ಥಿಗಳಲ್ಲಿ 91 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು  ಶೇಕಡಾ 93 ಫಲಿತಾಂಶ ಬಂದಿರುತ್ತದೆ. ಇದರಲ್ಲಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ,  51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ,  16  ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಮತ್ತು 12 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಜಯಶ್ರೀ.ಪಿ – 593 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿರುತ್ತಾಳೆ. ಶ್ರೀವಿದ್ಯಾ ಕೆ.ಎಂ – 591 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದು ಪುತ್ತೂರು […]

 ಬೀಳ್ಕೊಡಗೆ ಸಮಾರಂಭ

ಬೀಳ್ಕೊಡಗೆ ಸಮಾರಂಭ

Tuesday, March 19th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 18-03-2013 ರಂದು ಎಸ್.ಎಸ್.ಯಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀಮತಿ ಶಶಿಕಲಾ ಅಮ್ಮನವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು ನಂತರ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಅನಿಸಿಕೆಯನ್ನು ಹೇಳಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ರವೀಂದ್ರ.ಪಿ. ರವರು ಮಾತನಾಡಿ “ವಿದ್ಯಾರ್ಥಿ ಜೀವನ ನಿಂತನೀರಲ್ಲಿ ಅದು ಸದಾ ಪ್ರವಾಹಿಸುತ್ತಿರುವ ನೀರು” ಎಂದು ತಿಳಿಸಿ ಶುಭಹಾರೈಕೆಯನ್ನು ಹೇಳಿದರು, ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮ […]

ಶಾರದಾ ಪೂಜೆ ಮತ್ತು ಭಜನೆ ಕಾರ್ಯಕ್ರಮ

ಶಾರದಾ ಪೂಜೆ ಮತ್ತು ಭಜನೆ ಕಾರ್ಯಕ್ರಮ

Monday, February 25th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ 22-02-2013 ರಂದು ವರ್ಷಂಪ್ರತಿ ನಡೆಯುವ ಶಾರದಾ ಪೂಜೆ ಮತ್ತು ಭಜನೆ ನಡೆಯಿತು. ವಿದ್ಯಾರ್ಥಿಗಳು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶ್ರೀದೇವರ ಕೃಪೆಗೆ ಪಾತ್ರರಾದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

Monday, February 25th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇದರ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

ವಿವೇಕಾನಂದ ತೆಂಕಿಲದಲ್ಲಿ ಸೂರ್ಯ ನಮಸ್ಕಾರ

ವಿವೇಕಾನಂದ ತೆಂಕಿಲದಲ್ಲಿ ಸೂರ್ಯ ನಮಸ್ಕಾರ

Saturday, February 23rd, 2013

ವಿವೇಕಾನಂದ ಮಹೋತ್ಸವ ಸಮಿತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಫೆ. ೧೮ ರಂದು ಬೆಳಿಗ್ಗೆ ತೆಂಕಿಲ ವಿವೇಕನಗರದಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳು, ಬಿ.ಎಡ್ ವಿದ್ಯಾರ್ಥಿಗಳು, ಶಿಕ್ಷಕರು ಸೂರ್ಯನಮಸ್ಕಾರ ಮಾಡಿದರು. ಪುಟಾಣಿಗಳು ಶಾಲಾ ಒಳಾಂಗಣದ ಸಭಾಂಗಣದಲ್ಲಿ ಸೂರ್ಯನಮಸ್ಕಾರ ಮಾಡಿದರು. ಯೋಗ ಶಿಕ್ಷಕಿ ಶ್ರೀಮತಿ ಶರಾವತಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ್ ಹಾಗೂ ವಿವೇಕಾನಂದ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯ […]

ಯಕ್ಷಗಾನ ಪ್ರದರ್ಶನ

ಯಕ್ಷಗಾನ ಪ್ರದರ್ಶನ

Friday, February 15th, 2013

ಕರ್ನಾಟಕ ಸಂಘ ಪುತ್ತೂರು ಹಾಗೂ ವಿವಿಧ ಸಾಹಿತ್ಯಾಸಕ್ತ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಸಾಹಿತ್ಯ ಕಲಾಕುಶಲೋಪರಿ ಸಂಸ್ಕೃತಿ ಸಲ್ಲಾಪ – 2013 ದಿನಾಂಕ 09.02.2013 ರಿಂದ 17.02.2013 ರವರೆಗೆ ಅನುರಾಗ ವಠಾರದಲ್ಲಿ ನಡೆದಿದ್ದು ದಿನಾಂಕ 12.02.2013 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಕೃಷ್ಣ-ಕೃಷ್ಣ ಶ್ರೀ ಕೃಷ್ಣ ಯಕ್ಷಗಾನ ನಡೆಯಿತು. ಶ್ರೀ ರಮೇಶ ಶೆಟ್ಟಿ ಬಾಯಾರು ಇವರ ನಿರ್ದೇಶನದಲ್ಲಿ ಶಾಲಾ ಮಕ್ಕಳು ಯಕ್ಷಗಾನ ಪ್ರದರ್ಶನ ನೀಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ್.ಬಿ ರವರು ನೆರವೇರಿಸಿದರು.

ವಿವೇಕಾನಂದ ಜಯಂತಿ

ವಿವೇಕಾನಂದ ಜಯಂತಿ

Saturday, February 9th, 2013

ಸ್ವಾಮಿ ವಿವೇಕಾನಂದ ೧೫೦ನೇ ವರ್ಷಾಚರಣೆ ಹಾಗೂ ವಿವೇಕಾನಂದ ಜಯಂತಿ ಕಾರ್ಯಕ್ರಮ ವೈವಿಧ್ಯ ಕಿರಿಯ ಪ್ರಾಥಮಿಕ ಮಕ್ಕಳಿಗೆ ಮಕ್ಕಳು ವಿವೇಕಾನಂದರ ವೇಷ ಧರಿಸಿ ವಿವೇಕಾನಂದ ಮಾದರಿ ಶಿಶು ಮಂದಿರದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವೇಕಾನಂದರ ನುಡಿಮುತ್ತುಗಳು ಹಾಗೂ ಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹಿರಿಯ ಪ್ರಾಥಮಿಕ ಮಕ್ಕಳಿಗೆ ವಿವೇಕಾನಂದ ಬಾಲ್ಯ, ವಿವೇಕಾನಂದರ ಶಿಕ್ಷಣ ಹಾಗೂ ಸ್ವದೇಶ ಪ್ರೇಮದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವೇಕಾನಂದ ಕಾಲೇಜಿನಲ್ಲಿ ಜರುಗಿದ ವಿವೇಕಾನಂದ ಜಯಂತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. […]

ವಿವೇಕಾನಂದ  ಶಾಲಾ ವಾರ್ಷಿಕ ಕ್ರೀಡಾಕೂಟ

ವಿವೇಕಾನಂದ ಶಾಲಾ ವಾರ್ಷಿಕ ಕ್ರೀಡಾಕೂಟ

Saturday, February 9th, 2013

ಇಲ್ಲಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲಾ ವಾರ್ಷಿಕ ಕ್ರೀಡಾ ಕೂಟವನ್ನು ಜಿ.ಪಂ. ಸದಸ್ಯ ಕೇಶವ ಗೌಡ ಬಜತ್ತೂರು ಉದ್ಫಾಟಿಸಿದರು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಜೀವಂಧರ್ ಜೈನ್, ಶಾಲಾ ಆಡಳಿತ ಮಂಡಳಿ ಪ್ರಮುಖರಾದ ಬಂಗಾರಡ್ಕ ವಿಶ್ವೇಶ್ವರ ಭಟ್, ರವೀಂದ್ರ.ಪಿ, ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಸತೀಶ್ ಉಜಿ ಮತ್ತಿತ್ತರು ಉಪಸ್ಥಿತರಿದ್ದರು.

ಸಾಮೂಹಿಕ ಹುಟ್ಟುಹಬ್ಬ

ಸಾಮೂಹಿಕ ಹುಟ್ಟುಹಬ್ಬ

Saturday, February 9th, 2013

ಚಿಕ್ಕಂದಿನಲ್ಲಿ ಇತರ ಮಕ್ಕಳಂತೆ ಬಾಲ್ಯ ಸಹಜ ಚೇಷ್ಟೆಗಳನ್ನು ತೋರುತ್ತಾ ಬೆಳೆದ ನರೇಂದ್ರ ದೊಡ್ಡವನಾಗಿ ಮಹಾ ತೇಜಸ್ವಿ ವಿವೇಕಾನಂದರಾಗಿ ಜಗದ್ವಿಖ್ಯಾತರಾದಂತೆ ಮಕ್ಕಳೆಲ್ಲರೂ ಅವರ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಶ್ರೀಮತಿ ಶ್ರೀದೇವಿ ಕಾನಾವು ಇವರು ದಿನಾಂಕ ೨೬.೦೧.೨೦೧೩ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ  ಜರುಗಿದ ಸಾಮೂಹಿಕ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಮೇಲಿನ ಮಾತುಗಳನ್ನಾಡಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ಯಾಮಪ್ರಸಾದ ಶಾಸ್ತ್ರೀಗಳು ಶುಭ ಹಾರೈಸಿದರು. ಶ್ರೀಮತಿ ದಾಕ್ಷಾಯಿಣಿ ಮಾತಾಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಸ್ವಾತಿ ಸ್ವಾಗತಿಸಿ, […]

ಗಣರಾಜ್ಯೋತ್ಸವ ದಿನಾಚರಣೆ

Saturday, February 9th, 2013

ದೇಶ ರಕ್ಷಣೆಗೆ ಸೈನಿಕರ ಅವಶ್ಯಕತೆಯಿದ್ದು ಹೆಚ್ಚು ಹೆಚ್ಚು ಯುವಜನರು ಸೇನೆಗೆ ಸೇರಬೇಕು. ಸೇವಾ ನಿವೃತ್ತಿಯ ನಂತರವೂ ಉತ್ತಮ ಸೌಲಭ್ಯಗಳೂ, ಉದ್ಯೋಗವೂ ಸಿಗುವುದು ಎಂಬುದಾಗಿ ಮಾಜಿ ಸೈನಿಕರೂ ಪ್ರಸ್ತುತ ಪುತ್ತೂರಿನ ಕಾರ್ಪೋರೇಶನ್ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿರುವ ಕೆ.ಎಸ್.ದಯಾನಂದರವರು ಹೇಳಿದರು. ಇವರು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಗೈದು ಈ ಮೇಲಿನ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಿ.ಜ್ಯೋತ್ಸ್ನಾರವರು ಭಾರತದ ಸಂವಿಧಾನವು […]

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Friday, January 18th, 2013

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇದರ ವತಿಯಿಂದ ಶಿಕ್ಷಕರಿಗೆ ಏರ್ಪಡಿಸಿದ ಸಹಪಠ್ಯ ಚಟುವಟಿಕೆಯ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ರುಕ್ಮಯ ಪೂಜಾರಿ ಇವರು ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕು| ಲಾವಣ್ಯ ಪಾಠೋಪಕರಣ ತಯಾರಿಕಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಅತ್ಯುತ್ಕ್ರಷ್ಟತೆಯನ್ನು ಸಾಧಿಸಿ - ಸುಲೇಖಾ ವರದರಾಜ್

ಅತ್ಯುತ್ಕ್ರಷ್ಟತೆಯನ್ನು ಸಾಧಿಸಿ – ಸುಲೇಖಾ ವರದರಾಜ್

Tuesday, January 15th, 2013

ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಮಾತಿನಂತೆ ಸಾಧಿಸುವ ಛಲವಿದ್ದರೆ ಯಾವುದೇ ಅಡೆತಡೆಗಳೂ ಗುರಿ ಸಾಧನೆಗೆ ಅಡ್ಡಿಯಾಗಲಾರವು ಎಂಬುದನ್ನು ನೈಜ ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವ ಮಾತುಗಳನ್ನಾಡುತ್ತಾ ಸುಲೇಖಾ ವರದರಾಜ್ ರವರು ಕ್ರೀಡೆ, ಕಲೆ, ಕೃಷಿ, ರಾಜಕೀಯ ಇತ್ಯಾದಿ ಯಾವುದೇ ಕ್ಷೇತ್ರವಿರಲಿ ಅವಿರತ ಪರಿಶ್ರಮದ ಮೂಲಕ ಅತ್ಯುತ್ಕ್ರಷ್ಟತೆಯನ್ನು ಸಾಧಿಸಲು ಕರೆ ನೀಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ನಡೆದ ಸಂವಾದ ಸಂದರ್ಭದಲ್ಲಿ ಈ ಮೇಲಿನ ಮಾತನ್ನಾಡುತ್ತಾ ದೂರದರ್ಶನ, ಮೊಬೈಲ್ ಇತ್ಯಾದಿ […]

ಗಾನ - ನೃತ್ಯ - ಯಕ್ಷಗಾನದ ವಾರ್ಷಿಕೋತ್ಸವ

ಗಾನ – ನೃತ್ಯ – ಯಕ್ಷಗಾನದ ವಾರ್ಷಿಕೋತ್ಸವ

Friday, January 11th, 2013

ದಿನಾಂಕ ೦೬.೦೧.೨೦೧೩ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗಾನ-ನೃತ್ಯ-ಯಕ್ಷ ಸಂಭ್ರಮವು ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ಹಿರಿಯ ವಿದ್ಯಾರ್ಥಿಗಳಾದ ಶರಣ್ ಕುಮಾರ್ ಮತ್ತು ದಿವ್ಯಾ.ಬಿ.ಕೆ ರವರು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿದರು. ಇದಾದ ಬಳಿಕ ಸಂಗೀತಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳ ‘ಗಾನ ಸಿಂಚನ’ ನಡೆಯಿತು. ಸುಮಾರು ೪.೩೦ ಗಂಟೆಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶ್ರೀ ಪಿ.ಕಮಲಾಕ್ಷ ಆಚಾರ್ ರವರು ಮಾತನಾಡಿ ಸಂಗೀತ, ಭರತನಾಟ್ಯ, ಯಕ್ಷಗಾನಗಳನ್ನು ಅಭ್ಯಾಸ ಮಾಡುವುದರೊಂದಿಗೆ ವಿದ್ಯಾರ್ಥಿಗಳು ತಮ್ಮ […]

ವಾರ್ಷಿಕ ಕ್ರೀಡಾ ಕೂಟ 2012-13

ವಾರ್ಷಿಕ ಕ್ರೀಡಾ ಕೂಟ 2012-13

Friday, January 4th, 2013
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹೊನಲು ಬೆಳಕಿನ ವಿವೇಕೋತ್ಸವ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹೊನಲು ಬೆಳಕಿನ ವಿವೇಕೋತ್ಸವ

Thursday, January 3rd, 2013

ದೈಹಿಕ, ಮಾನಸಿಕ ಮಕ್ಕಳ ವೃದ್ಧಿಗಾಗಿ ಕ್ರೀಡೆ ಸಹಕಾರಿ-ಡಾ| ಹರೀಶ್ ಕುಮಾರ್ ಶಿಕ್ಷಣ ಕೇವಲ ಜ್ಞಾನವನ್ನು ಮಾತ್ರ ವೃದ್ಧಿಸುವುದಲ್ಲದೆ ನಮ್ಮಲ್ಲಿ ಜೀವನ ಕಲೆಯನ್ನು ಬೆಳೆಸುವಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಬದಲಾಗಿ ಕ್ರೀಡೋತ್ಸವ ಕಾರ್ಯಕ್ರಮ ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳಲ್ಲಿ ಜ್ಞಾನ ವೃದ್ದಿಯಾಗಲು ಸಹಕಾರಿಯಾಗುತ್ತದೆ. ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ| ಹರೀಶ್ ಕುಮಾರ್ ಹೇಳಿದರು. ಅವರು ಇಲ್ಲಿನ ತೆಂಕಿಲ ವಿವೇಕನಗರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್ ೯ ರಂದು ಸಂಜೆ ನಡೆದ ಹೊನಲು ಬೆಳಕಿನ ವಿವೇಕೋತ್ಸವ -೨೦೧೨ವನ್ನು […]

ಆಧುನಿಕ ಯುಗಕ್ಕೊಂದು ಆದರ್ಶಣೀಯ ಸವಾಲು

ಆಧುನಿಕ ಯುಗಕ್ಕೊಂದು ಆದರ್ಶಣೀಯ ಸವಾಲು

Thursday, November 29th, 2012

ಬರಬರುತ್ತಾ ಕೃಷಿ ವಲಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಅದರಲ್ಲೂ ಕೃಷಿಕೂಲಿಯಾಳುಗಳ ಕೊರತೆ ಬಹಳ ಗಂಭೀರವಾಗಿದ್ದು ಇದಕ್ಕೆ ಪರಿಹಾರವಾಗಿ ಎಷ್ಟೇ ಯಂತ್ರೋಪಕರಣ ಬಂದಿದೆಯಾದರೂ ಸಮಸ್ಯೆಗಳು ಮುಗಿಯಲೇ ಇಲ್ಲ. ಇದನ್ನು ಮನಗಂಡು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ತಯಾರು ನಡೆಸುತ್ತಿರುವ ಸ್ಕೌಟ್ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಒಂದು ಆದರ್ಶನೀಯ. ಇತ್ತೀಚೆಗೆ ಮೊಟ್ಟೆತ್ತಡ್ಕದಲ್ಲಿ ಉಪೇಂದ್ರ ಬಲ್ಯಾಯ ರವರ ಭತ್ತದ ಗದ್ದೆಯಲ್ಲಿ ಭತ್ತದ ನರ್ಸರಿ(ನೇಜಿ) ತಯಾರು ಮಾಡಿ, ನೇಜಿ ತೆಗೆದು ಸಮಯಕ್ಕೆ ಸರಿಯಾಗಿ ನಾಟಿ […]

ವಿವೇಕೋತ್ಸವ ೨೦೧೨ ಆಮಂತ್ರಣ

ವಿವೇಕೋತ್ಸವ ೨೦೧೨ ಆಮಂತ್ರಣ

Wednesday, November 28th, 2012

ವಿವರಗಳಿಗೆ ಚಿತ್ರವನ್ನು ಕ್ಲಿಕ್ಕಿಸಿ.

ಪ್ರಬಂಧ ಸ್ಪರ್ಧೆ - ಪ್ರಥಮ ಸ್ಥಾನ

ಪ್ರಬಂಧ ಸ್ಪರ್ಧೆ – ಪ್ರಥಮ ಸ್ಥಾನ

Thursday, November 8th, 2012

ಪುರಸಭೆಯ ವತಿಯಿಂದ ಪುತ್ತೂರಿನ ಗುರುಭವನದಲ್ಲಿ ನಡೆದ ‘ಘನತ್ಯಾಜ್ಯ ವಿಲೇವಾರಿಯಲ್ಲಿ ವಿದ್ಯಾರ್ಥಿಯ ಪಾತ್ರ’ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ಶೀತಲ್ ಪ್ರಥಮ ಸ್ಥಾನ ಪಡೆದು 3000 ರೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ಸಮಾವೇಶ - ರಾಜ್ಯಮಟ್ಟಕ್ಕೆ ಆಯ್ಕೆ

ವಿಜ್ಞಾನ ಸಮಾವೇಶ – ರಾಜ್ಯಮಟ್ಟಕ್ಕೆ ಆಯ್ಕೆ

Tuesday, November 6th, 2012

ಉಪ್ಪಿನಂಗಡಿಯಲ್ಲಿ ನಡೆದ  ೨೦ನೇ ವಾರ್ಷಿಕ ದ.ಕ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ‘ಜೈವಿಕ ಅನಿಲ ಬಳಸಿ, ದ್ರವಿಕೃತ ಅನಿಲ ಉಳಿಸಿ’ ಕಾರ್ಯಯೋಜನೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹರ್ಷಿತಾ.ಕೆ.ಸಿ ಮತ್ತು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿಜ್ಞಾನ ಮಾದರಿ - ಜಿಲ್ಲಾಮಟ್ಟಕ್ಕೆ ಆಯ್ಕೆ

ವಿಜ್ಞಾನ ಮಾದರಿ – ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, November 6th, 2012

ಉಪ್ಪಿನಂಗಡಿಯಲ್ಲಿ ನಡೆದ ೨೦ನೇ ವಾರ್ಷಿಕ ದ.ಕ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವರ್ಷಿತ್, ಮಂಜುನಾಥ ಮತ್ತು ಪ್ರಣವ ಬೆಳ್ಳಾರೆ, ಅಜಯ್ ಇವರುಗಳ ತಂಡ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಯೋಗಾಸನ - ರಾಜ್ಯಮಟ್ಟಕ್ಕೆ ಆಯ್ಕೆ

ಯೋಗಾಸನ – ರಾಜ್ಯಮಟ್ಟಕ್ಕೆ ಆಯ್ಕೆ

Monday, November 5th, 2012

ಎಸ್.ಡಿ.ಎಂ ಮಂಗಳ ಜ್ಯೋತಿ ಶಾಲೆ ವಾಮಂಜೂರು ಇಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಡಿ.ಜಿ.ರಾಘವೇಂದ್ರ ಗೌಡ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ತರಬೇತಿ ನೀಡಿರುತ್ತಾರೆ.

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ

Saturday, November 3rd, 2012

ಪುತ್ತೂರು ಪುರಭವನದಲ್ಲಿ ನಡೆದ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ರಾಜ್ಯಮಟ್ಟದಲ್ಲಿ ದ್ವಿತೀಯ

ರಾಜ್ಯಮಟ್ಟದಲ್ಲಿ ದ್ವಿತೀಯ

Saturday, November 3rd, 2012

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಕೊಪ್ಪಳದಲ್ಲಿ  ನಡೆದ  ರಾಜ್ಯಮಟ್ಟದ ಬಾಲಕರ  ೧೪ರ ವಯೋಮಾನದ ಒಳಗಿನ  ತ್ರೋಬಾಲ್  ಪಂದ್ಯಾಟದಲ್ಲಿ ಪ್ರತಿನಿಧಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಲ್ಲಿ ಪ್ರಜ್ವಲ್, ರಂಜೀತ್, ಸುಜೀತ್ ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಷ್ಟ್ರಮಟ್ಟಕ್ಕೆ ಆಯ್ಕೆ

Saturday, November 3rd, 2012

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ  ಕೊಪ್ಪಳದಲ್ಲಿ ನಡೆದ ರಾಜ್ಯಮಟ್ಟದ ಬಾಲಕರ ೧೪ ವಯೋಮಾನದ ಒಳಗಿನ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ  ಪ್ರಜ್ವಲ್ , ರಂಜಿತ್, ಸುಜೀತ್ ಇವರು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆ ಯಾಗಿದ್ದಾರೆ.

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

Wednesday, October 31st, 2012

ದಿನಾಂಕ 25-10-2012ರಂದು ವಿವೇಕಾನಂದ ವಿದ್ಯಾ ಸಂಸ್ಧೆಯ ಶಿಕ್ಷಕರಿಗಾಗಿ ಮೂರು ದಿನಗಳ ಶೈಕ್ಷಣಿಕ ಕಾರ್ಯಾಗಾರವು ಉದ್ಘಾಟನೆಗೊಂಡಿತು. ಈ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ತಾಲೂಕು ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಶಶಿಪ್ರಭಾ ಸಂಪ್ಯರವರು ಉದ್ಘಾಟಿಸಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಶಿವಪ್ರಸಾದ ಇ. ಹಾಗೂ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾದ್ಯಮಾ ಶಾಲೆಯ ಮುಖ್ಯಗುರುಗಳಾದ ಶ್ರೀ ಸತೀಶ್ ರೈ, ಶ್ರೀಮತಿ ಅಶಾಬೆಳ್ಳಾರೆ ಉಪಸ್ಧಿತರಿದ್ದರು. ನಂತರದ ಅವಧಿಯಲ್ಲಿ ಪಠ್ಯಕ್ರಮ ಮತ್ತು ಭೋಧನೆ ಎಂಬ ವಿಷಯದಲ್ಲಿ ಕಾರ್ಯಾಗಾರವನ್ನು ಶ್ರೀ ಡಾ| […]

Highslide for Wordpress Plugin