ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೨೦೧೨-೧೩ ನೇ ಸಾಲಿನ ಇಂಟರ್ಯಾಕ್ಟ್ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವು ಪುತ್ತೂರು ಪೂರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಹರೀಶ್.ಕೆ.ಪುತ್ತೂರಾಯ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ರೋ. ಜಯರಾಮ್ ಭಟ್, ರೋ. ವಿಶ್ವನಾಥ ನಾಯಕ್, ರೋ. ಪ್ರಮೀಳಾರಾವ್ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ನೂತನ ಇಂಟರ್ಯಾಕ್ಟ್ ಸದಸ್ಯರಿಗೆ ಶುಭಹಾರೈಸಿದರು.
ಕಿರಣಸುಬ್ರಹ್ಮಣ್ಯ ನೂತನ ಅಧ್ಯಕ್ಷರಾಗಿ, ಪ್ರಜ್ಞಾ. ಪಿ. ಆರ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅಪೂರ್ವಗೌರಿ, ಹರ್ಷಿತಾ, ಪೂಜಾ, ಚಂದನ್, ಕಾರ್ತಿಕ್, ರಕ್ಷಿತ್, ಪವನ್ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡರು. ಸುಮಾರು ೯೦ ಮಂದಿ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರ್ತೆ ಸ್ವಾಗತಿಸಿದರು. ಇಂಟರ್ಯಾಕ್ಟ್ ಶಿಕ್ಷಕ ಪ್ರತಿನಿಧಿ ಗಣೇಶ್. ಯಂ ಕಾರ್ಯಕ್ರಮ ನಿರೂಪಿಸಿದರು.