ಡಾ| ಅಬ್ದುಲ್ ಕಲಾಂರವರ ಜೀವನದ ಆದರ್ಶಗಳು ನಮಗೆ ಪಾಠವಾಗಲಿ - ಚಂದ್ರಶೇಖರ ಸುಳ್ಯಪದವು

ಡಾ| ಅಬ್ದುಲ್ ಕಲಾಂರವರ ಜೀವನದ ಆದರ್ಶಗಳು ನಮಗೆ ಪಾಠವಾಗಲಿ – ಚಂದ್ರಶೇಖರ ಸುಳ್ಯಪದವು

Thursday, July 28th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ಡಾ| ಅಬ್ದುಲ್ ಕಲಾಂರವರ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ಮಾತನಾಡುತ್ತಾ, ಕಲಾಂರವರು ತಮ್ಮ ಜೀವಿತದ ಅವಧಿಯಲ್ಲಿ ಅನೇಕ ಆದರ್ಶಗಳನ್ನು ಮೈಗೂಡಿಸುವುದರ ಜೊತೆಗೆ ಈ ದೇಶದ ಬಗ್ಗೆ ಕನಸುಗಳನ್ನು ಹೊತ್ತಿರುವ ಒರ್ವ ಶ್ರೇಷ್ಠ ವಿಜ್ಞಾನಿ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಾದ ಶ್ರೀಪ್ರದ, ತೀರ್ಥರಾಜ್, ಸ್ಕಂದನಾರಾಯಣ, ಕು. ಪೃಥಾ ರವರು ಕಲಾಂರವರ ಬಾಲ್ಯ ಜೀವನ, ವಿದ್ಯಾಭ್ಯಾಸ ಮತ್ತು ಆದರ್ಶತೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ […]

ಮಕ್ಕಳ ಮಂಟಪದಲ್ಲಿ ಗುರುವಂದನೆ

ಮಕ್ಕಳ ಮಂಟಪದಲ್ಲಿ ಗುರುವಂದನೆ

Wednesday, July 27th, 2016

ಶಿಕ್ಷಕರನ್ನು ಸಕ್ರಿಯರನ್ನಾಗಿಸಲು ಮಕ್ಕಳು ಪ್ರಶ್ನೆ ಕೇಳಬೇಕು. ಸಹಜತೆ ಮತ್ತು ಕುತೂಹಲದ ಪ್ರಶ್ನೆಗಳು ನಮ್ಮಲ್ಲಿ ವಿಷಯ ಜ್ಞಾನದ ಆಳ ಹೆಚ್ಚಿಸುವಲ್ಲಿ ಸಹಕಾರಿ. ಶಿಕ್ಷಕರು ನಮಗೆ ಮಾರ್ಗದರ್ಶಕರು. ನಿಜವಾದ ಕಲಿಕಾ ಆಸಕ್ತಿ ಹಾಗೂ ಕಾರ್ಯಪ್ರವೃತ್ತಿ ಮಕ್ಕಳಲ್ಲಿ ಬೆಳೆಯಬೇಕಾಗಿದೆ. ಕಲಿಸುತ ಕಲಿಯುವ, ಕಲಿಯುತ ಕಲಿಸುವ ಪರಮ ಧರ್ಮವು ಶಿಕ್ಷಕನದಾಗಿದ್ದು ಆತ ನಿರಂತರ ಅಧ್ಯಯಶೀಲತೆ ಹೊಂದಿರಬೇಕು. ಸಮಾಜದಲ್ಲಿ ಸನ್ಮಾರ್ಗ ತೋರುವ ಎಲ್ಲರೂ ಗುರುಗಳಾಗಿರುತ್ತಾರೆ ಎಂದು ಡಾ. ಎನ್. ಸುಕುಮಾರ್ ಗೌಡ ಮಕ್ಕಳೊಂದಿಗೆ ಸಂವಾದ ನಡೆಸುತ್ತ ನುಡಿದರು. ವಿವೇಕಾನಂದ ಕನ್ನಡ ಶಾಲಾ ಮಕ್ಕಳು ಹಾಗೂ […]

ಗುರುಪೂರ್ಣಿಮೆ ಕಾರ್ಯಕ್ರಮ

ಗುರುಪೂರ್ಣಿಮೆ ಕಾರ್ಯಕ್ರಮ

Tuesday, July 26th, 2016

ಗುರುಗಳನ್ನು ಗೌರವಿಸುವುದರಿಂದ ಗುರು – ಶಿಷ್ಯರಲ್ಲಿ ಉತ್ತಮ ಬಾಂಧವ್ಯ ಬೆಸೆದು ಶಾಲೆಯಲ್ಲಿ ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಇದು ವಿದ್ಯಾರ್ಥಿಗಳ ಸಮಾಜಮುಖಿ ಜೀವನಕ್ಕೆ ಪೂರಕವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿಯವರು ನುಡಿದರು. ಜೊತೆಗೆ ಗುರುಪೂರ್ಣಿಮೆ ಆಚರಣೆಯ ಮಹತ್ವವನ್ನು ಹಲವು ವಿಚಾರ, ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆಗೈದು ಗುರುವೃಂದದವರಿಗೆ […]

ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶಾಲೆಗೆ ಹಲವು ಪ್ರಶಸ್ತಿ

ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶಾಲೆಗೆ ಹಲವು ಪ್ರಶಸ್ತಿ

Tuesday, July 12th, 2016

ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದು ಮದಕ ನಿವಾಸಿ ರಾಜೇಶ್ ರೈ ಮತ್ತು ಪ್ರಫುಲ್ಲ ಆರ್. ರೈ ದಂಪತಿಗಳ ಪುತ್ರಿ ಪ್ರತೀಕ್ಷಾ ಆರ್. ರೈ – ಪ್ರಥಮ, ಬಪ್ಪಳಿಗೆ ನಿವಾಸಿ ದಾಮೋದರ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ ನವಮಿ – ತೃತೀಯ, ತಾರಿಗುಡ್ಡೆ ನಿವಾಸಿ ಬಾಲಕೃಷ್ಣ ನಾಯಕ್ ಮತ್ತು ವೀಣಾ ದಂಪತಿಗಳ ಪುತ್ರ ಭವಿಷ್ – ದ್ವಿತೀಯ, ಬಲ್ನಾಡು ನಿವಾಸಿ ಬಾಬು ಗೌಡ […]

ಪ್ರಕೃತಿಯ ಕಣಕಣದಲ್ಲಿಯೂ ಗುರು ನೆಲೆಸಿದ್ದಾನೆ - ಅಮೃತ ವರ್ಷಿಣಿ

ಪ್ರಕೃತಿಯ ಕಣಕಣದಲ್ಲಿಯೂ ಗುರು ನೆಲೆಸಿದ್ದಾನೆ – ಅಮೃತ ವರ್ಷಿಣಿ

Friday, July 8th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಗುರುಪೂಜಾ’ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮೂರ್ಕಜೆ ಗುರುಕುಲದ ಮಾತಾಜಿಯವರಾದ ಶ್ರೀಮತಿ ಅಮೃತವರ್ಷಿಣಿಯವರು ಬೌದ್ಧಿಕ್ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ಮಾತನಾಡುತ್ತಾ ಶಿಲ್ಪಿಯು ಕಲ್ಲನ್ನು ಸುಂದರವಾದ ಮೂರ್ತಿಯನ್ನಾಗಿ ಮಾಡಿದಂತೆ ಗುರುವು ಶಿಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತಾನೆ. ನಮ್ಮೊಳಗಿನ ಭಗವಂತನನ್ನು ಕಾಣಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದರು. ವೇದಿಕೆಯಲ್ಲಿ ಸಭಾಧ್ಯಕ್ಷರಾದ ಶಾಲಾ ಪೋಷಕರಾದ ಯೋಗೀಶ್ವರಿ ಜಯಪ್ರಕಾಶ್, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿ ಕುಡ್ವ ಪ್ರಾರ್ಥಿಸಿ, ದಾಕ್ಷಾಯಿಣಿ […]

ಯಶಸ್ವಿ ಕಲಿಕೆಯಲ್ಲಿ ಶಾಲೆ ಹಾಗೂ ಮನೆಯು ಪರಸ್ಪರ ಪೂರಕ

ಯಶಸ್ವಿ ಕಲಿಕೆಯಲ್ಲಿ ಶಾಲೆ ಹಾಗೂ ಮನೆಯು ಪರಸ್ಪರ ಪೂರಕ

Tuesday, July 5th, 2016

ಶಾಲೆ ಮತ್ತು ಮನೆಯ ವಾತಾವರಣ ಪರಸ್ಪರ ಪೂರಕವಾಗಿದ್ದಲ್ಲಿ ಕಲಿಕೆ ಸುಗಮವಾಗಿ ಸಾಗುತ್ತದೆ ಎಂದು ಶ್ರೀಯುತ ರವಿನಾರಾಯಣರವರು ಹೇಳಿದರು. ಇವರು ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯಲ್ಲಿ ನಡೆದ 3 ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಗೆ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದರು. ಅಂತೆಯೇ ಸಭೆಯಲ್ಲಿ ಉಪಸ್ಥಿತರಿದ್ದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿಯವರು ಮಾತನಾಡಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸುವಲ್ಲಿ ಮಾತೃಭಾಷಾ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಸಭೆಯಲ್ಲಿ […]

ಕಾವ್ಯವಾಚನ ಮತ್ತು ಪ್ರವಚನ

ಕಾವ್ಯವಾಚನ ಮತ್ತು ಪ್ರವಚನ

Tuesday, July 5th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿಸಾಹಿತ್ಯ ಸಂಘದ ಆಶ್ರಯದಲ್ಲಿ ಕುಮಾರವ್ಯಾಸ ಭಾರತದ ಮತ್ತು ಹರಿಶ್ಚಂದ್ರ ಕಾವ್ಯದ ಕೆಲವು ಭಾಗಗಳನ್ನು ಆಯ್ದು ಕಾವ್ಯವಾಚನ ಮತ್ತು ಪ್ರವಚನವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದಲ್ಲಿ ವಾಚನವನ್ನು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವು ಮತ್ತು ವ್ಯಾಖ್ಯಾನವನ್ನು ಕಟೀಲು ಮೇಳದ ಪ್ರಸಿದ್ಧ ಕಲಾವಿದರಾದ ಶ್ರೀ ಅಪ್ಪಕುಂಞ ಯಾದವ್ ಮಿಂಚಿಪದವುರವರು ಪ್ರಸ್ತುತ ಪಡಿಸಿದರು. ಹಾರ್ಮೋನಿಯಂನಲ್ಲಿ ಶ್ರೀ ಲಿಂಗಪ್ಪಗೌಡ ಪುತ್ತೂರುರವರು ಸಹಕರಿಸಿದ್ದರು. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಂತರ್ ಪ್ರೌಢಶಾಲಾ ಲಘು ಸಂಗೀತ ಸ್ಪರ್ಧೆ

ಅಂತರ್ ಪ್ರೌಢಶಾಲಾ ಲಘು ಸಂಗೀತ ಸ್ಪರ್ಧೆ

Monday, July 4th, 2016

ಶ್ರೀ ಬಾಲಕೃಷ್ಣ ಮಧುವನ ಇವರ ಸ್ಮರಣಾರ್ಥ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಅಂತರ್ ಪ್ರೌಢಶಾಲಾ ಮಟ್ಟದ ಲಘು ಸಂಗೀತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಕೀರ್ತಿಕುಡ್ವ ತೃತೀಯ ಬಹುಮಾನವನ್ನು ಮತ್ತು ಕು.ಅರ್ಪಿತಾ ಸಿ.ಪಿ ಪ್ರೋತ್ಸಾಹಕ ಬಹುಮಾನವನ್ನು ಪಡೆದರು. ಕೀರ್ತಿಕುಡ್ವ ಅರ್ಪಿತಾ

ಮೌಲ್ಯಯುತ ಶಿಕ್ಷಣ ಜೀವನಕ್ಕೆ ಪೂರಕ

ಮೌಲ್ಯಯುತ ಶಿಕ್ಷಣ ಜೀವನಕ್ಕೆ ಪೂರಕ

Saturday, July 2nd, 2016

ಮಕ್ಕಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಿರಂತರವಾಗಿ ನಡೆಯುತ್ತಿರುತ್ತದೆ, ಅದಕ್ಕೆ ಪೂರಕವಾದ ಮೌಲ್ಯಯುತ ಶಿಕ್ಷಣವನ್ನು ಶಾಲೆಯು ನೀಡುತ್ತಿದೆ, ಎಂದು ಸರಸ್ವತಿ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕರಾದ ಶ್ರೀಯುತ ವೆಂಕಟರಮಣ ರಾವ್ ಮಂಕುಡೆಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 1 ಮತ್ತು 2 ನೇ ತರಗತಿಯ ಪೋಷಕ – ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂತೆಯೇ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದ ಶ್ರೀಮತಿ ಪೂರ್ಣಿಮಾ ಇವರು ಪೋಷಕರು ತಮ್ಮ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಾಗ ಭಾವನಾತ್ಮಕ ಸಂಬಂಧ ಗಟ್ಟಿಯಾಗಲು ಸಾಧ್ಯ ಎಂದು […]

ಶಿಕ್ಷಕ - ಪೋಷಕರ ಸಭೆ

ಶಿಕ್ಷಕ – ಪೋಷಕರ ಸಭೆ

Tuesday, June 28th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 28-06-2016 ರಂದು 8 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಾದ ಶ್ರೀ ರಘುರಾಜ ಉಬರಡ್ಕರವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಮಾತೃ ಭಾಷೆಯಲ್ಲಿ ಕಲಿಕೆ ಉನ್ನತ ಶಿಕ್ಷಣಕ್ಕೆ ಎಂದೂ ತೊಡಕಾಗುವುದಿಲ್ಲ ಮತ್ತು ಮಾತೃಭಾಷೆಯಲ್ಲಿ ಕಲಿತ ಮಗು ಸರ್ವಾಂಗೀಣವಾಗಿ ಪ್ರಗತಿ ಹೊಂದುವುದಲ್ಲದೇ ಎಲ್ಲಾ ಮೌಲ್ಯಗಳನ್ನು ಅಂತರ್ಗತ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯರವರು […]

ಮಕ್ಕಳಲ್ಲಿ ಸ್ವಸಾಮರ್ಥ್ಯ ಬೆಳೆಸಬೇಕು -ರಾಮಚಂದ್ರ ಭಟ್

ಮಕ್ಕಳಲ್ಲಿ ಸ್ವಸಾಮರ್ಥ್ಯ ಬೆಳೆಸಬೇಕು -ರಾಮಚಂದ್ರ ಭಟ್

Friday, June 24th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುವ ಪೋಷಕರ ಸಭೆಯು ಮಕ್ಕಳ ವೈಯಕ್ತಿಕ ಸಾಮರ್ಥ್ಯ ಬೆಳೆಸುವಲ್ಲಿ ಸಹಕಾರಿಯಾಗಿದೆ, ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತಹ ಇಂಗ್ಲಿಷ್ ಉಪನ್ಯಾಸಕರಾದ ಶ್ರೀ ರಾಮಚಂದ್ರ ಭಟ್ ಇವರು ವಿದ್ಯಾರ್ಥಿಗಳಲ್ಲಿ ಸ್ವಸಾಮರ್ಥ್ಯ ಬೆಳೆಸಬೇಕು. ಹಾಗೆಯೇ ಅಂತರ್ಜಾಲ ಸಂಪರ್ಕ ಹೊಂದಿರುವ ಮೊಬೈಲ್‌ನಂತಹ ಮಾಧ್ಯಮಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ಸದಾ ಎಚ್ಚರವಿರುವಂತೆ ಕರೆ ನೀಡುತ್ತಾ 9ನೇ ತರಗತಿಯ ಪೋಷಕರ ಜವಾಬ್ದಾರಿಗಳ ಬಗ್ಗೆ ಸಂವಾದ ನಡೆಸಿದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೃಷ್ಣ ಭಟ್ ಕೊಂಕೋಡಿ, ಸದಸ್ಯೆ […]

ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಪೂರಕ - ಪದ್ಮನಾಭ ಜಿ.

ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಪೂರಕ – ಪದ್ಮನಾಭ ಜಿ.

Thursday, June 23rd, 2016

ಪ್ರತಿ ಶಾಲೆಗಳಲ್ಲಿ ಶೈಕ್ಷಣಿಕ ವಿಷಯಗಳ ಜೊತೆಗೆ ನಡೆಯುವ ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ, ಬದಲಾಗಿ ಕಲಿಕೆಗೆ ಉತ್ತೇಜನ ನೀಡುತ್ತದೆ ಎಂದು ಪದ್ಮನಾಭ ಜಿ. ಯವರು ಹೇಳಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 5 ಮತ್ತು 6 ನೇ ತರಗತಿಯ ಪೋಷಕ- ಶಿಕ್ಷಕರ ಸಭೆಗೆ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದರು. ಅಂತೆಯೇ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿಯವರು ಸಂದರ್ಭೋಚಿತವಾಗಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು […]

ವಿಶ್ವ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆ

Tuesday, June 21st, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 21-06-2016 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು.

SSLC ವಿದ್ಯಾರ್ಥಿಗಳಿಗೆ ಅಭಿನಂದನೆಗಳು

SSLC ವಿದ್ಯಾರ್ಥಿಗಳಿಗೆ ಅಭಿನಂದನೆಗಳು

Monday, June 13th, 2016
ಶಾಲಾ ಮಂತ್ರಿಮಂಡಲ

ಶಾಲಾ ಮಂತ್ರಿಮಂಡಲ

Saturday, June 11th, 2016

ಪ್ರೌಢಶಾಲಾ ನಾಯಕಿ ಶುಭಾ ಆಚಳ್ಳಿ ಪ್ರೌಢಶಾಲಾ ಉಪನಾಯಕ ಯೋಗಿತ್ ಪ್ರಾಥಮಿಕ ಶಾಲಾ ನಾಯಕ ರಾಮನಾಥ ಪ್ರಾಥಮಿಕ ಶಾಲಾ ಉಪನಾಯಕ ಸಾತ್ವಿಕ್ ಪ್ರತಿಪಕ್ಷ ನಾಯಕ ತೀರ್ಥರಾಜ್ ಪ್ರತಿಪಕ್ಷ ನಾಯಕಿ ಅಪರ್ಣ ಸ್ಪೀಕರ್ ಸ್ಕಂದ ಸಾಂಸ್ಕೃತಿಕ ಮಂತ್ರಿ ಯಶಸ್ವಿ ವಿದ್ಯಾಮಂತ್ರಿ ಅರ್ಪಿತಾ ನೀರಾವರಿ ಮಂತ್ರಿ ಅಶ್ವಿನ್ ಗೃಹ ಮಂತ್ರಿ ಶಿವಪ್ರಸಾದ್ ಕ್ರೀಡಾಮಂತ್ರಿ ಶ್ರದ್ಧಾ ಆರೋಗ್ಯ ಮಂತ್ರಿ ಪ್ರಣವ ನೈರ್ಮಲ್ಯ ಮಂತ್ರಿ ದೀಕ್ಷಿತಾ ಕಾನೂನು ಮಂತ್ರಿ ಶ್ರೀಪ್ರದ ಸಾರಿಗೆ ಮಂತ್ರಿ ಚಿರಾಗ್ ವಾರ್ತಾಮಂತ್ರಿ ವಿಭಾ ಆಚಳ್ಳಿ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ […]

ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ -  ಶ್ರೀ ಲೋಹಿತ್ ಎಸ್. ಕೆ.

ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ – ಶ್ರೀ ಲೋಹಿತ್ ಎಸ್. ಕೆ.

Saturday, June 11th, 2016

ಜ್ಞಾನ, ಓದುವ ಹವ್ಯಾಸ , ಏಕಾಗ್ರತೆ, ಭಾಷಾ ಪ್ರೌಢಿಮೆ, ಶಬ್ಧ ಭಂಡಾರ, ವಿಮರ್ಶತ್ಮಾಕ ಗುಣ, ನೆನಪು ಶಕ್ತಿ, ಜೀವನ ಮೌಲ್ಯ, ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ಇವೆಲ್ಲವನ್ನು ನೀಡುವ ಏಕೈಕ ಕಲೆಯೇ ಯಕ್ಷಗಾನ ಮತ್ತು ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 10-06-2016 ರಂದು ಉದ್ಘಾಟನೆಗೊಂಡ ಯಕ್ಷಗಾನ ಅರ್ಥಗಾರಿಕೆ ತರಬೇತಿ ಸಭಾಕಾರ್ಯಕ್ರಮದಲ್ಲಿ ಕಲಾವಿದ, ಉಪನ್ಯಾಸಕರಾದ ಶ್ರೀ ಲೋಹಿತ್.ಎಸ್.ಕೆ ಹೇಳಿದರು. ಕಲೆಯಲ್ಲಿ ಸಾಧನೆ ಮಾಡಿದರೆ ನಮ್ಮ ಪರಿಚಯ ದೇಶ ವಿದೇಶಗಳಲ್ಲೂ ಪ್ರಸಿದ್ಧಿಗೆ […]

ಯಕ್ಷ-ಶಿಕ್ಷಣ ತರಗತಿ ಪ್ರಾರಂಭ

ಯಕ್ಷ-ಶಿಕ್ಷಣ ತರಗತಿ ಪ್ರಾರಂಭ

Saturday, June 11th, 2016

ದಿನಾಂಕ 10-06-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೃತ್ಯಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರು ಯಕ್ಷ- ಶಿಕ್ಷಣ ತರಗತಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಯಕ್ಷ- ಶಿಕ್ಷಣ ನಿಂತ ನೀರಲ್ಲ ಅದು ಸದಾ ಪ್ರವಹಿಸುತ್ತಿರುವ ಸಾಗರ ಎಂದು ನುಡಿದರು. ತರಬೇತಿ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮವನ್ನು ನೇರವೇರಿಸಿದರು.

ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ(Rescue) ಸ್ಪರ್ಧೆಯಲ್ಲಿ - ಪ್ರಥಮ

ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ(Rescue) ಸ್ಪರ್ಧೆಯಲ್ಲಿ – ಪ್ರಥಮ

Thursday, June 9th, 2016

ಮುಂಬಯಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ತ್ರಿಶೂಲ್ 50ಮೀ ಮ್ಯಾನಿಕಿನ್ ಕ್ಯಾರಿ(Manikin Carry) ನಲ್ಲಿ ಪ್ರಥಮ ಸ್ಥಾನ, 100 ಮೀ ಒಬ್‌ಸ್ಟ್ಯಾಕಲ್ ಈಜು(Obstacle Swim) – ದ್ವಿತೀಯ, ಬೀಚ್ ರನ್ – ತೃತೀಯ, ಮತ್ತು ಸರ್ಫ್ ರೇಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇವನು ಪರ್ಲಡ್ಕ ಬಾಲವನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಈತ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಶಿವಗೌಡ ಮತ್ತು ನಳಿನಿ.ಟಿ ದಂಪತಿಗಳ ಪುತ್ರ.

ಶಾಲಾ ಚುನಾವಣೆ

ಶಾಲಾ ಚುನಾವಣೆ

Tuesday, June 7th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ 2016-17 ನೇ ಸಾಲಿನ ಶಾಲಾ ಚುನಾವಣೆಯು ಮುಖ್ಯಗುರುಗಳ ಸಮ್ಮುಖದಲ್ಲಿ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕಿಯಾಗಿ ಕು. ಶುಭ ಆಚಳ್ಳಿ ಮತ್ತು ಉಪನಾಯಕನಾಗಿ ಯೋಗಿತ್ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ರಾಮನಾಥ ಮತ್ತು ಉಪನಾಯಕನಾಗಿ ಸಾತ್ವಿಕ್ ಎ.ಎಂ. ಆಯ್ಕೆಯಾದರು. ಚುನಾವಣೆಯ ಉಸ್ತುವಾರಿಯನ್ನು ಶಿಕ್ಷಕರಾದ ಶ್ರೀಯುತ ವಿಶ್ವನಾಥ ಮುಡೂರು ವಹಿಸಿದರು ಎಲ್ಲಾ ಶಿಕ್ಷಕರು ಸಹಕರಿಸಿದರು.

ಸೋತವರಿಂದ ಸೋಲಿನ ಪಾಠವನ್ನು ಕಲಿಯಬೇಕು- ರಾಕೇಶ್ ಕಮ್ಮಾಜೆ

ಸೋತವರಿಂದ ಸೋಲಿನ ಪಾಠವನ್ನು ಕಲಿಯಬೇಕು- ರಾಕೇಶ್ ಕಮ್ಮಾಜೆ

Tuesday, May 31st, 2016

ಮಾತೃ ಭಾಷಾ ಶಿಕ್ಷಣವು ಮಗುವಿನಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸಿ, ಜೀವನ್ಮುಖಿಯಾಗುವಂತೆ ಮಾಡುತ್ತದೆ. ಮಗು ಸಂಸ್ಕಾರವಂತನಾಗಿ ಬೆಳೆಯಬೇಕಾದರೆ; ಮನೆ, ಶಾಲೆ, ಹಾಗೂ ಸಮಾಜದಲ್ಲಿಗುಣಾತ್ಮಕವಾದ ಪೂರಕ ವಾತಾವರಣವಿರಬೇಕು. ನಾವು ಯಶಸ್ಸಿನ ಗುಟ್ಟನ್ನು ತಿಳಿಯಬೇಕಾದರೆ ಸೋತವರಿಂದ ಗೆಲುವಿನ ಪಾಠವನ್ನು, ಗೆದ್ದವರಿಂದ ಗೆಲುವಿನ ಅನುಭವವನ್ನು ಆಲಿಸಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀ ರಾಕೇಶ್‌ಕುಮಾರ್ ಕಮ್ಮಾಜೆ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರವೇಶೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಯಶಸ್ವಿ ಜೀವನಕ್ಕೆ ಅವಶ್ಯಕವಾದ ಜೀವನ ಕೌಶಲವನ್ನು […]

ವಿವೇಕಾನಂದ ಶಾಲಾ ಪ್ರಾರಂಭೋತ್ಸವ

ವಿವೇಕಾನಂದ ಶಾಲಾ ಪ್ರಾರಂಭೋತ್ಸವ

Thursday, May 26th, 2016

ವಿವೇಕಾನಂದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ 26-05-2016 ರಂದು ಮುಂಜಾನೆ ಗಣಹೋಮ ನಡೆಸಿ 2016-17 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಶಾಲೆಯ ಮಕ್ಕಳನ್ನು ಮಾತಾಜಿಯವರು ತಿಲಕವಿಟ್ಟು ಸಿಹಿ ನೀಡಿ ಸ್ವಾಗತಿಸಿದರು. ಎಲ್ಲಾ ಮಕ್ಕಳೂ ಭಾರತಾಂಬೆಯ ಚರಣಗಳಿಗೆ ನಮಸ್ಕರಿಸಿ ಪುಷ್ಪಾರ್ಚನೆಗೈದು ತಮ್ಮ ಮುಂದಿನ ವಿದ್ಯಾರ್ಜನೆಗೆ ಶುಭಾರಂಭಗೈದರು. ಶಾಲಾ ಆಡಳಿತ ಮಂಡಳಿ ಸಂಚಾಲಕರು, ಸದಸ್ಯರು, ಶಿಕ್ಷಕ – ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು – ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಇಂಗ್ಲಿಷ್ ಭಾಷೆಯ ಕಲಿಕೆ ಜೀವನ ಸುಧಾರಣೆಗೆ ಪೂರಕ - ಶ್ರೀಮತಿ ಸುಜನಿ ಬೋರ್ಕರ್

ಇಂಗ್ಲಿಷ್ ಭಾಷೆಯ ಕಲಿಕೆ ಜೀವನ ಸುಧಾರಣೆಗೆ ಪೂರಕ – ಶ್ರೀಮತಿ ಸುಜನಿ ಬೋರ್ಕರ್

Wednesday, May 25th, 2016

ಇಂಗ್ಲಿಷ್ ಭಾಷೆಯನ್ನು ಕಲಿತು ಮನನ ಮಾಡಿಕೊಂಡಾಗ ವ್ಯಾವಹಾರಿಕವಾಗಿ ಅಗತ್ಯವಿದ್ದಲ್ಲಿ ಬಳಸಿಕೊಂಡು ಜೀವನವನ್ನು ಸುಧಾರಿಸಿಕೊಳ್ಳಬಹುದು ಎಂದು ಅಂಬಿಕಾ ಬಾಲ ವಿದ್ಯಾಲಯದ ಮುಖ್ಯಗುರುಗಳಾದ ಶ್ರೀಮತಿ ಸುಜನಿ ಬೋರ್ಕರ್‌ರವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ 7 ಮತ್ತು 8 ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿರುವ 5 ದಿನಗಳ ’ಸುಲಭ – ಸರಳ, ಇಂಗ್ಲಿಷ್ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಶಿಬಿರಾರ್ಥಿಗಳಿಗೆ ಹಿತನುಡಿಗಳನ್ನಾಡಿದರು. ಶಿಬಿರದಲ್ಲಿ ಆಂಗ್ಲ ಭಾಷೆಗೆ ಸಂಬಂಧಿಸಿ, ಪರಿಣಾಮಕಾರಿ ಸಂವಹನ, ಚಟುವಟಿಕಾತ್ಮಕ ಕಲಿಕೆ ವ್ಯಾಕರಣ, ಮನೋರಂಜನಾ ಆಟಗಳು, ಕರಕುಶಲ ಕಲೆ […]

ಮಾತೃ ಭಾಷೆ ಮರೆಯುವುದು ಅಕ್ಷಮ್ಯ ಅಪರಾಧ - ಕಜಂಪಾಡಿ ಸುಬ್ರಹ್ಮಣ್ಯ ಭಟ್

ಮಾತೃ ಭಾಷೆ ಮರೆಯುವುದು ಅಕ್ಷಮ್ಯ ಅಪರಾಧ – ಕಜಂಪಾಡಿ ಸುಬ್ರಹ್ಮಣ್ಯ ಭಟ್

Tuesday, May 24th, 2016

ನಮ್ಮ ಮಾತೃ ಭಾಷೆ ಕನ್ನಡ ಅತ್ಯಂತ ಸುಂದರವಾದದ್ದು, ವೈಜ್ಞಾನಿಕವಾಗಿ ವ್ಯವಸ್ಥಿತವಾದ ಲಿಪಿಯಿಂದ ಕೂಡಿದೆ. ಆದ್ದರಿಂದ ದೇಶಿಯ ಭಾಷೆಯಲ್ಲಿ ಧರ್ಮಯೋಗ್ಯವಾದ, ಜೀವನ ಮೌಲ್ಯಗಳನ್ನು ತಿಳಿಸಿಕೊಡುವಂತಹ ಶಿಕ್ಷಣವನ್ನು ಇಂದಿನ ವಿದ್ಯಾರ್ಥಿಗಳು ಪಡೆಯಬೇಕಾಗಿದೆ. ಅರ್ಥ ಮತ್ತು ಕಾಮಗಳನ್ನು ಧರ್ಮದಿಂದ ಅನುಷ್ಠಾನ ಮಾಡಿದಾಗ ಮೋಕ್ಷ ಸಾಧನೆಯಾಗುತ್ತದೆ. ಇದು ಗುಣಾತ್ಮಕ ಶಿಕ್ಷಣದಿಂದ ಸಾಧ್ಯವಾಗುತ್ತದೆ ಎಂದು ಅಖಿಲಭಾರತೀಯ ಕುಟುಂಬ ಪ್ರಬೋಧನಾ ಪ್ರಮುಖರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2015-16 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಿದ […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಶೇ. 98.51 ಫಲಿತಾಂಶ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಶೇ. 98.51 ಫಲಿತಾಂಶ

Wednesday, May 18th, 2016
ಬೆಳ್ಳಿಹಬ್ಬದ ಕೊಡುಗೆಯಾಗಲಿರುವ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಬೆಳ್ಳಿಹಬ್ಬದ ಕೊಡುಗೆಯಾಗಲಿರುವ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Tuesday, April 26th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 25 ರ ಸಾಮಿಪ್ಯ – ಬೆಳ್ಳಿಹಬ್ಬದ ಕೊಡುಗೆಯಾಗಲಿರುವ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ 2017-18 ನೇ ಇಸವಿಗೆ 25 ವರುಷದ ಸಂಭ್ರಮಾಚರಣೆ ನಡೆಯಲಿದ್ದು, ಬೆಳ್ಳಿಹಬ್ಬದ ಸಂಭ್ರಮದ ಕೊಡುಗೆಯಾಗಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಎ. 25 ರಂದು ನಡೆಯಿತು. ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಶಂಕು ಸ್ಥಾಪನೆ ಮಾಡಿ ಮಾತನಾಡಿ, ’ದೇಶ, ಭಾಷೆ […]

ದೈಹಿಕ ಮಾನಸಿಕ , ಭಾವನಾತ್ಮಕ, ಸಾಮಾಜಿಕ ವಿಕಾಸಕ್ಕೆ ಪೂರಕವಾಗಿರಬೇಕು - ಡಾ. ಮಾಧವ ಭಟ್

ದೈಹಿಕ ಮಾನಸಿಕ , ಭಾವನಾತ್ಮಕ, ಸಾಮಾಜಿಕ ವಿಕಾಸಕ್ಕೆ ಪೂರಕವಾಗಿರಬೇಕು – ಡಾ. ಮಾಧವ ಭಟ್

Thursday, April 14th, 2016

ಶಿಕ್ಷಣದ ಉತ್ಸಾಹವು ವ್ಯಕ್ತಿಯಲ್ಲಿ ದೈಹಿಕ , ಮಾನಸಿಕ, ಭಾವನಾತ್ಮಕ, ಸಾಮಾಜಿಕ ವಿಕಾಸಕ್ಕೆ ಪೂರಕವಾಗಿರಬೇಕು ತನ್ಮೂಲಕ ಮಕ್ಕಳಲ್ಲಿ ಔಚಿತ್ಯ ಪ್ರಜ್ಞೆ ಬೆಳೆಯಬೇಕು. ಶಾಲೆಯಲ್ಲಿ ಮಗು ಕಲಿತ ದಿನಗಳು ಸ್ಮರಣೀಯ ಎಂದು ಡಾ. ಎಚ್. ಮಾಧವ ಭಟ್ ಹೇಳಿದರು. ವಿವೇಕಾನಂದ ಕನ್ನಡ ಶಾಲೆಯ 10ನೇ ತರಗತಿಯ ಮಕ್ಕಳ ದೀಪಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇವರು ಶಾಲೆಯೊಂದಿಗೆ ಸದಾ ನಿಮ್ಮ ಭಾವನಾತ್ಮಕ ಸಂಬಂಧವಿರಲಿ ಎಂದು ಹೇಳಿದರು. ಆಡಳಿತ ಮಂಡಳಿಯ ಸದಸ್ಯರಾದ ಬಿರ್ಮಣ್ಣ ಗೌಡ, ಶೋಭಾ ಕೊಳತ್ತಾಯ, ರೂಪಲೇಖಾ […]

ಯಕ್ಷಗಾನ ತರಬೇತಿ ಕಾರ್ಯಾಗಾರದ ಸಮಾರೋಪ

ಯಕ್ಷಗಾನ ತರಬೇತಿ ಕಾರ್ಯಾಗಾರದ ಸಮಾರೋಪ

Thursday, April 7th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಕಾರ್ಯಾಗಾರವು ದಿನಾಂಕ 7-4-2016 ರಂದು ಸಮಾರೋಪಗೊಂಡಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಟ್ಯಗುರು ಶ್ರೀ ಬಾಲಕೃಷ್ಣ ಉಡ್ಡಂಗಳರವರು ಮಾತನಾಡಿ, ನಿರಂತರ ಕಲಿಕೆಯಿಂದ ಮಾತ್ರ ಕಲೆಯನ್ನು ಒಲಿಸಿಕೊಳ್ಳು ಸಾಧ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಪೋಷಕರಾದ ಶ್ರೀ ಬಾಲಕೃಷ್ಣ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು. ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಕಾರ್ಯಾಗಾರದ ನಿರ್ದೇಶಕರಾದ ಶ್ರೀ ಚಂದ್ರಶೇಖರವರು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಶ್ರೀ ಹರೀಶ್ ನೆರವೇರಿಸಿದ್ದರು.

ಮುಖವರ್ಣಿಕೆ ಕಾರ್ಯಾಗಾರ

ಮುಖವರ್ಣಿಕೆ ಕಾರ್ಯಾಗಾರ

Wednesday, April 6th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಕಾರ್ಯಾಗಾರದಲ್ಲಿ ಮುಖವರ್ಣಿಕೆ ತರಬೇತಿಯನ್ನು ಖ್ಯಾತ ಕಿರೀಟ ವೇಷದಾರಿ ಶ್ರೀ ಜನಾರ್ಧನ ಬದಿಯಡ್ಕ ನೀಡಿದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನ ಹೊಂದಿದ ಹಾಸ್ಯಗಾರರಾದ ಮಿಜಾರು ಅಣ್ಣಪ್ಪರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆಯಲ್ಲಿ ಶಿಬಿರಾರ್ಥಿಗಳ ಪೋಷಕರು ಮತ್ತು ಕಾರ್ಯಾಗಾರದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಉಪಸ್ಥಿತರಿದ್ದರು.

ಯಕ್ಷಗಾನ ಶಿಬಿರ

ಯಕ್ಷಗಾನ ಶಿಬಿರ

Saturday, April 2nd, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯಕ್ಷ ಚಿಣ್ಣರ ಬಳಗದಿಂದ ನಡೆಯುತ್ತಿರುವ ಯಕ್ಷಗಾನ ಕಾರ್ಯಾಗಾರದಲ್ಲಿ ಕಲಾವಿದ ಶ್ರೀ ಮಾಧವ ನೆಟ್ಟಣಿಗೆಯವರು ಭಾಗವಹಿಸಿ ವೇಷಭೂಷಣವನ್ನು ತೊಡುವ ಕ್ರಮ ಮತ್ತು ಯಕ್ಷಗಾನ ಬೆಳೆದು ಬಂದ ದಾರಿಯ ಬಗ್ಗೆ ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಯಕ್ಷ ಶಿಬಿರದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.

ಕಲೆ ಸುದೀರ್ಘ ತಪಸ್ಸು - ಎಂ. ನಾ. ಚಂಬಲ್ತಿಮಾರ್

ಕಲೆ ಸುದೀರ್ಘ ತಪಸ್ಸು – ಎಂ. ನಾ. ಚಂಬಲ್ತಿಮಾರ್

Tuesday, March 29th, 2016

ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ವಾಕ್ಪಟುತ್ವ ಮುಂತಾದ ಕಲೆಗಳ ಸಮಾಗಮದಿಂದ ರೂಪುಗೊಂಡ ಕಲಾ ಪರಿಕರವೇ ಯಕ್ಷಗಾನ. ಇದು ಸುದೀರ್ಘ ತಪಸ್ಸು ಎಂದು ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ನಾರಾಯಣ ಚಂಬಲ್ತಿಮಾರ್‌ರವರು ನುಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಯಕ್ಷಗಾನ ತರಬೇತಿ ಕಾರ್ಯಾಗಾರ ಮತ್ತು ’ಛತ್ರಪತಿ ಶಿವಾಜಿ’ ಎಂಬ ಮಕ್ಕಳ ಯಕ್ಷಗಾನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಈ ಮಾತನ್ನು ನುಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಹಾಸ್ಯ ಕಲಾವಿದರಾದ […]

ಹದಿಹರೆಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ

ಹದಿಹರೆಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ

Tuesday, March 15th, 2016

ದಿನಾಂಕ 12-03-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಹದಿಹರೆಯದ ಹೆಣ್ಣು ಮಕ್ಕಳಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಶ್ರೀ ವಾಣಿ ವಿಜಯ ಪ್ರೌಢ ಶಾಲೆ, ಕೊಡ್ಲಮೊಗರು, ಮಂಜೇಶ್ವರದ ಸಹಶಿಕ್ಷಕಿಯಾದ ಶ್ರೀಮತಿ ಕೃಷ್ಣವೇಣಿಯವರು ಮಾಹಿತಿ ನೀಡಿದ್ದಾರೆ. ಹದಿಹರೆಯದ ಮಕ್ಕಳ ಶಾರೀರಿಕ ಸ್ವಚ್ಛತೆಗೆ ಆದ್ಯತೆ ಹೇಗೆ ಕೊಡಬೇಕೆಂದು ಸಂವಾದ ನಡೆಸಿ ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪ್ರದಾನ

Saturday, March 12th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-03-2016 ರಂದು ಎಲ್.ಐ.ಸಿ ಇದರ ಪುತ್ತೂರು ಶಾಖೆಯ ವತಿಯಿಂದ 2015 ನೇ ಸಾಲಿನಲ್ಲಿ ತರಗತಿವಾರು ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ’ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಶಸ್ತಿ’ ನೀಡಲಾಯಿತು. ಶಾಖಾವತಿಯಿಂದ ಶ್ರೀಮತಿ ರಾಜಶ್ರೀ, ಶ್ರೀ ಜಯರಾಮ ನೆಲ್ಲಿತ್ತಾಯ, ಶ್ರೀ ಸೋಮ ಸುಂದರ್‌ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳು ಸ್ಮರಣಿಕೆ ನೀಡಿ ಗೌರವಿಸಿದರು.

ಭಾಷಣ ಸ್ಪರ್ಧೆಯಲ್ಲಿ - ಪ್ರಥಮ

ಭಾಷಣ ಸ್ಪರ್ಧೆಯಲ್ಲಿ – ಪ್ರಥಮ

Friday, March 11th, 2016

ತಾಲೂಕು ಆರೋಗ್ಯಾಧಿಕಾರಿಯವರ ಕಛೇರಿ ಪುತ್ತೂರು ತಾಲೂಕು ಇವರ ಆಶ್ರಯದಲ್ಲಿ 2015-16 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ARSH ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಹದಿಹರೆಯದಲ್ಲಿ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬದಲಾವಣೆ ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯದ ಬಗೆಗಿನ ಸತ್ಯ ಮತ್ತು ಮಿಥ್ಯ ಈ ವಿಷಯದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಹತ್ತನೆಯ ತರಗತಿಯ ವಿದ್ಯಾರ್ಥಿನಿ ಅಶ್ವಿನಿ. ಯು. ನಾಯಕ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಸಂಪ್ಯ ನಿವಾಸಿ ಉಪೇಂದ್ರ ನಾಯಕ್ ಹಾಗೂ ವಿವೇಕಾನಂದ ಕನ್ನಡ […]

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳಲ್ಲಿ ಶಾಲೆಗೆ ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳಲ್ಲಿ ಶಾಲೆಗೆ ಪ್ರಶಸ್ತಿ

Tuesday, March 1st, 2016

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಚಿಕ್ಕಮಗಳೂರು ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ನಿಂದ ಹಲವು ಸ್ಪರ್ಧೆಗಳನ್ನು ನಡೆಸಲಾಗಿತ್ತು. ‘ಜ್ಞಾನಸಿಂಧು/ ಜ್ಞಾನ ಬಂಧು’ ನೈತಿಕ ಮೌಲ್ಯಧಾರಿತ ಪುಸ್ತಕದ ಅಧ್ಯಯನದ ಆಧಾರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿಗಳು ಬಂದಿವೆ. ಜ್ಞಾನ ಸಿಂಧು ಪುಸ್ತಕ ಆಧಾರಿತ ಭಾಷಣ ಸ್ಪರ್ಧೆಯಲ್ಲಿ […]

ಸಿಯಾಚಿನ್ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಭೆ

ಸಿಯಾಚಿನ್ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಭೆ

Friday, February 12th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಠಾರದಲ್ಲಿ ಇತ್ತೀಚೆಗೆ ಸಿಯಾಚಿನ್‌ನಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿ ಹುತಾತ್ಮರಾಗಿ ಅಮರರಾದ ವೀರ ಯೋಧರಿಗೆ ನುಡಿನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರನ್ನು ಪುಷ್ಪಾರ್ಚನೆಗೈದು ಮೌನ ಪ್ರಾರ್ಥನೆ ಸಲ್ಲಿಸಿ ಅಮರ ವೀರರೆಲ್ಲರಿಗೂ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಗಾನ - ನೃತ್ಯ- ಯಕ್ಷ ಸಂಭ್ರಮ

ಗಾನ – ನೃತ್ಯ- ಯಕ್ಷ ಸಂಭ್ರಮ

Tuesday, February 9th, 2016

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಶ್ರಯದಲ್ಲಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ) ಸಾಧನಾ ಸಂಗೀತ ಶಾಲೆ ಹಾಗೂ ತೆಂಕಿಲ ಯಕ್ಷ ಚಿಣ್ಣರ ಬಳಗದ ಸಹಯೋಗದೊಂದಿಗೆ ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ವಠಾರದಲ್ಲಿಗಾನ – ನೃತ್ಯ- ಯಕ್ಷ ಸಂಭ್ರಮ- 2016 ಕಾರ್ಯಕ್ರಮ ನಡೆಯಿತು. ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀಧರ ಮಯ್ಯ ಕಾರ್ಯಕ್ರಮದ ದೀಪ ಪ್ರಜ್ವಲನೆಗೈದು ಪ್ರತಿಭೆಗಳನ್ನು ಗುರುತಿಸಿ ಸೂಕ್ತವಾದ ತರಬೇತಿಯನ್ನು ನೀಡಿ ಸಮರ್ಥವಾದ ವೇದಿಕೆಯನ್ನು ಒದಗಿಸುವಲ್ಲಿ ಸಂಸ್ಥೆಯ ಕಾರ್ಯ ಅಭಿನಂದನಾರ್ಹವಾದುದು ಈ ಪ್ರತಿಭೆಗಳಿಗೆ ಭವಿಷ್ಯ ಉತ್ತಮವಾಗಿ ಬೆಳಗಲಿ ಎಂದು […]

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ 100% ಫಲಿತಾಂಶ

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ 100% ಫಲಿತಾಂಶ

Monday, February 8th, 2016

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ ಬಂದಿದ್ದು ಹೈಯರ್ ಗ್ರೇಡ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು ಚಿಂತನಾ- ವೇಣುಗೋಪಾಲ್ ಮತ್ತು ಶಕುಂತಳಾ ದಂಪತಿಯ ಪುತ್ರಿ, ದೀಕ್ಷಾ ಕೆ.ಎಸ್ – ಕೃಷ್ಣಪ್ಪ ಗೌಡ ಮತ್ತು ಶೋಭಾ ದಂಪತಿಯ ಪುತ್ರಿ, ಧನುಷ್ ಡಿ. – ದಾಮೋದರ್ ಆಚಾರ್ಯ ಮತ್ತು ಹರಿಣಿ ಆಚಾರ್ಯ ದಂಪತಿಗಳ ಪುತ್ರ, ಧನುಷ್ ಎನ್ – ನಾಮದೇವ ಆಚಾರ್ಯ ಮತ್ತು ಜಯಲಕ್ಷ್ಮೀ ಎನ್ ದಂಪತಿಗಳ […]

ಗಣರಾಜ್ಯೋತ್ಸವ ಆಚರಣೆ

ಗಣರಾಜ್ಯೋತ್ಸವ ಆಚರಣೆ

Saturday, January 30th, 2016

ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪುತ್ತೂರಿನ ಖ್ಯಾತ ನ್ಯಾಯವಾದಿಗಳಾದಕುಂಬ್ರ ದುರ್ಗಾಪ್ರಸಾದ್ ರೈ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಸ್ವಾಮಿವಿವೇಕಾನಂದರು ವಿದೇಶಗಳಲ್ಲಿ ಹೆಸರುಗಳಿಸಿದ ನಂತರ ರಾಮಕೃಷ್ಣ ಪರಮಹಂಸರು ಅತ್ಯಂತ ಸಂತೋಷಪಟ್ಟರು. ಅದೇ ರೀತಿ ವಿದ್ಯಾರ್ಥಿಗಳಾದ ನೀವೆಲ್ಲರೂ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿಸಾಧನೆ ಮಾಡಿ, ಭಾರತ ದೇಶದ ಸಂಪನ್ಮೂಲಗಳಾಗಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ| ಕೆ.ಎಂ. ಕೃಷ್ಣ ಭಟ್ ಕೊಂಕೋಡಿ, ಖಜಾಂಜಿ ಅಚ್ಚುತ ನಾಯಕ್, ಸದಸ್ಯೆ ರೂಪಲೇಖ […]

ರಾಜ್ಯೋತ್ಸವದಂದು ಸಾಂಸ್ಕೃತಿಯ ಕಾರ್ಯಕ್ರಮ

ರಾಜ್ಯೋತ್ಸವದಂದು ಸಾಂಸ್ಕೃತಿಯ ಕಾರ್ಯಕ್ರಮ

Wednesday, January 27th, 2016

ದಿನಾಂಕ 26-01-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸುಮಾರು 400 ಮಕ್ಕಳು ಶಿಸ್ತು ಬದ್ಧ ದಂಡ ವ್ಯಾಯಾಮ, ಯೋಗ ವ್ಯಾಯಾಮ ಮತ್ತು ವಂದೇ ಮಾತರಂ ಹಾಡಿಗೆ ನೃತ್ಯ ಮಾಡಿ ರಂಜಿಸಿದರು. ಶಿಕ್ಷಕರು ಸಹಕರಿಸಿದರು.

ಚಿತ್ರಕಲೆಯಲ್ಲಿ ಶೇ. 100 ಫಲಿತಾಂಶ

Monday, January 25th, 2016

ಲೋವರ್‌ಗ್ರೇಡ್ ವಿಭಾಗದಲ್ಲಿ 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , ಮತ್ತು 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಮತ್ತು ಹೈಯರ್‌ಗ್ರೇಡ್ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಹಾಜರಾಗಿದ್ದು, 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ ಇವರು ಮಕ್ಕಳಿಗೆ ತರಬೇತು ನೀಡಿರುತ್ತಾರೆ.

ವಿವೇಕ ರಥಕ್ಕೆ ಸ್ವಾಗತ

ವಿವೇಕ ರಥಕ್ಕೆ ಸ್ವಾಗತ

Tuesday, January 12th, 2016

ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನೂರು ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ವಿವೇಕಾನಂದ ಜಯಂತಿಯಂದು ನಡೆಯುವ ಕಾರ್ಯಕ್ರಮದ ಅಂಗವಾಗಿ ಹೊರಟ ವಿವೇಕ ರಥ ಜ.11 ರಂದು ಮಧ್ಯಾಹ್ನ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಆಗಮಿಸಿತು. ತೆಂಕಿಲದ ಪ್ರಮುಖ ರಸ್ತೆಯಲ್ಲಿ ಆಗಮಿಸಿದ ರಥವನ್ನು ಮೆರವಣಿಗೆಯಲ್ಲಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂವ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರೋಹಿಣಾಕ್ಷರವರು ಮಾತನಾಡಿ, ಭಾರತೀಯ ಸಂಸ್ಕೃತಿಯೊಂದಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದರೊಂದಿಗೆ ಆರಂಭವಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂರರ ಸಂಭ್ರಮಾಚರಣೆ ಸಡಗರದಿಂದ ಆಚರಿಸುತ್ತಿರುವ […]

ಸಾಂಸ್ಕೃತಿಕ ಹಬ್ಬ’ವಿವೇಕೋತ್ಸವ’

ಸಾಂಸ್ಕೃತಿಕ ಹಬ್ಬ’ವಿವೇಕೋತ್ಸವ’

Saturday, December 26th, 2015

ವಿದ್ಯಾರ್ಥಿಗಳು ಉರಿಯುವ ಜ್ವಾಲೆಗಳಾಗಬೇಕು – ಸತೀಶ್‌ಕುಮಾರ್ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಹೊಳೆಯುವ ಚುಕ್ಕೆಗಳಾಗಬಾರದು. ಹೊಳೆಯಲು ಬೇಕಾದ ಜ್ವಾಲೆಯಾಗಿ ಉರಿಯುವ ಬೆಂಕಿಯಾಗಬೇಕು. ಬಳಿಕ ಅದು ಶುಭ್ರವಾಗಿ ಹೊಳೆಯಬೇಕು ಎಂದು ಸಹಾಯಕ ಕಮಿಷನರ್ ಸತೀಶ್‌ಕುಮಾರ್ ಡಿ. ಎಮ್. ಹೇಳಿದರು. ತೆಂಕಿಲ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಲ್ಲಿ ಡಿ. 10 ರಂದು ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಹಬ್ಬ’ವಿವೇಕೋತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧೆ ಸಾಮಾನ್ಯ. ಪೋಷಕರು ಇದಕ್ಕೆ ಮಾರು ಹೋಗಬಾರದು. ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಮಾತ್ರವೇ ಸೀಮಿತವಾಗಿಡಬೇಡಿ. […]

ವಿವೇಕೋತ್ಸವ-2015 ಆಮಂತ್ರಣ

ವಿವೇಕೋತ್ಸವ-2015 ಆಮಂತ್ರಣ

Tuesday, December 8th, 2015
ಶಾಲಾ ವಿದಾರ್ಥಿಗಳು ರಾಷ್ಟ್ರಮಟ್ಟಕ್ಕೆ

ಶಾಲಾ ವಿದಾರ್ಥಿಗಳು ರಾಷ್ಟ್ರಮಟ್ಟಕ್ಕೆ

Monday, December 7th, 2015

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದ ರಾಜ್ಯಮಟ್ತದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಾದ ಪೆರಿಗೇರಿಯ ಕಮಲಾಕ್ಷ ಮತ್ತು ಕಮಲಾಕ್ಷಿಯವರ ಪುತ್ರಿ -ದೀಕ್ಷಾ, ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ- ಯುಕ್ತಿಕಾ, ಹಳೆನೆರೇಂಕಿಯ ಲಕ್ಷಣ ಗೌಡ ಮತ್ತು ಹೇಮಾಲತಾರವರ ಪುತ್ರಿ ಚೈತ್ರಾ.ಪಿ, ತಿಂಗಳಾಡಿಯ ಅಬ್ದುಲ್ ರಜಾಕ್ ಮತ್ತು ಅಸ್ಮ.ಕೆ ಟಿ. ರವರ ಪುತ್ರಿ ಇವರ ಆಯಿಷತ್‌ಲ್ ಆಸಿಫಾ ಇವರು 4×100 ಮೀ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜನವರಿಯಲ್ಲಿ ಮಹಾರಾಷ್ಟ್ರದ […]

ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಪ್ರಶಸ್ತಿ

ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಪ್ರಶಸ್ತಿ

Friday, December 4th, 2015

’ವಿಜ್ಞಾನ ಮತ್ತು ಗಣಿತದ ಸಮನ್ವಯ ಈ ತತ್ವದ ಆಧಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಾರಾಡಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ’ಆರೋಗ್ಯ ಪೌಷ್ಠಿಕತೆ ಸ್ವಚ್ಛತೆ’ ಈ ವಿಷಯದ ಮಾದರಿ ತಯಾರಿಯಲ್ಲಿ ಅಬಕಾರಿ ಉಪನಿರೀಕ್ಷಕ ವಿಶ್ವನಾಥ ಪಿ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ರೇವತಿ ದಂಪತಿ ಪುತ್ರ ಆಶ್ರಯ್ .ಪಿ.ವಿ ಮತ್ತು ನಿರ್ಪಾಡಿ ನಿವಾಸಿ […]

Highslide for Wordpress Plugin