ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು ಇಲ್ಲಿನ ಬಿಬಿಎ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳಾದ ಚಿತ್ರಶ್ರೀ, ಸ್ವೀಕೃತ್ ಶೆಟ್ಟಿ, ವರುಣ್ ರೈ ಹಾಗೂ ಸುಬ್ರಹ್ಮಣ್ಯೇಶ್ವರ ಪ್ರಸಾದ್ ಇವರಿಂದ ನಮ್ಮ ಶಾಲೆಯಲ್ಲಿ ‘ಸ್ವಚ್ಛ ಭಾರತ್’ ಅಭಿಯಾನ ಕುರಿತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಪ್ರಾತ್ಯಕ್ಷಿಕಾ ಮಾಹಿತಿ ನೀಡಲಾಯಿತು. ಅನಂತರ ಮಕ್ಕಳಿಗೆ ಏರ್ಷಡಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿವಾಗ್ಲೆ ಬಹುಮಾನ ವಿತರಿಸಿದರು. ಶಾಲಾ ವಿಜ್ಞಾನ ‘ವೃತಿಕಾ’– ವೇದಿಕೆಯಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಸಹಶಿಕ್ಷಕಿ ಶ್ರೀಮತಿ ಪುಷ್ಪಾವತಿ ನಿರ್ವಹಿಸಿದರು.