ಪುಸ್ತಕ ದೇಣಿಗೆ
Thursday, July 30th, 2015ವಿವೇಕಾನಂದ ಬಿ.ಎಡ್. ಕಾಲೇಜಿನ ವಿದ್ಯಾರ್ಥಿ- ಶಿಕ್ಷಕರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತರಗತಿ ಗ್ರಂಥಾಲಯಕ್ಕೆ ಪುಸ್ತಕ ರೂಪದಲ್ಲಿ ದೇಣಿಗೆ ನೀಡಿರುತ್ತಾರೆ.
ವಿವೇಕಾನಂದ ಬಿ.ಎಡ್. ಕಾಲೇಜಿನ ವಿದ್ಯಾರ್ಥಿ- ಶಿಕ್ಷಕರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತರಗತಿ ಗ್ರಂಥಾಲಯಕ್ಕೆ ಪುಸ್ತಕ ರೂಪದಲ್ಲಿ ದೇಣಿಗೆ ನೀಡಿರುತ್ತಾರೆ.
ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಅವರು ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೌತಮ್ ಎಸ್. – ದ್ವಿತೀಯ ಮತ್ತು ಮುಖೇಶ್ ಕೃಷ್ಣ-ತೃತೀಯ ಸ್ಥಾನ ಪಡೆದಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ|| ಎಪಿಜೆ ಅಬ್ದುಲ್ ಕಲಾಂರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆದ ‘ಪರಿಸರ ಸಂರಕ್ಷಣೆಗಾಗಿ ಗಿಡನೆಡುವ’ ಕಾರ್ಯಕ್ರಮದಲ್ಲಿ ಗೈಡ್ಸ್ ಮತ್ತು ಸ್ಕೌಟ್ಸ್ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿರುತ್ತಾರೆ.
ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇವರು ಶಾರದಾ ವಿದ್ಯಾನಿಕೇತನ ಮಂಗಳೂರು, ತಲಪಾಡಿ ಇಲ್ಲಿ ನಡೆಸಿದ ಜಿಲ್ಲಾಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿ ತ್ರಿಶೂಲ್ ಕಿಶೋರ ವರ್ಗದ 50 ಮೀ. ಬ್ರೇಕ್ ಸ್ಟೋಕ್ – ಪ್ರಥಮ, 50 ಮೀ. ಫೀಸ್ಟೈಲ್ ನಲ್ಲಿ ತೃತೀಯ, ಸ್ಥಾನ ಪಡೆದಿರುತ್ತಾರೆ.
ದಿನಾಂಕ 20-07-2015 ರಿಂದ 23-07-2015 ರ ವರೆಗೆ ನಡೆಯಲಿರುವ ಪ್ರಥಮ ರೂಪಣಾತ್ಮಕ ಮೌಲ್ಯ ಮಾಪನ ಪ್ರಶ್ನಾ ಪತ್ರಿಕೆಗಳನ್ನು ವಿವೇಕಾನಂದ ವಿದ್ಯಾವರ್ಧಕ ನಂಘದ ‘ಶಿಕ್ಷಕ-ರಕ್ಷಕ ಸಂಪನ್ಮೂಲ ಘಟಕ’ದಿಂದ ಪೂರೈಕೆಯಾಗಿರುತ್ತದೆ. ನಮ್ಮ ಶಾಲಾ ಪೋಷಕರೂ, ಶಿಕ್ಷಕ-ರಕ್ಷಕ ಸಂಘದ ಸದಸ್ಯರೂ, ವಕೀಲರೂ ಆದ ಶ್ರೀ ಜಯಪ್ರಕಾಶ್ ಎನ್. ಇವರು ಪ್ರಶ್ನಾ ಪತ್ರಕೆಗಳ ಪ್ರತಿಗಳನ್ನು ಬಿಡುಗಡೆಗೊಳಿಸಿ ‘ಪರೀಕ್ಷೆಗಳು ಸುಲಭವಾಗಿದ್ದು ಮಕ್ಕಳಲ್ಲಿ ಪರೀಕ್ಷೆಉ ಬಗ್ಗೆ ಧನಾತ್ಮಕ ಭಾವನೆ ಮೂಡಲಿ’ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು, ಪರೀಕ್ಷಾ ಸಂಯೋಜಕರಾದ ಲೀಲಾವತಿ ಮತ್ತು ಸೌಮ್ಯ ಮಾತಾಜಿಯವರು ಉಪಸ್ಥಿತರಿದ್ದರು.
ದಿನಾಂಕ 18-07-2015 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀರಾಮ ಕ್ಲಸ್ಟರ್ ಮತ್ತು ವಿವೇಕಾನಂದ ಕ್ಲಸ್ಟರ್‌ನ ಶಿಕ್ಷಕರಿಗಾಗಿ ನಡೆದ, ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರವನ್ನು ಉದ್ಘಾಟಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜದ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ ಭಟ್ ಟಿ. ಇವರು ‘ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಸಾಮರ್ಥ್ಯ ಶಿಕ್ಷಕನಿಗೆ ಅಗತ್ಯ ಮತ್ತು ಅದು ಶಿಕ್ಷಕರಿಗೆ ಮಾತ್ರ ಇರುವುದು ಎಂದು ನುಡಿದರು. ಅವರು ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಇಂತಹ ಕಾರ್ಯಾಗಾರಗಳನ್ನು ಸಂಘಟಿಸಿ ಶಿಕ್ಷಕರಲ್ಲಿನ ಮೌಲ್ಯಗಳನ್ನು ಉದ್ಧೀಪನಗೊಳಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ’ ಎಂದು […]
ಸರ್ವೋದಯ ವಿದ್ಯಾಸಂಸ್ಥೆಗಳು, ಸುಳ್ಯಪದವು ಪುತ್ತೂರು ತಾಲೂಕು, ದ.ಕ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರ ಸಹಯೋಗದೊಂದಿಗೆ ದಿವಂಗತ ಡಾ| ಕೆ.ಪಿ. ಬಾಲಕೃಷ್ಣ ರೈ ಮಧುವನ ನೆಟ್ಟಣಿಗೆ ಇವರ ಸ್ಮರಣಾರ್ಥ ತಾಲೂಕು ಮಟ್ಟದ ‘ಅಂತರ್ ಪ್ರೌಢ ಶಾಲಾ ಜನಪದ ಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಕು. ಅರ್ಪಿತಾ ಸಿ.ಪಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪೋಷಕರು, ಶಿಕ್ಷಕವೃಂದ ಹಾಗೂ ಆಡಳಿತ ಮಂಡಳಿ ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಶಾಲೆಯ ಪ್ರಗತಿಗೆ ಪೋಷಕರ ಸಹಕಾರ ಅಗತ್ಯವಿದೆ ಮತ್ತು ಪೋಷಕರು ಶಾಲೆಯ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ ಅಭಿಪ್ರಾಯ ಪಟ್ಟರು. ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಗೆ ಮುಖ್ಯ ಅತಿಥಿಗಳಾಗಿ ಈ ಮೇಲಿನ ಆಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಪೋಷಕರು – ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಕುರಿತಾಗಿ ಸಂವಾದ ನಡೆಸಿದರು. ಸಭೆಯಲ್ಲಿ […]
ದಿನಾಂಕ 20-6-2015 ನೇ ಶನಿವಾರ ಅಪರಾಹ್ನ 2-15 ಕ್ಕೆ ಸರಿಯಾಗಿ ಪೋಷಕರ ಸಭೆ ನಡೆಸಲಾಯಿತು. ನಮ್ಮ ಶಾಲಾ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯಗುರುಗಳು ಹಾಗೂ ಸಹಶಿಕ್ಷಕ ವೃಂದದವರು ಹಾಜರಿದ್ದರು. ಮುಖ್ಯಗುರುಗಳು ಮಾತನಾಡಿ ಪೋಷಕರು ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯವಿದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದೂ, ಮಕ್ಕಳ ಹಿತಾಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು. ನಮ್ಮ ಶಾಲಾ ಅಧ್ಯಕ್ಷರಾದ ಡಾ|| ಕೃಷ್ಣಭಟ್ ಕೊಂಕೋಡಿಯವರು ಪೋಷಕರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಚರಿಸಲಾಯಿತು. ಓಂಕಾರ, ಸೂರ್ಯನಮಸ್ಕಾರ, ನಾಡಿಶೋಧನೆ, 5 ಸರಳ ಆಸನಗಳು, ಪ್ರಾಣಾಯಾಮ, ಸಂಕಲ್ಪ, ಧ್ಯಾನವನ್ನು ಈ ಸಂದರ್ಭದಲ್ಲಿ ಮಾಡಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ‘ಆರೋಗ್ಯ ಮತ್ತು ಯೋಗ’ ಎಂಬ ವಿಷಯದ ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಇವರು ಬಹುಮಾನ ವಿತರಿಸಿದರು. ಎಲಾ ಶಿಕ್ಷಕರ ಸಹಕಾರದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರೌಢ ಶಾಲಾ ನಾಯಕಿ : ಅಂಕಿತ ಪ್ರೌಢಶಾಲಾ ಉಪನಾಯಕ: ಪ್ರಜ್ವಲ್ ಪ್ರಾಥಮಿಕ ಶಾಲಾ ನಾಯಕ: ಚೇತಕ್ ಟಿ.ಕೆ. ಪ್ರಾಥಮಿಕ ಶಾಲಾ ಉಪನಾಯಕಿ : ಶೈಲಶ್ರೀ ಪ್ರತಿಪಕ್ಷದ ನಾಯಕಿ: ಅಶ್ವಿನಿ ಯು. ನಾಯಕ್ ಸ್ಪೀಕರ್: ಆಶಿಕಾ ರೈ ಬಿ.ಜಿ. ಸಾಂಸ್ಕೃತಿಕ ಮಂತ್ರಿ: ನಳಿನಿ ವಿದ್ಯಾಮಂತ್ರಿ : ಸಿಂಧೂರ ಲಕ್ಷ್ಮೀ ನೀರಾವರಿ ಮಂತ್ರಿ : ಮನೀಶ್ ಗೃಹ ಮಂತ್ರಿ: ವರುಣ್ ಬಿ.ವೈ. ಕ್ರೀಡಾಮಂತ್ರಿ : ಅನುಷಾ ಆರೋಗ್ಯಮಂತ್ರಿ : ರಾಹುಲ್ ಕಾರ್ಯದರ್ಶಿ : ವಿಶಾಲ್ ನೈರ್ಮಲ್ಯ ಮಂತ್ರಿ : ಶ್ವೇತ ಎಸ್. […]
ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಯೋಗ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯಾದ ಹರಿಣಾಕ್ಷಿ ಹಾಗೂ ಶಾಲಾ ಯೋಗ ಪಟು ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ, ಸರಳ ವ್ಯಾಯಾಮ, ಪ್ರಾಣಾಯಾಮಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. 5 ರಿಂದ 10 ನೇ ತರಗತಿಯ ಮಕ್ಕಳಿಗೆ ‘ಯೋಗ ಹಾಗೂ ಆರೋಗ್ಯ’ ಮತ್ತು’ಸರಳ ಕಲಿಕೆ -ಯೋಗ’ ಎಂಬ ವಿಷಯಗಳ ಬಗ್ಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳು ನಡೆದವು.
ಚುನಾವಣಾ ಪ್ರಕ್ರಿಯೆ ಮತ್ತು ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ದಿನಾಂಕ 12-06-2015 ರಂದು ನಡೆಯಿತು. ಶಾಲಾ ಸುಸ್ರುತ ಆಡಳಿತಕ್ಕೆ ಸಂಬಂಧಿಸಿ ಮಂತ್ರಿಮಂಡಲವು ರಚನೆಯಾಗಿದ್ದು ವಿಭಿನ್ನ ಕಾರ್ಯಯೋಜನೆಗಳ ಹಂಚಿಕೆ ಆಡಳಿತ ಹಾಗೂ ಪ್ರತಿಪಕ್ಷಗಳ ಸಂರಚನೆಯಾಗಿದ್ದು ಶಾಲಾ ಆಡಳಿತ ಮಂತ್ರಿಗಳಿಗೆ ಹಿರಿಯ ಸಹಶಿಕ್ಷಕಿ ಕು.ಲೀಲಾವತಿ ಇವರು ಪ್ರಮಾಣ ವಚನ ಬೋಧಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್ ಇವರು ತತ್ಸಂಬಂಧಿ ಕಾರ್ಯಯೋಜನೆಗಳ ಸ್ವರೂಪವನ್ನು ತಿಳಿಸಿದರು. ಹಿರಿಯ ಸಹಶಿಕ್ಷಕಿ ರೇವತಿ ಇವರು ಉಪಸ್ಥಿತರಿದ್ದರು.
ಭಾರತೀಯ ಶಿಕ್ಷಣ ಪದ್ದತಿಯು ಮಗುವಿನಲ್ಲಿ ದೇವರನ್ನು ಕಾಣುವಂತಿದ್ದು ಇಂದಿನ ದಿನ ಶಾಲಾ ಶಿಕ್ಷಕರು ಮಕ್ಕಳಿಗೆ ತಿಲಕವಿಟ್ಟು, ಆರತಿ ಬೆಳಗಿ ಸ್ವಾಗತಿಸುವ ಮೂಲಕ ಮಗುವನ್ನು ಬರಮಾಡಿಕೊಳ್ಳುವ ಪದ್ದತಿಯು ನಮ್ಮ ಶಾಲೆಯಲ್ಲಿ ವಿಶೇಷವಾಗಿರುತ್ತದೆ. ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯಪೂರಕ ಶಿಕ್ಷಣದ ಅಗತ್ಯತೆಯನ್ನು ಅರಿತು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು; ಎಂದು ವಿವೇಕಾನಂದ ಕನ್ನಡ ಮಾಧ್ಯಮಶಾಲಾ ಸಂಚಾಲಕರಾದ ರವೀಂದ್ರ ಪಿ. ಇವರು ಶಾಲಾ ಪ್ರವೇಶೋತ್ಸವದಂದು ನುಡಿದರು. ದೀಪಪ್ರಜ್ವಲನೆ, ಸರಸ್ವತಿ ವಂದನೆ, ಹಾಗೂ ಘೃತಾಹುತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ವಸಂತ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ 2015-16 ನೇ ಸಾಲಿನ ಶಾಲಾ ಚುನಾವಣೆಯು ಮುಖ್ಯ ಗುರುಗಳ ಸಮ್ಮುಖದಲ್ಲಿ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕಿಯಾಗಿ ಕು. ಅಂಕಿತಾ ಮತ್ತು ಉಪನಾಯಕನಾಗಿ ಪ್ರಜ್ವಲ್ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಚೇತಕ್ ಟಿ.ಕೆ. ಮತ್ತು ಉಪನಾಯಕಿಯಾಗಿ ಕು. ಶೈಲಶ್ರೀ ಆಯ್ಕೆಯಾದರು. ಚುನಾವಣೆಯ ಉಸ್ತುವಾರಿಯನ್ನು ಶಿಕ್ಷಕರಾದ ಶ್ರೀಯುತ ವಿಶ್ವನಾಥ ಮುಡೂರು ವಹಿಸಿದರು ಎಲ್ಲಾ ಶಿಕ್ಷಕರು ಸಹಕರಿಸಿದರು.
ಎಸ್‌ಎಸ್‌ಎಲ್‌ಸಿ 100% ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಿರಿಯ ವಿದ್ಯಾರ್ಥಿನಿ ಡಾ. ರಮ್ಯಾ ಇವರು ಸನ್ಮಾನ ಸ್ವೀಕರಿಸಿ ಶುಭ ಹಾರೈಸಿದರು.
ಗಣಹೋಮದೊಂದಿಗೆ ಆರಂಭಗೊಂಡ ಶಾಲೆಯ ಹಬ್ಬದ ವಾತಾವರಣವು ಮಕ್ಕಳಲ್ಲಿ ಹರುಷ ತಂದಿದೆ. ಶಾಲಾ ಮಾತಾಜಿಯವರು ಹಾಗೂ ಹಿರಿಯ ವಿದ್ಯಾರ್ಥಿಗಳು ಮಕ್ಕಳನ್ನು ತಿಲಕವಿಟ್ಟು ಪುಷ್ಪಾರ್ಚನೆಯೊಂದಿಗೆ ಬರಮಾಡಿಕೊಂಡ ರೀತಿ ಖುಷಿ ತಂದಿದೆ. ಹೀಗೆಂದು ಮನದ ಮಾತನ್ನು ಬಿಚ್ಚಿಟ್ಟವರು ಪೋಷಕರು. ವಿವೇಕಾನಂದ ಕನ್ನಡ ಶಾಲೆಯ ಆರಂಭೋತ್ಸವದಂದು ಎಲ್ಲಾ ಮಕ್ಕಳನ್ನು ಸ್ವಾಗತಿಸಿ ಸಿಹಿನೀಡಿ ಬರಮಾಡಿಕೊಳ್ಳಲಾಯಿತು. ಹಬ್ಬದ ವಾತಾವರಣವು ವಿದ್ಯೆಯ ವಿಕಾಸಕ್ಕೆ ಪೂರಕವಾಗಲಿ ಎಂದು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಬಿರ್ಮಣ್ಣಗೌಡ ಹಾರೈಸಿದರು. ಶಾಲಾ ಆಡಳಿತಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ – ರಕ್ಷಕ ಸಂಘದ […]
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಚಿತ್ತಶಾಂತಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಶಿಕ್ಷಣದ ಅವಶ್ಯಕತೆ ವಿದ್ಯಾಸಂಸ್ಥೆಗಳಲ್ಲಿ ಇಂದು ನಡೆಯಬೇಕಾದ ಪ್ರಮುಖ ಪ್ರಕ್ರಿಯೆಯಾಗಿದೆ ಎಂದು ಅಂತರರಾಷ್ಟ್ರೀಯ ಯೋಗ ತರಬೇತುದಾರ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ತಿಳಿಸಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನದ ಪೂರ್ವಭಾವಿಯಾಗಿ ನಡೆದ ‘ಉತ್ತಮಜೀವನ ಶೈಲಿಗಾಗಿ ಯೋಗ’ ಎಂಬ ಕಾರ್ಯಾಗಾರವನ್ನು ನಡೆಸುತ್ತಾಆಧುನಿಕ ಜೀವನ ಪದ್ಧತಿಯಲ್ಲಿ ಯೋಗ ಶಿಕ್ಷಣವು ಸರಳ ವ್ಯಾಯಾಮ, ಪ್ರಾಣಾಯಾಮ, ಯೋಗಾಸನ, ಮುದ್ರಾವಿಜ್ಞಾನ, ಕಲರ್‌ಥೆರಪಿ (ಬಣ್ಣಚಿಕಿತ್ಸೆ) ಆಹಾರ ಪದ್ದತಿಯ ಬಗ್ಗೆ ಮಾಹಿತಿ ಹಾಗೂ ತರಬೇತಿಯನ್ನು […]
ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ವಿಭಾಗಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಗೈದು ಶೇ. 100% ಫಲಿತಾಂಶ ತಂದ ವಿದ್ಯಾರ್ಥಿಗಳು. ಹಾಜರಾದವರು ಒಟ್ಟು ವಿದ್ಯಾರ್ಥಿಗಳು-128
ದಿನಾಂಕ 5-5-2015 ರಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾದ ಶ್ರೀಯುತ ನಾ.ಕಾರಂತ ಪೆರಾಜೆ ಇವರು ನಮ್ಮ ಮಕ್ಕಳಿಗೆ ‘ಅನ್ನದ ಬಟ್ಟಲಿನಲ್ಲಿ ವಿಷ’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ದಿನಾಂಕ 14-04-2015 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರು, ಸಂಚಾಲಕರು, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ಹತ್ತನೇ ತರಗತಿಯ ಮಕ್ಕಳು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪಪ್ರದಾನ ಮಾಡಿ 59,287 ರೂ. ಶಾಲೆಗೆ ದೇಣಿಗೆ ರೂಪದಲ್ಲಿ ನೀಡಿರುತ್ತಾರೆ.
ಸುಕನ್ಯ ಸಮೃದ್ಧಿ ಯೋಜನೆಯ ಕುರಿತು ಅಂಚೆ ಕಛೇರಿ ಸಿಬ್ಬಂದಿಯವರು ಶಾಲೆಗೆ ಭೇಟಿನೀಡಿ 1 ರಿಂದ 4 ನೇ ತರಗತಿಯವರೆಗಿನ ಹೆಣ್ಣು ಮಕ್ಕಳ ಪೋಷಕರಿಗೆ ಮಾಹಿತಿ ನೀಡಿದರು.
ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ಮಕ್ಕಳಿಗೆ ವರ್ಲಿ ಆರ್ಟ್ ತರಬೇತಿ ನೀಡಿದರು.
ಮಿಷನ್ 95+ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಹತ್ತನೇತರಗತಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ದ.ಕ. ಜಿಲ್ಲಾ ಪಂಚಾಯತು, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು. ತಾಲೂಕುದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ಮತ್ತು ನಮ್ಮ ಶಾಲಾ ಸಂಯುಕ್ತ ಆಶ್ರಯದಲ್ಲಿ ಮಾನ್ಯಕ್ಷೇತ್ರ ಶಿಕ್ಷಣಾಧಿಕಾರಿಗಳ ಕನಸಾದಗೊಬ್ಬುದ ಪುತ್ತೂರ್ದ ಮುತ್ತುಲು ಯೋಜನೆಯಡಿಯಲ್ಲಿ ದಿನಾಂಕ 1-4-2015 ರಿಂದ 5-4-2015 ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಉಚಿತ ಕ್ರೀಡಾ ತರಬೇತಿ ಶಿಬಿರ ಉದ್ಫಾಟನೆಗೊಂಡಿತು.
ವಿವೇಕಾನಂದ ಕನ್ನಡ ಶಾಲೆಯಲ್ಲಿ ದಿನಾಂಕ 17-03-2015 ರಂದು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಸಂವಹನದ ಸುಲಭ ಸೂತ್ರಗಳ ಬಗ್ಗೆ ಇಂಗ್ಲಿಷ್ ಉಪನ್ಯಾಸಕರಾದ ಶ್ರೀ ಬಿ.ವಿ ಸೂರ್ಯನಾರಾಯಣ ಇವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಭಾಷಾಜ್ಞಾನವನ್ನು ಬಳಸುತ್ತಾ ಬೆಳೆಸುವ ಪ್ರಕ್ರಿಯೆಯನ್ನು ಮಕ್ಕಳಿಗೆ ಮನದಟ್ಟು ಮಾಡಿ ಯಾವುದೇ ಭಾಷೆಯನ್ನು ಮಿತ್ರನಂತೆ ಕಾಣುವ ಕಿವಿಮಾತನ್ನು ಹೇಳಿದರು.
ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಮೇಳ ಮಾ. 14 ರಂದು ನಡೆಯಿತು. ಗ್ರಾಮೀಣ ಸೊಗಡಿನ ಆಟಗಳಾದ ಜಾರುಬಂಡಿ, ಸೇತುವೆ ದಾಟುವುದು, ದೋಣಿ ಆಟ, ಚಕ್ರದಾಟ, ಜೋಕಾಲಿ, ಗಾಳಿಪಟ ಹಾರಿಸುವುದು, ಚಿತ್ರ ಬಿಡಿಸುವುದು, ಕಥೆ ಹೇಳುವುದು, ಅಭಿನಯ ಗೀತೆ, ಮುಖವಾಡ, ಚಿತ್ರಕ್ಕೆ ಬಣ್ಣ ಹಾಕುವುದು, ಹಾಳೆಯಾಟ ಮುಂತಾದ 15 ಕ್ಕೂ ಮಿಕ್ಕಿ ಆಟಗಳಲ್ಲಿ ಸುಮಾರು 1700 ಮಕ್ಕಳು 4 ಗಂಟೆಗಳ ಕಾಲ ಬಿಸಿಲ ಧಗೆಯನ್ನು ಲೆಕ್ಕಿಸದೆ ಭಾಗವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಂ.ಕೃಷ್ಣ ಭಟ್, […]
ಮಾರ್ಚ್ 13 ರಂದು ಶಾಲೆಯಲ್ಲಿ ಶಾರದಾ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.
ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಕು. ಆಶಿಕಾ ರೈ ಬಿ.ಜಿ ಇವರ ಪೋಷಕರಾದ ಶ್ರೀ ವಿನೋದ್ ರೈ ಇವರು ಶಾಲಾ ಗ್ರಂಥಾಲಯಕ್ಕೆ ಸುಮಾರು 3800 ರೂ. ಗಳ ಕಪಾಟುಗಳನ್ನು ನೀಡಿರುತ್ತಾರೆ.
ಶಾಲಾ ಹಿರಿಯ ವಿದ್ಯಾರ್ಥಿಗಳಾದ ಕು. ಸ್ವಾತಿ ಮತ್ತು ಶ್ರೀಮತಿ ಶ್ವೇತಾ ಇವರು ಸುಮಾರು 1060 ರೂ. ಗಳ ಪುಸ್ತಕವನ್ನು ಶಾಲಾ ಗ್ರಂಥಾಲಯಕ್ಕೆ ನೀಡಿರುತ್ತಾರೆ.
ಸಾಹಿತ್ಯ ಕಲಾಕುಶಲೋಪರಿ – ಇದರ ಅಂಗವಾಗಿ ಪುತ್ತೂರಿನ ಅನುರಾಗ ವಠಾರದಲ್ಲಿ ನಮ್ಮ ಶಾಲಾ ಮಕ್ಕಳಿಂದ ನೃತ್ಯವೈವಿಧ್ಯ ಕಾರ್ಯಕ್ರಮ ನಡೆದಿರುತ್ತದೆ.
ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿನ ಮಾನವಿಕ ಸಂಘದಿಂದ ಏರ್ಪಡಿಸಿದ ಪುತ್ತೂರು ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಅಕ್ಷಯ್, ವಿಶಾಲ್, ಸ್ಕಂದನಾರಾಯಣ ಇವರ ತಂಡ ತೃತೀಯ ಬಹುಮಾನವನ್ನು ಪಡೆದಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಜಯಶ್ರೀ ಬಿ. ಇವರು ಲೋವರ್ ಗ್ರೇಡ್ ವಿಭಾಗದಲ್ಲಿ ಪುತ್ತೂರು ತಾಲೂಕು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಬಿ. ತರಬೇತಿ ನೀಡಿರುತ್ತಾರೆ. ಇವರು ನರಿಮೊಗರು – ಬಜಪ್ಪಾಳ ಬಾಬು ಗೌಡ ಮತ್ತು ಶ್ರೀಮತಿ ಲಲಿತಾ ದಂಪತಿಯ ಪುತ್ರಿ.
ರೋಗ ವಾಹಕ ಆಶ್ರಿತಾ ರೋಗಗಳ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮಲೇರಿಯಾ ನಿಯಂತ್ರಣದಲ್ಲಿ ಮಕ್ಕಳ ಪಾತ್ರ ವಿಷಯದ ಬಗ್ಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳು ಫೆ. 13 ರಂದು ನೆಲ್ಲಿಕಟ್ಟೆ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ 9 ನೇ ತರಗತಿಯ ಕು. ಅಶ್ವಿನಿ ಯು. ನಾಯಕ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ವಿವೇಕಾನಂದ ಕನ್ನಡ ಶಾಲೆ, ತೆಂಕಿಲ, ಪುತ್ತೂರು ಇದರ ಆಶ್ರಯದಲ್ಲಿ ‘ಸುಜ್ಞಾನ ಪುಸ್ತಕ ಜಾಥಾ-2015’ ಜಾಥಾ ಪುತ್ತೂರು ನಗರದಲ್ಲಿ ಫೆಬ್ರವರಿ 19 ರಂದು ನಡೆಯಿತು. ಸುಜ್ಞಾನ ಜಾಥಾವನ್ನು ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಶಾರದ ಮಾತೆಗೆ ಪುಸ್ತಕ ಅರ್ಪಿಸುವ ಮೂಲಕ ಉದ್ಫಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರವೀಂದ್ರ.ಪಿ, ಸದಸ್ಯರಾದ ಶೋಭಾ ಕೊಳತ್ತಾಯ, ಸುನೀತಾ ಚಂದು ಶೆಟ್ಟಿ, ಅಚ್ಚುತ ಭಟ್ ಸುಳ್ಯಪದವು, ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಅಂಬಿಕಾ, ಸದಸ್ಯರಾದ ಸುರೇಖಾ, ಪೋಷಕರಾದ ಮಹಾದೇವಶಾಸ್ತ್ರಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಪಾಲಕರಾದ […]
ಪುಸ್ತಕ ಜಾಥಾ ಕಾರ್ಯಕ್ರಮದಂಗವಾಗಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಯಿತು.
ಪುಸ್ತಕ ಸಪ್ತಾಹದ ಉದ್ಫಾಟನಾ ಸಂದರ್ಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕರೂ ಶಿಕ್ಷಕ – ಶಿಕ್ಷಣ ಸಂಪನ್ಮೂಲ ಘಟಕದ ಸದಸ್ಯರೂ ಆದ ಶ್ರೀಮತಿ ಪೂರ್ಣಿಮಾ ತಮ್ಮ ಸಂಸ್ಥೆಯಿಂದ ಸಂಗ್ರಹಿಸಿದ ರೂ. 4168 ಮತ್ತು ಪುಸ್ತಕಗಳನ್ನು ಶಾಲೆಗೆ ನೀಡಿರುತ್ತಾರೆ. ಮತ್ತು ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಇವರು ಈ ಸಂದರ್ಭದಲ್ಲಿ ಶಾಲೆಗೆ ಕವಾಟು ದೇಣಿಗೆ ನೀಡಿ ಸಹಕರಿಸಿರುತ್ತಾರೆ.
ಮಕ್ಕಳಲ್ಲಿ ಬೆಳಗಲು ಜ್ಞಾನದೀವಿಗೆ, ಹಿರಿಯರೇ ನೀಡಿರಿ ನಿಮ್ಮಯ ಕೊಡುಗೆ ಎಂಬ ಧ್ಯೇಯ ವಾಕ್ಯದೊಂದಿಗೆ 16-02-2015 ರಿಂದ 22-02-2015 ರವರೆಗೆ ನಡೆಯಲಿರುವ ಪುಸ್ತಕ ಸಪ್ತಾಹ ಕಾರ್ಯಕ್ರಮಕ್ಕೆ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ದೀಪಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಚಾಲನೆ ನೀಡಿದರು. ಶಾಲಾ ಅಧ್ಯಕ್ಷರಾದ ಡಾ| ಕೃಷ್ಣ ಭಟ್, ಸಂಚಾಲಕರಾದ ರವೀಂದ್ರ ಪಿ., ಶಿಕ್ಷ – ಶಿಕ್ಷಣ ಸಂಪನ್ಮೂಲ ಘಟಕದ ಸದಸ್ಯರಾದ ಶ್ರೀಮತಿ ವಂದನಾ, ಶ್ರೀಮತಿ ಉಷಾಕಿರಣ, ಉಪನ್ಯಾಸಕರಾದ ಶ್ರೀ ರೋಹಿಣಾಕ್ಷ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನೀಶ್ ಬಡೆಕ್ಕಿಲ, ಪೋಷಕ ಸಮಿತಿಯ ಅಧ್ಯಕ್ಷರಾದ […]
ಶಾಲಾ ಪೋಷಕರಾದ ಶ್ರೀ ಉಪೇಂದ್ರ ಬಲ್ಯಾಯ ಪುತ್ತೂರು ಇವರು ರೂ. 500 ರ ಪುಸ್ತಕವನ್ನು ‘ಪುಸ್ತಕ ಜಾಥ’ಕ್ಕಾಗಿ ಶಿಕ್ಷಕರಾದ ಶ್ರೀ ವಿಶ್ವನಾಥ ಮುಡೂರು ಹಾಗೂ ಚಂದ್ರಶೇಖರ್ ರವರಿಗೆ ಹಸ್ತಾಂತರಿಸಿದರು.
ಶ್ರೀ ದುರ್ಗಾ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪದಡ್ಕ ಇದರ ಅಧ್ಯಕ್ಷರಾದ ಶ್ರೀ ಜನಾರ್ಧನ ಪೂಜಾರಿ ಪದಡ್ಕ ಮತ್ತು ಸದಸ್ಯರು ‘ ಪುಸ್ತಕ ಜಾಥಾ’ ಕ್ಕೆ ರೂ 2,000 ದ ಪುಸ್ತಕವನ್ನು ಶಿಕ್ಷಕರಾದ ಚಂದ್ರಶೇಖರ್ ರವರಿಗೆ ಹಸ್ತಾಂತರಿಸಿದರು.
ಪುಸ್ತಕ ಸಪ್ತಾಹದ ಅಂಗವಾಗಿ ಶಾಲಾ ಹಿರಿಯ ಪೋಷಕರಾದ ಶ್ರೀ ಗಣಪತಿ ಭಟ್ ಇವರು ಶಾಲಾ ಗ್ರಂಥಾಲಯಕ್ಕೆ ‘ಮಕ್ಕಳ ರಾಮಾಯಣ ಮತ್ತು ಮಕ್ಕಳಿಗಾಗಿ ಮಹಾಭಾರತ ಭಾಗ – 2’ ಎಂಬ ಸುಮಾರು 2,000 ರೂ. ಗಳ ಪುಸ್ತಕವನ್ನು ನೀಡಿ ಸಹಕರಿಸಿದ್ದಾರೆ.
ಪುಸ್ತಕ ಸಪ್ತಾಹದ ಅಂಗವಾಗಿ ದಿ.ಶೀನ ಹಂದ್ರಟ್ಟ ಇವರ ಸ್ಮರಣಾರ್ಥ ಇವರ ಮಕ್ಕಳಾದ ಧನಂಜಯ ಹಂದ್ರಟ್ಟ ಮತ್ತು ಕು.ಲೀಲಾವತಿ ಹಂದ್ರಟ್ಟ (ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ಶಿಕ್ಷಕಿ) ಇವರು ಸುಮಾರು 10,000 ರೂ. ಗಳ ಕಪಾಟು ನೀಡಿ ಸಹಕರಿಸಲಿರುವರು.