Tuesday, January 17th, 2023
” ಭಾರತದ ಹಿರಿಮೆ- ಗರಿಮೆಯನ್ನು ಜಗತ್ತಿನಾತ್ಯಂತ ಸಾರಿದ ಸ್ವಾಮಿ ವಿವೇಕಾನಂದರ ಜನುಮ ದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲು ರಾಷ್ಟ್ರದಾತ್ಯಂತ ಕರೆಕೊಟ್ಟಿರುವ ಹಿನ್ನೆಲೆಯನ್ನು ವಿದ್ಯಾರ್ಥಿ ದಿಶೆಯಿಂದ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ” – ಶ್ರೀ ಹರಿಪ್ರಸಾದ್, ತೃತೀಯ ಬಿಎ ವಿದ್ಯಾರ್ಥಿ, ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು. ದಿನಾಂಕ 12.01.2023ರಂದು ನಮ್ಮ ಶಾಲೆಯಲ್ಲಿ ಜರುಗಿದ ವಿವೇಕಾನಂದ ಜಯಂತಿಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಹರಿಪ್ರಸಾದ್ ಇವರು ಸ್ವಾಮೀಜಿಯವರ ದೃಢಸಂಕಲ್ಪದ ದೃಷ್ಟಾಂತಗಳು ನಮ್ಮಲ್ಲಿ ಭಾರತೀಯತೆಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಗುವ ಬಗೆಯನ್ನು ತಿಳಿಸಿದರು. […]