ಕಬಡ್ಡಿ – ರಾಷ್ಟ್ರ ಮಟ್ಟಕ್ಕೆ ಆಯ್ಕೆ

                                                   

 

 

ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ). ಉಡುಪಿ 3ನೇ ರಾಜ್ಯ ಸಬ್ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ಪ್ರಣ್ವಿಕಾ ರೈ (ಕರ್ನೂರು ಮುನ್ನಗದ್ದೆ ನಿವಾಸಿ ಬಾಲಕೃಷ್ಣ ರೈ ಮತ್ತು ಗಾಯತ್ರಿ ರೈ ದಂಪತಿಗಳ ಪುತ್ರಿ) ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಪಂದ್ಯಾಟದ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದು ತಂಡದ ಮುನ್ನಡೆಗೆ ಮುಂಚೂಣಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾಳೆ. ಶಾಲಾ ಆಡಳಿತ ಮಂಡಳಿ, ಮುಖ್ಯಗುರುಗಳು, ಶಿಕ್ಷಕ ವೃಂದದವರು ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.

Highslide for Wordpress Plugin