ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿಗಳು

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿಗಳು

Wednesday, January 25th, 2023

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಛೇರಿ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರೀಶ ನಿಡ್ವಣ್ಣಾಯ (ಹೆಬ್ಬಾರಬೈಲು ನಿವಾಸಿ ಶ್ರೀ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮ ನೂಜಾಜೆ ದಂಪತಿಗಳ ಪುತ್ರ) ಪ್ರೌಢ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೃತೀಯ […]

ಶಾಂತಿವನ ಟ್ರಸ್ಟ್ ಸ್ಪರ್ಧೆಯಲ್ಲಿ ಧಾತ್ರಿ ಆರ್ ರೈಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ

ಶಾಂತಿವನ ಟ್ರಸ್ಟ್ ಸ್ಪರ್ಧೆಯಲ್ಲಿ ಧಾತ್ರಿ ಆರ್ ರೈಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ

Wednesday, January 25th, 2023

ಶಾಂತಿವನ ಟ್ರಸ್ಟ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಧರ್ಮಸ್ಥಳದಲ್ಲಿ ನಡೆದ ಜಿಲ್ಲಾ ಮಟ್ಟದ ಜ್ಞಾನ ಪ್ರಕಾಶ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಧಾತ್ರಿ ಆರ್ ರೈ (ನೆಹರುನಗರ ನಿವಾಸಿ ರವೀಂದ್ರ ರೈ ಮತ್ತು ಉಷಾ ದಂಪತಿಗಳ ಪುತ್ರಿ) ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

‘ಪರೀಕ್ಷಾ ಸಿದ್ಧತೆ’ ಯ ಬಗ್ಗೆ ಮಾಹಿತಿ ಕಾರ್ಯಾಗಾರ

‘ಪರೀಕ್ಷಾ ಸಿದ್ಧತೆ’ ಯ ಬಗ್ಗೆ ಮಾಹಿತಿ ಕಾರ್ಯಾಗಾರ

Tuesday, January 24th, 2023

‘ಕಲಿಕೆಗೆ ಸುಗಮ ಹಾದಿಯೆಂಬುದಿಲ್ಲ. ಇಷ್ಟಪಟ್ಟು ಕಲಿತಾಗ ವಿಷಯ ಬೇಗ ಅರ್ಥವಾಗುತ್ತದೆ. ಹತ್ತನೇ ತರಗತಿಯ ಪರೀಕ್ಷೆ ಬರೆಯಲಿರುವ ಮಕ್ಕಳು ಸುಗಮ ಕಲಿಕಾ ವಿಧಾನಗಳನ್ನು ಅನುಸರಿಸಿ-ಅಭ್ಯಸಿಸಿ ಉತ್ತಮ ತಯಾರಿಯತ್ತ ತಮ್ಮ ಗಮನ ಹರಿಸಬೇಕು’ – ಬಿ.ವಿ ಸೂರ್ಯನಾರಾಯಣ, ನಿವೃತ್ತ ಪ್ರಾಂಶುಪಾಲರು. ನಮ್ಮ ಶಾಲಾ ಹತ್ತನೇ ತರಗತಿಯ ಮಕ್ಕಳಿಗೆ ‘ವೃತಿಕಾ’ ವಿಜ್ಞಾನ ವೇದಿಕೆ ವತಿಯಿಂದ ಆಯೋಜಿಸಲಾದ ‘ಪರೀಕ್ಷಾ ಸಿದ್ಧತೆ’ ವಿಷಯದ ಬಗ್ಗೆ ಶ್ರೀಯುತರು ಮಾತನಾಡಿ ಕಲಿಕೆಯು ಪರೀಕ್ಷೆಗಳಿಗೆ ಸೀಮಿತವಾಗದೆ ತಿಳುವಳಿಕೆಯ ದೃಷ್ಟಿಯಿಂದ ಮುನ್ನಡೆಯುವಂತಿರಬೇಕು ಎಂದು ಹೇಳಿದರು. ವಿಜ್ಞಾನ ಸಂಘದ ಸಂಯೋಜಕರಾದ ಶ್ರೀಮತಿ […]

ಪೋಷಕರ ಸಭೆ

ಪೋಷಕರ ಸಭೆ

Tuesday, January 24th, 2023

           “ ಮೌಲ್ಯಾಂಕನ ಪದ್ಧತಿ ಮಕ್ಕಳ ಕಲಿಕಾ ಸಾಮಥ್ರ್ಯ ತಿಳಿಯುವ ದಾರಿಯಾಗಿದೆ. ಪ್ರಸಕ್ತ ವರ್ಷ 5 ಮತ್ತು 8ನೇ ತರಗತಿ ಮಕ್ಕಳಿಗೆ ರಾಜ್ಯಾದಾತ್ಯಂತ ಏಕರೂಪವಾಗಿ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ. ಈ ದಿಶೆಯಿಂದ ಮಗುವಿನ ಸಾಮಥ್ರ್ಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರದಷ್ಟೇ ಮಹತ್ವದ ಪಾತ್ರ ಪೋಷಕರದ್ದಾಗಿರುತ್ತದೆ.” – ಶ್ರೀಮತಿ ದೇವಕಿ, ಶಿಕ್ಷಕರು ಸ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಪೋಷಕರ ಸಭೆಗೆ ಅಭ್ಯಾಗತರಾಗಿ ಆಗಮಿಸಿ 5 ಮತ್ತು 8ನೇ […]

ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Friday, January 20th, 2023

ರೇಡಿಯೋ ಪಾಂಚಜನ್ಯದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಂಜನ್ ಮತ್ತು ಶ್ರೀವತ್ಸ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ತಾಲೂಕು ಮಟ್ಟದ ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

ತಾಲೂಕು ಮಟ್ಟದ ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ

Thursday, January 19th, 2023

ಪುತ್ತೂರು ತಾಲೂಕು ಸಂಸ್ಕಾರ ಭಾರತಿ ವತಿಯಿಂದ ನಡೆದ ತಾಲೂಕು ಮಟ್ಟದ ದೇಶ ಭಕ್ತಿಗೀತೆ ಸ್ಪರ್ಧೆಯ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಮ್ಮ ಶಾಲಾ ಮಕ್ಕಳಾದ ಪ್ರಣತಿ, ಗರಿಮ, ತನುಷಾ, ಮಾತಂಗಿ, ಹಸ್ತ, ವೃದ್ಧಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Thursday, January 19th, 2023

  51ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂಪಾಯಿ 15,000 ನಗದು ಹಾಗೂ ಫಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ನಮ್ಮ ಶಾಲಾ ಮಕ್ಕಳು.

ಕನಸುಗಳು- ವಿಶೇಷ ಪುರಸ್ಕಾರ ಪ್ರಶಸ್ತಿ

ಕನಸುಗಳು- ವಿಶೇಷ ಪುರಸ್ಕಾರ ಪ್ರಶಸ್ತಿ

Wednesday, January 18th, 2023

ವಿವೇಕಾನಂದ ಪದವಿ ಪೂರ್ವ ಕಾಲೇಜು ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆ ನೀಡುವ ನಿಟ್ಟಿನಲ್ಲಿ ಕನಸುಗಳು-2022 ಕಾರ್ಯಕ್ರಮವನ್ನು ದಿನಾಂಕ 11-11-2022 ಹಾಗೂ 12-11-2022ರಂದು ಆಯೋಜಿದ್ದರು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲಾ 59 ಮಕ್ಕಳು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಮಕ್ಕಳ ಪಾಲ್ಗೊಳ್ಳುವಿಕೆ ಹಾಗೂ ಪ್ರದರ್ಶನವನ್ನು ಪರಿಗಣಿಸಿ ನಮ್ಮ ಶಾಲೆಗೆ ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.

ರಾಷ್ಟ್ರಮಟ್ಟದ ವಿಜ್ಞಾನ ಮೇಳ

ರಾಷ್ಟ್ರಮಟ್ಟದ ವಿಜ್ಞಾನ ಮೇಳ

Wednesday, January 18th, 2023

   ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ವತಿಯಂದ ನಡೆದ ಗಣಿತ ವಿಜ್ಞಾನ ಮೇಳದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ನಿಡ್ವಣ್ಣಾಯ 8ನೇ ತರಗತಿ, ಧನುಷ್ ಡಿ ಜಿ 7ನೇ ತರಗತಿ, ಶಿವಾನಿ 7ನೇ ತರಗತಿ ಇವರು ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ, ಗಣಿತ ಮಾದರಿ, ಪ್ರೆಸೆಂಟೇಶನ್, ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗಳು ನಡೆದವು.

ಗಣಿತ ವಿಜ್ಞಾನ ಮೇಳದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಗಣಿತ ವಿಜ್ಞಾನ ಮೇಳದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Tuesday, January 17th, 2023

ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಗಣಿತ ವಿಜ್ಞಾನ ಮೇಳ ಹೈದರಾಬಾದ್ ತೆಲಂಗಾಣ ಇಲ್ಲಿ ನಡೆದ ಕ್ಷೇತ್ರಿಯ ಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ನಿಡ್ವಣ್ಣಾಯ 8 ನೇ ತರಗತಿ (ಹೆಬ್ಬಾರಬೈಲು ನಿವಾಸಿ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮ ನೂಜಾಜೆ ಇವರ ಪುತ್ರಿ), ಶಿವಾನಿ ಎಸ್ ರೈ 7ನೇ ತರಗತಿ (ಶಿಬರ ಪಂಜಳ ನಿವಾಸಿ ಸೋಮನಾಥ ರೈ ಮತ್ತು ವಸಂತಿ ಕುಮಾರಿ ಇವರ ಪುತ್ರಿ), ಧನುಷ್ ಡಿ ಜಿ 7ನೇ ತರಗತಿ (ಪಾಂಗಳಾಯಿ ನಿವಾಸಿ ಡಿ […]

Highslide for Wordpress Plugin