ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಗಣಿತ ವಿಜ್ಞಾನ ಮೇಳ ಹೈದರಾಬಾದ್ ತೆಲಂಗಾಣ ಇಲ್ಲಿ ನಡೆದ ಕ್ಷೇತ್ರಿಯ ಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ನಿಡ್ವಣ್ಣಾಯ 8 ನೇ ತರಗತಿ (ಹೆಬ್ಬಾರಬೈಲು ನಿವಾಸಿ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮ ನೂಜಾಜೆ ಇವರ ಪುತ್ರಿ), ಶಿವಾನಿ ಎಸ್ ರೈ 7ನೇ ತರಗತಿ (ಶಿಬರ ಪಂಜಳ ನಿವಾಸಿ ಸೋಮನಾಥ ರೈ ಮತ್ತು ವಸಂತಿ ಕುಮಾರಿ ಇವರ ಪುತ್ರಿ), ಧನುಷ್ ಡಿ ಜಿ 7ನೇ ತರಗತಿ (ಪಾಂಗಳಾಯಿ ನಿವಾಸಿ ಡಿ ಎಸ್ ಗಣೇಶ್ ಮತ್ತು ಉಷಾ ಎಸ್ ಇವರ ಪುತ್ರಿ) ಇವರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.