‘ಕಲಿಕೆಗೆ ಸುಗಮ ಹಾದಿಯೆಂಬುದಿಲ್ಲ. ಇಷ್ಟಪಟ್ಟು ಕಲಿತಾಗ ವಿಷಯ ಬೇಗ ಅರ್ಥವಾಗುತ್ತದೆ. ಹತ್ತನೇ ತರಗತಿಯ ಪರೀಕ್ಷೆ ಬರೆಯಲಿರುವ ಮಕ್ಕಳು ಸುಗಮ ಕಲಿಕಾ ವಿಧಾನಗಳನ್ನು ಅನುಸರಿಸಿ-ಅಭ್ಯಸಿಸಿ ಉತ್ತಮ ತಯಾರಿಯತ್ತ ತಮ್ಮ ಗಮನ ಹರಿಸಬೇಕು’ – ಬಿ.ವಿ ಸೂರ್ಯನಾರಾಯಣ, ನಿವೃತ್ತ ಪ್ರಾಂಶುಪಾಲರು.
ನಮ್ಮ ಶಾಲಾ ಹತ್ತನೇ ತರಗತಿಯ ಮಕ್ಕಳಿಗೆ ‘ವೃತಿಕಾ’ ವಿಜ್ಞಾನ ವೇದಿಕೆ ವತಿಯಿಂದ ಆಯೋಜಿಸಲಾದ ‘ಪರೀಕ್ಷಾ ಸಿದ್ಧತೆ’ ವಿಷಯದ ಬಗ್ಗೆ ಶ್ರೀಯುತರು ಮಾತನಾಡಿ ಕಲಿಕೆಯು ಪರೀಕ್ಷೆಗಳಿಗೆ ಸೀಮಿತವಾಗದೆ ತಿಳುವಳಿಕೆಯ ದೃಷ್ಟಿಯಿಂದ ಮುನ್ನಡೆಯುವಂತಿರಬೇಕು ಎಂದು ಹೇಳಿದರು. ವಿಜ್ಞಾನ ಸಂಘದ ಸಂಯೋಜಕರಾದ ಶ್ರೀಮತಿ ರೇಷ್ಮಾ ಹಾಗೂ ಶ್ರೀಮತಿ ಪುಷ್ಪಾವತಿ ಕಾರ್ಯಕ್ರಮವನ್ನು ಆಯೋಜಿಸಿದರು.