ಪ್ರಬಂಧ ಸ್ಪರ್ಧೆ- ದ್ವಿತೀಯ

ಪ್ರಬಂಧ ಸ್ಪರ್ಧೆ- ದ್ವಿತೀಯ

Wednesday, October 1st, 2014

ಪುತ್ತೂರು ನಗರ ರಾಜಭಾಷಾ ಕಾರ್ಯಾನ್ವಯನ ಸಮಿತಿ ಮತ್ತು ಗೇರು ಸಂಶೋಧನಾಲಯ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆಸಿದ ಹಿಂದಿ ಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ಚರಣ್‌ರಾಜ್ ಇವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

ಸಂಭ್ರಮ - 2014

ಸಂಭ್ರಮ – 2014

Monday, September 29th, 2014
ರಾಜ್ಯ ಅಮೆಚೂರ್ ಕ್ರೀಡಾಕೂಟ : ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ರಾಜ್ಯ ಅಮೆಚೂರ್ ಕ್ರೀಡಾಕೂಟ : ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Thursday, September 25th, 2014

ರಾಜ್ಯ ಅಮೆಚೂರ್ ಕ್ರೀಡಾಕೂಟ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಗಂಣದಲ್ಲಿ ಸೆಪ್ಟೆಂಬರ್೧೮ ರಿಂದ ೨೦ರ ವರೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸಿನೀಯರ್ ಅತ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ರಂಜಿತ್.ಪಿ.ವಿ- ಜಾವೆಲಿನ ಎಸೆತದಲ್ಲಿ ತೃತೀಯ, ಗುರುಪ್ರಸಾದ್ ಎಸ್.ಎನ್-ಉದ್ದ ಜಿಗಿತ ಚತುರ್ಥ, ಯತೀಶ- ೩೦೦೦ಮೀ ಚತುರ್ಥ, ಸೌಮ್ಯಶ್ರೀ ೧೦೦ಮೀ ಹರ್ಡಲ್ಸ್ ತೃತೀಯ ಸ್ಥಾನ ಪಡೆದಿರುತ್ತಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಸಮಗ್ರ ತಂಡ ಪ್ರಶಸ್ತಿ

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಸಮಗ್ರ ತಂಡ ಪ್ರಶಸ್ತಿ

Wednesday, September 17th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ವಿದ್ಯಾಪೀಠ ಕಲ್ಬುರ್ಗಿ ಗುಲ್ಬಾರ್ಗ ವಿಶ್ವ ವಿದ್ಯಾನಿಲಯ ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಪ್ರೌಢ ಶಾಲಾ ವಿಭಾಗದ ಬಾಲಕಿಯರ ಮತ್ತು ಬಾಲಕರ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದ್ದು ದಿನಾಂಕ 10-10-2014  ರಂದು ತಮಿಳುನಾಡಿನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟಕ್ಕೆ 20 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

ನವದಂಪತಿ ಸಮಾವೇಶ

ನವದಂಪತಿ ಸಮಾವೇಶ

Tuesday, September 16th, 2014

ಕುಟುಂಬವು ಭಾರತೀಯ ಸಂಸ್ಕೃತಿಯ ಜೀವಾಳ. ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ,. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಮಾಡುವ ಬದಲು ಧರ್ಮದಾಚರಣೆ ಅರಿವನ್ನು ಕಂಡುಕೊಳ್ಳುವುದು ಮುಖ್ಯ. ಆಗಲೇ ಸಾರ್ಥಕ್ಯ ಬದುಕು ಸಾಧ್ಯ ಎಂದು ಕುಟುಂಬ ಪ್ರಭೋಧಿನಿಯ ಅಖಿಲ ಭಾರತ ಪ್ರಮುಖರಾದ ಸು.ರಾಮಣ್ಣ ಇವರು ನುಡಿದರು. ವಿವೇಕಾನಂದ ವಿದ್ಯಾಸಂಸ್ಥೆ ತೆಂಕಿಲದಲ್ಲಿ ನಡೆದ ನವದಂಪತಿಗಳ ಸಮಾವೇಶದಲ್ಲಿ ಬೌದ್ಧಿಕ್ ನೀಡಿದ ಇವರು ಭಾಗವಹಿಸಿದ ಎಲ್ಲಾ ದಂಪತಿಗಳಿಗೆ ಜಗತ್ತಿಗೇ ಮಾದರಿಯಾದ ಭಾರತೀಯ ಕೌಟುಂಬಿಕ ಪರಂಪರೆಯ ಮಹತ್ವವನ್ನು ತಿಳಿಸಿದರು. ಅನಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ನಡೆದ ಪ್ರತ್ಯೇಕ […]

ದಸರಾ ಕ್ರೀಡಾಕೂಟ - ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ದಸರಾ ಕ್ರೀಡಾಕೂಟ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Monday, September 15th, 2014

ದಸರಾ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿ ಬಂದಿರುತ್ತದೆ. ಖೋ-ಖೋ ದಲ್ಲಿ ಪ್ರಥಮ, ವಾಲಿಬಾಲ್ ಪ್ರಥಮ. ಇವರಿಗೆ ಶ್ರೀ ದಾಮೋದರ್ ಬೆಟ್ಟಂಪಾಡಿ , ಶ್ರೀಮತಿ ಹರಿಣಾಕ್ಷಿ ಮತ್ತು ಕೃಷ್ಣ ಪ್ರಸಾದ್ ಬೆಟ್ಟಂಪಾಡಿ ತರಬೇತಿ ನೀಡಿರುತ್ತಾರೆ.

ಕರಾಟೆ - ಪ್ರಥಮ ಸ್ಥಾನ

ಕರಾಟೆ – ಪ್ರಥಮ ಸ್ಥಾನ

Saturday, September 13th, 2014

ದ.ಕ.ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ 17 ವರ್ಷದ ಒಳಗಿನ 41-46 ಕೆ.ಜಿ ವಿಭಾಗದ ಬಾಲಕರ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶ್ರಮಿತ್.ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಯೋಗಾಸನ ಜಿಲ್ಲಾಮಟ್ಟಕ್ಕೆ ಆಯ್ಕೆ

ಯೋಗಾಸನ ಜಿಲ್ಲಾಮಟ್ಟಕ್ಕೆ ಆಯ್ಕೆ

Thursday, September 11th, 2014

ದ.ಕ.ಜಿ.ಪ. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಕಾಣಿಯೂರು, ಪ್ರಗತಿ ವಿದ್ಯಾಸಂಸ್ಥೆ(ರಿ) ಕಾಣಿಯೂರು ಇದರ ಆಶ್ರಯದಲ್ಲಿ 2-9-2014 ರಂದು ಪ್ರಗತಿ ವಿದ್ಯಾಸಂಸ್ಥೆ (ರಿ). ಕಾಣಿಯೂರು ಇಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ರಾಕೇಶ್ ಪಂಚಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರತಿಭಾ ಕಾರಂಜಿಯ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು

ಪ್ರತಿಭಾ ಕಾರಂಜಿಯ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು

Saturday, September 6th, 2014

ದಿನಾಂಕ 01-03-2014 ರಂದು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗ – ಇಂಗ್ಲಿಷ್ ಕಂಠಪಾಠ – ಆದಿತ್ಯನಾರಾಯಣ – ತೃತೀಯ ಹಿಂದಿ ಕಂಠಪಾಠ – ಶ್ರೀಶ – ತೃತೀಯ ಛದ್ಮವೇಷ – ಅಮಲ್ ಜಿತ್ – ಪ್ರಥಮ ಚಿತ್ರಕಲೆ – ಮುಖೇಶ್ ಕೃಷ್ಣ – ಪ್ರಥಮ ಕಥೆ ಹೇಳುವುದು – ಅಭಿಲಾಷ – […]

ವಿದ್ಯಾಭಾರತಿ ಜಿಲ್ಲಾಮಟ್ಟದ ಕ್ರೀಡಾಕೂಟ-ವಿವೇಕಾನಂದ ಕನ್ನಡ ಮಾಧ್ಯಮಕ್ಕೆ 3 ಸಮಗ್ರ ತಂಡ ಪ್ರಶಸ್ತಿ

ವಿದ್ಯಾಭಾರತಿ ಜಿಲ್ಲಾಮಟ್ಟದ ಕ್ರೀಡಾಕೂಟ-ವಿವೇಕಾನಂದ ಕನ್ನಡ ಮಾಧ್ಯಮಕ್ಕೆ 3 ಸಮಗ್ರ ತಂಡ ಪ್ರಶಸ್ತಿ

Thursday, September 4th, 2014

ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ 2014-15 ರ ಜಿಲ್ಲಾ ಮಟ್ಟದ ಕ್ರೀಡಾಕೂಟವು ವಿವೇಕಾನಂದ ವಿದ್ಯಾಸಂಸ್ಥೆಗಳು ತೆಂಕಿಲ ಇದರ ಕ್ರೀಡಾಂಗಣದಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು 3 ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಶಸ್ತಿ ಪಡೆದ ತಂಡಗಳು ಕಿಶೋರ ವರ್ಗದ ಬಾಲಕರು, ಬಾಲಕಿಯರು, ಬಾಲವರ್ಗದ ಬಾಲಕಿಯರು. ಮತ್ತು ಕಿಶೋರ ವರ್ಗದ ಬಾಲಕರಲ್ಲಿ ಗುರುಪ್ರಸಾದ್ ಮತ್ತು ಯತೀಶ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಬಾಲವರ್ಗದ ಬಾಲಕಿಯರ ಶ್ರದ್ಧಾ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿದ್ದಾರೆ.

ತೆಂಕಿಲ ವಿವೇಕಾನಂದಲ್ಲಿ ಶ್ಯಾಮ ಪ್ರಸಾದ ಶಾಸ್ತ್ರಿಯವರಿಗೆ ಶ್ರದ್ಧಾಂಜಲಿ

ತೆಂಕಿಲ ವಿವೇಕಾನಂದಲ್ಲಿ ಶ್ಯಾಮ ಪ್ರಸಾದ ಶಾಸ್ತ್ರಿಯವರಿಗೆ ಶ್ರದ್ಧಾಂಜಲಿ

Wednesday, September 3rd, 2014

ಪುತ್ತೂರು: ಹುಟ್ಟುವಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಸತ್ತಾಗ ಹೆಸರು ಉಳಿಯುತ್ತದೆ ಉಸಿರು ಇರುವುದಿಲ್ಲ. ಸಮಾಜದಲ್ಲಿ ಶಾಶ್ವತ ಹೆಸರನ್ನು ಉಳಿಸಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ಯಾಮ ಪ್ರಸಾದ ಶಾಸ್ತ್ರಿ ಇವರು ಈ ರೀತಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನೆನಪಿಸುತ್ತಾ ವಿವೇಕಾನಂದ ಶಾಲಾ ಆಡಳಿತ ಮಂಡಳಿ ಸಂಚಾಲಕ ರವೀಂದ್ರ ಪಿ.ರವರು ಈ ಮೇಲಿನಂತೆ ನುಡಿದರು. ಸೆ. 1 ರಂದು ತೆಂಕಿಲ ವಿವೇಕಾನಂದ ಶಾಲಾ […]

ನೃತ್ಯ ವೈವಿಧ್ಯ

ನೃತ್ಯ ವೈವಿಧ್ಯ

Wednesday, September 3rd, 2014

ದಿನಾಂಕ 29-08-2014 ರಂದು ಗಣೇಶೋತ್ಸವದ ಪ್ರಯುಕ್ತ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ನೃತ್ಯ ವೈವಿಧ್ಯ.

ರೋಟರ್‍ಯಾಕ್ಟ್ ಪದಗ್ರಹಣ

ರೋಟರ್‍ಯಾಕ್ಟ್ ಪದಗ್ರಹಣ

Wednesday, September 3rd, 2014

ದಿನಾಂಕ 26-08-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರೋಟರ್‍ಯಾಕ್ಟ್ ಕ್ಲಬ್ ಪೂರ್ವದ ಪ್ರಾಯೋಜಿತ ‘ರೋಟರ್‍ಯಾಕ್ಟ್ ಕ್ಲಬ್ ಪದಗ್ರಹಣ’ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟೇರಿಯನ್ ಶ್ರೀಯುತ ಡಾ|| ಸೂರ್ಯನಾರಾಯಣ ಭಟ್ ಇವರು ಇಂಟರ್‍ಯಾಕ್ಟ್ ಕ್ಲಬ್‌ನ ಪರಿಚಯ ಮತ್ತು ಧೈಯೋದ್ದೇಶಗಳನ್ನು ತಿಳಿಸಿದರು. ರೋಟೇರಿಯನ್ ಶ್ರೀ ಜಯರಾಮ ಭಟ್ ಹಾಗೂ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಆಂಗ್ಲಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದರು. ಇಂಟರ್‍ಯಾಕ್ಟ್ ಕ್ಲಬ್‌ನ […]

ರಕ್ಷಾಬಂಧನ ಉತ್ಸವ

ರಕ್ಷಾಬಂಧನ ಉತ್ಸವ

Monday, August 25th, 2014

ದಿನಾಂಕ 11-08-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಂದನೇ ತರಗತಿಯ ಮಕ್ಕಳು ರಕ್ಷಾಬಂಧನದ ಪ್ರಯುಕ್ತ ಪುತ್ತೂರಿನ ಪ್ರಮುಖ ಕಚೇರಿಗಳಾದ ಪುತ್ತೂರು ಪುರಸಭೆ, ಪೋಲೀಸ್ ಸ್ಟೇಷನ್, ಅಂಚೆ ಕಚೇರಿ, ಕೆನರಾ ಬ್ಯಾಂಕ್‌ಗೆ ತೆರಳಿ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ರಕ್ಷೆ ಕಟ್ಟಿ ಆಶಿರ್ವಾದ ಪಡೆದುಕೊಂಡರು. ಹೋದ ಎಲಾ ಕಚೇರಿಗಳಲ್ಲೂ ಸಿಬ್ಬಂದಿ ವರ್ಗದವರು ಉತ್ತಮವಾಗಿ ಸ್ಪಂದಿಸಿ ವಿದ್ಯಾರ್ಥಿಗಳ ಮನಸ್ಸನ್ನು ಸಂತಸಗೊಳಿಸಿದರು. ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಕರಾದ ಅಜಿತ್, ಹರಿಪ್ರಸಾದ್ ಮತ್ತು ಶಿಕ್ಷಕಿಯರಾದ ಶ್ರೀಮತಿ ವೀಣಾಸರಸ್ವತಿ, ಶ್ರೀಮತಿ ಭವ್ಯ ಮತ್ತು ಕು.ಲಾವಣ್ಯ ಉಪಸ್ಥಿತರಿದ್ದರು.

ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

Thursday, August 21st, 2014

Solar Reflected water heater ದಿನಾಂಕ 4-8-2014 ಹಾಗೂ 5-8-2014 ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಶ್ವಿನಿ .ಯು. ನಾಯಕ್ ಇವರು ‘Solar Reflected water heater’ ಎಂಬ ಮಾದರಿಯನ್ನು ಮಂಡಿಸಿದ್ದು ಇದನ್ನು ದೊಡ್ಡ ದೊಡ್ಡ ಇಂಡಸ್ಟ್ರೀಗಳಲ್ಲಿ ದೊಡ್ಡ ಪ್ರಮಾಣದ ವ್ಯಾಸವಿರುವ ಡಿಶ್ ಬಳಸಿ ಮಾಡಲಾಗುತ್ತದೆ. ಡಿಶ್‌ಗಳು ಸೋಲಾರ್ ಟ್ರಾಕರ್ ವಿಧಾನದಿಂದ ಸೂರ್ಯನ ದಿಕ್ಕಿಗನುಗುಣವಾಗಿ ತಿರುಗುತ್ತದೆ.ಸಣ್ಣ ಪ್ರಮಾಣದಲ್ಲಿ […]

ರಕ್ಷಾಬಂಧನ ಕಾರ್ಯಕ್ರಮ

ರಕ್ಷಾಬಂಧನ ಕಾರ್ಯಕ್ರಮ

Wednesday, August 13th, 2014

ದಿನಾಂಕ 11-08-2014 ರ ಸೋಮವಾರದಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ರಕ್ಷಾಬಂಧನ ಕಾರ್ಯಕ್ರಮ ನಡೆಸಲಾಯಿತು. ಅತಿಥಿಗಳಾಗಿ ಆಗಮಿಸಿದ ಶ್ರೀರಾಮ ಶಿಶುಮಂದಿರ, ಕಲ್ಲಡ್ಕ ಇಲ್ಲಿಯ ಗಂಗಾಮಾತಾಜಿ ಇವರು ವಿವಿಧ ಮೌಲ್ಯಯುತವಾದ ಕಥೆಗಳ ಮೂಲಕ ರಕ್ಷಾಬಂಧನ ಆಚರಣೆಯ ಅರ್ಥ, ಮಹತ್ವದ ಕುರಿತು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಶ್ರೀಮತಿ ಸೀಮಾ ಕೃಷ್ಣ ಪ್ರಸಾದ್ ಮತ್ತು ಶ್ರೀಮತಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಪ್ರಾಲ್ಗೊಂಡರು, ಶ್ರೀಮತಿ ಸ್ವಾತಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರ ರಕ್ಷೆಯ ರಕ್ಷಾಬಂಧನ ಉತ್ಸವ

ರಾಷ್ಟ್ರ ರಕ್ಷೆಯ ರಕ್ಷಾಬಂಧನ ಉತ್ಸವ

Monday, August 11th, 2014

ನಮ್ಮ ಮತ್ತು ಸಮಾಜದ ನಡುವೆ ಸಂಬಂಧ ಬಲಗೊಳಿಸುವ ಕೊಂಡಿ ರಕ್ಷಾಬಂಧನ ಉತ್ಸವ ಎಂದು ವಿವೇಕಾನಂದ ವಿದ್ಯಾಸಂಸ್ಥೆಗಳು ವಿವೇಕನಗರ, ತೆಂಕಿಲದಲ್ಲಿ ನಡೆದ ರಕ್ಷಾಬಂಧನ ಉತ್ಸವದಲ್ಲಿ ‘ಸಂಸ್ಕೃತ ಭಾರತೀಯ’ ಸಂಚಾಲಕರಾದ ಶ್ರೀ ಆದರ್ಶ ಗೋಖಲೆ ನುಡಿದರು. ಅವರು ಮಾತನಾಡುತ್ತ ಮರ ಹಾಗೂ ಗೋವು ಪರರಿಗೋಸ್ಕರ ಜೀವಿಸುತ್ತದೆ. ಆದರೆ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ಯೋಚಿಸಬೇಕು ಎಂದರು. ರಕ್ಷಾಬಂಧನಕ್ಕೆ ತನ್ನದೇ ಇತಿಹಾಸ ಇದೆ. ಗುರು ಭಗವಧ್ವಜ ದೇಶದ ಮೌಲ್ಯಗಳ ಪ್ರತೀಕ. ರಕ್ಷೆ ನಮಗೆ ವೈಯಕ್ತಿಕ ಜೀವನದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು […]

ಇನ್‌ಸ್ಪೈರ್ ಆವಾರ್ಡ್ ರಾಜ್ಯಮಟ್ಟಕ್ಕೆ ಆಯ್ಕೆ

ಇನ್‌ಸ್ಪೈರ್ ಆವಾರ್ಡ್ ರಾಜ್ಯಮಟ್ಟಕ್ಕೆ ಆಯ್ಕೆ

Saturday, August 9th, 2014

ದಿನಾಂಕ 4-8-2014 ಹಾಗೂ 5-8-2014 ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ. ಇವರು ಮಂಡಿಸಿದ ‘SMART REFRIGERATOR CUM WATER HEATER’ ಮಾದರಿಯು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ವಿದ್ಯಾಭಾರತಿ ಪ್ರಾಂತ ಕ್ರೀಡೆ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ- ಪ್ರಥಮ

ವಿದ್ಯಾಭಾರತಿ ಪ್ರಾಂತ ಕ್ರೀಡೆ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ- ಪ್ರಥಮ

Thursday, July 31st, 2014

ಬೀದರ್ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾಭಾರತಿ ಪ್ರಾಂತೀಯ (ರಾಜ್ಯ)ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿದ್ದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರ ವರ್ಗದ ಬಾಲಕಿಯರು ಪ್ರಥಮ ಸ್ಥಾನ ಗಳಿಸಿ ಆಗಸ್ಟ್ 8, 9, 10 ರಂದು ಕೇರಳದ ಪಾಲ್ಕಟ್‌ನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಸಾಮೂಹಿಕ ಹುಟ್ಟುಹಬ್ಬ ಆಚರಣೆ

Monday, July 28th, 2014

ಸಾಮೂಹಿಕ ಹುಟ್ಟುಹಬ್ಬದಂತಹ ಆಚರಣೆಗಳು ಭಾರತದ ಸಂಸ್ಕೃತಿ ಹಾಗೂ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಖ್ಯಾತ ಸಾಹಿತಿ, ನಿವೃತ್ತ ಅಧ್ಯಾಪಕರಾದ ವಿದ್ವಾನ್ ಮಧುರಕಾನನ ಗೋಪಾಲಕೃಷ್ಣ ಭಟ್ ಅವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 26-07-2014 ರಂದು ನಡೆದ ಸಾಮೂಹಿಕ ಹುಟ್ಟುಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಶ್ಯಾಮ್ ಪ್ರಸಾದ್ ಶಾಸ್ತ್ರಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಸುವರ್ಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಅನೀಶ್ ಬಡೆಕ್ಕಿಲ, […]

2014-15 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘಕ್ಕೆ ಆಯ್ಕೆ

2014-15 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘಕ್ಕೆ ಆಯ್ಕೆ

Monday, July 21st, 2014

2014-15 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀ ವಸಂತ ಸುವರ್ಣ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಅಂಬಿಕಾ ಆಯ್ಕೆಯಾದರು.

ಗುರುಪೂರ್ಣಿಮೆ

ಗುರುಪೂರ್ಣಿಮೆ

Tuesday, July 15th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 10-7-2014 ರಂದು ಗುರುಪೂರ್ಣಿಮೆ ಆಚರಣೆ ನಡೆಯಿತು. ಶಾಲೆಯ ಹಿರಿಯ ಮಾತಾಜಿ ದುರ್ಗಾದೇವಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಫಾಟಿಸಿದರು. ವಿದ್ಯಾರ್ಥಿಗಳಾದ ಅಕ್ಷಯ್, ಆಶಿಕಾ, ಅಂಕಿತಾ, ಅಶ್ವಿನಿ ಗುರುಪೂರ್ಣಿಮೆ ಆಚರಣೆ ವಿಚಾರದ ಬಗ್ಗೆ ಭಾಷಣಗೈದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೀಣಾಸರಸ್ವತಿ ಮಾತಾಜಿ ವೇದವ್ಯಾಸರ ಕಥೆಯನ್ನು ಮಕ್ಕಳಿಗೆ ತಿಳಿಸಿದರು. ಶಿಕ್ಷಕಿ ಪೃಥ್ವಿ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.

ಸ್ವಗೃಹದಲ್ಲಿ ಗುರುವಂದನಾ ಕಾರ್ಯಕ್ರಮ - 'ಅಧ್ಯಯನ ಮತ್ತು ಅಧ್ಯಾಪನ ಅಗತ್ಯ : ವೇದವ್ಯಾಸ

ಸ್ವಗೃಹದಲ್ಲಿ ಗುರುವಂದನಾ ಕಾರ್ಯಕ್ರಮ – ‘ಅಧ್ಯಯನ ಮತ್ತು ಅಧ್ಯಾಪನ ಅಗತ್ಯ : ವೇದವ್ಯಾಸ

Tuesday, July 15th, 2014

ವ್ಯಕ್ತಿಯು ತಾನು ಕಲಿತಿರುವುದನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವ ಮತ್ತು ತಾನು ಕಲಿಯುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳುವ ಕೈಕಂರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬನಲ್ಲೂ ಅಗಾಧವಾದ ಶಕ್ತಿಹುದುಗಿರುತ್ತದೆ. ಆದರೆ ಆತನಿಗೆ ಅದರ ಅರಿವಿರುವುದಿಲ್ಲ ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಆ ಶಕ್ತಿಯು ಸಾಗರೋಲ್ಲಂಘನ ಮಾಡಿದ ಹನುಮಂತನಂತೆ ಹೊರ ಚಿಮ್ಮುತ್ತದೆ. ಎಂದು ಗುರುವಂದನೆಯನ್ನು ಸ್ವೀಕರಿಸಿದ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಶ್ರೀಯುತ ವೇದವ್ಯಾಸರು ಮಕ್ಕಳನ್ನು ಆಶೀರ್ವದಿಸುತ್ತ ಹೇಳಿದರು. ದಿನಾಂಕ 11-07-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು […]

ವಿವೇಕಾನಂದ ಕನ್ನಡ ಮಾಧ್ಯಮದಲ್ಲಿ ಗುರುಪೂಜೆ

ವಿವೇಕಾನಂದ ಕನ್ನಡ ಮಾಧ್ಯಮದಲ್ಲಿ ಗುರುಪೂಜೆ

Thursday, July 10th, 2014

ದಿನಾಂಕ 03-07-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂಜೆ ನಡೆಯಿತು. ಗುರು ವ್ಯಾಸರ ಆದರ್ಶ ಪಥದ ಕಥೆಯನ್ನು ಗುರು ಪೂಜೆಗೆ ಔಚಿತ್ಯವೆಂಬತೆ ಹೇಳುವುದರ ಮೂಲಕ ಗುರು ಪೂಜೆಯ ಮಹತ್ವವನ್ನು ಶ್ರೀರಾಮ ಕಲ್ಲಡ್ಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್‌ರವರು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ವಯಂಸೇವಕರು ಧ್ವಜವಂದನೆ ಸಲ್ಲಿಸಿ ಗುರುಕಾಣಿಕೆ ಅರ್ಪಿಸಿದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ, ಚಿತ್ರಕಲಾ ಸ್ಪರ್ಧೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ, ಚಿತ್ರಕಲಾ ಸ್ಪರ್ಧೆ

Wednesday, July 2nd, 2014

ಮಾನವನ ಜೀವನಕ್ಕೆ ಪೂರಕವಾದ ಮೂಲಭೂತ ಸೌಲಭ್ಯಗಳು ಅಗತ್ಯವಿರುವಂತೆ ಕಾನೂನಿನ ತಿಳುವಳಿಕೆ ಹೊಂದಿರುವುದು ಅತೀ ಅವಶ್ಯಕ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಯಾದವ ವನಮಾಲ ಆನಂದರಾವ್ ತಿಳಿಸಿದರು. ಕಾನೂನು ಸೇವಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ವಕೀಲರ ಸಂಘ, ಅನಿಕೇತನ ಎಜ್ಯುಕೇಶನಲ್ ಟ್ರಸ್ಟ್ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ. 28 ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ […]

ಭಾರತವು ಸಾಂಸ್ಕೃತಿಕ ಸಮೃದ್ಧ ದೇಶ- ಕಾಂಚನ ಈಶ್ವರ ಭಟ್

ಭಾರತವು ಸಾಂಸ್ಕೃತಿಕ ಸಮೃದ್ಧ ದೇಶ- ಕಾಂಚನ ಈಶ್ವರ ಭಟ್

Monday, June 23rd, 2014

ನಾದಮಯ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಸಂಗೀತ ಪ್ರಿಯರೇ ಸಂಗೀತ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತದೆ ಎಂದು ವಿದ್ವಾನ್ ಕಾಂಚನ ಈಶ್ವರ ಭಟ್ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಶ್ರಯದಲ್ಲಿ ಸ್ವರಮಾದುರ್ಯ ಸುಗಮ ಸಂಗೀತ ಬಳಗ ದ.ಕ ಇವರ ಸಂಯೋಜನೆಯಲ್ಲಿ ದಿನಾಂಕ 21-6-2014 ೪ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಹಾಡೋಣ ಬನ್ನಿ ಪ್ರೌಢ ಶಾಲಾ ಪಠ್ಯ ಆಧಾರಿತ ಹಾಡುಗಳ ಗಾಯನ ಕಾರ್ಯಕ್ರಮದಲ್ಲಿ ಉದ್ಫಾಟಕರಾಗಿ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಡಾ.ಕೃಷ್ಣ ಭಟ್ […]

ಪೋಷಕಾಂಶ ಮತ್ತು ಪೋಷಕತ್ವ ಅಗತ್ಯ - ಬಿ.ವಿ ಸೂರ್ಯನಾರಾಯಣ

ಪೋಷಕಾಂಶ ಮತ್ತು ಪೋಷಕತ್ವ ಅಗತ್ಯ – ಬಿ.ವಿ ಸೂರ್ಯನಾರಾಯಣ

Monday, June 23rd, 2014

ಗುಣಾತ್ಮಕ ಸಮಯ ಮತ್ತು ಪ್ರೀತಿ ನೀಡಬೇಕಾದದ್ದು ಪೋಷಕರ ಕೆಲಸ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಬಿ.ವಿ.ಸೂರ್ಯನಾರಾಯಣ ಹೇಳಿದರು. .ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ‘ಪರಿಣಾಮಕಾರಿ ಪೋಷಕತ್ವ’ ಎಂಬ ವಿಷಯದಲ್ಲಿ ಮಾತನಾಡುತ್ತಾ ಈ ಮೇಲಿನ ಮಾತನ್ನು ಹೇಳಿದರು. ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ

Monday, June 23rd, 2014

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಡೆಕಲ್ಲು ಇಲ್ಲಿ ದಿನಾಂಕ 5-6-2014 ರಂದು ವಿಶ್ವಪರಿಸರ ದಿನಾಚರಣೆಯನ್ನು ವಿವಿಧ ತಳಿಯ ಸಸಿಗಳನ್ನು ಸುಮಾರು 1 ಎಕ್ರೆ ನೆಡುವುದರ ಮೂಲಕ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು. ಇದರ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಜಿಡೆಕಲ್ಲು ಶಾಲೆಯ ಮುಖ್ಯಗುರುಗಳು ಮತ್ತು ರಾಷ್ಟ್ರೀಯ ಸೇವಾಯೋಜನಾ ಅಧ್ಯಕ್ಷರಾದ ಶ್ರೀರಘುವೀರ್ ಉಬರಡ್ಕ ಹಾಗೂ ಊರಿನ ಗಣ್ಯರಾದ ಶ್ರೀ […]

ಅಪ್ಪ ಅಮ್ಮ ಮಗುವಿಗೆ ಮಾದರಿ - ಎಸ್.ಜಿ.ಭಟ್

ಅಪ್ಪ ಅಮ್ಮ ಮಗುವಿಗೆ ಮಾದರಿ – ಎಸ್.ಜಿ.ಭಟ್

Monday, June 23rd, 2014

ಮಕ್ಕಳು ನಾವು ಹೇಳಿದ ಹಾಗೆ ಮಾಡುವುದಿಲ್ಲ ನಾವು ಮಾಡಿದ ಹಾಗೆ ಮಾಡುತ್ತಾರೆ. ಹಿರಿಯರ ಅನುಕರಣೆಯಿಂದಲೇ ಮಗು ವಿಕಾಸವಾಗುತ್ತದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಪಬ್ಲಿಕ್ ರಿಲೇಷನ್ ಆಫೀಸರ್ ಆಗಿರುವ ಎಸ್.ಜಿ.ಭಟ್ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನಾಲ್ಕು ಮತ್ತು ಐದನೇ ತರಗತಿ ಮಕ್ಕಳ ಪೋಷಕರಿಗೆ ಪರಿಣಾಮಕಾರಿ ಪೋಷಕತ್ವ ಎಂಬ ವಿಷಯದಲ್ಲಿ ಮಾತನಾಡಿದರು. ಶಿಕ್ಷಕ ರಾಜೇಶ್ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

ಶಾಲಾ ಮಂತ್ರಿಮಂಡಲ 2014-15

ಶಾಲಾ ಮಂತ್ರಿಮಂಡಲ 2014-15

Monday, June 23rd, 2014

ಪ್ರೌಢಶಾಲಾ ನಾಯಕ – ಅಣ್ಣಪ್ಪ ಉಪನಾಯಕ – ರಂಜಿತ್.ಪಿ.ವಿ ಪ್ರಾಥಮಿಕ ಶಾಲಾ ನಾಯಕ – ಶ್ರೇಯಸ್.ಕೆ ಉಪನಾಯಕಿ – ಅಮಿತಾ.ಎಸ್.ಎನ್ ಪ್ರತಿಪಕ್ಷನಾಯಕ – ಪ್ರಣವ ಬೆಳ್ಳಾರೆ ಸ್ಪೀಕರ್ – ರುಫೈದಾ ಗೃಹಮಂತ್ರಿ – ಕೃಷ್ಣ ಶೈಣೈ ಆರೋಗ್ಯ ಮಂತ್ರಿ – ಕಾವ್ಯರತ್ನ ನೈರ್ಮಲ್ಯ ಮಂತ್ರಿ – ವೈದೇಹಿ ಭಟ್.ಪಿ ಸಾಂಸ್ಕೃತಿಕ ಮಂತ್ರಿ – ಸ್ವಾತಿ.ಎನ್.ವಿ ಸಾರಿಗೆ ಮಂತ್ರಿ – ಗುರುಪ್ರಸಾದ್ .ಟಿ ಕ್ರೀಡಾಮಂತ್ರಿ – ವಾಣಿ ನೀರಾವರಿ ಮಂತ್ರಿ – ಪೂಜಾ.ಟಿ.ಎನ್ ವಾರ್ತಾಮಂತ್ರಿ – ಉಬೈದ್ ಶಿಕ್ಷಣ […]

ಹದಿಹರೆಯದ ಮಕ್ಕಳು ನಮ್ಮ ಗೆಳೆಯರು- ಎನ್.ಸಿ. ಪಾಂಡುರಂಗ

ಹದಿಹರೆಯದ ಮಕ್ಕಳು ನಮ್ಮ ಗೆಳೆಯರು- ಎನ್.ಸಿ. ಪಾಂಡುರಂಗ

Monday, June 23rd, 2014

ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು, ಉತ್ತಮ ವಾತಾವರಣವನ್ನು ಕೊಡಬಲ್ಲವರೇ ಪೋಷಕರು. ಮಗುವನ್ನು ಅಂಕಗಳನ್ನು ಗಳಿಸುವ ಯಂತ್ರವೆಂದು ತಿಳಿದು ನಿಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರದಿರಿ ಎಂದು ರಾಜ್ಯ ತರಬೇತುದಾರರಾದ ಎನ್.ಸಿ.ಪಾಂಡುರಂಗ ಶೃಂಗೇರಿ ಇವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ‘ಪರಿಣಾಮಕಾರಿ ಪೋಷಕತ್ವ’ ಎಂಬ ವಿಷಯದಲ್ಲಿ ಮಾತನಾಡುತ್ತಾ ಈ ಮೇಲಿನ ಮಾತನ್ನು ಹೇಳಿದರು. ಶಿಕ್ಷಕಿ ಕು.ನಿಶ್ಚಿತಾ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ - ಗಂಗಾಧರ ಬೆಳ್ಳಾರೆ

ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ – ಗಂಗಾಧರ ಬೆಳ್ಳಾರೆ

Friday, June 20th, 2014

ಮನೆಯು ಮಂದಿರವಾಗುವುದು ಮತ್ತು ಮಗುವು ದೇವರಾಗುವುದು ಪೋಷಕರ ಮಾತೆಂಬ ಮಂತ್ರಗಳಿಂದ ಎಂದು ಸಾಲ್ಮರ ಸ್ಕೋಪ್ ಕೌನ್ಸೆಲಿಂಗ್ ಸೆಂಟರ್ ನಿರ್ದೇಶಕ ಗಂಗಾಧರ ಬೆಳ್ಳಾರೆಯವರು ಹೇಳಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಂದು ಎರಡು ಮತ್ತು ಮೂರನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಕೌಟುಂಬಿಕ ಪರಿಸರವು ಮಕ್ಕಳ ಮನೋವಿಕಾಸದ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ ಎಂದ ಅವರು ಪೋಷಕರ ನೇತ್ಯಾತ್ಮಕ ವರ್ತನೆಗಳು ವಿದ್ಯಾರ್ಥಿಗಳ ಕಲಿಕೆ ಮತ್ತು ಮಾನಸಿಕ ಭದ್ರತೆಯ ಮೇಲೆ ದುಶ್ಪರಿಣಾಮ ಉಂಟುಮಾಡುತ್ತವೆ […]

ಶಾಲಾ ಚುನಾವಣೆ

ಶಾಲಾ ಚುನಾವಣೆ

Saturday, June 14th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 12-06-2014 ರಂದು 2014-15 ನೇ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಚುನಾವಣೆಯಲ್ಲಿ ಮತದಾನದ ಪೂರ್ಣ ಅರಿವು ಮೂಡಿಸುವ ದೃಷ್ಟಿಯಲ್ಲಿ ಪ್ರಸ್ತುತ ಮತ ಚಲಾವಣೆಯ ರೀತಿಯನ್ನೇ ಅನುಸರಿಸಲಾಗಿತ್ತು. ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ನಾಯಕನಾಗಿ ಅಣ್ಣಪ್ಪ – 10 ನೇ ತರಗತಿ, ಉಪನಾಯಕನಾಗಿ ರಂಜಿತ್.ಪಿ.ವಿ.- 10 ನೇ ತರಗತಿ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿನಾಯಕನಾಗಿ ಶ್ರೇಯಸ್ ಕೆ. ಮತ್ತು ಉಪನಾಯಕಿಯಾಗಿ ಕು. ಅಮಿತಾ ಎಸ್.ಎನ್. ಆಯ್ಕೆಯಾದರು. ಅನಂತರ ಮಂತ್ರಿಮಂಡಲದ ಪ್ರತಿಜ್ಞಾ […]

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

Wednesday, June 4th, 2014

2013-14 ನೇ ಸಾಲಿನಲ್ಲಿ ರಾಷ್ಟ್ರಪತಿ ಪುರಸ್ಕಾರ ಪರೀಕ್ಷಾ ಶಿಬಿರವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಅನ್ನಿಬೆಸೆಂಟ್ ಪಾರ್ಕ್ ದೊಡ್ಡ ಬಳ್ಳಾಪುರ ಮತ್ತು ದಾವಣಗೆರೆ ಕೊಂಡಜ್ಜಿ ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಜರುಗಿದ್ದು ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಹಾಜರಾಗಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕಿರಣ್ ಸುಬ್ರಹ್ಮಣ್ಯ, ನಿಖಿಲ್, ಅಪೂರ್ವ ಗೌರಿ ಮತ್ತು ಪ್ರಜ್ಞಾ ಪಿ.ಆರ್.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

Wednesday, June 4th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ಮೇ ತಿಂಗಳಲ್ಲಿ ಜರುಗಿದ ಇಂಗ್ಲಿಷ್ ಸಂವಹನಾ ತರಗತಿಗಳ ಸಮಾರೋಪ ಕಾರ್ಯಕ್ರಮ ಶ್ರೀ ರಾಮಚಂದ್ರ ಭಟ್ ಉಪನ್ಯಾಸಕರು – ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಇಂಗ್ಲಿಷ್ ವಾರ್ತಾ ಪತ್ರಿಕೆ ಓದುವಿಕೆ, ಉಚ್ಚಾರ, ವ್ಯಾಕರಣ, ಭಾಷಾ ತರ್ಜುಮೆ, ಮಾದರಿ ಪಠ್ಯ ಬೋಧನೆ ಮುಂತಾದವುಗಳ ಪ್ರಯೋಜನ ಪಡೆದ ವಿದ್ಯಾರ್ಥಿಗಳು ತಮ್ಮ ತರಬೇತಿಯ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿನಿಯರಾದ ಕು.ಶ್ರೀಲಕ್ಷ್ಮೀ ಮತ್ತು ಕು.ದಿವ್ಯಜ್ಯೋತಿ ಇವರು ಕಾವ್ಯಗುಚ್ಛ ಕಾರ್ಯಕ್ರಮ ನಡೆಸಿಕೊಟ್ಟರು. […]

'ಗೀತ ಸಾಹಿತ್ಯ ಸಾಂಸ್ಕೃತಿಕ ವೈಭವ'

‘ಗೀತ ಸಾಹಿತ್ಯ ಸಾಂಸ್ಕೃತಿಕ ವೈಭವ’

Friday, May 30th, 2014

ಲಾಲಿ ಹಾಡು, ಭಜನೆ, ಸುಗಮ ಸಂಗೀತ, ಭಾವಗೀತೆ, ಗೀಗೀ ಪದ, ತತ್ವ ಪದ ಇತ್ಯಾದಿಗಳಲ್ಲಿರುವ ಸತ್ವ ಸಾರ, ಉತ್ತಮ ಜೀವನ ನಿರ್ವಹಣೆಗೆ ಸಹಕಾರಿಯಾಗಿವೆ. ಈ ಹಾಡುಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡರೆ ನಮ್ಮ ಹತ್ತು ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಈಗಿನ ಜನಾಂಗದಲ್ಲಿ ಅಗಾಧವಾದ ಶಕ್ತಿ, ಸಾಮರ್ಥ್ಯ ಇದೆ. ಇದರ ಸದುಪಯೋಗದ ಹಾದಿ ತಾನೇ ತಾನಾಗಿ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದವರು ಶ್ರೀ ವಿಠಲ ನಾಯಕ್- ಶಿಕ್ಷಕರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಬೊಳಂತಿಮೊಗರು ಇವರು ನಮ್ಮ ಶಾಲೆಯ ಗೀತ ಸಾಹಿತ್ಯ […]

ಶಾಲಾ ಪ್ರಾರಂಭೋತ್ಸವ

ಶಾಲಾ ಪ್ರಾರಂಭೋತ್ಸವ

Friday, May 30th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 29-05-2014 ೪ರಂದು ಶಾಲೆ ಪ್ರಾರಂಭವಾಯಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಶಾಲಾ ಶ್ರೀಮಾನ್ ಮತ್ತು ಮಾತಾಜಿಯವರು ಆದರದಿಂದ ಬರಮಾಡಿಕೊಂಡರು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಮತ್ತು ಪಾನಕ ಹಂಚುವುದರ ಮೂಲಕ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಕಾಣಬಹುದಾಗಿತ್ತು.

ಶಿಕ್ಷಕರ ಕಾರ್ಯಾಗಾರ

ಶಿಕ್ಷಕರ ಕಾರ್ಯಾಗಾರ

Wednesday, May 28th, 2014

ದಿನಾಂಕ 27-05-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾಷಾ ಶಿಕ್ಷಕರಿಗಾಗಿ ಸಿ.ಸಿ.ಇ ತರಬೇತಿ ಕಾರ್ಯಾಗಾರವು ನಡೆಯಿತು. ಶಿಕ್ಷಕರಾದ ಶ್ರೀ ಸದಾಶಿವ ನಾಯಕ್‌ರವರು ಸಿ.ಸಿ.ಇ ಯನ್ನು ಯಾವ ರೀತಿ ಭಾಷಾ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದಾಗಿ ಮಾಹಿತಿ ನೀಡಿದರು.

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Tuesday, May 27th, 2014

ದಿನಾಂಕ 26-05-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಇಲ್ಲಿ 2013-14 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಶೋಭಿತಾ ಸತೀಶ್ ರವರು ಸಂದರ್ಬೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಶ್ರೀ. ರವೀಂದ್ರ.ಪಿ ರವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಭಿರ್ಮಣ್ಣ ಗೌಡ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ […]

2014ರ ಶಾಲಾ ಫಲಿತಾಂಶ

2014ರ ಶಾಲಾ ಫಲಿತಾಂಶ

Thursday, May 15th, 2014
ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು -  2014ರ ಶಾಲಾ ಫಲಿತಾಂಶ 97%

ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು – 2014ರ ಶಾಲಾ ಫಲಿತಾಂಶ 97%

Monday, May 12th, 2014
ದೀಪ ಪ್ರದಾನ - ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ

ದೀಪ ಪ್ರದಾನ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ

Saturday, April 12th, 2014

‘ಅಂಕಗಳನ್ನು ಮೀರಿದ ಬದುಕನ್ನು ಕಲಿಸಿ ಆಂತರಿಕ ಶಿಸ್ತು, ಪ್ರೀತಿ, ಸಂಸ್ಕೃತಿಯನ್ನು ಕಲಿಸುವ ತಾಣವೇ ಶಾಲೆ, ಇದರ ಜೀವಂತ ಪಾತ್ರವೇ ಶಿಕ್ಷಕರು, ಸಾಕಾರ ರೂಪವೇ ಮಕ್ಕಳು’ ಎಂದು ಪೋಷಕರಾದ ಶ್ರೀಮತಿ ಸುನಿತಾ ಚಂದು ಶೆಟ್ಟಿ ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ನಡೆದ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು, ಆಯ್ದ ಪೋಷಕ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಪ್ಪ ನಾಯ್ಕ್ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ಡಾ|| ಕೃಷ್ಣ […]

ಯಕ್ಷ ಚಿಣ್ಣರ ಬಳಗ ತೆಂಕಿಲ - ಯಕ್ಷಗಾನ ತರಬೇತಿ ಶಿಬಿರ

ಯಕ್ಷ ಚಿಣ್ಣರ ಬಳಗ ತೆಂಕಿಲ – ಯಕ್ಷಗಾನ ತರಬೇತಿ ಶಿಬಿರ

Saturday, April 12th, 2014

ದಿನಾಂಕ 1-4-2014 ರಿಂದ 10-4-2014 ರವರೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಯಕ್ಷ ಚಿಣ್ಣರ ಬಳಗದ ವತಿಯಿಂದ ಯಕ್ಷಗಾನ ತರಬೇತಿ ಶಿಬಿರವು ಶಿಕ್ಷಕ ಶ್ರೀ ಚಂದ್ರಶೇಖರ ಬಿ. ಇವರ ನೇತೃತ್ವದಲ್ಲಿ ನಡೆಯಿತು. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಬಾಲಕೃಷ್ಣ ಪೂಜಾರಿ, ಶ್ರೀ ಅಪ್ಪಕುಂಞ ಯಾದವ್, ಶ್ರೀ ಜಯಪ್ರಕಾಶ್ ಕಲ್ಮಡ್ಕ ರವರು ನಾಟ್ಯ, ಯಕ್ಷಗಾನದ ಹಿನ್ನೆಲೆ, ಬಣ್ಣಗಾರಿಕೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು.

ಜೀವನ ಪ್ರೀತಿ ಕಲಿಸುವ ಶಿಕ್ಷಣ ಅಗತ್ಯ-ಕುಂಟಿನಿ

ಜೀವನ ಪ್ರೀತಿ ಕಲಿಸುವ ಶಿಕ್ಷಣ ಅಗತ್ಯ-ಕುಂಟಿನಿ

Friday, March 28th, 2014

ಬದುಕಿನ ಪ್ರತಿ ಅನುಭವವೂ ಯಾವುದೇ ಪದವಿಗೂ ಕಡಿಮೆಯಿಲ್ಲ. ಇದು ಶಿಕ್ಷಣ ಪ್ರಕ್ರಿಯೆಯ ಒಂದು ಭಾಗ. ನಿರಂತರ ಅಧ್ಯಯನ ಶೀಲತೆ ಶಿಕ್ಷಕರಿಗೆ ಅತಿ ಅಗತ್ಯ ಎಂದು ಪತ್ರಕರ್ತ ಹಾಗೂ ಲೇಖಕ ಗೋಪಾಲಕೃಷ್ಣ ಕುಂಟಿನಿ ನುಡಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ’ದ ಉದ್ಫಾಟನೆಯನ್ನು ನೇರವೇರಿಸಿ ಕಾರ್ಯಾಗಾರದ ಪ್ರಸ್ತುತತೆಯನ್ನು ಮೆಚ್ಚಿಕೊಂಡರು. ಸಭಾಧ್ಯಕ್ಷತೆ ವಹಿಸಿದ ಶಾಲಾಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ ಇವರು ಮಕ್ಕಳು ಭತ್ತ ತುಂಬಿಸುವ ಚೀಲಗಳಾಗದೆ ಭತ್ತ ಬೆಳೆಯುವ […]

'ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ' ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

‘ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ’ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

Friday, March 14th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಮಂಗಳೂರು ಇದರ ಸಹಪ್ರಾಯೋಜಕತ್ವದಲ್ಲಿ ‘ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ’ ವಿಭಾಗದಿಂದ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನವು ದಿನಾಂಕ 11-03-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರುಗಿತು. ಶಾಲಾ ಅಧ್ಯಕ್ಷರಾದ ಡಾ|ಕೆ.ಎಂ ಕೃಷ್ಣ ಭಟ್ ಕೊಂಕೋಡಿ ಕಾರ್ಯಕ್ರಮವನ್ನು ಉದ್ಫಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಪುತ್ತೂರಿನ ಖ್ಯಾತ ವಕೀಲರಾದ ಶ್ರೀ ಕೆ.ಆರ್ ಆಚಾರ್ಯ ಇವರು ‘ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮಹತ್ವ […]

Highslide for Wordpress Plugin