ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ನವದಂಪತಿ ಸಮಾವೇಶ’

“ಕುಟುಂಬ ವ್ಯವಸ್ಥೆ ವ್ಯಕ್ತಿ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಇದರಲ್ಲೂ ಮದುವೆ ಎಂಬ ಪವಿತ್ರ ಬಾಂಧವ್ಯ ಭಾರತೀಯ ಕುಟುಂಬದ ಭದ್ರ ಬುನಾದಿಯಾಗಿದೆ” – ಸು.ರಾಮಣ್ಣ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಕುಟುಂಬ ಪ್ರಬೋಧನ್ ಪುತ್ತೂರು’ ವತಿಯಿಂದ ನಡೆದ ನವದಂಪತಿ ಸಮಾವೇಶಕ್ಕೆ ಅಭ್ಯಾಗತರಾಗಿ ಆಗಮಿಸಿದ ಹಿರಿಯರಾದ ಸು.ರಾಮಣ್ಣ ಇವರು ‘ಪ್ರಕೃತಿಯ ಕೊಡುಗೆಗಳಲ್ಲಿ ಸಂಸ್ಕೃತಿಯನ್ನು ಪೋಷಿಸುತ್ತಾ ಸಮೃದ್ಧ ಜೀವನ ನಡೆಸುತ್ತಿರುವ ಕುಟುಂಬಗಳು ಭಾರತದ ಶಕ್ತಿ’ ಎಂದರು. ಕುಟುಂಬ ಪ್ರಬೋಧನ್ ನ ಪುತ್ತೂರು ವಿಭಾಗದ ಪ್ರಮುಖರಾದ ಶ್ರೀಯುತ ಅಚ್ಯುತ ನಾಯಕ್ ಇವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಗಳೂರು ವಿಭಾಗದ ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀ ಗಜಾನನ ಪೈ ಹಾಗೂ ಸುಮತಿ ಪೈ ಇವರು ಬಂದಂತಹ ದಂಪತಿಗಳ ಗುಂಪುಗಳಿಗೆ ದಾಂಪತ್ಯ ಬದುಕಿನ ಮಹತ್ವವನ್ನು ತಿಳಿಸಿದರು.
ಹಿರಿಯ ದಂಪತಿಗಳಾದ ಶ್ರೀ ಗಣೇಶ್ ಭಟ್ ಹಾಗೂ ಶ್ರೀಮತಿ ಸುಶೀಲಾ ಇವರ ಸಮ್ಮುಖದಲ್ಲಿ ಬಂದಂತಹ 71 ಜೊತೆ ದಂಪತಿಗಳನ್ನು ಆರತಿ -ಅಕ್ಷತೆ ಹಾಗೂ ಹಾರಾರ್ಪಣೆಯೊಂದಿಗೆ ಸ್ವಾಗತಿಸಲಾಯಿತು. ಮಧ್ಯಾಹ್ನ ಭೋಜನ ಸಮಯ ಎಲ್ಲಾ ದಂಪತಿಗಳಿಗೆ ಬಾಗಿನ ನೀಡಿ ಮಡಿಲು ತುಂಬಿಸಲಾಯಿತು. ಸಮಾಪನ ಮಾತು, ಧನ್ಯವಾದ ಶಾಂತ್ರಿ ಮಂತ್ರದೊಂದಿಗೆ ಸಂಪನ್ನಗೊಂಡ ನವದಂಪತಿ ಸಮಾವೇಶದಲ್ಲಿ ಶಾಲಾ ಆಡಳಿತ ಮಂಡಳಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಶ್ರೀಯುತ ರವಿ ನಾರಾಯಣ, ಪೋಷಕ ವೃಂದ, ರಕ್ಷಕ -ಶಿಕ್ಷಕ ಸಂಘದ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Highslide for Wordpress Plugin