ಮಕ್ಕಳ ಸಮಗ್ರ ತಪಾಸಣಾ ಶಿಬಿರ

ಮಕ್ಕಳ ಸಮಗ್ರ ತಪಾಸಣಾ ಶಿಬಿರ

Tuesday, September 13th, 2022

ಮಕ್ಕಳಲ್ಲಿ ಕಲಿಕಾ ವೈವಿಧ್ಯತೆ ಸಾಮಾನ್ಯವಾಗಿದ್ದು, ಪೋಷಕರು-ಶಿಕ್ಷಕರು ಇದನ್ನು ಗುರುತಿಸಿ ಪರಿಣಿತರ ಸಹಕಾರ ಪಡೆದು ಸಕಾಲಕ್ಕೆ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿದ್ದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿದೆ-ಡಾ| ಕೃಷ್ಣ ಭಟ್ ಕೊಂಕೋಡಿ. ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಅಸಮರ್ಪಕ ಹಾಗೂ ನಿಧಾನಗತಿಯ ಕಲಿಕಾ ಮಕ್ಕಳ ಸಮಗ್ರ ತಪಾಸಣಾ ಶಿಬಿರಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ| ಕೃಷ್ಣ ಭಟ್ ಕೊಂಕೋಡಿಯವರು ಈ ಬಗೆಯ ತಪಾಸಣಾ ಕಾರ್ಯಗಳು ನಿರಂತರವಾಗಿ ನಡೆಯಬೇಕಿದ್ದು, ಶಾಲೆ-ಶಿಕ್ಷಕರು-ಪೋಷಕರು ಹಾಗೂ ವಿದ್ಯಾವರ್ಧಕ ಸಂಘ […]

ಓಣಂ ಹಬ್ಬ ಆಚರಣೆ

ಓಣಂ ಹಬ್ಬ ಆಚರಣೆ

Friday, September 9th, 2022

“ಓಣಂ ಹಬ್ಬ ಸಮೃದ್ಧಿಯ ಸಂಕೇತ” – ವೀಣಾ ಸರಸ್ವತಿ. ಸಹ ಶಿಕ್ಷಕಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು. ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆಯ ಅಂಗವಾಗಿ ಏರ್ಪಡಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹ ಶಿಕ್ಷಕಿ ವೀಣಾ ಸರಸ್ವತಿ ಇವರು ಬಲಿಚಕ್ರವರ್ತಿಯ ಕಥೆಯೊಂದಿಗೆ ಓಣಂ ಹಬ್ಬದ ಮಹತ್ವ ತಿಳಿಸಿದರು. ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಸಾದ್ ಶ್ಯಾನ್ ಬಾಗ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮಾದರಿ ಪ್ರದರ್ಶನ ವೀಕ್ಷಣೆ

ಮಾದರಿ ಪ್ರದರ್ಶನ ವೀಕ್ಷಣೆ

Tuesday, September 6th, 2022

“ಪ್ರಾಯೋಗಿಕ ಮಾದರಿಯ ಕಲಿಕಾ ವಿಧಾನ ಮಕ್ಕಳಲ್ಲಿ ಆಸಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿರುತ್ತದೆ”- ಶ್ರೀ ಚಂದ್ರಕುಮಾರ್, ಪ್ರಾಂಶುಪಾಲರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್ ನೆಹರು ನಗರ. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಿಂದ ಆಯೋಜಿಸಲಾದ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ ಮಾದರಿ ಪ್ರದರ್ಶನ ವೀಕ್ಷಿಸಲು ತೆರಳಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಕಾಲೇಜು ಪ್ರಾಧ್ಯಾಪಕ ವೃಂದದವರು ಮಾದರಿಗಳ ಬಗೆಗಿನ ಪ್ರಾತ್ಯಕ್ಷಿಕಾ ಮಾಹಿತಿ ನೀಡಿದರು.

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Tuesday, September 6th, 2022

51 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮ ನಗರ ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂಪಾಯಿ 15,000 ನಗದು ಹಾಗೂ ಫಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು.

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ - ಸ್ಪರ್ಧೆಯಲ್ಲಿ ವಿಜೇತರು

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ – ಸ್ಪರ್ಧೆಯಲ್ಲಿ ವಿಜೇತರು

Tuesday, September 6th, 2022

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ವಿವೇಕಾನಂದ ಶಿಶುಮಂದಿರ ಇಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಶಂಖನಾದ-ಗಗನ್ ದೀಪ್ ಹತ್ತನೇ ತರಗತಿ- ದ್ವಿತೀಯ, ಭಗವದ್ಗೀತೆ ಗೀತೆ ಕಂಠಪಾಠ- ಶ್ರೀ ನಂದನ್ ಒಂಬತ್ತನೇ ತರಗತಿ- ಪ್ರಥಮ, ಪ್ರಾರ್ಥನ ಶ್ಲೋಕ – ಕೃತಿಕಾ 6ನೇ ತರಗತಿ- ಪ್ರಥಮ, ವೈಷ್ಣವಿ 5ನೇ ತರಗತಿ- ದ್ವಿತೀಯ.  

ಶಿಕ್ಷಕ-ಪರ್ವ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ

ಶಿಕ್ಷಕ-ಪರ್ವ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ

Monday, September 5th, 2022

ವಿದ್ಯಾರ್ಥಿ ಶಿಕ್ಷಕರಾದಾಗ ಪಡೆಯುವ ಆನಂದ, ಪ್ರೌಢಿಮೆ, ಜ್ಞಾನ, ಕೌಶಲಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿ ಅನುಷ್ಠಾನಕ್ಕೆ ತಂದಿರುವ ಯೋಜನೆಯೇ ’ಶಿಕ್ಷಕ-ಪರ್ವ’. ಇದರ ಅನುಷ್ಠಾನ ಅವಧಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ವಿಭಿನ್ನ ಪಠ್ಯ ವಿಷಯಗಳ ಪರಿಕಲ್ಪನೆ ನೀಡಲಾಗಿತ್ತು. ಕಲಿಕಾ ಉಪಕರಣಗಳನ್ನು ತಯಾರುಗೊಳಿಸಿ, ಸಾಮೂಹಿಕ ಜಾಲತಾಣಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ, ಪ್ರಶ್ನೋತ್ತರ, ಚರ್ಚಾ ವಿಧಾನ, ಪ್ರಯೋಗಾತ್ಮಕ ವಿಧಾನಗಳ ಮೂಲಕ ಚಿಕ್ಕ ತರಗತಿಯ ಮಕ್ಕಳಿಗೆ ತಮಗೆ ನೀಡಲಾದ ವಿಷಯ ಬೋಧನೆ ನಡೆಸಿಕೊಟ್ಟರು. ಶಾಲೆಯು ಈ ಹಿಂದಿನಿಂದಲೇ ಈ […]

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

Saturday, August 27th, 2022

ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ಷಣ್ಮುಖದೇವ ಹಾಗೂ ವಿವೇಕಾನಂದ ವರ್ತುಲದ ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ 2022-23 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 27-08-2022 ರಂದು ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ನಿರ್ದೇಶಕರಾಗಿರುವ ಶ್ರೀ ಮುರಳೀಧರ ಕೆ. ಇವರು ನೆರವೇರಿಸಿದರು. ಕಾರ್ಯಾಗಾರದ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಮುನಿರಾಜ ರೆಂಜಾಳರವರು ಮಾತನಾಡುತ್ತಾ ಶಿಕ್ಷಕನಿಗಿರುವ ಜವಾಬ್ದಾರಿ, ಪರಿಣಾಮಕಾರಿ ಬೋಧನೆ, ವೃತ್ತಿಯಲ್ಲಿ ಪಕ್ವತೆಯನ್ನು ತರುವಲ್ಲಿ ಶಿಕ್ಷಕರಾಗಿ ನಮ್ಮ ಕರ್ತವ್ಯ, ದೇಶವನ್ನು ಕಟ್ಟಿ […]

Independence Day 2022

Independence Day 2022

Monday, August 15th, 2022
ಅಮೃತ ಭಾರತಿಗೆ ಕನ್ನಡದಾರತಿ - ಸ್ವಾತಂತ್ರ್ಯ ದಿನಾಚರಣೆ 

ಅಮೃತ ಭಾರತಿಗೆ ಕನ್ನಡದಾರತಿ – ಸ್ವಾತಂತ್ರ್ಯ ದಿನಾಚರಣೆ 

Monday, August 15th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಅಭ್ಯಾಗತರಾಗಿ ಆಗಮಿಸಿ ಶ್ರೀಯುತ ವಿಜಯಕುಮಾರ್ ಇವರು ಶುಭ ಹಾರೈಸಿದರು. ನಿವೃತ್ತ ಸೇನಾನಿ ಎನ್ ಆರ್ ವಿಜಯಕುಮಾರ್ ಅವರು ಮಾತನಾಡಿ, ದೇಶ ರಕ್ಷಣೆ ಅನ್ನುವುದು ಸೈನ್ಯದಲ್ಲಿದ್ದವರು ಮಾತ್ರ ಮಾಡಬೇಕಾದ ಕೆಲಸ ಎಂದೇನಿಲ್ಲ, ಅದಕ್ಕೆ ವಯಸ್ಸು- ಅಂತಸ್ತಿನ ಅಂತರವಿಲ್ಲ ಪ್ರತಿಯೊಬ್ಬ ಪ್ರಜೆಯೂ ತಮ್ಮ ದೈನಂದಿನ ಕಾರ್ಯ ವಿಧಾನಗಳಲ್ಲೇ ಸ್ವ- ಪ್ರಜ್ಞೆಯೊಂದಿಗೆ ದೇಶರಕ್ಷಣೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಅಮೃತ ಮಹೋತ್ಸವ ಪ್ರಯುಕ್ತ ನಡೆದ ಸ್ಪರ್ಧಾ ವಿಜೇತರಿಗೆ ವಿದ್ವಾನ್ ಗಿರೀಶ್ ಕುಮಾರ್ […]

ಹರ್ ಘರ್ ತಿರಂಗಾ ಅಭಿಯಾನ - ಧ್ವಜಾರೋಹಣ ಕಾರ್ಯಕ್ರಮ

ಹರ್ ಘರ್ ತಿರಂಗಾ ಅಭಿಯಾನ – ಧ್ವಜಾರೋಹಣ ಕಾರ್ಯಕ್ರಮ

Saturday, August 13th, 2022

ದಿನಾಂಕ 13-08-2022ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹರ್ ಘರ್ ತಿರಂಗಾ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿ, ವೃತ್ತಿಯಲ್ಲಿ ವಕೀಲರು ಆದ ವಿರೂಪಾಕ್ಷ ಇವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಇವರು ಧ್ವಜಕ್ಕೆ ಕೊಡುವ ಗೌರವ ಅದರ ನೀತಿ ಸಂಹಿತೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳ ವಂದೇ ಮಾತರಂನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Highslide for Wordpress Plugin