ಶಾಲಾ ಹತ್ತನೇ ತರಗತಿಯ ಮಕ್ಕಳ ಗಣಿತ ಕಲಿಕೆಗೆ ಸಂಬಂಧಿಸಿದಂತೆ ದಿನಾಂಕ 07-01-2023 ಮತ್ತು 08-01-2023ರಂದು ಪ್ರಾಯೋಗಿಕ ಗಣಿತ ಕಾರ್ಯಗಾರ ನಡೆಯಿತು. ಹತ್ತನೇ ತರಗತಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾದ ಶ್ರೀ ಟಿ. ಎನ್ ಪ್ರಸನ್ನಮೂರ್ತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಮಕ್ಕಳ ಗಣಿತ ಪಠ್ಯದ ಕಠಿಣ ಕಲಿಕಾಂಶಗಳನ್ನು ಸುಲಭ ಹಾಗೂ ಸರಳ ರೀತಿಯಲ್ಲಿ ಕಲಿಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪ್ರಯೋಗಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸುತ್ತಾ ಮಕ್ಕಳ ಗಣಿತ ಸಂಬಂಧಿ ಸಂಶಯಗಳಿಗೆ ಉತ್ತರಿಸಿದರು. ಮಕ್ಕಳ ಕ್ರಿಯಾತ್ಮಕ ಭಾಗವಹಿಸುವಿಕೆ ಹಾಗೂ ಅವರ ಆಸಕ್ತಿ ,ಪ್ರತಿಭೆಗಳನ್ನು ಗಮನಿಸಿದ ಶ್ರೀಯುತರು ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಗಣಿತ ಜ್ಞಾನ ಹಾಗೂ ಪರೀಕ್ಷಾ ತಯಾರಿಯ ದೃಷ್ಟಿಯಿಂದ ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು.
ಶಾಲಾ ಆಡಳಿತ ಸಮಿತಿಯ ಸದಸ್ಯರಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ಇವರು ಕಾರ್ಯಗಾರವನ್ನು ಸಂಯೋಜಿಸಿದರು. ಶಾಲಾ ಶಿಕ್ಷಕರು ಎರಡು ದಿನಗಳ ಕಾಲ ನಡೆದ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಗಣಿತ ಪ್ರಾಧ್ಯಾಪಕರಾದ ಶ್ರೀಮತಿ ಕವಿತಾ ಇವರು ಕಾರ್ಯಗಾರವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಕಾರ್ಯಗಾರದ ಪ್ರಯೋಜನ ಪಡೆದುಕೊಳ್ಳುವಂತೆ ಮಾರ್ಗದರ್ಶನ ನೀಡಿದರು.