74ನೇ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ನಮ್ಮ ಶಾಲೆಗೆ ಹಲವು ಬಹುಮಾನ

       ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಅಂಬಿಕಾ ವಿದ್ಯಾಲಯ (ಸಿ.ಬಿ.ಎಸ್.ಇ) ಬಪ್ಪಳಿಗೆ ಇವರ ಸಹಯೋಗದೊಂದಿಗೆ 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂಬಿಕಾ ವಿದ್ಯಾಲಯ ಇಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನಮ್ಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಾಥಮಿಕ ವಿಭಾಗದ ದೇಶ ಭಕ್ತರ ಜೀವನದ ಘಟನೆಗಳ ವರ್ಣನೆಯಲ್ಲಿ ದರ್ಶಿನಿ 7ನೇ ತರಗತಿ ದ್ವಿತೀಯ (ಮಾಡ್ಲೆಕೊಚ್ಚಿ ನಿವಾಸಿ ಮೋಹನ್ ಗೌಡ ಮತ್ತು ಯಶೋಧ ದಂಪತಿಗಳ ಪುತ್ರಿ), ಆಶುಭಾಷಣ ಶಿವಾನಿ ರೈ 7ನೇ ತರಗತಿ ಪ್ರಥಮ (ಶಿಬರ ನಿವಾಸಿ ಸೋಮನಾಥ ರೈ ಮತ್ತು ವಸಂತಿ ದಂಪತಿಗಳ ಪುತ್ರಿ), ಪ್ರಬಂಧ ಶ್ರೀನಿಧಿ ಆಚಾರ್ಯ 7ನೇ ತರಗತಿ ದ್ವಿತೀಯ (ಕಬಕ ನಿವಾಸಿ ಆನಂದ ಆಚಾರ್ಯ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರಿ), ಚಿತ್ರಕಲೆ ವಿಘ್ನೇಶ್ ವಿಶ್ವಕರ್ಮ 6ನೇ ತರಗತಿ ತೃತೀಯ (ಬೀರಮಲೆ ನಿವಾಶಿ ನಾಗೇಂದ್ರ ಆಚಾರ್ಯ ಮತ್ತು ಚಂದ್ರಿಕಾ ದಂಪತಿಗಳ ಪುತ್ರ) ಬಹುಮಾನ ಪಡೆದಿರುತ್ತಾರೆ. ಹಾಗೂ ಪ್ರೌಢಶಾಲಾ ವಿಭಾಗದ ಪೆÇೀಸ್ಟರ್ ಮೇಕಿಂಗ್ ಅಗಮ್ಯ 10ನೇ ತರಗತಿ ಪ್ರಥಮ (ನೆಕ್ಕಿಲ ನಿವಾಸಿ ಗಣೇಶ್ ಆಚಾರ್ಯ ಮತ್ತು ಮಂಜುಳಾ ದಂಪತಿಗಳ ಪುತ್ರಿ), ಪ್ರಬಂಧ ಸ್ಪರ್ಧೆಯಲ್ಲಿ – ಭುವಿ 8ನೇ ತರಗತಿ ದ್ವಿತೀಯ (ಆರ್ಲಪದವು ನಿವಾಸಿ ರಾಮಕುಮಾರ್ ಮತ್ತು ಸುಮನಾ ದಂಪತಿಗಳ ಪುತ್ರಿ) ಬಹುಮಾನ ಪಡೆದಿರುತ್ತಾರೆ.

 

Highslide for Wordpress Plugin