ವಿಧಾನಸಭಾ ಅಧಿವೇಶನ ಕಾರ್ಯಕಲಾಪಗಳ ಬಗ್ಗೆ ಮಾಹಿತಿ ಕಾರ್ಯಾಗಾರ

” ಅರ್ಥಪೂರ್ಣ ಚರ್ಚೆಗಳಿಂದ ಸಮರ್ಪಕ ಮಸೂದೆ ಮಂಡನೆ ಸಾಧ್ಯ” -ಶ್ರೀ ಲಕ್ಷ್ಮಿಕಾಂತ್, ಪ್ರಾಧ್ಯಾಪಕರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು.

ನಮ್ಮ ಶಾಲಾ ‘ಸಮನ್ವಯ‘ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ನಡೆದಂತಹ ವಿಧಾನಸಭಾ ಅಧಿವೇಶನ ಕಾರ್ಯಕಲಾಪಗಳು ಯಾಕೆ ? ಹೇಗೆ ?ಎಂಬ ವಿಷಯದ ಕುರಿತು ಮಾತನಾಡಿದ ಶ್ರೀಯುತ ಲಕ್ಷ್ಮೀಕಾಂತ್ ಇವರು ಮಾದರಿ ಸಂಸತ್ತು ಮತ್ತು ಅಣಕು ಸಂಸತ್ತಿನ ನಡುವಿನ ಭಿನ್ನತೆಯನ್ನು ತಿಳಿಸುತ್ತಾ ಅಧಿವೇಶನದ ಪ್ರಾಮುಖ್ಯತೆಯ ಮಾಹಿತಿ ನೀಡಿದರು. ಸಂಘದ ಸಂಯೋಜಕ ಸಹಶಿಕ್ಷಕರಾದ ಲೀಲಾವತಿ ಹಾಗೂ ಶ್ರೀಮತಿ ಗೀತಾ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಶಾಲಾ ಸಹಶಿಕ್ಷಕರಾದ ಶ್ರೀಯುತ ರಾಮನಾಯ್ಕ್ ಸಭಾಧ್ಯಕ್ಷತೆ ವಹಿಸಿದ್ದರು.

Highslide for Wordpress Plugin