ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ದಿನಾಂಕ ೧೩.೧೦.೨೦೧೨ ರಂದು ಹರಿಕಥಾ ಮತ್ತು ಭಾವಗಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಫಾಟನೆಯನ್ನು ಶ್ರೀಮತಿ ವಿದ್ಯಾ ಕಾಂಚನ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರಿ ರವೀಂದ್ರ.ಪಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಶ್ರೀಮತಿ ಆಶಾಬೆಳ್ಳಾರೆ ಉಪಸ್ಥಿತರಿದ್ದರು.
ಬಳಿಕ ಚಿ. ಗೌರೀಶ ಕಾರಂತ ರಿಂದ ಭಕ್ತಮಾರ್ಕಂಡೇಯ ಎಂಬ ಹರಿಕಥಾ ಭಾಗವತ ನಡೆಯಿತು. ನಂತರ ಶಾಲಾ ವಿದ್ಯಾರ್ಥಿನಿಯರಿಂದ ಭಾವಗಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿರೂಪಣೆ ಹಾಗೂ ಸಂಯೋಜನೆಯನ್ನು ಮಧುರಕಾನನ ಶ್ರೀ ಗಣಪತಿ ಭಟ್ ರವರು ನೆರವೇರಿಸಿದರು.