ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೨೦೧೨-೧೩ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ದಿನಾಂಕ ೧೪.೧೦.೧೨ ರಂದು ಶಾಲಾ ವಠಾರದಲ್ಲಿ ನಡೆಸಲಾಯಿತು. ಸಭೆಯ ಪ್ರಾರಂಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಯಶ್ವಿತ್ ಕುಮಾರ್ ಅಮೀನ್, ಅಭಿಷೇಕ್.ಡಿ ಹಾಗೂ ಇತರರು ಸಿದ್ಧಪಡಿಸಿದ ವಿಕಸನ ವಾರ್ತಾಸಂಚಿಕೆಯ ವೀಡಿಯೋ ಚಿತ್ರಣವನ್ನು ಪ್ರದರ್ಶಿಸಿ ಅವರ ಸಾಧನೆಯನ್ನು ಶ್ಲಾಘಿಸಲಾಯಿತು. ನಂತರ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆರಿಸಲಾಯಿತು.
ಸಂಘದ ಅಧ್ಯಕ್ಷರಾಗಿ ಪುನೀತ್ ಎನ್.ಎ, ಉಪಾಧ್ಯಕ್ಷರಾಗಿ ಅಂಕಿತಾ.ಜಿ, ಕಾರ್ಯದರ್ಶಿಯಾಗಿ ವಿರೂಪಾಕ್ಷ ಭಟ್, ಸಹಕಾರ್ಯದರ್ಶಿಯಾಗಿ ಜ್ಯೋತಿಶ್ರೀ ಹಾಗೂ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.