ಚಿಕ್ಕಂದಿನಲ್ಲಿ ಇತರ ಮಕ್ಕಳಂತೆ ಬಾಲ್ಯ ಸಹಜ ಚೇಷ್ಟೆಗಳನ್ನು ತೋರುತ್ತಾ ಬೆಳೆದ ನರೇಂದ್ರ ದೊಡ್ಡವನಾಗಿ ಮಹಾ ತೇಜಸ್ವಿ ವಿವೇಕಾನಂದರಾಗಿ ಜಗದ್ವಿಖ್ಯಾತರಾದಂತೆ ಮಕ್ಕಳೆಲ್ಲರೂ ಅವರ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಶ್ರೀಮತಿ ಶ್ರೀದೇವಿ ಕಾನಾವು ಇವರು ದಿನಾಂಕ ೨೬.೦೧.೨೦೧೩ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರುಗಿದ ಸಾಮೂಹಿಕ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಮೇಲಿನ ಮಾತುಗಳನ್ನಾಡಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ಯಾಮಪ್ರಸಾದ ಶಾಸ್ತ್ರೀಗಳು ಶುಭ ಹಾರೈಸಿದರು. ಶ್ರೀಮತಿ ದಾಕ್ಷಾಯಿಣಿ ಮಾತಾಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಸ್ವಾತಿ ಸ್ವಾಗತಿಸಿ, ಕು. ರೇಶ್ಮಾ ವಂದಿಸಿದರು. ಶ್ರೀ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.