ದಿನಾಂಕ ೦೬.೦೧.೨೦೧೩ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗಾನ-ನೃತ್ಯ-ಯಕ್ಷ ಸಂಭ್ರಮವು ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ಹಿರಿಯ ವಿದ್ಯಾರ್ಥಿಗಳಾದ ಶರಣ್ ಕುಮಾರ್ ಮತ್ತು ದಿವ್ಯಾ.ಬಿ.ಕೆ ರವರು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿದರು. ಇದಾದ ಬಳಿಕ ಸಂಗೀತಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳ ‘ಗಾನ ಸಿಂಚನ’ ನಡೆಯಿತು. ಸುಮಾರು ೪.೩೦ ಗಂಟೆಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶ್ರೀ ಪಿ.ಕಮಲಾಕ್ಷ ಆಚಾರ್ ರವರು ಮಾತನಾಡಿ ಸಂಗೀತ, ಭರತನಾಟ್ಯ, ಯಕ್ಷಗಾನಗಳನ್ನು ಅಭ್ಯಾಸ ಮಾಡುವುದರೊಂದಿಗೆ ವಿದ್ಯಾರ್ಥಿಗಳು ತಮ್ಮ ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಾವೇ ತೊಡಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಮುಖ್ಯ ಅಥಿಥಿಗಳಾಗಿ ಆಗಮಿಸಿದ ಶ್ರಿ ಗಣರಾಜ್ ಕುಂಬ್ಳೆ ಹಾಗೂ ಶ್ರೀ ರಾಮಕೃಷ್ಣ ಭಟ್ ಯು.ಎಸ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ‘ಗಾನ-ನೃತ್ಯ-ಯಕ್ಷ’ ತರಬೇತಿಯನ್ನು ಪ್ರಾರಂಭಿಸುವಲ್ಲಿ ಸಲಹೆ, ಸಹಕಾರ ನೀಡಿದ ಶ್ರೀ ಎಂ.ಎಸ್. ರಘುನಾಥ ರಾವ್ ಹಾಗೂ ಮಣಿಲ ಮಹಾದೇವ ಶಾಸ್ತ್ರೀ ರವರನ್ನು ಆರಂಭದ ಯಕ್ಷಗುರು ಶ್ರೀ ಶ್ರೀಧರ ಭಂಡಾರಿಯವರನ್ನು ಸನ್ಮಾನಿಸಲಾಯಿತು.
ಇದೇ ವೇದಿಕೆಯಲ್ಲಿ ಗುರುತ್ರಯರಾದ ಶ್ರೀಮತಿ ವಿದ್ಯಾಶ್ರೀ ರಾಧಕೃಷ್ಣ, ಶ್ರೀ ಕೃಷ್ಣ ಆಚಾರ್ ಹಾಗೂ ಶ್ರೀ ರಮೇಶ್ ಶೆಟ್ಟಿ ಬಾಯಾರ್‌ರವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಹಾಗೂ ಸಂಚಾಲಕರಾದ ಶ್ರೀ ರವೀಂದ್ರ.ಪಿ , ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಭರತನಾಟ್ಯ ಕಾರ್ಯಕ್ರಮ ನಡೆಯಿತು, ನಂತರ ಯಕ್ಷಗಾನ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಕೃಷ್ಣಾ, ಕೃಷ್ಣಾ, ಶ್ರೀಕೃಷ್ಣಾ ಎಂಬ ಯಕ್ಷಗಾನವು ಜರುಗಿತು, ಕಾರ್ಯಕ್ರಮದ ಸ್ವಾಗತವನ್ನು ಮಧುರಕಾನನ ಗಣಪತಿ ಭಟ್ ಮತ್ತು ಧನ್ಯವಾದವನ್ನು ಶ್ರೀವಸಂತ ಸುವರ್ಣ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರಿಮತಿ ಉಮಾಮೋಹನ್ ಮತ್ತು ಶ್ರೀ ಚಂದ್ರಶೇಖರ್ ರವರು ನೆರವೇರಿಸಿದರು.