ಸ್ವಾಮಿ ವಿವೇಕಾನಂದ ೧೫೦ನೇ ವರ್ಷಾಚರಣೆ ಹಾಗೂ ವಿವೇಕಾನಂದ ಜಯಂತಿ ಕಾರ್ಯಕ್ರಮ ವೈವಿಧ್ಯ ಕಿರಿಯ ಪ್ರಾಥಮಿಕ ಮಕ್ಕಳಿಗೆ ಮಕ್ಕಳು ವಿವೇಕಾನಂದರ ವೇಷ ಧರಿಸಿ ವಿವೇಕಾನಂದ ಮಾದರಿ ಶಿಶು ಮಂದಿರದ ಮೆರವಣಿಗೆಯಲ್ಲಿ ಪಾಲ್ಗೊಂಡರು.
ವಿವೇಕಾನಂದರ ನುಡಿಮುತ್ತುಗಳು ಹಾಗೂ ಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹಿರಿಯ ಪ್ರಾಥಮಿಕ ಮಕ್ಕಳಿಗೆ ವಿವೇಕಾನಂದ ಬಾಲ್ಯ, ವಿವೇಕಾನಂದರ ಶಿಕ್ಷಣ ಹಾಗೂ ಸ್ವದೇಶ ಪ್ರೇಮದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವೇಕಾನಂದ ಕಾಲೇಜಿನಲ್ಲಿ ಜರುಗಿದ ವಿವೇಕಾನಂದ ಜಯಂತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಎಲ್ಲಾ ಮಕ್ಕಳಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.