ಜಿಲ್ಲಾಮಟ್ಟದ ಭಾರ ಎತ್ತುವ ಸ್ಪರ್ಧೆ

ಜಿಲ್ಲಾಮಟ್ಟದ ಭಾರ ಎತ್ತುವ ಸ್ಪರ್ಧೆ

Thursday, September 3rd, 2026

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ ಇವರ  ವತಿಯಿಂದ ಸೈಂಟ್ ರೀಟಾ ಆಂಗ್ಲಮಾಧ್ಯಮ ಶಾಲೆ ವಿಟ್ಲ ಇಲ್ಲಿ ನಡೆದ ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ   ಶಾಲೆಯ ಶರಣ್- 4ನೇ ಸ್ಥಾನ , ನಿಖಿಲ್ – 5ನೇ ಸ್ಥಾನ ಪಡೆದಿರುತ್ತಾನೆ. ಶ್ರೇಯಸ್ ಉತ್ತಮ ಪ್ರದರ್ಶನ ನೀಡಿರುತ್ತಾನೆ.

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ - ಜಿಲ್ಲಾಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ – ಜಿಲ್ಲಾಮಟ್ಟಕ್ಕೆ ಆಯ್ಕೆ

Thursday, September 3rd, 2026

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ – ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಇವರ ವತಿಯಿಂದ ಪ್ರಗತಿ ಆಂಗ್ಲಮಾಧ್ಯಮ ಶಾಲೆ ಕಾಣಿಯೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಧನ್ವಿತ್ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಯೋಗ-ಸಾಂಪ್ರಾದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. 14ರ ವಯೋಮಾನದ ರಿದಮಿಕ್ ಗುಂಪಿನಲ್ಲಿ ಶ್ರೇಯಸ್ ಮತ್ತು ಸಮರ್ಥ್ ದ್ವಿತೀಯ ಸ್ಥಾನ ಮತ್ತು ಸಾಂಪ್ರಾದಾಯಿಕ ವಿಭಾಗದಲ್ಲಿ ಜಿತನ್ […]

ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ ಕ್ರೀಡಾ ದಿನಾಚರಣೆ

ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ ಕ್ರೀಡಾ ದಿನಾಚರಣೆ

Tuesday, September 1st, 2026

“ಮೇಜರ್ ಧ್ಯಾನ್ ಚಂದ್ ಭಾರತ ಕಂಡ ಶ್ರೇಷ್ಠ ಕ್ರೀಡಾ ಸಾಧಕರಲ್ಲಿ ಓರ್ವರಾಗಿದ್ದಾರೆ. ಕ್ರೀಡಾ ಮನೋಭಾವದೊಂದಿಗೆ ದೇಶ ಪ್ರೇಮವನ್ನು ಜಗತ್ತಿಗೆ ಸಾರಿದ ಕ್ರೀಡಾಪಟು ಆಗಿದ್ದರು. ಇವರ ಕಥೆಯನ್ನು ಓದುವಾಗ ನಮ್ಮಲ್ಲೂ ಕ್ರೀಡಾಸ್ಫೂರ್ತಿ ಉಂಟಾಗುತ್ತದೆ’’ ಎಂದು ಶಾಲಾ ವಿದ್ಯಾರ್ಥಿನಿ ಮೌಲ್ಯ ಇವರು ಮೇಜರ್ ಧ್ಯಾನ್ ಚಂದ್ ಅವರ ಘಟನೆಗಳನ್ನು ಉಲ್ಲೇಖಿಸುತ್ತಾ ಕ್ರೀಡಾ ದಿನದ ಮಹತ್ವವನ್ನು ತಿಳಿಸಿದರು. ಅನಂತರ ಹಾಕಿಯ ಬಗ್ಗೆ ಪ್ರಾತ್ಯಕ್ಷಿಕಾ ಮಾಹಿತಿಯನ್ನು ಮಕ್ಕಳಿಗೆ ನೀಡಲಾಯಿತು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ನಮಿತಾ ಇವರು ಸಂಯೋಜಿಸಿದರು.

ರಕ್ಷಾ ಬಂಧನ ಆಚರಣೆ

ರಕ್ಷಾ ಬಂಧನ ಆಚರಣೆ

Tuesday, September 1st, 2026

“ರಕ್ಷಾ ಬಂಧನವು ಮಕ್ಕಳಲ್ಲಿ ಸಹೋದರತ್ವ, ಪ್ರೀತಿ, ವಿಶ್ವಾಸ     ಸಂಬಂಧಗಳ ಮಹತ್ವವನ್ನು ಮೂಡಿಸಲು ಸಹಕಾರಿಯಾಗಿದೆ. ಬಾಲ್ಯದಿಂದಲೇ ಈ ಬಗೆಯ ಆಚರಣೆಗಳ ಮಹತ್ವವನ್ನು ತಿಳಿಯುತ್ತಾ ಬೆಳೆದ ನಾವು ಕೌಟುಂಬಿಕ ಮೌಲ್ಯಗಳನ್ನು, ನಾಗರಿಕ ಪ್ರಜ್ಞೆಗಳನ್ನು, ಪರ್ಯಾವರಣ ಸಂರಕ್ಷಣೆಯ ಅಗತ್ಯತೆಯನ್ನು, ಸಾಮಾಜಿಕ ಸಾಮರಸ್ಯ ಭಾವನೆಯನ್ನು ಮೂಡಿಸಿಕೊಳ್ಳುತ್ತಾ ಮುಂದೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತೇವೆ. ಹಾಗಾಗಿ ಶಾಲೆ ಪಠ್ಯದೊಂದಿಗೆ ಪಠ್ಯಪೂರಕ ಚಟುವಟಿಕೆಗಳಾದ ಸಾಂಸ್ಕøತಿಕ, ಸಾಹಿತ್ಯ, ಕ್ರೀಡೆ ಮತ್ತು ಸಾಂಪ್ರದಾಯಿಕ ಮೌಲ್ಯಗಳ ವೈಜ್ಞಾನಿಕ ಅರಿವನ್ನು ಬೆಳೆಸಬೇಕು’’ ಎಂದು ಅಭ್ಯಾಗತರಾಗಿ ಆಗಮಿಸಿದ ಮನೀಷ್ ಅಡೂರ್ ಇವರು […]

ವಲಯ ಮಟ್ಟದ ಕಬಡ್ಡಿ ಪಂದ್ಯಾಟ -ತಾಲೂಕು ಮಟ್ಟಕ್ಕೆ ಆಯ್ಕೆ

ವಲಯ ಮಟ್ಟದ ಕಬಡ್ಡಿ ಪಂದ್ಯಾಟ -ತಾಲೂಕು ಮಟ್ಟಕ್ಕೆ ಆಯ್ಕೆ

Friday, August 28th, 2026

                                           14ರ ವಯೋಮಾನದ ಬಾಲಕರ ತಂಡ                  17ರ ವಯೋಮಾನದ ಬಾಲಕರ ತಂಡ                  17ರ ವಯೋಮಾನದ ಬಾಲಕಿಯರ ತಂಡ   ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ […]

ವಲಯ ಮಟ್ಟದ ಖೋ-ಖೋ ಪಂದ್ಯಾಟ - ತಾಲೂಕು ಮಟ್ಟಕ್ಕೆ ಆಯ್ಕೆ

ವಲಯ ಮಟ್ಟದ ಖೋ-ಖೋ ಪಂದ್ಯಾಟ – ತಾಲೂಕು ಮಟ್ಟಕ್ಕೆ ಆಯ್ಕೆ

Friday, August 28th, 2026

  ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹ ಯೋಗದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ರೀಡಾಂಗಣ ಇಲ್ಲಿ ನಡೆದ ವಲಯಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕ/ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಜಿಲ್ಲಾಮಟ್ಟದ ಬ್ಯಾಂಡ್ ಸ್ಪರ್ಧೆ  – ವಿಭಾಗ ಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಬ್ಯಾಂಡ್ ಸ್ಪರ್ಧೆ – ವಿಭಾಗ ಮಟ್ಟಕ್ಕೆ ಆಯ್ಕೆ

Wednesday, August 26th, 2026

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಇದರ ವತಿಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ 14/17ರ ವಯೋಮಾನದ ಬ್ಯಾಂಡ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್.  

ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Thursday, August 20th, 2026

ಪುತ್ತೂರು: ದೇಶಭಕ್ತಿ, ರಾಷ್ಟ್ರಪ್ರೇಮ ಹಾಗೂ ಸ್ವಾತಂತ್ರ್ಯದ ಅಮೃತ ಮೌಲ್ಯಗಳನ್ನು ಸ್ಮರಿಸುವ 80ನೇ ಸ್ವಾತಂತ್ರ್ಯೋತ್ಸವವನ್ನು ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ ಅತ್ಯಂತ ಸಂಭ್ರಮ, ಶಿಸ್ತು ಹಾಗೂ ವೈಭವದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಸೈನಿಕ ಹಾಗೂ ಐಶ್ವರ್ಯ ಕನ್ಸ್ಟ್ರಕ್ಷನ್ಸ್‍ನ ಮಾಲಕರಾದ ಶ್ರೀಯುತ ರವಿಶಂಕರ್ ಭಟ್ ಅವರು ರಾಷ್ಟ್ರಧ್ವಜವನ್ನು ಆರೋಹಣಗೊಳಿಸಿ, ಧ್ವಜವಂದನೆ ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನುದ್ದೇಶಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮತ್ತು ಬಲಿದಾನಗೈದ ಮಹನೀಯರ ಆದರ್ಶಗಳು ಹಾಗೂ […]

ಜಿಲ್ಲಾಮಟ್ಟದ ಜ್ಞಾನ – ವಿಜ್ಞಾನ ಮೇಳ -ಪ್ರಾಂತೀಯ ಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಜ್ಞಾನ – ವಿಜ್ಞಾನ ಮೇಳ -ಪ್ರಾಂತೀಯ ಮಟ್ಟಕ್ಕೆ ಆಯ್ಕೆ

Friday, August 14th, 2026

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ,ಇದರ ವತಿಯಿಂದ  ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪುತ್ತೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ  ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಪ್ರಾಂತೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲವರ್ಗದ  ವಿಭಾಗದಲ್ಲಿ – ಅಭಿನವ್ ಪಿ.ಎನ್ –ಇನ್ನೋವೇಟಿವ್ ಮಾದರಿ ವಿಭಾಗದಲ್ಲಿ – ಪ್ರಥಮ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ – ಶ್ರೇಯಸ್ ಎ,ಜೆ, ಅಂಜಲಿ, ಸುದೀಪ್ತ ಇವರ ತಂಡ –  ಪ್ರಥಮ, ಕಥಕಥನ ಸ್ಪರ್ಧೆ – […]

ಕಲಾಚಿತ್ರ ಸ್ಪರ್ಧೆ - ಲಿಖಿತಾ ಜಿಲ್ಲಾಮಟ್ಟಕ್ಕೆ ಆಯ್ಕೆ

ಕಲಾಚಿತ್ರ ಸ್ಪರ್ಧೆ – ಲಿಖಿತಾ ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, August 11th, 2026

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಅಂತರ್ಜಲ ಸಂರಕ್ಷಣೆ ಮತ್ತು ಸದ್ಬಳಕೆ ವಿಷಯದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಕಲಾಚಿತ್ರ ಸ್ಪರ್ಧೆಯು ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿ ನಡೆದಿದ್ದು ಇದರಲ್ಲಿ  ಲಿಖಿತಾ ಕೆ – ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಆಚರಣೆ

Wednesday, August 5th, 2026

ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಶಾಲಾ ಸಹಶಿಕ್ಷಕಿ ಕು. ಪ್ರತೀಕ್ಷಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ 5ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಹುತಾತ್ಮರಾದ ವೀರಯೋಧರ ಕುರಿತು ಸ್ವಗತ – ಪರಿಚಯ ಮಾಡಿಕೊಳ್ಳುವ ಮೂಲಕ ಹುತಾತ್ಮರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು. ವಿದ್ಯಾರ್ಥಿಗಳಿಂದ ಕೆಲವು ಹುತಾತ್ಮರಾದ ಹಾಗೂ ನಿವೃತ್ತ ಜೀವನವನ್ನು ಸಾಗಿಸುತ್ತಿರುವ  ವೀರಯೋಧರ ಭಾವಚಿತ್ರವನ್ನು ಬಿಡಿಸುವ ಸ್ಪರ್ಧೆಯನ್ನು  ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ನಂತರ ವಿದ್ಯಾರ್ಥಿಗಳು ಬಿಡಿಸಿದ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Wednesday, August 5th, 2026

 ಶಾಲಾ ‘ಮಹತಿ’ ಕನ್ನಡ ಸಂಘದ ವತಿಯಿಂದ ಗುರುಪೂರ್ಣಿಮೆ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ರೇವತಿ ಇವರು ಮಾತನಾಡಿ “ ಗುರುಗಳ ಮಾರ್ಗದರ್ಶನವನ್ನು ಪ್ರಾಮಾಣಿಕವಾಗಿ ಅನುಸರಿಸಿದವನಿಗೆ ಜೀವನದಲ್ಲಿ ಎಂದಿಗೂ ಸೋಲೆಂಬುದು ಇರುವುದಿಲ್ಲ” ಎಂದು ಹೇಳಿ ಗುರುಪೂರ್ಣಿಮೆಯ ವಿಶೇಷತೆಯನ್ನು ತಿಳಿಸಿದರು. ವಿದ್ಯಾರ್ಥಿಗಳಾದ ಮೌಲ್ಯ, ಶ್ರುತಿ, ಸೃಜನ್ ಇವರು ಸಮರ್ಥ ರಾಮದಾಸ-ಛತ್ರಪತಿ ಶಿವಾಜಿ, ಮಹರ್ಷಿ ವೇದವ್ಯಾಸ, ದ್ರೋಣಾಚಾರ್ಯ-ಅರ್ಜುನರ ಗುರು ಶಿಷ್ಯ ಸಂಬಂಧದ ಬಗ್ಗೆ ಘಟನೆಗಳೊಂದಿಗೆ ತಿಳಿಸಿದರು.  ಶಾಲೆಯ ಎಲ್ಲಾ ಗುರು ವೃಂದದವರು ವ್ಯಾಸ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗುರುನಮನ […]

ತಾಲೂಕು ಮಟ್ಟದ ಸ್ಪರ್ಧೆ – ಪ್ರಶಸ್ತಿ

ತಾಲೂಕು ಮಟ್ಟದ ಸ್ಪರ್ಧೆ – ಪ್ರಶಸ್ತಿ

Wednesday, July 1st, 2026

                                ಬಿ.ವಿ ತನ್ವೀಶ್              ಶೃತಿ ಎಸ್ ನಾಯಕ್   ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಿ.ವಿ ತನ್ವೀಶ್ – ಪ್ರಾಥಮಿಕ ಶಾಲಾ […]

ಅಂತರಾಷ್ಟ್ರೀಯ ಯೋಗ ದಿನ ಆಚರಣೆ

ಅಂತರಾಷ್ಟ್ರೀಯ ಯೋಗ ದಿನ ಆಚರಣೆ

Wednesday, June 24th, 2026

ವಿದ್ಯಾರ್ಥಿಗಳ ಏಕಾಗ್ರತೆ, ಆರೋಗ್ಯವೃದ್ಧಿಗೆ ಯೋಗ ಉತ್ತಮ ಸಾಧನ -ವಸಂತ ಸುವರ್ಣ ಶಾಲಾ ಸ್ವಾಸ್ಥ್ಯ ಯೋಗ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ಅಭ್ಯಾಗತರೂ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕರೂ ಆದ ವಸಂತ ಸುವರ್ಣರವರು “ ಯೋಗಾಭ್ಯಾಸವು ನಮ್ಮ ದೇಹವನ್ನು ಸದೃಢವಾಗಿರಿಸುತ್ತದೆ ಮತ್ತು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಪ್ರಾಣಾಯಾಮ, ಧ್ಯಾನ ಮತ್ತು ವಿವಿಧ ಆಸನಗಳು ದೇಹಕ್ಕೆ ಚೈತನ್ಯವನ್ನು ನೀಡುತ್ತವೆ. ವಿದ್ಯಾರ್ಥಿಗಳಿಗೆ ಯೋಗ ಅತ್ಯಂತ ಉಪಯುಕ್ತವಾಗಿದೆ ಏಕೆಂದರೆ ಇದು ಏಕಾಗ್ರತೆಯನ್ನು ಹೆಚ್ಚಿಸಿ ನೆನಪಿನ ಶಕ್ತಿಯನ್ನು […]

2026-27ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆ

2026-27ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆ

Wednesday, June 24th, 2026

                               ಸಾಯೀಶ್ವರಿ.ಡಿ                                      ಹಿಮಾನಿ                                        ಶೃತಿ ಎಸ್ ನಾಯಕ್    […]

ವ್ಯವಸ್ಥಿತ ಸುಂದರ ಶಾಲಾ ಪರಿಸರವು ಮಗುವಿನ ಉತ್ತಮ ಕಲಿಕೆಗೆ ಸಹಕಾರಿ – ಗಣೇಶ್ ಭಟ್

ವ್ಯವಸ್ಥಿತ ಸುಂದರ ಶಾಲಾ ಪರಿಸರವು ಮಗುವಿನ ಉತ್ತಮ ಕಲಿಕೆಗೆ ಸಹಕಾರಿ – ಗಣೇಶ್ ಭಟ್

Monday, June 15th, 2026

  2026-27ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಹಾಗೂ  ಪೋಷಕರಿಗೆ ಆಗತ – ಸ್ವಾಗತ ಸಂಭ್ರಮ ಕಾರ್ಯಕ್ರಮ ನಡೆಯಿತು. ಶಾಲಾ ‘ಮಹತಿ’ ಕನ್ನಡ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಉಷಾ ಮೆಡಿಕಲ್ಸ್ ಪುತ್ತೂರು ಇಲ್ಲಿನ ಮಾಲಕರಾದ ಶ್ರೀ ಪಿ ಗಣೇಶ್ ಭಟ್ ಇವರು “ಸುಸಜ್ಜಿತ, ಸುವ್ಯವಸ್ಥಿತ, ಸುಂದರ ಶಾಲಾ ಪರಿಸರವು ಮಗುವಿನ ಉತ್ತಮ ಕಲಿಕೆಗೆ ಸಹಕಾರಿ” ಎಂದು ಹೇಳಿದರು.   ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ […]

ಪವರ್ ಪಾಯಿಂಟ್ ಪ್ರೆಸೆಂಟೇಷನ್ - ಪ್ರಥಮ

ಪವರ್ ಪಾಯಿಂಟ್ ಪ್ರೆಸೆಂಟೇಷನ್ – ಪ್ರಥಮ

Thursday, May 28th, 2026

ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ Tech spark Summer Camp 2026 ಇದರಲ್ಲಿ ನಮ್ಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಭಿನವ್ ಪಿ ಎನ್, ಪವರ್ ಪಾಯಿಂಟ್ ಪ್ರೆಸೆಂಟೇಷನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಹಾಗೆಯೇ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಾದ CGI ಕ್ಯಾಂಪಸ್, ಯಮಲೂರು ಇಲ್ಲಿಗೆ ಭೇಟಿ ನೀಡುವ ಅವಕಾಶವನ್ನುಗಳಿಸಿಕೊಂಡಿರುತ್ತಾನೆ.

 ಸ್ಮಾರ್ಟ್ ಬೋರ್ಡ್ ಕಲಿಕಾ ಪ್ರಕ್ರಿಯೆಗೆ ಚಾಲನೆ

 ಸ್ಮಾರ್ಟ್ ಬೋರ್ಡ್ ಕಲಿಕಾ ಪ್ರಕ್ರಿಯೆಗೆ ಚಾಲನೆ

Thursday, May 28th, 2026

ಪ್ರಸ್ತುತದ ಸಮಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತಿದ್ದು, ಸ್ಮಾರ್ಟ್ ಬೋರ್ಡ್ ಬಳಸಿ ನಡೆಯುತ್ತಿರುವ ಕಲಿಕಾ ಪ್ರಕ್ರಿಯೆ ಪರಿಣಾಮಕಾರಿ ಮಾಧ್ಯಮವಾಗಿದೆ. ಆ ಮೂಲಕ ಮಕ್ಕಳೇ ಸ್ಮಾರ್ಟ್ ಆಗಿ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನಾನು ವಿವೇಕಾನಂದ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ನಮ್ಮೀ ಕನ್ನಡ ಶಾಲೆಗೆ ನೀಡಲಾಗುತ್ತಿರುವ ಸಹಕಾರಕ್ಕಾಗಿ ಹೆಮ್ಮೆ ಇದೆ ಎಂದು ಲಯನ್ಸ್ ಜಿಲಾ ಪಿ.ಆರ್.ಒ ವಿ.ಎನ್ ಸುದರ್ಶನ್ ಪಡಿಯಾರ್ ಇವರು ನುಡಿದರು. ವಿವೇಕಾನಂದ ಕನ್ನಡ ಶಾಲೆಗೆ ಪುತ್ತೂರು ಲಯನ್ಸ್ ಕ್ಲಬ್ ವತಿಯಿಂದ ಸ್ಮಾರ್ಟ್ ಬೋರ್ಡ್ ನೀಡಲಾಗಿದ್ದು ಇದರ […]

ಕಲಿಕಾ - ಹರ್ಷ ಬೇಸಿಗೆ ಶಿಬಿರ

ಕಲಿಕಾ – ಹರ್ಷ ಬೇಸಿಗೆ ಶಿಬಿರ

Tuesday, March 17th, 2026

“ಪ್ರತಿಯೊಬ್ಬನಲ್ಲೂ ಒಬ್ಬ ಸಾಧಕನಿದ್ದಾನೆ; ನಮ್ಮೊಳಗಿನ ಸಾಧಕನನ್ನು ಗುರುತಿಸಿ ಸಾಧನೆಯ  ಕಡೆಗೆ ಮುನ್ನಡೆಯಬೇಕು” ಎಂದು ಶಾಲಾ ಹಿರಿಯ ವಿದ್ಯಾರ್ಥಿನಿ ಕು. ಶ್ರೀರಕ್ಷಾ ಶುಭ ಹಾರೈಸಿದರು.  ಶಾಲೆಯಲ್ಲಿ ಕಲಿಕಾ- ಹರ್ಷ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿ ಅವರು ಮಾತನಾಡಿದರು. ಶಾಲಾ ಹಿರಿಯ ವಿದ್ಯಾರ್ಥಿನಿ ಕು. ಗಗನ ಇವರು “ನಮ್ಮೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸಲು ಕಲಿಕಾ ಶಿಬಿರವು ವೇದಿಕೆಯಾಗಿದೆ” ಎಂದು ಪ್ರೋತ್ಸಾಹ ದ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ, ಶಿಬಿರ ಸಂಯೋಜಕರಾದ ಶ್ರೀಮತಿ […]

2026-27ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ

2026-27ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ

Monday, March 16th, 2026
ದೀಪ ಪ್ರದಾನ ಕಾರ್ಯಕ್ರಮ

ದೀಪ ಪ್ರದಾನ ಕಾರ್ಯಕ್ರಮ

Saturday, March 14th, 2026

ಕನ್ನಡ ಮಾಧ್ಯಮದ ಕಲಿಕೆ ನನ್ನಲ್ಲಿ ವೈಯಕ್ತಿಕ ಮತ್ತು ಸಾಮಾಜಿಕ ಸೂಕ್ಷ್ಮತೆಯನ್ನು ಬೆಳೆಸಿದೆ. ಮಾಧ್ಯಮ ಯಾವುದೆನ್ನುವುದಕ್ಕಿಂತಲೂ ವಿದ್ಯಾರ್ಥಿಯ ಕಲಿಕಾಸಕ್ತಿ,  ಪೋಷಕರ     ಸಹಕಾರ-ಬೆಂಬಲ ಮಗುವಿನ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಸಂದೀಪ್ ಇವರು  ನುಡಿದರು. ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಸಾಲಿನ ಹತ್ತನೇ ತರಗತಿಯ ಮಕ್ಕಳ ದೀಪಪ್ರದಾನ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದರು. ಭಗವದ್ಗೀತಾ ಶ್ಲೋಕದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಾಲಾ ಹಿರಿಯ ಪೋಷಕ ದಂಪತಿಗಳಾದ ಶ್ರೀ ಎಲ್ […]

ಮಕ್ಕಳ ಶಿಬಿರ - ಕಲಿಕಾ - ಹರ್ಷ

ಮಕ್ಕಳ ಶಿಬಿರ – ಕಲಿಕಾ – ಹರ್ಷ

Tuesday, March 3rd, 2026
ವಿಜ್ಞಾನ ಮಾದರಿ - ಪ್ರಥಮ ಸ್ಥಾನ

ವಿಜ್ಞಾನ ಮಾದರಿ – ಪ್ರಥಮ ಸ್ಥಾನ

Monday, March 2nd, 2026

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ಇಲ್ಲಿ ನಡೆದ Shell NXplorers ಮತ್ತು Learning Links Foundation ನವರ ShellNXplorers sciencecarnival – 2026 ವಿಜ್ಞಾನ ಮಾದರಿ ಪ್ರದರ್ಶನದ ಸ್ಪರ್ಧೆಯಲ್ಲಿ  ಶಾಲೆಯ ಅಭಿನವ್ ಪಿ.ಎನ್ ಮತ್ತು ವೈಭವ್ ಎನ್ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾರೆ.

2026-27ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.

2026-27ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.

Wednesday, February 18th, 2026
ಬೀರಮಲೆ ಉತ್ಸವ – 2026 -  ಪ್ರಶಸ್ತಿ

ಬೀರಮಲೆ ಉತ್ಸವ – 2026 – ಪ್ರಶಸ್ತಿ

Friday, February 13th, 2026

ಬೀರಮಲೆಬೆಟ್ಟ ಅಭಿವೃದ್ಧಿ ಯೋಜನೆ (ರಿ) ಪುತ್ತೂರು ಇದರ ವತಿಯಿಂದ ಬೀರಮಲೆ ಬೆಟ್ಟದಲ್ಲಿ ನಡೆದ ಬೀರಮಲೆ ಉತ್ಸವ – 2026 ಕಾರ್ಯಕ್ರಮದಲ್ಲಿ ಆಯೋಜಿಸಿದ ಸ್ಪರ್ಧೆಗಳಲ್ಲಿ  ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ : ಹಿಮಾದ್ರಿ – ಗಾಳಿಪಟ ತಯಾರಿ (ಪ್ರಥಮ), ಪ್ರೌಢ ವಿಭಾಗದಲ್ಲಿ : ವಿಘ್ನೇಶ್ ವಿಶ್ವಕರ್ಮ – ಚಿತ್ರಕಲೆ (ಪ್ರಥಮ), ಭೂಮಿಕಾ – ಚಿತ್ರಕಲೆ (ಸಮಾಧಾನಕರ ಬಹುಮಾನ), ತನ್ಮಯ್ – ಗಾಳಿಪಟ ತಯಾರಿ (ಸಮಾಧಾನಕರ ಬಹುಮಾನ) ಪಡೆದಿದ್ದಾರೆ.

ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ - ವಿದ್ಯಾರ್ಥಿಗಳಿಗೆ ಪ್ರಶಸ್ತಿ

ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ – ವಿದ್ಯಾರ್ಥಿಗಳಿಗೆ ಪ್ರಶಸ್ತಿ

Tuesday, February 10th, 2026

  ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ , ಪುತ್ತೂರು ಇನ್ನರ್ ವೀಲ್ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಸಂಘ ಶತಾಬ್ದಿಯ ಪ್ರಯುಕ್ತ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಾಥಮಿಕ ಮತ್ತು ಪ್ರೌಢ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾg. ಪ್ರಾಥಮಿಕ ವಿಭಾಗದ ತಂಡದಲ್ಲಿ : ಗರಿಮಾ ಬಿ, ಅಹಲ್ಯ ಕಾಮತ್, ಶ್ರುತಿ ಎಸ್ ನಾಯಕ್, ಮಾತಾಂಗಿ ದಿಶಾ, ಸಹನಾ ಲಕ್ಷ್ಮೀ ಪ್ರೌಢಶಾಲಾ […]

ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿವೇಕಾನಂದ ಜಯಂತಿ ಆಚರಣೆ

ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿವೇಕಾನಂದ ಜಯಂತಿ ಆಚರಣೆ

Tuesday, February 3rd, 2026

      ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ವಿವೇಕ ನಗರ ತೆಂಕಿಲ ಆವರಣದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಹಾಗೂ ಆಂಗ್ಲಮಾಧ್ಯಮ ಶಾಲೆಗಳಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಜರುಗಿತು. ಭಾರತದ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ 150ರ ಸಂಭ್ರಮಾಚರಣೆಯೊಂದಿಗೆ ವಿದ್ಯಾಸಂಸ್ಥೆಗಳ 3600 ಮಕ್ಕಳು, ಶಿಕ್ಷಕರು, ಆಡಳಿತ ಮಂಡಳಿಯವರು ಸಾಮೂಹಿಕವಾಗಿ ವಂದೇ ಮಾತರಂ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಿದರು. ಶಾಲಾ ಆವರಣದಲ್ಲಿ ಪಾಳು ಬಿದ್ದಿದ್ದ ಬಾವಿಯನ್ನು ಶುದ್ಧೀಕರಣಗೊಳಿಸುವ ಅದರ ನೀರನ್ನು ಬಳಸುವ ಸಲುವಾಗಿ ಆಯೋಜಿಸಲಾಗಿದ್ದ ಗಂಗಾ ಪೂಜೆಯಂದು ಪುತ್ತೂರು ಹಾಗೂ […]

ಪುತ್ತೂರು ಮುಖ್ಯರಸ್ತೆಯಲ್ಲಿ ‘ಶತ ಜಯ ಘೋಷ್’ ಪಥ ಸಂಚಲನ

ಪುತ್ತೂರು ಮುಖ್ಯರಸ್ತೆಯಲ್ಲಿ ‘ಶತ ಜಯ ಘೋಷ್’ ಪಥ ಸಂಚಲನ

Monday, January 19th, 2026

  ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಅಭಿದಾನವನ್ನು ಇಟ್ಟುಕೊಂಡಿರುವುದಲ್ಲದೇ ಅವರ ತತ್ವಾದರ್ಶಗಳನ್ನೂ ವಿವೇಕಾನಂದ ಶಿಕ್ಷಣ ಸಂಸ್ಥೆ ನಿರಂತರವಾಗಿ ಪಾಲಿಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷವೂ ವಿವೇಕಾನಂದ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದೆ. ಈ ಬಾರಿ ವಿಶೇಷವಾಗಿ ವಿವೇಕಾನಂದ ಜಯಂತಿಯ ಅಂಗವಾಗಿ ಜ.13ರಂದು ಬೆಳಗ್ಗೆ ‘ಶತ ಜಯ ಘೋಷ್’ ಎನ್ನುವ ಪರಿಕಲ್ಪನೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಸುಮಾರು 1500 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಘೋಷ್ ವಾದನದೊಂದಿಗೆ ಸಂಚಲನ ನಡೆಯಿತು.   ವಿವೇಕಾನಂದ ವಿದ್ಯಾವರ್ಧಕ ಸಂಘದ […]

ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ – 2025

Tuesday, January 6th, 2026

ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ – 2025

ಸ್ವದೇಶಿ ಬಳಸಿ ದೇಶ ಬೆಳೆಸಿ- ಸೈಕಲ್ ಜಾಥಾ

ಸ್ವದೇಶಿ ಬಳಸಿ ದೇಶ ಬೆಳೆಸಿ- ಸೈಕಲ್ ಜಾಥಾ

Tuesday, December 30th, 2025

ಪರಿಪೂರ್ಣ ಸನಾತನ ಟ್ರಸ್ಟ್ ವತಿಯಿಂದ ನಡೆದ “ಸ್ವದೇಶಿ ಬಳಸಿ ದೇಶ ಉಳಿಸಿ “ಸೈಕಲ್ ಜಾಥಾವು ಡಿಸೆಂಬರ್ 13 ರಂದು ಬೆಂಗಳೂರಿನಿಂದ ಹೊರಟು ಡಿಸೆಂಬರ್ 17 ರಂದು ಪುತ್ತೂರಿಗೆ ತಲುಪಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಪುತ್ತೂರಿನ ನಾಗರಿಕರು ಭವ್ಯ ಸ್ವಾಗತ ನೀಡಿ ಸೈಕಲಿಂಗ್ ನಲ್ಲಿ ಭಾಗವಹಿಸಿರುವ ಎಲ್ಲರಿಗೂ ಬೆಂಬಲ ನೀಡಿದರು. ನಿವೃತ್ತ ಯೋಧರಿಗೆ ನಮ್ಮ ಶಾಲೆಯ ವಿದ್ಯಾರ್ಥಿನಿಯರು ಆರತಿ ಬೆಳಗಿ ತಿಲಕವಿಟ್ಟು ಬರಮಾಡಿಕೊಂಡರು, ಬಳಿಕ ಯೋಧರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪುತ್ತೂರಿನ ನಿವೃತ್ತ ಯೋಧರು […]

ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ಯಾಂಪಸ್‍ಗೆ ಆಗಮಿಸಿದ ಆದಿಯೋಗಿ ರಥದ ಶಿವಯಾತ್ರೆ

ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ಯಾಂಪಸ್‍ಗೆ ಆಗಮಿಸಿದ ಆದಿಯೋಗಿ ರಥದ ಶಿವಯಾತ್ರೆ

Tuesday, December 30th, 2025

                                                                      ಈಶ ಯೋಗ ಕೇಂದ್ರವು ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ ಉಡುಪಿಯಿಂದ ಕೊಯಂಬತ್ತೂರಿನ ಈಶ ಯೋಗ ಕೇಂದ್ರಕ್ಕೆ ಆದಿಯೋಗಿ ರಥದ 70ದಿನಗಳ ಶಿವಯಾತೆಯನ್ನು ಹಮ್ಮಿಕೊಂಡಿದೆ. ಈ ಯಾತ್ರೆಯು ಶಾಲೆಯ […]

ಅಪರಾಧ ತಡೆ ಮಾಸಾಚರಣೆ -2025

ಅಪರಾಧ ತಡೆ ಮಾಸಾಚರಣೆ -2025

Tuesday, December 30th, 2025

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪುತ್ತೂರು ನಗರ ಠಾಣೆ ಇದರ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಅಪರಾಧ ತಡೆ ಮಾಸಾಚರಣೆ ಡಿಸೆಂಬರ್ 2025 ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು. ಸೈಬರ್ ಸುರಕ್ಷತೆಯ ಬಗ್ಗೆ ಮಾತನಾಡಿದ ಪುತ್ತೂರು ನಗರ ಠಾಣೆಯ ಪೊಲೀಸ್ ಉಪನೀರಿಕ್ಷಕರಾದ ಶ್ರೀ ಆಂಜನೇಯ ರೆಡ್ಡಿಯವರು “ಪ್ರತಿಯೊಂದು ಮಗುವಿನಲ್ಲಿಯೂ ಅಸಾಮಾನ್ಯವಾದ ಶಕ್ತಿ ಇದೆ. ಆದರೆ ಆ ಶಕ್ತಿ ಹೊರತರುವಲ್ಲಿ ನಮ್ಮ ಪ್ರಯತ್ನ ಬೇಕು. ಆಗ ಮಾತ್ರ ಸಾಧನೆ ಸಾಧ್ಯ” ಎಂದು ತಿಳಿಸುತ್ತಾ, ಅನಗತ್ಯ ವಿದ್ಯುನ್ಮಾನ ಉಪಕರಣಗಳ ಮಿತಬಳಕೆಯ ಬಗ್ಗೆ […]

ಶಾಲಾ ಸಾಂಸ್ಕೃತಿಕ ಸಮನ್ವಯ – ವಾರ್ಷಿಕ ಹಬ್ಬ

ಶಾಲಾ ಸಾಂಸ್ಕೃತಿಕ ಸಮನ್ವಯ – ವಾರ್ಷಿಕ ಹಬ್ಬ

Monday, December 29th, 2025
‘ವಿವೇಕ -ವಿದ್ಯಾರ್ಥಿ' - ತನ್ವಿತಾ.ಎಂ - ರಾಜ್ಯಮಟ್ಟದಲ್ಲಿ  3ನೇ ರ‍್ಯಾಂಕ್

‘ವಿವೇಕ -ವಿದ್ಯಾರ್ಥಿ’ – ತನ್ವಿತಾ.ಎಂ – ರಾಜ್ಯಮಟ್ಟದಲ್ಲಿ  3ನೇ ರ‍್ಯಾಂಕ್

Monday, December 29th, 2025

‘ಕರ್ನಾಟಕ ರಾಮಕೃಷ್ಣ- ವಿವೇಕಾನಂದ ಭಾವ ಪ್ರಚಾರ ಪರಿಷತ್’ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮಗಳು, ಶಾರದಾಶ್ರಮಗಳು ಮತ್ತು ಸೇವಾ ಸಂಸ್ಥೆಗಳು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ವಿವೇಕ -ವಿದ್ಯಾರ್ಥಿ’ ಎಂಬ ವ್ಯಕ್ತಿತ್ವ ನಿರ್ಮಾಣಕಾರಿ ಲಿಖಿತ ಪರೀಕ್ಷೆಯಲ್ಲಿ 10ನೇ ತರಗತಿಯ  ರಾಜ್ಯಮಟ್ಟದಲ್ಲಿ ತೃತೀಯ ರ‍್ಯಾಂಕ್ ಪಡೆದಿರುತ್ತಾಳೆ. ಹಾಗೆಯೇ 9ನೇ ತರಗತಿಯ ಮುಕುಂದ. ಎಸ್ ಜಿಲ್ಲಾಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿರುತ್ತಾನೆ. ಎಂಟನೇ ತರಗತಿಯ ತ್ರಿಸ್ತಾ ಮತ್ತು 9ನೇ ತರಗತಿಯ ಮೌಲ್ಯ.ಜಿ ತಾಲೂಕು ಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದಿರುತ್ತಾರೆ.

ಜಿಲ್ಲಾಮಟ್ಟದ ಪ್ರತಿಭಾಕಾರಂಜಿ – ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಪ್ರತಿಭಾಕಾರಂಜಿ – ರಾಜ್ಯಮಟ್ಟಕ್ಕೆ ಆಯ್ಕೆ

Monday, December 29th, 2025

                                                                      ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಮತ್ತು ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡಬಿದಿರೆ ಇವರ ಆಶ್ರಯದಲ್ಲಿ ಸೈಂಟ್ […]

ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Friday, December 12th, 2025

ನಡೆದ ಪ್ರೌಢವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ ಡಾ. ಸುಷ್ಮಾ ಎಂ, ಬಿಡಿಎಸ್ ಇವರು ಮಾತಾನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯ-ಪಠ್ಯಪೂರಕ ಚಟುವಟಿಕೆಯಲ್ಲಿ ಭಾಗವಹಿಸಲು ಸಾಕಷ್ಟು ಅವಕಾಶವನ್ನಿ ಈ ಶಾಲೆ ಕಲ್ಪಿಸಿಕೊಡುತ್ತದೆ. ಈ ಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು” ಎಂದರು . ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ತಿರುಮಲೇಶ್ವರ ಭಟ್ ಇವರು ಮಾತನಾಡಿ “ ಪ್ರತಿಯೊಂದು ಮಗುವಿನಲ್ಲಿ ಕೂಡ ಅಗಾಧವಾದ ಶಕ್ತಿಯಿದೆ. ಅದನ್ನು […]

ಆವಿಷ್ಕಾರ್ – 2025- ಚಿಣ್ಣರ ಚಿತ್ತಾರ ಪುಟಾಣಿಗಳಿಗೆ ಪ್ರಶಸ್ತಿ

ಆವಿಷ್ಕಾರ್ – 2025- ಚಿಣ್ಣರ ಚಿತ್ತಾರ ಪುಟಾಣಿಗಳಿಗೆ ಪ್ರಶಸ್ತಿ

Tuesday, December 9th, 2025

ವಿವೇಕಾನಂದ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ನಡೆದ ಆವಿಷ್ಕಾರ್ -2025, ಚಿಣ್ಣರ ಚಿತ್ತಾರ ವಿವಿಧ ಸ್ಪರ್ಧೆಯಲ್ಲಿಶಾಲೆಯ ಶಿಶುಮಂದಿರದ ಪುಟಾಣಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಮೌಲ್ಯ ಕೆ.ಎಸ್ – ಚಿತ್ರಕಲೆ(ದ್ವಿತೀಯ), ಆಯುಷಿ ನಾಯಕ್ – ಅಭಿನಯ ಗೀತೆ (ತೃತೀಯ), ಇಶಾನಿ ಆಚಾರ್ಯ -ನ್ಯೂಟ್ರಿಷಿಯನ್ ಗೇಮ್ (ದ್ವಿತೀಯ), ವನ್ಶಿಕ್ – ಪಿಶಿಂಗ್ ಪ್ರೆನ್ಹಿ (ದ್ವಿತೀಯ), ರಾಹಿತ್ಯ -ಪಿಶಿಂಗ್ ಪ್ರೆನ್ಹಿ (ತೃತೀಯ), ಆಯುಷಿ ನಾಯಕ್ – ಝಿಗ್ ಝ್ಯಾಗ್(ತೃತೀಯ) ಸ್ಥಾನ ಪಡೆದಿದ್ದಾರೆ.  

ರಾಜ್ಯಮಟ್ಟದ ಕ್ರೀಡಾಕೂಟ 2025-26 - ಶಾಲೆಯ ರಿಲೇ ತಂಡ ದ್ವಿತೀಯ

ರಾಜ್ಯಮಟ್ಟದ ಕ್ರೀಡಾಕೂಟ 2025-26 – ಶಾಲೆಯ ರಿಲೇ ತಂಡ ದ್ವಿತೀಯ

Tuesday, December 9th, 2025

               ಜಿ.ಎಂ ಕೀರ್ತಿ          ಗುಣಶ್ರೀ            ಪ್ರತೀಕ್ಷಾ             ತ್ರಿಷಾ            ರುತಿಕ್ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ , ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ 2025-26, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದು ಇದರಲ್ಲಿ  ಶಾಲೆಯ 17ರ ವಯೋಮಾನದ ಬಾಲಕಿಯರ ಮತ್ತು 4×100 ಮೀ ರಿಲೇ […]

ಪ್ರೌಢಶಾಲಾ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿ -ಪ್ರಥಮ ಸಮಗ್ರ ಪ್ರಶಸ್ತಿ

ಪ್ರೌಢಶಾಲಾ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿ -ಪ್ರಥಮ ಸಮಗ್ರ ಪ್ರಶಸ್ತಿ

Thursday, December 4th, 2025

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ‘ಪ್ರತಿಭಾ ದರ್ಪಣ’ ಸ್ಪರ್ಧೆಯಲ್ಲಿ  ನಮ್ಮ ಪ್ರೌಢಶಾಲಾ ತಂಡ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳು : ದರ್ಶಿನಿ – ಕನ್ನಡ ಭಾಷಣ (ಪ್ರಥಮ), ವಿಘ್ನೇಶ್ ವಿಶ್ವಕರ್ಮ – ಚಿತ್ರಕಲೆ (ಪ್ರಥಮ), ಸಾಯೀಶ್ವರಿ –ಚರ್ಚಾಸ್ಪರ್ಧೆ (ಪ್ರಥಮ), ಮೌಲ್ಯ.ಜಿ […]

ಅಟಲ್ ಟಿಂಕರಿಂಗ್ ಫೆಸ್ಟ್ – ಪ್ರಶಸ್ತಿ

ಅಟಲ್ ಟಿಂಕರಿಂಗ್ ಫೆಸ್ಟ್ – ಪ್ರಶಸ್ತಿ

Thursday, December 4th, 2025

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ನಡೆದ ಅಟಲ್ ಟಿಂಕರಿಂಗ್ ಫೆಸ್ಟ್ -2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗಳಿಸಿದ್ದಾರೆ. ವಿಜ್ಞಾನ ಮಾದರಿ ಪ್ರದರ್ಶನ – ಅಭಿನವ್ (ಪ್ರಥಮ) ವಿಜ್ಞಾನ ರಸಪ್ರಶ್ನೆ – ಶ್ರೀಕೃಷ್ಣ, ಸಿಂಚನ ಪಿ ಮತ್ತು ಅಹಲ್ಯ ಕಾಮತ್ (ಪ್ರಥಮ) ಗಣಿತ ಫಝಲ್ – ಶ್ರೇಯಸ್ (ದ್ವಿತೀಯ) ಲೆಡ್ ಆರ್ಟ್ ಮತ್ತು ಗ್ಲೋ – ಶ್ರೇಯಸ್ ಜಿ ಆಚಾರ್ಯ ಮತ್ತು ಯದುನಂದನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ

ವಾರ್ಷಿಕ ಕ್ರೀಡಾಕೂಟ - ಸದೃಶ- ಸಂಭ್ರಮ -2025

ವಾರ್ಷಿಕ ಕ್ರೀಡಾಕೂಟ – ಸದೃಶ- ಸಂಭ್ರಮ -2025

Wednesday, December 3rd, 2025

                                                            ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಉದ್ಘಾಟಕರಾಗಿ ಆಗಮಿಸಿದ ರಾಷ್ಟ್ರೀಯ ಕ್ರೀಡಾಪಟು ಆನಂದ ಶೆಟ್ಟಿ ಕಲ್ಲಡ್ಕ ಇವರು ಶಾಲಾ ಸರಸ್ವತಿ ಬಳಿ ಪ್ರಜ್ವಲಿತ ದೀಪದಿಂದ ಬೆಳಗಿಸಿ ತಂದ ಕ್ರೀಡಾ ಜ್ಯೋತಿಯಿಂದ ಕ್ರೀಡಾಕೂಟದ ದೀಪ ಬೆಳಗಿಸಿ “ ಬಾಲ್ಯದಿಂದಲೇ […]

ತುಳಸಿ ಪೂಜೆ

ತುಳಸಿ ಪೂಜೆ

Saturday, November 22nd, 2025

ಶಾಲೆಯಲ್ಲಿ ತುಳಸಿ ಪೂಜಾ ಕಾರ್ಯಕ್ರಮ ನಡೆಯಿತು. ತುಳಸಿ ಕಟ್ಟೆಯನ್ನು ಹೂವುಗಳಿಂದ ಅಲಂಕರಿಸಿ ತುಳಸಿಗೆ ಆರತಿ, ಪುಷ್ಪಾರ್ಚನೆ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು. ಭಜನೆ, ಶ್ಲೋಕದಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೋಷಕರ ಸ್ಪರ್ಧಾ ಮನೋಭಾವ ಮಕ್ಕಳ ಸ್ಪರ್ಧಾಸಕ್ತಿಗೆ ಪ್ರೇರಕವಾಗಿದೆ – ಡಾ| ಆಶಾ

ಪೋಷಕರ ಸ್ಪರ್ಧಾ ಮನೋಭಾವ ಮಕ್ಕಳ ಸ್ಪರ್ಧಾಸಕ್ತಿಗೆ ಪ್ರೇರಕವಾಗಿದೆ – ಡಾ| ಆಶಾ

Saturday, November 22nd, 2025

                                                                                              ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಪ್ರಮುಖವಾದುದು. ಸ್ಪರ್ಧೆಗಳಲ್ಲಿ ಆಸಕ್ತಿ ಹಾಗೂ ಉತ್ಸಾಹದಿಂದ ಭಾಗವಹಿಸಿದಾಗ […]

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ - ಕಿರಿಯ ಪ್ರಾಥಮಿಕ ವಿಭಾಗ ಪ್ರಥಮ , ಹಿರಿಯ ಪ್ರಾಥಮಿಕ ವಿಭಾಗ ದ್ವಿತೀಯ ಸಮಗ್ರ ಪ್ರಶಸ್ತಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಕಿರಿಯ ಪ್ರಾಥಮಿಕ ವಿಭಾಗ ಪ್ರಥಮ , ಹಿರಿಯ ಪ್ರಾಥಮಿಕ ವಿಭಾಗ ದ್ವಿತೀಯ ಸಮಗ್ರ ಪ್ರಶಸ್ತಿ

Thursday, November 20th, 2025

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ದರ್ಬೆ ಇಲ್ಲಿ ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ :ಕೀರ್ತನ್ ಪಿ.ಯು – ಚಿತ್ರಕಲೆ (ಪ್ರಥಮ), ಸನ್ಮಯ […]

ಈಜು ಸ್ಪರ್ಧೆ – ಲಿಖಿತ್ ಎಸ್ ಗೌಡ ರಾಜ್ಯಮಟ್ಟಕ್ಕೆ ಆಯ್ಕೆ

ಈಜು ಸ್ಪರ್ಧೆ – ಲಿಖಿತ್ ಎಸ್ ಗೌಡ ರಾಜ್ಯಮಟ್ಟಕ್ಕೆ ಆಯ್ಕೆ

Wednesday, November 19th, 2025

ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಈಜುಸ್ಪರ್ಧೆಯಲ್ಲಿ  ಲಿಖಿತ್ ಎಸ್ ಗೌಡ 50ಮೀ ಬ್ರೆಸ್ಟ್ ಸ್ಟ್ರೋಕ್ ಮತ್ತು 100ಮೀ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಮತ್ತು ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧ ಕೆ.ಜಿ ಕೊಪ್ಪಳ, ಸರಸ್ವತಿಪುರಂ ಮೈಸೂರು ಇಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾನೆ.

Highslide for Wordpress Plugin