
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪುತ್ತೂರು ನಗರ ಠಾಣೆ ಇದರ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಅಪರಾಧ ತಡೆ ಮಾಸಾಚರಣೆ ಡಿಸೆಂಬರ್ 2025 ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು. ಸೈಬರ್ ಸುರಕ್ಷತೆಯ ಬಗ್ಗೆ ಮಾತನಾಡಿದ ಪುತ್ತೂರು ನಗರ ಠಾಣೆಯ ಪೊಲೀಸ್ ಉಪನೀರಿಕ್ಷಕರಾದ ಶ್ರೀ ಆಂಜನೇಯ ರೆಡ್ಡಿಯವರು “ಪ್ರತಿಯೊಂದು ಮಗುವಿನಲ್ಲಿಯೂ ಅಸಾಮಾನ್ಯವಾದ ಶಕ್ತಿ ಇದೆ. ಆದರೆ ಆ ಶಕ್ತಿ ಹೊರತರುವಲ್ಲಿ ನಮ್ಮ ಪ್ರಯತ್ನ ಬೇಕು. ಆಗ ಮಾತ್ರ ಸಾಧನೆ ಸಾಧ್ಯ” ಎಂದು ತಿಳಿಸುತ್ತಾ, ಅನಗತ್ಯ ವಿದ್ಯುನ್ಮಾನ ಉಪಕರಣಗಳ ಮಿತಬಳಕೆಯ ಬಗ್ಗೆ ಹಾಗೂ ಸೈಬರ್ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಎಂ, ಉಪನೀರಿಕ್ಷಕರಾದ ಶ್ರೀಯುತ ವಾಸುನಾಯ್ಕ್ ಹಾಗೂ ಶ್ರೀ ಕೃಷ್ಣಪ್ಪ ಎಂ ಉಪಸ್ಥಿತರಿದ್ದರು.