ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನಡೆದ ಪ್ರೌಢವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ ಡಾ. ಸುಷ್ಮಾ ಎಂ, ಬಿಡಿಎಸ್ ಇವರು ಮಾತಾನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯ-ಪಠ್ಯಪೂರಕ ಚಟುವಟಿಕೆಯಲ್ಲಿ ಭಾಗವಹಿಸಲು ಸಾಕಷ್ಟು ಅವಕಾಶವನ್ನಿ ಈ ಶಾಲೆ ಕಲ್ಪಿಸಿಕೊಡುತ್ತದೆ. ಈ ಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು” ಎಂದರು . ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ತಿರುಮಲೇಶ್ವರ ಭಟ್ ಇವರು ಮಾತನಾಡಿ “ ಪ್ರತಿಯೊಂದು ಮಗುವಿನಲ್ಲಿ ಕೂಡ ಅಗಾಧವಾದ ಶಕ್ತಿಯಿದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ತಮ್ಮ ಪ್ರತಿಭೆ ಅನಾವರಣಗೊಳ್ಳುತ್ತದೆ” ಎಂದು ಹೇಳಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಶಾಲಾ ಪೆÇೀಷಕರಾದ ಶ್ರೀಮತಿ ಸವಿತಾ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ರೇವತಿ ಉಪಸ್ಥಿತರಿದ್ದು “ ವಿದ್ಯಾರ್ಥಿಗಳೆಲ್ಲರೂ ಧೈರ್ಯ, ತಾಳ್ಮೆ ಹಾಗೂ ದೃಢ ಸಂಕಲ್ಪ ಬೆಳೆಸಿಕೊಂಡು ಸತತ ಪ್ರಯತ್ನ ನಡೆಸಿದರೆ ಯಶಸ್ಸನ್ನು ಗಳಿಸಲು ಸಾಧ್ಯ ಅಂತೆಯೇ ಮಾನವೀಯ ಮೌಲ್ಯಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಪರಿಪೂರ್ಣತೆಯಿಂದ ಬಾಳಬೇಕು” ಎಂದರು . ಸಹಶಿಕ್ಷಕರಾದ ರೇಷ್ಮಾ, ಪವಿತ್ರಾ ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಾದ ದರ್ಶಿನಿ ಸ್ವಾಗತಿಸಿ, ಶ್ರಾವ್ಯ ಧನ್ಯವಾದಗೈದ ಕಾರ್ಯಕ್ರಮವನ್ನು ಮೌಲ್ಯ ಜಿ ನಿರೂಪಿಸಿದರು.

Highslide for Wordpress Plugin