‘ವಿವೇಕ -ವಿದ್ಯಾರ್ಥಿ’ – ತನ್ವಿತಾ.ಎಂ – ರಾಜ್ಯಮಟ್ಟದಲ್ಲಿ  3ನೇ ರ‍್ಯಾಂಕ್

‘ಕರ್ನಾಟಕ ರಾಮಕೃಷ್ಣ- ವಿವೇಕಾನಂದ ಭಾವ ಪ್ರಚಾರ ಪರಿಷತ್’ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮಗಳು, ಶಾರದಾಶ್ರಮಗಳು ಮತ್ತು ಸೇವಾ ಸಂಸ್ಥೆಗಳು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ವಿವೇಕ -ವಿದ್ಯಾರ್ಥಿ’ ಎಂಬ ವ್ಯಕ್ತಿತ್ವ ನಿರ್ಮಾಣಕಾರಿ ಲಿಖಿತ ಪರೀಕ್ಷೆಯಲ್ಲಿ 10ನೇ ತರಗತಿಯ  ರಾಜ್ಯಮಟ್ಟದಲ್ಲಿ ತೃತೀಯ ರ‍್ಯಾಂಕ್ ಪಡೆದಿರುತ್ತಾಳೆ. ಹಾಗೆಯೇ 9ನೇ ತರಗತಿಯ ಮುಕುಂದ. ಎಸ್ ಜಿಲ್ಲಾಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿರುತ್ತಾನೆ. ಎಂಟನೇ ತರಗತಿಯ ತ್ರಿಸ್ತಾ ಮತ್ತು 9ನೇ ತರಗತಿಯ ಮೌಲ್ಯ.ಜಿ ತಾಲೂಕು ಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದಿರುತ್ತಾರೆ.

Highslide for Wordpress Plugin