ಗುರುಪೂರ್ಣಿಮೆ ಆಚರಣೆ

 ಶಾಲಾ ‘ಮಹತಿ’ ಕನ್ನಡ ಸಂಘದ ವತಿಯಿಂದ ಗುರುಪೂರ್ಣಿಮೆ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ರೇವತಿ ಇವರು ಮಾತನಾಡಿ “ ಗುರುಗಳ ಮಾರ್ಗದರ್ಶನವನ್ನು ಪ್ರಾಮಾಣಿಕವಾಗಿ ಅನುಸರಿಸಿದವನಿಗೆ ಜೀವನದಲ್ಲಿ ಎಂದಿಗೂ ಸೋಲೆಂಬುದು ಇರುವುದಿಲ್ಲ” ಎಂದು ಹೇಳಿ ಗುರುಪೂರ್ಣಿಮೆಯ ವಿಶೇಷತೆಯನ್ನು ತಿಳಿಸಿದರು. ವಿದ್ಯಾರ್ಥಿಗಳಾದ ಮೌಲ್ಯ, ಶ್ರುತಿ, ಸೃಜನ್ ಇವರು ಸಮರ್ಥ ರಾಮದಾಸ-ಛತ್ರಪತಿ ಶಿವಾಜಿ, ಮಹರ್ಷಿ ವೇದವ್ಯಾಸ, ದ್ರೋಣಾಚಾರ್ಯ-ಅರ್ಜುನರ ಗುರು ಶಿಷ್ಯ ಸಂಬಂಧದ ಬಗ್ಗೆ ಘಟನೆಗಳೊಂದಿಗೆ ತಿಳಿಸಿದರು.  ಶಾಲೆಯ ಎಲ್ಲಾ ಗುರು ವೃಂದದವರು ವ್ಯಾಸ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗುರುನಮನ ಸಲ್ಲಿಸಿದರು.
Highslide for Wordpress Plugin