ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ ಕ್ರೀಡಾ ದಿನಾಚರಣೆ

“ಮೇಜರ್ ಧ್ಯಾನ್ ಚಂದ್ ಭಾರತ ಕಂಡ ಶ್ರೇಷ್ಠ ಕ್ರೀಡಾ ಸಾಧಕರಲ್ಲಿ ಓರ್ವರಾಗಿದ್ದಾರೆ. ಕ್ರೀಡಾ ಮನೋಭಾವದೊಂದಿಗೆ ದೇಶ ಪ್ರೇಮವನ್ನು ಜಗತ್ತಿಗೆ ಸಾರಿದ ಕ್ರೀಡಾಪಟು ಆಗಿದ್ದರು. ಇವರ ಕಥೆಯನ್ನು ಓದುವಾಗ ನಮ್ಮಲ್ಲೂ ಕ್ರೀಡಾಸ್ಫೂರ್ತಿ ಉಂಟಾಗುತ್ತದೆ’’ ಎಂದು ಶಾಲಾ ವಿದ್ಯಾರ್ಥಿನಿ ಮೌಲ್ಯ ಇವರು ಮೇಜರ್ ಧ್ಯಾನ್ ಚಂದ್ ಅವರ ಘಟನೆಗಳನ್ನು ಉಲ್ಲೇಖಿಸುತ್ತಾ ಕ್ರೀಡಾ ದಿನದ ಮಹತ್ವವನ್ನು ತಿಳಿಸಿದರು. ಅನಂತರ ಹಾಕಿಯ ಬಗ್ಗೆ ಪ್ರಾತ್ಯಕ್ಷಿಕಾ ಮಾಹಿತಿಯನ್ನು ಮಕ್ಕಳಿಗೆ ನೀಡಲಾಯಿತು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ನಮಿತಾ ಇವರು ಸಂಯೋಜಿಸಿದರು.

Highslide for Wordpress Plugin