ಜಿಲ್ಲಾಮಟ್ಟದ ಗಣಿತ– ವಿಜ್ಞಾನ ಹಾಗೂ ಸಂಸ್ಕತಿ ಜ್ಞಾನ– ಮಹೋತ್ಸವ
Saturday, September 16th, 2023ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಸದಾಜಾಗೃತವಾಗಿರಬೇಕು–ಡಾ| ಕೆ.ಗಣೇಶ್‌ರಾಜ್(ನಿವೃತ್ತ ವಿಜ್ಞಾನಿ) […]
ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಸದಾಜಾಗೃತವಾಗಿರಬೇಕು–ಡಾ| ಕೆ.ಗಣೇಶ್‌ರಾಜ್(ನಿವೃತ್ತ ವಿಜ್ಞಾನಿ) […]
ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಲ್ನಾಡು ಇಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ಮತ್ತು ಬಾಲಕರ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ತಂಡದಲ್ಲಿ ತಶ್ವಿತ್ ರಾಜ್(ಆನಂದ ಪೂಜಾರಿ ಮತ್ತು ಕೆ. ಶುಭ ದಂಪತಿಗಳ ಪುತ್ರ), ಜನಿತ್ ಕೆ.ಎಸ್(ಕೆ ಸಂಜೀವ ಗೌಡ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರ), ಪುನೀತ್ (ಶ್ರೀಧರ ಮತ್ತು ನಳಿನಿ ದಂಪತಿಗಳ ಪುತ್ರ), […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾರತದ ವೈಜ್ಞಾನಿಕ ಸಾಧನೆಗಳಲ್ಲಿ ಪ್ರಮುಖ ಹಾಗೂ ಮಹತ್ವಪೂರ್ಣವಾದ ಚಂದ್ರಯಾನ 3 ರ ಯಶಸ್ವಿ ಸಾಧನೆಯ ಸಂಭ್ರಮವನ್ನು ಆಚರಿಸಲಾಯಿತು. ಭಾರತಮಾತೆಯ ಭಾವಚಿತ್ರಕ್ಕೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಜಯಘೋಷದೊಂದಿಗೆ ವಂದೇ ಮಾತರಂ ಹಾಡನ್ನು ಸಾಮೂಹಿಕವಾಗಿ ಹಾಡಲಾಯಿತು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿ ಚಂದ್ರಯಾನದ ಸಾಧನೆಗಳನ್ನು ತಿಳಿಸುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶುಭ ಹಾರೈಕೆಯ ಮಾತುಗಳನ್ನು ಉಲ್ಲೇಖಿಸಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ವಸಂತ ಸುವರ್ಣ ಇವರು ಭಾರತೀಯ […]
ಸಂಸ್ಕಾರ ಭಾರತಿ ಪುತ್ತೂರು ವಿಭಾಗ ಇದರ ಆಶಯದಲ್ಲಿ ರೇಡಿಯೋ ಪಾಂಚಜನ್ಯ, ರೋಟರಿ ಯುವ ರೋಟರಿ ಕ್ಲಬ್ ಪುತ್ತೂರು ಸಿಟಿ ಮತ್ತು ಇನ್ನರ್ವೀಲ್ ಕ್ಲಬ್ ಇವುಗಳ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ (ಗ್ರೂಪ್) ಪ್ರೌಢ ಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ವಿದ್ಯಾಭಾರತಿ ಕರ್ನಾಟಕ ಮತ್ತು ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ ಮಂಗಳೂರು ಇವರ ಆಶ್ರಯದಲ್ಲಿ ಶಕ್ತಿ ವಿದ್ಯಾಸಂಸ್ಥೆ ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರವರ್ಗದ ಬಾಲಕಿಯರ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದು ಕ್ಷೇತ್ರೀಯಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಕೃತಿಕಾ ಜಿ ( ಶ್ರೀ ರವಿ ಮತ್ತು ಯಶೋಧ ದಂಪತಿಗಳ ಪುತ್ರಿ), ಆದ್ಯ ಬಿ.ಆರ್(ಶ್ರೀ ರಾಮಣ್ಣ ಗೌಡ ಮತ್ತು ರೇಖಾ ಪಿ ದಂಪತಿಗಳ ಪುತ್ರಿ), ಪಿ ಕವನಶ್ರೀ (ಶ್ರೀ ಗೋಪಾಲಕೃಷ್ಣ ಮತ್ತು […]
ಖೋ-ಖೋ ಪಂದ್ಯಾಟ ರಾಜ್ಯಮಟ್ಟಕ್ಕೆ ಆಯ್ಕೆ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ವಿವೇಕಾನಂದ ವಿದ್ಯಾಸಂಸ್ಥೆ ಮುಂಡಾಜೆ ಇಲ್ಲಿ ನಡೆದ ಬಾಲವರ್ಗದ ಬಾಲಕಿಯರ ಮತ್ತು ಬಾಲವರ್ಗದ ಬಾಲಕರ ಎರಡೂ ವಿಭಾಗಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಕೃತಿ (ರಮೇಶ್ ಗೌಡ ಮತ್ತು ನಳಿನಿ ದಂಪತಿಗಳ ಪುತ್ರಿ), ಶ್ರಾವ್ಯ (ಕೆ ಸುರೇಂದ್ರ ನಾಯಕ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ), ಸಂಧ್ಯಾ (ಮಣಿಕಂಠ ರಾಜ್ […]
ತ್ರಿಸ್ಥಾ ಭಟ್ ಸಾಯೀಶ್ವರಿ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ೨೦೨೩-೨೪ನೇ ಸಾಲಿನ ಶಿಕ್ಷಕ – ರಕ್ಷಕ ಸಂಘ ಮತ್ತು ಮಾತೃಭಾರತಿಯ ಪದಗ್ರಹಣ ಸಮಾರಂಭ ನಡೆಯಿತು. ಪ್ರಸಕ್ತ ರ‍್ಷದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ಜಯಂತ್ ಗೌಡ ಕೆ, ಉಪಾಧ್ಯಕ್ಷರಾಗಿ ಶ್ರೀಮತಿ ಆಶಾ ಕೆ, ಕಾರ್ಯದರ್ಶಿಯಾಗಿ ಶ್ರೀ ಯುವರಾಜ ಕೆ, ಆಯ್ಕೆಗೊಂಡರು.ಮಾತೃಭಾರತಿಯ ಅಧ್ಯಕ್ಷೆಯಾಗಿ ಶ್ರೀಮತಿ ಮಂಗಳ ಗೌರಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ಪ್ರೀತಿಕಲಾ, ಕಾರ್ಯದರ್ಶಿಯಾಗಿ ಶ್ರೀಮತಿ ಮಂಜುಳಾ ಆಯ್ಕೆಗೊಂಡರು. ಶಿಕ್ಷಕ-ರಕ್ಷಕ ಸಂಘ […]
ವಿದ್ಯಾಭಾರತಿ ಕಬಡ್ಡಿ – ರಾಜ್ಯಮಟ್ಟಕ್ಕೆ ಆಯ್ಕೆ ವಿದ್ಯಾಭಾರತಿ ಕರ್ನಾಟಕ ಮತ್ತು ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ ಮಂಗಳೂರು ಇವರ ಆಶ್ರಯದಲ್ಲಿ ಶಕ್ತಿ ವಿದ್ಯಾಸಂಸ್ಥೆ ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರವರ್ಗದ ಬಾಲಕಿಯರ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಕೃತಿಕಾ ಜಿ ( ಶ್ರೀ ರವಿ ಮತ್ತು ಯಶೋಧ ದಂಪತಿಗಳ ಪುತ್ರಿ), ಆದ್ಯ ಬಿ.ಆರ್(ಶ್ರೀ ರಾಮಣ್ಣ ಗೌಡ ಮತ್ತು ರೇಖಾ ಪಿ ದಂಪತಿಗಳ ಪುತ್ರಿ), […]
‘ಮಕ್ಕಳ ಮೂಲಕ ಪೋಷಕರಲ್ಲೂ ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಂದ ಪ್ರಾತ್ಯಕ್ಷಿತಗೊಂಡ ವಿಜ್ಞಾನದ ದೈನಂದಿನ ಬದುಕಿಗೆ ಸಂಬಂಧಿಸಿದ ಪ್ರಯೋಗಗಳು ನಮಗೂ ಕೆಲವಾರು ವಿಷಯಗಳನ್ನು ತಿಳಿಸಿದುವು. ಮಕ್ಕಳ ಪ್ರಯತ್ನ ಶ್ಲಾಘನೀಯ’ – ಶ್ರೀಮತಿ ಆಶಾ (ಪೋಷಕರು) ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆದ ವಿಭಾಗವಾರು ಪೋಷಕರ ಸಭೆಯಲ್ಲಿ ಮಕ್ಕಳಿಂದ ಶ್ಲೋಕ, ಅಮೃತ ವಚನ, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆ, ಕನ್ನಡ ಮತ್ತು ಆಂಗ್ಲ ಭಾಷೆಯ ಭಾಷಣ ಹಾಗೂ ವಿಜ್ಞಾನ ಪ್ರಾತ್ಯಕ್ಷಿಕೆಗಳು ಪ್ರಸ್ತುತಗೊಂಡವು. ಪೋಷಕರೊಂದಿಗೆ […]
ಯೋಗಾಸನ ಸ್ಪರ್ಧೆ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸರಸ್ವತಿ ವಿದ್ಯಾಲಯ ಕಡಬ ಇವರ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಥಮ ಬಹುಮಾನ, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಥಮ ಸ್ಥಾನ ಕವಿತಾ (ರಿದಮಿಕ್) ದ್ವಿತೀಯ ಸ್ಥಾನ, ಮುಕುಂದ(ರಿದಮಿಕ್) ತೃತೀಯ […]
ಹಣದ ಹಿಂದೆ ಹೋಗುವ ಬದಲು ಗುಣದ ಹಿಂದೆ ಹೋಗುವಂತಾಗಬೇಕು – ಡಾ.ಪ್ರಭಾಕರ ಭಟ್ ಹಿಂದು ಸಮಾಜದ ನಂಬಿಕೆಗಳನ್ನು ಗಟ್ಟಿ ಮಾಡುವ ಸಂಗತಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಿಂದ ಆಗುತ್ತಿದೆ. ಹಣದ ಹಿಂದೆ ಹೋಗುವ ಬದಲು ಗುಣದ ಹಿಂದೆ ಹೋಗುವ ಮನಸ್ಸು ನಮ್ಮದಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಹೇಳಿದರು. ತೆಂಕಿಲ ವಿವೇಕನಗರದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶೇಷಾದ್ರಿಯಲ್ಲಿ ‘ಅನ್ನಪೂರ್ಣ’ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ […]
ಸಾನ್ನಿಧ್ಯ – ಲೋಕಾರ್ಪಣೆ – ಗಣಪತಿ ಹೋಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಅನ್ನಪೂರ್ಣ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜು.06ರಂದು ನೆರವೇರಿತು. ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್.ಭಟ್ ನೇತೃತ್ವದಲ್ಲಿ ಗಣಪತಿ ಹೋಮ ನಡೆದು ‘ಸಾನ್ನಿಧ್ಯ’ ಅನ್ನಪೂರ್ಣ ಪಾಕಶಾಲೆಯ ಪ್ರವೇಶೋತ್ಸವ ನೆರವೇರಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್‍ನ ಅಧ್ಯಕ್ಷೆ ಡಾ. ಗೌರಿ […]
ಸಾನ್ನಿಧ್ಯ- ಲೋಕಾರ್ಪಣೆ– ವಾಸ್ತು ಪೂಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ‘ಅನ್ನಪೂರ್ಣ’ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಇದರ ಲೋಕಾರ್ಪಣೆ ಜು.5ರಂದು ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್ ಭಟ್ ರವರ ನೇತೃತ್ವದಲ್ಲಿ ವಾಸ್ತು ಪೂಜೆ ನಡೆಯಿತಿ. ಬೆಂಗಳೂರು ಬಯೋಟೆಕ್ ಕಂಪೆನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕರಾಗಿರುವ ಡಾ. ಶಾಮ ಭಟ್ಟ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಚುತ ನಾಯಕ್ ಹೆಚ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು […]
ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ಶ್ರೀ ದಿವಂಗತ ಬಾಲಕೃಷ್ಣ ಮಧುವನ ಇವರ ಸ್ಮರಣಾರ್ಥ ಸರ್ವೋದಯ ಪ್ರೌಢಶಾಲೆ, ಸುಳ್ಯಪದವು ಇಲ್ಲಿ ನಡೆದ ತಾಲೂಕು ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹರಿಣಿ, ಸುಷ್ಮಾ ಮತ್ತು ಮಂಗಳಾದುರ್ಗಾ ಇವರ ತಂಡ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡಿದ್ದಾರೆ.
“ಪರಿಸರ ಸ್ನೇಹಿ ಬದುಕು ನಮ್ಮದಾದಾಗ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯವಾಗುತ್ತದೆ” –ಡಾ.ರವೀಂದ್ರ ಐತಾಳರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹಾತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ಯ ಅನುಷ್ಠಾನಿಕ ಭಾಗವಾಗಿ ‘ಮೂಲಿಕಾ ವನ’ ನಿರ್ಮಾಣದ ಅಂಗವಾಗಿ ಪೂರ್ವಭಾವಿ ಮಾಹಿತಿ ಪಡೆಯುವ ದೃಷ್ಟಿಯಿಂದ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಖ್ಯಾತ ಔಷಧೀಯ ಸಸ್ಯಗಳ ಸಂರಕ್ಷಕ ಹಾಗೂ ಉರಗ ತಜ್ಞ ಡಾ. ರವೀಂದ್ರ ಐತಾಳರ ಮೂಲಿಕಾ ವನಕ್ಕೆ ಭೇಟಿ ನೀಡಿದರು. ತಮ್ಮ ಮೂಲಿಕಾ ವನದ ಪರಿಚಯ ಮಾಡಿಸಿ ಹಲವು ಜಾತಿಯ ಔಷಧೀಯ […]
ಕೆದಿಲದಲ್ಲಿ ಗ್ರಾಮ ಸಂಜೀವಿನಿ ಕಾರ್ಯಕ್ರಮ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆ ಯೋಜನೆ ವಿವೇಕ ಸಂಜೀವಿನಿಯ ಶಾಲಾ ಅನುಷ್ಠಾನಿಕ ಭಾಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಶ್ರೀರಾಮ ಭಜನಾ ಮಂದಿರ ಕೆದಿಲ, ಊರ ನಾಗರಿಕರ ಸಹಯೋಗದಲ್ಲಿ ಗ್ರಾಮ-ಸಂಜೀವಿನಿ ಯೋಜನೆಗೆ ಚಾಲನೆ ನೀಡಿದವರು ಕೆದಿಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಜಯಂತಿ ಧನಂಜಯ ಶೆಟ್ಟಿ ಇವರು. ‘ಶಾಲೆಯಿಂದ ಗ್ರಾಮಗಳಲ್ಲಿ ನಡೆಯುತ್ತಿರುವ ಅನ್ಯಾನ್ಯ ಕಾರ್ಯಕ್ರಮಗಳಾದ ಬದು ನಿರ್ಮಾಣ, ಗದ್ದೆ ಕೊಯ್ಲು, […]
ಸಹಜ’- ಸಂಜೀವಿನಿ ಸಮಿತಿ ರಚನೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ಯ ಶಾಲಾ ಅನುಷ್ಠಾನಿಕ ಭಾಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳಾದ ಔಷಧೀಯ ಸಸ್ಯಗಳ ಪೆÇೀಷಣಾ ಹಬ್ಬ, ಸಹಜ-ಮೂಲಿಕಾ ವನ ನಿರ್ಮಾಣ, ಕೆದಿಲ ಗ್ರಾಮದಲ್ಲಿ ನಡೆಯಲಿರುವ ಗ್ರಾಮ-ವನ ನಿರ್ಮಾಣದ ಭಾಗವಾಗಿ ಪೆÇೀಷಕರನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಲಾಯಿತು. ಪೂರ್ವಪ್ರಾಥಮಿಕದಿಂದ ಹತ್ತನೇ ವರೆಗಿನ ತರಗತಿಗಳ […]
ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಶಾಲಾ ಕಾರ್ಯ ಶ್ಲಾಘನೀಯ – ಡಾ.ಹರಿಕೃಷ್ಣ ಪಾಣಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ ಯ [ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಆಂದೋಲನ] ಆಶಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸಹಜ- ಮೂಲಿಕಾ ವನ ನಿರ್ಮಾಣ ಯೋಜನೆ’ಯ ಕಾರ್ಯಕ್ರಮವನ್ನು ಶ್ರೀ ದುರ್ಗಾ ಕ್ಲಿನಿಕ್ ಪುತ್ತೂರು ಇಲ್ಲಿನ ಆರ್ಯುವೇದಿಕ್ ವೈದ್ಯರಾದ ಡಾ|ಹರಿಕೃಷ್ಣ ಪಾಣಾಜೆ ಉದ್ಫಾಟಿಸಿ ಮಾತಾನಾಡಿ […]
‘ಸ್ವಾಸ್ಥ್ಯ’ – ಶಾಲಾ ಯೋಗ ಚಟುವಟಿಕಾ ಸಂಘ ‘ಯೋಗವು ಕೇವಲ ಆಸನಗಳಿಗೆ ಸೀಮಿತವಾಗದೆ ಮನಸ್ಸಿನ ಸುಸ್ಥಿತಿಗೆ ಸಹಾಯಕ’- ವಸಂತ ಸುವರ್ಣ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸ್ವಾಸ್ಥ್ಯ’ ಶಾಲಾ ಯೋಗ ಚಟುವಟಿಕಾ ಸಂಘ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಸಂಚಾಲPರಾದ ಶ್ರೀ ವಸಂತ ಸುವರ್ಣ ಅವರು ‘ಮನಸ್ಸು, ಬುದ್ಧಿ ಮತ್ತು ಶರೀರದ ನಡುವೆ […]
ಮಂತ್ರಿಮಂಡಲ ರಚನೆ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಶಾಲಾ ‘ಸಮನ್ವಯ’ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣೆ ಹಾಗೂ ಮಂತ್ರಿಮಂಡಲ ರಚನಾ ಪ್ರಕ್ರಿಯೆ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಭವಿಷ್ ಜಿ ಮತ್ತು ಉಪನಾಯಕನಾಗಿ ತಶ್ವಿತ್ ರಾಜ್ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ […]
ವಿದ್ಯಾರ್ಥಿ ದಿಶೆಯಿಂದಲೇ ಪರಿಸರ ಸಂರಕ್ಷಣೆಗೆ ನಿರಂತರ ಕೆಲಸವಾಗಬೇಕು.- ಶ್ರೀ ಲೋಕೇಶ್ ಎಸ್.ಆರ್ […]
2023-24ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಹೊಸ ಸೇರ್ಪಡೆಗೊಂಡಿರುವ ಹಾಗೂ ಮರು ಸೇರ್ಪಡೆಗೊಂಡಿರುವ ಮಕ್ಕಳ ಹಾಗೂ ಅವರ ಪೆÇೀಷಕರಿಗೆ ಶಾಲಾ ಪುನರಾರಂಭದಂದು ಗಣಹೋಮ ನಡೆಸಿ ಸ್ವಾಗತಿಸಲಾಯಿತು. ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರದ ಶ್ರೀಮತಿ ನವೀನಾಕ್ಷಿ ದಂಪತಿಗಳು ಪ್ರಧಾನರ್ಚಕರ ಸಮ್ಮುಖದಲ್ಲಿ ದೈವೀ ಕಾರ್ಯ ನೆರವೇರಿಸಿದರು. ಬಂದಂತಹ ಮಕ್ಕಳಿಗೆ ತಿಲಕವಿರಿಸಿ ಆರತಿ ಬೆಳಗಿ ಶುಭ ಕೋರಲಾಯಿತು. ಶಾಲಾ ಆಡಳಿತ ಮಂಡಳಿ, ಅಧ್ಯಕ್ಷರು, ಸಂಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಆಂಗ್ಲಭಾಷಾ ಕಲಿಕೆ ವ್ಯಾವಹಾರಿಕ ಜ್ಞಾನದ ಅಭಿವೃದ್ದಿಗೆ ಪೂರಕವಾಗಿದೆ- ಶ್ರೀ ರಾಮ ಚಂದ್ರ ಭಟ್- ನಿವೃತ್ತ […]
ಅಧ್ಯಯನದ ವೈವಿಧ್ಯಮಯ ಸಾಧ್ಯತೆಗಳು ಅಧ್ಯಾಪನವನ್ನು ಪರಿಣಾಮಕಾರಿಯಾಗಿಸುತ್ತದೆ- […]
‘ವಿದ್ಯಾರ್ಥಿ ದಿಶೆಯಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಅನಂತರವೂ ಅದನ್ನು ಮುಂದುವರಿಸಬೇಕು. ಶ್ರೀ ವಸಂತ ಕೋನಡ್ಕ- ವಕೀಲರು, ಬೆಂಗಳೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಉತ್ತಮ ಫಲಿತಾಂಶ[98%]ಕ್ಕಾಗಿ ಆಯೋಜಿಸಲಾದ ಸಾಧನಾಭಿನಂದನಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ ಶ್ರೀ ವಸಂತಕೋನಡ್ಕ ಅವರು ‘ನಮ್ಮಲ್ಲಿ ನಾವು ಪ್ರಮುಖವಾಗಿ ಐದು ಗುಣಗಳಾದ ಯೋಚನಾ ಸಾಮರ್ಥ್ಯ, ಯೋಜನಾ ಬದ್ಧತೆ, ಸಾಮಾನ್ಯಜ್ಞಾನ, ಸಮಯ ಪ್ರಜ್ಞೆ, ಸಮಾಜಮುಖಿ ಬದುಕು ಇವುಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕಾಗಿದೆ’ ಎಂದರು. […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪೂರ್ವ ಪ್ರಾಥಮಿಕ ಮಕ್ಕಳ ಪೋಷಕರಿಗೆ ಸಾನಿಧ್ಯ- ಪ್ರಶಿಕ್ಷಣ ಕಾರ್ಯಗಾರ ನಡೆಯಿತು. ‘ಆಟದ ಮೂಲಕ ಪಾಠ’ ಪರಿಕಲ್ಪನೆ ಆಧಾರಿತ ಕಾರ್ಯಾಗಾರದಲ್ಲಿ ಅಭಿನಯ ಗೀತೆ, ಕಥಾಯೋಗ, ಸಾಹಸ ಪ್ರದರ್ಶನ, ಕರಕುಶಲ ಕಲಾ ವಸ್ತು ಪ್ರದರ್ಶನ, ಕಲಿಕಾ ಉಪಕರಣಗಳು ಪ್ರದರ್ಶಿತಗೊಂಡವು. ಕಾರ್ಯಗಾರಕ್ಕೆ ಆಗಮಿಸಿದ್ದ ಹಿರಿಯ ದಂಪತಿಗಳಾದ ಪ್ರೊಫೆಸರ್ ನಾರಾಯಣ ಮಜಿ (ನಿವೃತ್ತ ಪ್ರಾಧ್ಯಾಪಕರು) ಹಾಗೂ ಸರಸ್ವತಿ ಪಿ (ನಿವೃತ್ತ ಮುಖ್ಯೋಪಾಧ್ಯಾಯರು) ಉಪಸ್ಥಿತರಿದ್ದು, ಶುಭ ಹಾರೈಸಿದರು. ಪೋಷಕರನ್ನು ಆಟ ಆಡಿಸುತ್ತಾ ನೀಡಿದ ಪ್ರಶಿಕ್ಷಣವು ಮಗುವಿನ ಜೊತೆಗೆ ಪೋಷಕರು […]
ವಿವೇಕಾನಂದ ಕನ್ನಡ ಶಾಲಾ 10ನೇ ತರಗತಿ ಮಕ್ಕಳ ದೀಪ ಪ್ರದಾನ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಶ್ರೀರಾಮ ಹಾಗೂ ಇಂದ್ರಪ್ರಸ್ಥ ಶಾಲೆ ಉಪ್ಪಿನಂಗಡಿ ಇಲ್ಲಿನ ಸಂಚಾಲಕರು, ಹಿರಿಯ ಪೋಷಕರು ಆದ ಶ್ರೀಯುತ ಯು. ಜಿ. ರಾಧ ಮಾತನಾಡಿ “ಶಾಲಾ ದಿನಗಳ ಗುಣಮಟ್ಟದ ಕಲಿಕೆ ವಿದ್ಯಾರ್ಥಿಯಲ್ಲಿ ಗಟ್ಟಿಯಾದರೆ ಬದುಕಿನಲ್ಲಿ ಖುಷಿ ಕಾಣಲು ಸಾಧ್ಯವಿದೆ. ಉನ್ನತ ಶಿಕ್ಷಣ, ಉದ್ಯೋಗ ಮುಂತಾದವುಗಳಿಗಾಗಿ ಸರ್ಟಿಫಿಕೇಟ್ ಆಧಾರದ ಶಿಕ್ಷಣ ಸಹಕಾರಿಯಾಗುವುದು ಒಂದು ಭಾಗವಾದರೆ ಸಮಾಜ ಮುಖಿಯಾಗಿ […]
” ಅರ್ಥಪೂರ್ಣ ಚರ್ಚೆಗಳಿಂದ ಸಮರ್ಪಕ ಮಸೂದೆ ಮಂಡನೆ ಸಾಧ್ಯ” -ಶ್ರೀ ಲಕ್ಷ್ಮಿಕಾಂತ್, ಪ್ರಾಧ್ಯಾಪಕರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು. ನಮ್ಮ ಶಾಲಾ ‘ಸಮನ್ವಯ‘ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ನಡೆದಂತಹ ವಿಧಾನಸಭಾ ಅಧಿವೇಶನ ಕಾರ್ಯಕಲಾಪಗಳು ಯಾಕೆ ? ಹೇಗೆ ?ಎಂಬ ವಿಷಯದ ಕುರಿತು ಮಾತನಾಡಿದ ಶ್ರೀಯುತ ಲಕ್ಷ್ಮೀಕಾಂತ್ ಇವರು ಮಾದರಿ ಸಂಸತ್ತು ಮತ್ತು ಅಣಕು ಸಂಸತ್ತಿನ ನಡುವಿನ ಭಿನ್ನತೆಯನ್ನು ತಿಳಿಸುತ್ತಾ ಅಧಿವೇಶನದ ಪ್ರಾಮುಖ್ಯತೆಯ ಮಾಹಿತಿ ನೀಡಿದರು. ಸಂಘದ ಸಂಯೋಜಕ ಸಹಶಿಕ್ಷಕರಾದ ಲೀಲಾವತಿ ಹಾಗೂ ಶ್ರೀಮತಿ […]
ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಶ್ರೀರಾಮ ಪ್ರೌಢಶಾಲೆ ಪಟ್ಟೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿಶಾಂತ್ 6ನೇ ತರಗತಿ-ತೃತೀಯ,ಕರಣ್ ಗೌಡ 6ನೇ ತರಗತಿ -ಚತುರ್ಥ, ಪ್ರೌಢ ವಿಭಾಗದಲ್ಲಿ ಸ್ಕಂದ-8ನೇ ತರಗತಿ ದ್ವಿತೀಯ,ರಿತೇಶ್ ನಾಯಕ್ -8 ನೇ ತರಗತಿ-ಚತುರ್ಥ, ಪ್ರಜ್ಞಾ-8ನೇ ತರಗತಿ-ಚತುರ್ಥ ಹಾಗೂ ಪ್ರಾಥಮಿಕ ವಿಭಾಗದ ಬಾಲಕರು ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ, ಪ್ರೌಢ ವಿಭಾಗದ ಬಾಲಕರು ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ, ಪ್ರೌಢ ವಿಭಾಗದ ಬಾಲಕಿಯರು ಸಮಗ್ರ ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ.
ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ ಪಡೆದು ಪ್ರಾಥಮಿಕ ವಿಭಾಗದಲ್ಲಿ ನಿಶಾಂತ್ 6ನೇ ತರಗತಿ, ಪ್ರೌಢಶಾಲಾ ವಿಭಾಗದಲ್ಲಿ ಸ್ಕಂದ 8ನೇ ತರಗತಿ ಬಂಟ್ವಾಳ ತಾಲೂಕಿನ ದಡ್ಡಲಕಾಡು ಇಲ್ಲಿ ನಡೆಯುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಂದೀಪನಿ ವಿದ್ಯಾಭವನ, ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸ್ಕಂದ ಬಳ್ಳಕ್ಕುರಾಯ, ರಿತೇಶ್ ನಾಯಕ್, ನಿಶಾಂತ್ ಎಚ್.ಸಿ, ಕರಣ್ ಗೌಡ.
ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು ಇಲ್ಲಿನ ಬಿಬಿಎ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳಾದ ಚಿತ್ರಶ್ರೀ, ಸ್ವೀಕೃತ್ ಶೆಟ್ಟಿ, ವರುಣ್ ರೈ ಹಾಗೂ ಸುಬ್ರಹ್ಮಣ್ಯೇಶ್ವರ ಪ್ರಸಾದ್ ಇವರಿಂದ ನಮ್ಮ ಶಾಲೆಯಲ್ಲಿ ‘ಸ್ವಚ್ಛ ಭಾರತ್’ ಅಭಿಯಾನ ಕುರಿತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಪ್ರಾತ್ಯಕ್ಷಿಕಾ ಮಾಹಿತಿ ನೀಡಲಾಯಿತು. ಅನಂತರ ಮಕ್ಕಳಿಗೆ ಏರ್ಷಡಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿವಾಗ್ಲೆ ಬಹುಮಾನ ವಿತರಿಸಿದರು. ಶಾಲಾ ವಿಜ್ಞಾನ […]
ದಿನಾಂಕ 26-01-2023ನೇ ಗುರುವಾರದಂದು ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಬಿ.ಇಡಿ ಕಾಲೇಜು, ನರೇಂದ್ರ ಪದವಿ ಪೂರ್ವ ಕಾಲೇಜು ವಿವೇಕನಗರ ತೆಂಕಿಲ ಇವುಗಳ ಜಂಟಿ ಆಶ್ರಯದಲ್ಲಿ 74ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ದೇಶದ ನಿವೃತ್ತ ಸೈನ್ಯಾಧಿಕಾರಿ ಹಾಗೂ ಪೋಷಕರಾದ ಶ್ರೀ ಕಿಶೋರ್ ಮಾವಜಿ ಅವರು ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಸೂಕ್ತವಾಗಿ ನಿರ್ವಹಿಸುವ ಅಗತ್ಯವಿದೆ. ಮಾತ್ರವಲ್ಲದೆ ಸಂವಿಧಾನದ ಗೌರವ […]
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಅಂಬಿಕಾ ವಿದ್ಯಾಲಯ (ಸಿ.ಬಿ.ಎಸ್.ಇ) ಬಪ್ಪಳಿಗೆ ಇವರ ಸಹಯೋಗದೊಂದಿಗೆ 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂಬಿಕಾ ವಿದ್ಯಾಲಯ ಇಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನಮ್ಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಾಥಮಿಕ ವಿಭಾಗದ ದೇಶ ಭಕ್ತರ ಜೀವನದ ಘಟನೆಗಳ ವರ್ಣನೆಯಲ್ಲಿ ದರ್ಶಿನಿ 7ನೇ ತರಗತಿ ದ್ವಿತೀಯ (ಮಾಡ್ಲೆಕೊಚ್ಚಿ ನಿವಾಸಿ ಮೋಹನ್ ಗೌಡ ಮತ್ತು ಯಶೋಧ ದಂಪತಿಗಳ ಪುತ್ರಿ), ಆಶುಭಾಷಣ […]
ರಥಸಪ್ತಮಿಯ ಅಂಗವಾಗಿ ನಮ್ಮ ಶಾಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಜರುಗಿತು. ಶಾಲಾ ಯೋಗ ಹಾಗೂ ಮೌಲ್ಯಶಿಕ್ಷಣ ಸಂಯೋಜಕರಾದ ಶ್ರೀಮತಿ ವೀಣಾ ಸರಸ್ವತಿ ಮಾತನಾಡಿ “ರಥಸಪ್ತಮಿಯು ಸಂವತ್ಸರ ಕಾಲಗಣನೆಯ ಒಂದು ಬಹುಮುಖ್ಯವಾದ ಆಚರಣೆ. ಪ್ರಪ್ರಥವಾಗಿ ಭೌತಿಕ ಪ್ರಪಂಚಕ್ಕೆ ಸೂರ್ಯ ಪ್ರಕಟವಾದ ದಿನದ ಆಚರಣೆಯೇ ರಥಸಪ್ತಮಿ. ಸೂರ್ಯ ಸಕಲ ಜೀವರಾಶಿಗಳನ್ನು ಪೋಷಣೆ ಮಾಡುವ ದೇವರಾಗಿ ಆರಾಧಿಸಲ್ಪಡುತ್ತಿದ್ದಾರೆ. ಪ್ರಕೃತಿಯ ಜೀವ – ನಿರ್ಜೀವ ವಸ್ತುಗಳಲ್ಲೂ ಕೃತಜ್ಞತಾ ಭಾವ ನಮ್ಮಲ್ಲಿರಬೇಕು. ಹಾಗಾಗಿ ನಮ್ಮ ಆರೋಗ್ಯ, ಪ್ರಜ್ಞೆ, ಬಲ […]
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಛೇರಿ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರೀಶ ನಿಡ್ವಣ್ಣಾಯ (ಹೆಬ್ಬಾರಬೈಲು ನಿವಾಸಿ ಶ್ರೀ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮ ನೂಜಾಜೆ ದಂಪತಿಗಳ ಪುತ್ರ) ಪ್ರೌಢ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೃತೀಯ […]
ಶಾಂತಿವನ ಟ್ರಸ್ಟ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಧರ್ಮಸ್ಥಳದಲ್ಲಿ ನಡೆದ ಜಿಲ್ಲಾ ಮಟ್ಟದ ಜ್ಞಾನ ಪ್ರಕಾಶ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಧಾತ್ರಿ ಆರ್ ರೈ (ನೆಹರುನಗರ ನಿವಾಸಿ ರವೀಂದ್ರ ರೈ ಮತ್ತು ಉಷಾ ದಂಪತಿಗಳ ಪುತ್ರಿ) ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
‘ಕಲಿಕೆಗೆ ಸುಗಮ ಹಾದಿಯೆಂಬುದಿಲ್ಲ. ಇಷ್ಟಪಟ್ಟು ಕಲಿತಾಗ ವಿಷಯ ಬೇಗ ಅರ್ಥವಾಗುತ್ತದೆ. ಹತ್ತನೇ ತರಗತಿಯ ಪರೀಕ್ಷೆ ಬರೆಯಲಿರುವ ಮಕ್ಕಳು ಸುಗಮ ಕಲಿಕಾ ವಿಧಾನಗಳನ್ನು ಅನುಸರಿಸಿ-ಅಭ್ಯಸಿಸಿ ಉತ್ತಮ ತಯಾರಿಯತ್ತ ತಮ್ಮ ಗಮನ ಹರಿಸಬೇಕು’ – ಬಿ.ವಿ ಸೂರ್ಯನಾರಾಯಣ, ನಿವೃತ್ತ ಪ್ರಾಂಶುಪಾಲರು. ನಮ್ಮ ಶಾಲಾ ಹತ್ತನೇ ತರಗತಿಯ ಮಕ್ಕಳಿಗೆ ‘ವೃತಿಕಾ’ ವಿಜ್ಞಾನ ವೇದಿಕೆ ವತಿಯಿಂದ ಆಯೋಜಿಸಲಾದ ‘ಪರೀಕ್ಷಾ ಸಿದ್ಧತೆ’ ವಿಷಯದ ಬಗ್ಗೆ ಶ್ರೀಯುತರು ಮಾತನಾಡಿ ಕಲಿಕೆಯು ಪರೀಕ್ಷೆಗಳಿಗೆ ಸೀಮಿತವಾಗದೆ ತಿಳುವಳಿಕೆಯ ದೃಷ್ಟಿಯಿಂದ ಮುನ್ನಡೆಯುವಂತಿರಬೇಕು ಎಂದು ಹೇಳಿದರು. ವಿಜ್ಞಾನ ಸಂಘದ ಸಂಯೋಜಕರಾದ ಶ್ರೀಮತಿ […]
“ ಮೌಲ್ಯಾಂಕನ ಪದ್ಧತಿ ಮಕ್ಕಳ ಕಲಿಕಾ ಸಾಮಥ್ರ್ಯ ತಿಳಿಯುವ ದಾರಿಯಾಗಿದೆ. ಪ್ರಸಕ್ತ ವರ್ಷ 5 ಮತ್ತು 8ನೇ ತರಗತಿ ಮಕ್ಕಳಿಗೆ ರಾಜ್ಯಾದಾತ್ಯಂತ ಏಕರೂಪವಾಗಿ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ. ಈ ದಿಶೆಯಿಂದ ಮಗುವಿನ ಸಾಮಥ್ರ್ಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರದಷ್ಟೇ ಮಹತ್ವದ ಪಾತ್ರ ಪೋಷಕರದ್ದಾಗಿರುತ್ತದೆ.” – ಶ್ರೀಮತಿ ದೇವಕಿ, ಶಿಕ್ಷಕರು ಸ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಪೋಷಕರ ಸಭೆಗೆ ಅಭ್ಯಾಗತರಾಗಿ ಆಗಮಿಸಿ 5 ಮತ್ತು 8ನೇ […]