ಜಿಲ್ಲಾಮಟ್ಟದ ಗಣಿತ– ವಿಜ್ಞಾನ ಹಾಗೂ ಸಂಸ್ಕತಿ ಜ್ಞಾನ– ಮಹೋತ್ಸವ
ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಸದಾಜಾಗೃತವಾಗಿರಬೇಕು–ಡಾ| ಕೆ.ಗಣೇಶ್‌ರಾಜ್(ನಿವೃತ್ತ ವಿಜ್ಞಾನಿ)
ಜಿಯೋಸ್ಪೇಶಿಯಲ್ ವಿಭಾಗಇಸ್ರೋ ಬೆಂಗಳೂರು
“ವಿದ್ಯಾರ್ಥಿ ಬದುಕಿನಲ್ಲಿ ಕುತೂಹಲ ಪ್ರವೃತ್ತಿ ಮತ್ತು ಪ್ರಶ್ನಿಸುವ ಮನೋಭಾವ ಇರಲೇಬೇಕು, ಸೋಲಿಗೆ ಧೃತಿಗೆಡದೆ, ವಿಷಯ ಜ್ಞಾನದ ಆಳವಾದ ಅಧ್ಯಯನ, ಕುತೂಹಲ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾಭಾರತಿಯ ಜಿಲ್ಲಾಮಟ್ಟದ ಗಣಿತ-ವಿಜ್ಞಾನ ಹಾಗೂ ಸಂಸ್ಕತಿ ಜ್ಞಾನ ಪರಿಚಯ ಸ್ಪರ್ಧಾಮೇಳ ‘ಅನುರಣನ’ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಜಿಯೋಸ್ಫೇಶಿಯಲ್, ಇಸ್ರೋ ಬೆಂಗಳೂರು ಇಲ್ಲಿನ ನಿವೃತ್ತ ವಿಜ್ಞಾನಿ ಡಾ. ಕೆ ಗಣೇಶ್‌ರಾಜ್ ನುಡಿದರು.

ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಶ್ರೀ ಜಯದೇವ ಶಿವತ್ತಾಯ ಪಿ , ಸೀನಿಯರ್ ಅಸೋಸಿಯೇಟ್ ಕನ್ಸಲ್‌ಟೆನ್ಸಿ ವಿಭಾಗ, ಇನ್ಫೋಸಿಸ್, ಮುಡಿಪು ಇವರು ಕಾರ್ಯಕ್ರಮವನ್ನು÷ಉದ್ಘಾಟಿಸಿ ‘ಗುರಿ ಎಷ್ಟು ಮುಖ್ಯವೋ ಗುರಿ ಸಾಧಿಸುವ ಪಥ ಅಷ್ಟೇ ಮುಖ್ಯ, ಪ್ರಯತ್ನ ಸತತವಾಗಿರಲಿ’ ಎಂದು ನುಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ತಿರುಮಲೇಶ್ವರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ಚಂದ್ರ, ಸಂಚಾಲಕರಾದ ವಸಂತ ಸುವರ್ಣ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಗುರು ಆಶಾಬೆಳ್ಳಾರೆ ಸ್ವಾಗತಿಸಿ, ವಿದ್ಯಾಭಾರತಿಗಣಿತ-ವಿಜ್ಞಾನ ವಿಭಾಗದಆಯೋಜಕರಾದರಘುರಾಮ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಕತಿಜ್ಞಾನ ವಿಭಾಗದ ಆಯೋಜಕರಾದ ಗಣೇಶ್ ವಾಗ್ಲೆ ವಂದಿಸಿದರು.ಸುಮಾರು ೮೪೦ ವಿದ್ಯಾರ್ಥಿಗಳು ಮತ್ತು ೧೨೦ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕಿ ವೀಣಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.