Author Archive

ಡ್ರಾಯಿಂಗ್ ಗ್ರೇಡ್  ಪರೀಕ್ಷೆಯಲ್ಲಿ ಶೇ.100 ಫಲಿತಾಂಶ.

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ.

Wednesday, December 20th, 2023

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯವi ಶಾಲೆಗೆ ಶೇ.100 ಬಂದಿರುತ್ತದೆ. ನಮ್ಮ ಶಾಲೆಯ ಒಟ್ಟು 47 ವಿದ್ಯಾರ್ಥಿಗಳು ಭಾಗವಹಿಸಿ ತೇರ್ಗಡೆ ಹೊಂದಿದ್ದಾರೆ. ಹೈಯರ್ ವಿಭಾಗದಲ್ಲಿ ಒಟ್ಟು 29ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 28 ವಿದ್ಯಾರ್ಥಿಗಳು ಅತ್ಯುತ್ತಮ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ, ಒಬ್ಬ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಗಗನ, ಪ್ರಜ್ಞಾ ನಿಡ್ವಣ್ಣಾಯ, ಪೂಜಾ, ನೇಹಾ, ಭುವಿ, ಬಿಂದುಶ್ರೀ, ದೀಕ್ಷಿತಾ, ಆಕಾಶ್, ಜಸ್ವಂತ್, ಪವನ್ […]

ರಾಷ್ಟ್ರಮಟ್ಟದ ಕ್ರೀಡಾಕೂಟ – ಚಿನ್ನದ ಪದಕ

ರಾಷ್ಟ್ರಮಟ್ಟದ ಕ್ರೀಡಾಕೂಟ – ಚಿನ್ನದ ಪದಕ

Wednesday, December 20th, 2023

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉತ್ತರ ಪ್ರದೇಶದ ಲಕ್ನೋದಲ್ಲಿ ಡಿ.16ರಿಂದ 20 ರ ತನಕ ನಡೆದ 67ನೇ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕು. ಜಿ.ಎಂ ಕೀರ್ತಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಈಕೆ ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಮೋನಪ್ಪ ಗೌಡ ಮತ್ತು ಲಲಿತಾ ದಂಪತಿಗಳ ಪುತ್ರಿ. ರಾಷ್ಟ್ರಮಟ್ಟದ ಈ ಸಾಧನೆಯು ಶಾಲಾ ಇತಿಹಾಸದಲ್ಲಿಯೇ ಇದು ಪ್ರಥಮ ದಾಖಲೆಯಾಗಿದೆ.

ಜಿಲ್ಲಾ ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ತೃತೀಯ ಸೋಪಾನ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆ

ಜಿಲ್ಲಾ ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ತೃತೀಯ ಸೋಪಾನ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆ

Friday, December 15th, 2023

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಇದರ ವತಿಯಿಂದ ನಡೆಸಲ್ಪಟ್ಟ 2022-23 ನೇ ಸಾಲಿನ ತೃತೀಯ ಸೋಪಾನ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ ವಿದ್ಯಾರ್ಥಿಗಳಾದ ಹಿತೇಶ್,ಯಜ್ಞ ಎನ್ ,ಧನುಷ್, ಕೀರ್ತನ್ ಕುಲಾಲ್ ಸಾಯಿ ಪ್ರಸಾದ್ ಎಸ್ ,ಧನುಷ್ ಮತ್ತು ಗೈಡ್ಸ್ ವಿದ್ಯಾರ್ಥಿನಿಯರಾದ ಪ್ರಜ್ಞಾ ನಿಡ್ವಣ್ಣಾಯ,ಪೃಥ್ವಿ,ದೃಷ,ನೇಹಾ ಎಂ,ನಿಸರ್ಗ ತೋಟರ, ಸ್ವಸ್ತ ಎಂ ಉತ್ತೀರ್ಣರಾಗಿರುತ್ತಾರೆ. ಇವರಿಗೆ ಶಾಲೆಯ ಸ್ಕೌಟ್ ಶಿಕ್ಷಕರಾದ ರಾಜೇಶ್ ಪಿ ಬಿ ನಂದಿಲ ಮತ್ತು ಗೈಡ್ಸ್ ಶಿಕ್ಷಕಿ ಹರಿಣಾಕ್ಷಿ […]

ರಾಜ್ಯಮಟ್ಟದ ಕಬ್ ಮತ್ತು ಹೀರಕ್ ಗರಿ ಬುಲ್ ಬುಲ್ ಪರೀಕ್ಷೆ

ರಾಜ್ಯಮಟ್ಟದ ಕಬ್ ಮತ್ತು ಹೀರಕ್ ಗರಿ ಬುಲ್ ಬುಲ್ ಪರೀಕ್ಷೆ

Wednesday, December 13th, 2023

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನಡೆಸಲ್ಪಟ್ಟ 2022-23ನೇ ಸಾಲಿನ ರಾಜ್ಯಪುರಸ್ಕಾರ ಕಬ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ  ಶಾಲೆಯ ವಿದ್ಯಾರ್ಥಿಗಳಾದ ಕ್ಷಾತ್ರ ಆರ್ ರೈ, ಜಿತೇಶ್, ಹಿತೇಶ್, ಹವನ್ ಸುವರ್ಣ, ವಿಖ್ಯಾತ್ ಮತ್ತು ಹೀರಕ್ ಗರಿ ಬುಲ್ ಬುಲ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಾದ ಪ್ರಣತಿ ಬಂಗಾರಕೋಡಿ, ತನುಷ, ಗರಿಮಾ, ಸಾನ್ವಿ ಬಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ಲೇಡಿ ಕಬ್ ಮಾಸ್ಟರ್ ವೀಣಾ ಕುಮಾರಿ ಮತ್ತು ಬುಲ್ ಬುಲ್ ಶಿಕ್ಷಕಿ ಸೌಮ್ಯಶ್ರೀ ತರಬೇತಿ ನೀಡಿರುತ್ತಾರೆ.     […]

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟ್ರಮಟ್ಟದಲ್ಲಿ ದ್ವಿತೀಯ

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟ್ರಮಟ್ಟದಲ್ಲಿ ದ್ವಿತೀಯ

Wednesday, December 13th, 2023

ವಿದ್ಯಾಭಾರತಿ ಅಖಿಲಾ ಭಾರತೀಯ ಶಿಕ್ಷಾ ಸಂಸ್ಥಾನ, ಅಖಿಲಾ ಭಾರತೀಯ ಸಂಸ್ಕೃತಿ ಮಹೋತ್ಸವ ಮತ್ತು ಶ್ರೀಜಿ ಬಾಬಾ ಸರಸ್ವತಿ ವಿದ್ಯಾಮಂದಿರ, ಮಥುರಾ ಇಲ್ಲಿ ನಡೆದ ರಾಷ್ಟ್ರಮಟ್ಟದ ಮೂರ್ತಿಕಲಾ ರಚನಾ ಸ್ಪರ್ಧೆಯಲ್ಲಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಕಿಶಾನ್(ಹರೀಶ್ ಗೌಡ ಮತ್ತು ಸವಿತಾ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾನೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ, ಶ್ರೀ ರಂಗಪ್ಪ ಕಲಾದಗಿ ತರಬೇತಿ ನೀಡಿರುತ್ತಾರೆ.

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ಪ್ರಶಸ್ತಿ

Tuesday, December 5th, 2023

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್(ರಿ)ಇದರ ಪುತ್ತೂರು ತಾಲೂಕು ಮಟ್ಟದ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಮಂಗಳದುರ್ಗಾ ಟಿ.ಆರ್ ಶ್ಲೋಕ ಕಂಠಪಾಠ (ಜ್ಞಾನವಾರಿಧಿ)ದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.               ಮತ್ತು ಜ್ಞಾನ ಶರಧಿ ಪುಸ್ತಕಾಧಾರಿತ ಭಾಷಣ ಸ್ಪರ್ಧೆಯಲ್ಲಿ 5ನೇ ತರಗತಿಯ ಶ್ರೀ ಕೃಷ್ಣ.ಬಿ ತೃತೀಯ ಸ್ಥಾನ ಗಳಿಸಿದ್ದಾನೆ.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ - 5-10

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – 5-10

Tuesday, December 5th, 2023

‘ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂದು ಅನೇಕ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ’ ಎಂದು ಶಾಲೆಯಲ್ಲಿ ನಡೆದ 5ರಿಂದ 10ನೇ ತರಗತಿಯವರೆಗಿನ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಭಾಧ್ಯಕ್ಷ ಸ್ಥಾನವನ್ನು ವಹಿಸಿದ ಕೃಷಿಕರು, ಹೈನುಗಾರಿಕೆ ತಜ್ಞರು ಆಗಿರುವ ಶ್ರೀ ಈಶ್ವರ ಭಟ್ ಪೆರುವಾಜೆ ಇವರು ನುಡಿದರು.                         […]

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ - 1-4

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – 1-4

Tuesday, December 5th, 2023

ಉತ್ತಮ ಸಂಸ್ಕಾರ ಸಂಸ್ಕೃತಿಯಿಂದ ಮಕ್ಕಳ ಕೌಶಲ್ಯ ಹೆಚ್ಚಲು ಸಾಧ್ಯ – ಉಪೇಂದ್ರ ಬಲ್ಯಾಯ “ಶಾಲೆಯಲ್ಲಿ ಉತ್ತಮವಾದ ಸಂಸ್ಕಾರ, ಸಂಸ್ಕೃತಿಯಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳು ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಾರೆ, ಹಾಗೆಯೇ ಕನ್ನಡ ಮಾಧ್ಯಮ ಎಂಬ ಯಾವುದೇ ಕೀಳರಿಮೆ ಬೆಳೆಸಿಕೊಳ್ಳಬೇಡಿ” ಎಂದು  ಶಾಲೆಯಲ್ಲಿ ನಡೆದ 1ರಿಂದ 4ನೇ ತರಗತಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಭಾಧ್ಯಕ್ಷ ಸ್ಥಾನವನ್ನು ವಹಿಸಿದ ಮೈಸೂರು ಆಂಗ್ರೋ ಸಪ್ಲೈಸ್ ಸಂಸ್ಥೆಯ ಮಾಲಕರಾದ ಶ್ರೀ ಉಪೇಂದ್ರ ಬಲ್ಯಾಯ ನುಡಿದರು.   […]

ಸಮತ್ವ- ಸಾಮರಸ್ಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ

ಸಮತ್ವ- ಸಾಮರಸ್ಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ

Monday, December 4th, 2023

ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದಲ್ಲಿ ಸಕ್ರಿಯವಾಗಿರುವುದರಿಂದ ನಮ್ಮ ಕಲಿಕೆ- ಉದ್ಯೋಗದ ನಡುವೆಯೂ ಸಾಮಾಜಿಕ ಜವಾಬ್ದಾರಿಗಳ ಪರಿಚಯ ನಮಗಾಗುತ್ತದೆ. ಇದು ನಮ್ಮಲ್ಲಿರುವ ಏಕತಾನತೆಯನ್ನು ದೂರಮಾಡಲು ಸಹಕಾರಿಯಾಗಿದೆ. – ವಿರೂಪಾಕ್ಷ ವಕೀಲರು, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀಯುತರು ಪ್ರಾಸ್ತಾವಿಕ ಮಾತುಗಳೊಂದಿಗೆ ಬಂದಂತಹ ಸರ್ವರನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಡಾ. ಪುನೀತ್ ಅವರು ಶಾಲಾ ಚಟುವಟಿಕೆಗಳೊಂದಿಗೆ ಜೋಡಿಕೊಳ್ಳುವ ಸಾಧ್ಯತೆಗಳನ್ನು ತಿಳಿಸುತ್ತಾ ಶಾಲಾ ಪಠ್ಯ-ಪಠ್ಯಪೂರಕ ಚಟುವಟಿಕೆಗಳ ಪ್ರಸಕ್ತ ದಿನಗಳನ್ನು ತಿಳಿಸಿದರು.                         […]

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ–ಆಶುಭಾಷಣ ಸ್ಪರ್ಧೆ-ದ್ವಿತೀಯ

ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿ–ಆಶುಭಾಷಣ ಸ್ಪರ್ಧೆ-ದ್ವಿತೀಯ

Monday, December 4th, 2023

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು, ಹಾಗೂ ಶ್ರೀ ರಾಮಕೃಷ್ಣ ಆಂಗ್ಲಮಾಧ್ಯಮ ಶಾಲೆ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಶಾಲೆಯಲ್ಲಿ  ಶ್ರೀಕೃಷ್ಣ ಬಿ (ವೆಂಕಟೇಶ್ ಬಿ ಮತ್ತು ಮಂಗಳ ಗೌರಿ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರಿಗೆ ನುಡಿ ನಮನ

ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರಿಗೆ ನುಡಿ ನಮನ

Friday, December 1st, 2023

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ನಿರ್ದೇಶನದಂತೆ ಶಾಲೆಯಲ್ಲಿ ಭಾರತ ಮಾತೆಯ ಮಡಿಲಿಗೆ ತನ್ನ ಪ್ರಾಣತ್ಯಾಗ ಮಾಡಿದ ವೀರಯೋಧ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ರಾಷ್ಟ್ರಪತಿ ಸ್ಕೌಟ್ ಎಂ.ವಿ ಪ್ರಾಂಜಲ್ ಇವರಿಗೆ ನುಡಿನಮನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಸ್ಕೌಟ್ ಮಾಸ್ಟರ್ ರಾಜೇಶ್ ನಂದಿಲ ತಮ್ಮ ಮಾತುಗಳಿಂದ ನುಡಿ ನಮನ ಸಲ್ಲಿಸಿದರು. ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಮತ್ತು ಇತರ ಶಿಕ್ಷಕರು ಕ್ಯಾಪ್ಟನ್ […]

ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ – ರಾಜ್ಯಮಟ್ಟಕ್ಕೆ ಆಯ್ಕೆ

ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ – ರಾಜ್ಯಮಟ್ಟಕ್ಕೆ ಆಯ್ಕೆ

Tuesday, November 28th, 2023

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ(ಆಡಳಿತ) ಮಂಗಳೂರು ಮತ್ತು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ರಥಬೀದಿ ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆಯಲ್ಲಿ  ಶಾಲಾ ಶಿಕ್ಷಕರಾದ ಶ್ರೀ ರಂಗಪ್ಪ ಕಲಾದಗಿ ಇವರು ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ

ವಾರ್ಷಿಕ ಕ್ರೀಡಾಕೂಟ - ಸದೃಶ-ಸಂಭ್ರಮ

ವಾರ್ಷಿಕ ಕ್ರೀಡಾಕೂಟ – ಸದೃಶ-ಸಂಭ್ರಮ

Tuesday, November 28th, 2023

ಶಿಸ್ತು, ಶೋಧನೆಗಳು ವಿದ್ಯಾರ್ಥಿಯು ಉನ್ನತ ಮಟ್ಟಕ್ಕೇರುವ ಸಾಧನಗಳು : ಡಾ|ಶ್ರೀಪತಿ ಕಲ್ಲೂರಾಯ ವಿದ್ಯಾರ್ಥಿಗಳು ಬಾಲ್ಯದಿಂದಲೇ ಶಿಸ್ತು ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಭವಿಷ್ಯತ್ತಿನಲ್ಲಿ ವೈದ್ಯಕೀಯ, ಕ್ರೀಡೆಯಂತಹ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಸಾಮಥ್ರ್ಯವನ್ನುಗಳಿಸುತ್ತಾರೆ ಎಂದು ಸದೃಶ-ಸಂಭ್ರಮ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ನುಡಿದರು. ಕಾರ್ಯಕ್ರಮದಲ್ಲಿ ಕ್ರೀಡಾಧ್ವಜಾರೋಹಣ ಮಾಡಿದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ದೈಹಿಕ ಶಿಕ್ಷಣ – ಶಿಕ್ಷಕರಾದ ಶ್ರೀ ಗೋಪಿನಾಥ್ ಅವರು ಕ್ರೀಡೆಯಲ್ಲಿ ಸೋಲು ಗೆಲುವುಗಳು […]

ಭಗವದ್ಗೀತಾ ಜಯಂತಿ ಸ್ಪರ್ಧೆಗಳು

ಭಗವದ್ಗೀತಾ ಜಯಂತಿ ಸ್ಪರ್ಧೆಗಳು

Thursday, November 23rd, 2023

ಮಂಗಳೂರು ಸಂಸ್ಕೃತ ಸಂಘ(ರಿ) ಮಂಗಳೂರು, ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ, ದ.ಕ ಜಿಲ್ಲೆ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ, ಮತ್ತು ಸರಸ್ವತಿ ವಿದ್ಯಾಕೇಂದ್ರ, ನರಿಮೊಗರು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಗೀತಾಜಯಂತಿ ಅಂಗವಾಗಿ ನಡೆದ ಶ್ರೀಮದ್ ಭಗವದ್ಗೀತಾ ಸ್ಪರ್ಧೆಯಲ್ಲಿ  ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1 ಮತ್ತು 2ನೇ ತರಗತಿ ವಿಭಾಗ (ಕಂಠಪಾಠ)ದಲ್ಲಿ ಸನ್ಮಯ ಭಟ್(ಪ್ರಥಮ), ಕೀರ್ತನ್ ಪಿ ಯು(ದ್ವಿತೀಯ) 5ರಿಂದ 7ನೇ ತರಗತಿ ವಿಭಾಗ (ಕಂಠಪಾಠ)ದಲ್ಲಿ ಮುಕುಂದ(ಪ್ರಥಮ), ಶ್ರೀಕೃಷ್ಣ(ದ್ವಿತೀಯ), ಭಾಷಣ ಸ್ಪರ್ಧೆಯಲ್ಲಿ – […]

ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ

ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ

Thursday, November 23rd, 2023

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕಟ್ಟೆ ಪುತ್ತೂರು ಇದರ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.                                                  […]

ಸಾಂಸ್ಕೃತಿಕ ಸ್ಪರ್ಧೆ-  ಶಾಲೆಗೆ ಹಲವು ಪ್ರಶಸ್ತಿ

ಸಾಂಸ್ಕೃತಿಕ ಸ್ಪರ್ಧೆ- ಶಾಲೆಗೆ ಹಲವು ಪ್ರಶಸ್ತಿ

Monday, November 20th, 2023

ಸರೋಜಿನಿ ಮಧುಸೂದನ ಕುಶೆ, ಅತ್ತಾವರ, ಮಂಗಳೂರು ಇಲ್ಲಿನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಬ್ ಜೂನಿಯರ್ ವಿಭಾಗದ ಚಿತ್ರಕಲೆಯಲ್ಲಿ ಶ್ರುತಿ ಎಸ್ ನಾಯಕ್ ತೃತೀಯ ಹಾಗೂ ಸಬ್ ಜೂನಿಯರ್ ವಿಭಾಗದ ಭಜನೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ, ಮತ್ತು ಜನಪದ ನೃತ್ಯ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.     […]

ವಿಜ್ಞಾನ ವಸ್ತುಪ್ರದರ್ಶನ ರಾಜ್ಯಮಟ್ಟಕ್ಕೆ ಆಯ್ಕೆ

ವಿಜ್ಞಾನ ವಸ್ತುಪ್ರದರ್ಶನ ರಾಜ್ಯಮಟ್ಟಕ್ಕೆ ಆಯ್ಕೆ

Saturday, November 11th, 2023

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿಕ್ಷಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ರೋಹಿತ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾಮಟ್ಟದ ವಿಜ್ಞಾನ ವಸ್ತುಪ್ರದರ್ಶನ - ತೃತೀಯ

ಜಿಲ್ಲಾಮಟ್ಟದ ವಿಜ್ಞಾನ ವಸ್ತುಪ್ರದರ್ಶನ – ತೃತೀಯ

Saturday, November 11th, 2023

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ  ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಚಿರಂತನ್ ಕೆ.ವಿ ಮತ್ತು ಸ್ಕಂದ ಬಳ್ಳಕ್ಕುರಾಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನ

ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನ

Saturday, November 11th, 2023

                           “ಆಸಕ್ತಿ, ಕುತೂಹಲಗಳೇ ವಿಜ್ಞಾನದ ಹೊಸ ಆವಿಷ್ಕಾರಗಳಿಗೆ ಮೂಲ”- ಶ್ರೀಮತಿ ರಾಜಲಕ್ಷ್ಮೀ “ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಾಟಕಗಳು, ಮಾದರಿ ತಯಾರಿ, ಸೆಮಿನಾರ್ ಇತ್ಯಾದಿಗಳಲ್ಲಿ ಸ್ಪರ್ಧೆಗಳು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಅವರಿಗೆ ಹೊಸ ಸಂಶೋಧನೆಗಳನ್ನು ನಡೆಸಲು ಪ್ರೇರಣೆ, ಸ್ಪೂರ್ತಿ ದೊರೆಯುತ್ತದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿಯಿದ್ದು ಹೊಸ ವಿಷಯಗಳನ್ನು ತಿಳಿಯುವ ಕುತೂಹಲವಿದ್ದಾಗ ವಿಜ್ಞಾನದ ಬೆಳವಣಿಗೆಯಾಗಿ ನೂತನ ಆವಿಷ್ಕಾರಗಳಿಗೆ ಕಾರಣವಾಗುತ್ತದೆ” ಎಂದು ಸಾರ್ವಜನಿಕ […]

ವಾಲ್ಮೀಕಿ ಜಯಂತಿ ಹಾಗೂ ರಾಮಾಯಣ - ಋಷಿ ದರ್ಶನ

ವಾಲ್ಮೀಕಿ ಜಯಂತಿ ಹಾಗೂ ರಾಮಾಯಣ – ಋಷಿ ದರ್ಶನ

Thursday, November 9th, 2023

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ .ಪುತ್ತೂರು ತಾಲೂಕು ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಅಂಗವಾಗಿ ರಾಮಾಯಣ ಋಷಿ ದರ್ಶನ ಕಾರ್ಯಕ್ರಮ  ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರಗಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆ ಇವರು ರಾಮಾಯಣ ಮಹಾಕಾವ್ಯವಾಗಿ ನೀಡುತ್ತಿರುವ ಜೀವನ ದರ್ಶನ ಮೌಲ್ಯವನ್ನು ತಿಳಿಸುತ್ತಾ ” ರಾಮಾಯಣ ಕೇಳಬೇಕಾದರೆ ನಾವು ಸಾಮಾನ್ಯರಲ್ಲಿ ಸಾಮಾನ್ಯ ರಾಗಬೇಕು. ಕಾವ್ಯವೊಂದು ಮಹಾಕಾವ್ಯವಾಗುತ್ತಿದ್ದಂತೆ ಜಗತ್ತಿಗೆ ಅದರ ಕಾಣ್ಕೆಯನ್ನು ದರ್ಶಿಸಲು ನಾವು ಸಹಜವಾಗಿದರಬೇಕು. […]

ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ  ಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

Wednesday, November 8th, 2023

ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಹಾರಾಡಿ, ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ- ಮಂಗಳಾದುರ್ಗಾ ಟಿ.ಆರ್ ( ಟಿ ರಾಮಕೃಷ್ಣ ಭಟ್ ಮತ್ತು ಈಶ್ವರಿ ಆರ್ ಕೆ ಭಟ್ ದಂಪತಿಗಳ ಪುತ್ರಿ)-ಗಝಲ್(ಪ್ರಥಮ), ಕವನಶ್ರೀ(ಗೋಪಾಲಕೃಷ್ಣ ಮತ್ತು ಕೆ ಶೈಲಜಾ ಪಂಪತಿ ಪುತ್ರಿ)- ರಂಗೋಲಿ(ಪ್ರಥಮ),ಶೃಜನ್ ಜೆ ರೈ(ಕೆ ಜಗನ್ಮೋಹನ್ ರೈ […]

ವಿಜ್ಞಾನ ವಸ್ತು ಪ್ರದರ್ಶನ – ಜಿಲ್ಲಾಮಟ್ಟಕ್ಕೆ ಆಯ್ಕೆ

ವಿಜ್ಞಾನ ವಸ್ತು ಪ್ರದರ್ಶನ – ಜಿಲ್ಲಾಮಟ್ಟಕ್ಕೆ ಆಯ್ಕೆ

Monday, November 6th, 2023

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಅಂಬಿಕಾ ವಿದ್ಯಾಲಯ ಬಪ್ಪಳಿಗೆ, ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಚಿರಂತನ್ ಮತ್ತು ಸ್ಕಂದ ಬಳಕ್ಕುರಾಯ ಇವರು ಮಂಡಿಸಿದ ಪ್ರದರ್ಶನವು ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಜಿಲ್ಲಾಮಟ್ಟದ ಕ್ರೀಡಾಕೂಟ - ರುತಿಕ್ –ಪ್ರಥಮ

ಜಿಲ್ಲಾಮಟ್ಟದ ಕ್ರೀಡಾಕೂಟ – ರುತಿಕ್ –ಪ್ರಥಮ

Monday, November 6th, 2023

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 14ರ ವಯೋಮಾನದ ಬಾಲಕ – ಬಾಲಕಿಯರ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ರುತಿಕ್(ಚಂದ್ರಶೇಖರ ಕರ್ಕೇರ ಮತ್ತು ಸುಮಿತ್ರ ದಂಪತಿಗಳ ಪುತ್ರ) ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ದಾಮೋದರ್, ಹರಿಣಾಕ್ಷಿ ಮತ್ತು ಶ್ರದ್ಧಾ ಶೆಟ್ಟಿ ತರಬೇತಿ ನೀಡಿರುತ್ತಾರೆ.

ರಾಜ್ಯಮಟ್ಟದ ಕ್ರೀಡಾಕೂಟ ಶಾಲೆಯ ರಿಲೇ ತಂಡ - ದ್ವಿತೀಯ

ರಾಜ್ಯಮಟ್ಟದ ಕ್ರೀಡಾಕೂಟ ಶಾಲೆಯ ರಿಲೇ ತಂಡ – ದ್ವಿತೀಯ

Monday, November 6th, 2023

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 14ರ ವಯೋಮಾನದ ಬಾಲಕ – ಬಾಲಕಿಯರ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಪ್ರತೀಕ್ಷಾ(ಬಾಲಕೃಷ್ಣ ಮತ್ತು ಶಶಿಕಲಾ ದಂಪತಿಗಳ ಪುತ್ರಿ), ಕೀರ್ತಿ (ಮೋನಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿ), ತ್ರಿಶಾ (ಸತೀಶ್ ಮತ್ತು ಪುಷ್ಪಲತಾ ದಂಪತಿಗಳ ಪುತ್ರಿ), ಗುಣಶ್ರೀ (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಇವರ ರಿಲೇ ತಂಡ 55.7 ಸಮಯದಲ್ಲಿ ಗುರಿ ತಲುಪಿ ನೂತನ ದಾಖಲೆಯೊಂದಿಗೆ ಪ್ರಥಮ ಸ್ಥಾನ […]

ಎತ್ತರ ಜಿಗಿತ  -ಕೀರ್ತಿ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಎತ್ತರ ಜಿಗಿತ -ಕೀರ್ತಿ – ರಾಷ್ಟ್ರಮಟ್ಟಕ್ಕೆ ಆಯ್ಕೆ

Monday, November 6th, 2023

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಡುಪಿಯಲ್ಲಿ ನಡೆದ 14ರ ವಯೋಮಾನದ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಕೀರ್ತಿ (ಮೋನಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿ) ಎತ್ತರ ಜಿಗಿತದಲ್ಲಿ 1.40ಮೀ ಎತ್ತರ ಹಾರಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ದಾಮೋದರ್, ಹರಿಣಾಕ್ಷಿ ಮತ್ತು ಶ್ರದ್ಧಾ ಶೆಟ್ಟಿ ತರಬೇತಿ ನೀಡಿರುತ್ತಾರೆ.

ಚಿತ್ರಕಲಾ ಸ್ಪರ್ಧೆ  ಜಿಲ್ಲಾಮಟ್ಟಕ್ಕೆ ಆಯ್ಕೆ

ಚಿತ್ರಕಲಾ ಸ್ಪರ್ಧೆ ಜಿಲ್ಲಾಮಟ್ಟಕ್ಕೆ ಆಯ್ಕೆ

Monday, November 6th, 2023

ಉದಯವಾಣಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅದ್ವಿತ್ ಜಿ (ಗಣೇಶ್ ಆಚಾರ್ಯ ಮತ್ತು ಮಂಜುಳಾ ದಂಪತಿ ಪುತ್ರ) ಪ್ರಾಥಮಿಕ ವಿಭಾಗದಲ್ಲಿ ಪ್ರಥಮ, ಪೂಜಾ (ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ) ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಪೂಜಾರಿ ತರಬೇತಿ ನೀಡಿರುತ್ತಾರೆ.

ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡ ರಾಜ್ಯೋತ್ಸವ ಆಚರಣೆ

Saturday, November 4th, 2023

“ಸರಳವಾದ ಹಾಗೂ ಸುಂದರವಾದ ಕನ್ನಡ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ಮೂಲಕ ನಮ್ಮ ಭವಿಷ್ಯದ ಬೇರನ್ನು ಗಟ್ಟಿಗೊಳಿಸೋಣ. ಕನ್ನಡವು ನಮ್ಮ ಹೃದಯದ ಭಾಷೆ. ಇದರಲ್ಲಿ ನಾವು ಆಲೋಚನೆ ಮಾಡುತ್ತಾ ದೈನಂದಿನ ಜೀವನದಲ್ಲಿ ಕನ್ನಡದಲ್ಲಿಯೇ ವ್ಯವಹರಿಸೋಣ. ಕನ್ನಡವನ್ನು ಪ್ರೀತಿಸಿ, ಗೌರವಿಸಿ ಬೆಳೆಸುವ ಮೂಲಕ ನಮ್ಮ ಕನ್ನಡ ನಾಡಿನ ನೆಲ, ಜಲ ಸಂಸ್ಕೃತಿಯನ್ನು ರಕ್ಷಿಸೋಣ” ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ರೇವತಿ ಇವರು ನುಡಿದರು. ಶಿಕ್ಷಕಿ ಪೂರ್ಣಿಮಾರವರು […]

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

Thursday, November 2nd, 2023

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 20.10.2023ರಂದು ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ಪೂಜಾ ವಿಧಿ – ವಿಧಾನಗಳನ್ನು ನೆರವೇರಿದವು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಪುಟಾಣಿಗಳು ಶುಭ ಮೂಹೂರ್ತವಿರಿಸಿದರು. ಮಕ್ಕಳಿಗೆ ಆರತಿ ಎತ್ತಿ ಶಾರದ ಮಾತೆಗೆ ಪುಷ್ಫ ನಮನವನ್ನು ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಮುಖ್ಯ ಗುರುಗಳೂ, ಶಿಕ್ಷಕ- ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

ವಿದ್ಯಾಭಾರತಿ  ರಾಷ್ಟ್ರೀಯ ಮಟ್ಟದ ಕಬಡ್ಡಿ  ಪಂದ್ಯಾಟ  - ಎಸ್.ಜಿ.ಎಫ್.ಐ ಗೆ ಆಯ್ಕೆ

ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ – ಎಸ್.ಜಿ.ಎಫ್.ಐ ಗೆ ಆಯ್ಕೆ

Friday, October 13th, 2023

ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ – ಎಸ್.ಜಿ.ಎಫ್.ಐ ಗೆ ಆಯ್ಕೆ ಉತ್ತರ ಪ್ರದೇಶದ ಫತೆಪೂರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಶಾಲಾ ವಿದ್ಯಾರ್ಥಿನಿಯರಾದ ಪಿ ಕವನಶ್ರೀ (ಶ್ರೀ ಗೋಪಾಲಕೃಷ್ಣ ಮತ್ತು ಶೈಲಜಾ ದಂಪತಿಗಳ ಪುತ್ರಿ), ಪೂಜಾ (ಶ್ರೀ ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ), ಮಾನಸ ಎಂ(ಶ್ರೀ ಜಯೇಶ್ […]

ಮಹಿಳಾ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

ಮಹಿಳಾ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

Friday, October 13th, 2023

ಮಹಿಳಾ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ   – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗಿ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗಳ ಎಲ್ಲಾ ಠಾಣೆಗಳಲ್ಲಿ ‘ತೆರೆದ ಮನೆ’ ಎಂಬ ಕಾರ್ಯಕ್ರಮ ಆರಂಭಗೊಂಡಿದ್ದು,  ಪೊಲೀಸರ ಕುರಿತು ಜನಸಾಮಾನ್ಯರಲ್ಲಿ ಅಡಗಿರುವ ಭಯವನ್ನು ಮುಕ್ತಗೊಳಿಸುವ ಕಾರ್ಯಕ್ರಮ ಇದಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಮಹಿಳಾಪೊಲೀಸ್ ಠಾಣೆಯಲ್ಲಿ ಅ.12ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 75 ವಿದ್ಯಾರ್ಥಿಗಳಿಗೆ ಠಾಣೆ ಭೇಟಿ ಕಾರ್ಯಕ್ರಮ ನಡೆಯಿತು. ಮಹಿಳಾ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ […]

ನವದಂಪತಿ ಸಮಾವೇಶ

ನವದಂಪತಿ ಸಮಾವೇಶ

Thursday, October 12th, 2023

                                    ಜಗತ್ತಿಗೇ ಮಾರ್ಗದರ್ಶನ ತೋರುವ ಶಕ್ತಿ ಭಾರತಕ್ಕಿದೆ- ಸು.ರಾಮಣ್ಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕರು “ಗುರು ಹಿರಿಯರ ಆಶೀರ್ವಾದ ಪಡೆಯುವ ವಧೂವರರಿಗೆ ಸಂಸ್ಕಾರವನ್ನು ಕೊಡುವ ಒಂದು ವಿಧಿಯೇ ಮದುವೆ. ಪ್ರಕೃತಿಯ ಶಿಶುವಾದ ಮಾನವನು ಸಂಸ್ಕೃತಿಯಿಂದ ವಿಕಸಿತನಾಗಿ , ವಿಕೃತಿಯೆಡೆಗೆ ಜಾರದಂತೆ ಧರ್ಮಾಚರಣೆಯಲ್ಲಿ ತೊಡಗಿ ಸಮೃದ್ಧಿ, ಸಂಸ್ಕೃತಿ ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. […]

ಶಿಕ್ಷಣದಲ್ಲಿ ರಂಗಚಟುವಟಿಕೆ ಕಾರ್ಯಾಗಾರ

ಶಿಕ್ಷಣದಲ್ಲಿ ರಂಗಚಟುವಟಿಕೆ ಕಾರ್ಯಾಗಾರ

Thursday, October 12th, 2023

“ಕಲಾ ಮನೋಭಾವನೆಯನ್ನು ಹೊಂದಿರಬೇಕಾದರೆ ಮೊದಲು ನಾವು ಪ್ರೇಕ್ಷಕರಾಗಿರಬೇಕು” – ಪುರುಷೋತ್ತಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಂಗ ಚಟುವಟಿಕೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನೇಲ್ಯಡ್ಕ ಇಲ್ಲಿಯ ಪ್ರಭಾರ ಮುಖ್ಯೋಪಾಧ್ಯಾಯರಾದ ಪುರುಷೋತ್ತಮ ಇವರು ವಿದ್ಯಾರ್ಥಿಗಳಿಗೆ ವಿವಿಧರಂಗಗೀತಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.                                                                                          […]

ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ

ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ

Tuesday, October 10th, 2023

 ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ “ನೀರಿನ ಮಿತ ಬಳಕೆಯ ಬಗ್ಗೆ ನಮ್ಮ ಈ ತಲೆಮಾರಿಗೆ ಅರಿವು ನೀಡಿದಾಗ ಭವಿಷ್ಯದಲ್ಲಿ ನೀರಿನ ಸುಸ್ಥಿತಿ ಸಾಧ್ಯ” ಎಂದು KUIDFCಯ ಜಲಸಿರಿ ಯೋಜನೆಯ ಗ್ರಾಮ ಸಂಸ್ಥೆಯ ಜಂಡರ್ ಸ್ಪೆಷಲಿಸ್ಟ್ ಆಗಿರುವ ಶ್ರೀಮತಿ ಅಮೀಶಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ನಡೆದ ಜಲಸಿರಿ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ನುಡಿದರು. ನೀರಿನ ಅಗತ್ಯತೆ ಹಾಗೂ ಸದ್ವಿನಿಯೋಗ ಆದಾಗ ಮಾತ್ರ ಜಲಸಂರಕ್ಷಣೆ ಸಾಧ್ಯ ಎನ್ನುತ್ತಾ ವಿದ್ಯಾರ್ಥಿಗಳಲ್ಲಿ ಜಾಗೃತಿ […]

ವಿದ್ಯಾಭಾರತಿ ಕ್ರೀಡಾಕೂಟ -  ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕ್ರೀಡಾಕೂಟ – ರಾಷ್ಟ್ರಮಟ್ಟಕ್ಕೆ ಆಯ್ಕೆ

Tuesday, October 10th, 2023

ವಿದ್ಯಾಭಾರತಿ ಕ್ರೀಡಾಕೂಟ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ ವಿದ್ಯಾಭಾರತಿ ವತಿಯಿಂದ ಶ್ರೀ ಸರಸ್ವತಿ ವಿದ್ಯಾ ಪೀಠಂ, ಶಾರದಾ ಧಾಮ, ಹೈದರಾಬಾದ್, ತೆಲಂಗಾಣದಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕೀರ್ತಿ – ಎತ್ತರ ಜಿಗಿತ (ಪ್ರಥಮ) – (ಮೋನಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿ), ಗುಣಶ್ರೀ 80ಮೀ ಹರ್ಡಲ್ಸ್ (ಪ್ರಥಮ)- (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ) , ವಿಕೃತಿ ಕುಮಾರಿ(ಗೀತಾ ರೈ ಮತ್ತು ಪ್ರವೀಣ್ […]

ದಸರಾ ಕ್ರೀಡಾಕೂಟ – ಜಿಲ್ಲಾಮಟ್ಟಕ್ಕೆ ಆಯ್ಕೆ

ದಸರಾ ಕ್ರೀಡಾಕೂಟ – ಜಿಲ್ಲಾಮಟ್ಟಕ್ಕೆ ಆಯ್ಕೆ

Wednesday, September 27th, 2023

ದಸರಾ ಕ್ರೀಡಾಕೂಟ – ಜಿಲ್ಲಾಮಟ್ಟಕ್ಕೆ ಆಯ್ಕೆ ಪುತ್ತೂರು ತಾಲೂಕು ಮಟ್ಟದಲ್ಲಿ ನಡೆದ ಮಹಿಳೆಯರ ಖೋ-ಖೋ ಪಂದ್ಯಾವಳಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರು ಪ್ರಥಮ ಸ್ಥಾನ ಮತ್ತು ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಮತ್ತು ಮಹಿಳೆಯರ 4×100 ಮೀಟರ್ ರಿಲೇಯಲ್ಲಿ ಗುಣಶ್ರೀ (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಪ್ರತೀಕ್ಷಾ(ಬಾಲಕೃಷ್ಣ ಮತ್ತು ಶಶಿಕಲಾ ದಂಪತಿಗಳ ಪುತ್ರಿ), ತ್ರಿಶಾ (ಸತೀಶ್ ಮತ್ತು ಪುಷ್ಪಲತಾ ದಂಪತಿಗಳ ಪುತ್ರಿ), ಕೀರ್ತಿ (ಮೋನಪ್ಪ ಮತ್ತು ಲಲಿತಾ […]

ವಿದ್ಯಾಭಾರತಿ  ಕ್ರೀಡಾಕೂಟ

ವಿದ್ಯಾಭಾರತಿ ಕ್ರೀಡಾಕೂಟ

Wednesday, September 27th, 2023

ವಿದ್ಯಾಭಾರತಿ ಕ್ರೀಡಾಕೂಟ ಮಂಡ್ಯದ ಕೆರಗೋಡುನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 4×100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ರಿಲೆಯಲ್ಲಿ ಗುಣಶ್ರೀ (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಪ್ರತೀಕ್ಷಾ (ಬಾಲಕೃಷ್ಣ ಮತ್ತು ಶಶಿಕಲಾ ದಂಪತಿಗಳ ಪುತ್ರಿ) ತ್ರಿಶಾ (ಸತೀಶ್ ಮತ್ತು ಪುಷ್ಫಲತಾ ದಂಪತಿಗಳ ಪುತ್ರಿ) ಕೀರ್ತಿ (ಮೋನಪ್ಪ ಮತ್ತು ಲಲಿತ ದಂಪತಿಗಳ ಪುತ್ರಿ) ಪ್ರಥಮ ಸ್ಥಾನ ಹಾಗೂ ಕೀರ್ತಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ […]

ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ

ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ

Thursday, September 21st, 2023

   ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇನ್‍ಪೆಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾಟಿಪಳ್ಳ, ಸುರತ್ಕಲ್ ಇಲ್ಲಿ ನಡೆದ ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ವನೀಶ್ (ಚಿದಾನಂದ ಮತ್ತು ಪೂರ್ಣಿಮಾ ದಂಪತಿಗಳ ಪುತ್ರ), ಚಿಂತನ್ (ರವೀಂದ್ರ ಮತ್ತು ಸುನೀತ ದಂಪತಿಗಳ ಪುತ್ರ), ಭವಿಷ್(ಗಿರಿಧರ ಮತ್ತು ವಿಶಾಲಾಕ್ಷಿ […]

ಜಿಲ್ಲಾ ಪ್ರೌಢ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ

ಜಿಲ್ಲಾ ಪ್ರೌಢ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ

Saturday, September 16th, 2023

ಕ್ರೀಡಾ ಮನೋಭಾವ ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತದೆ-ಡಾ. ಕೃಷ್ಣ ಭಟ್ ಕೊಂಕೋಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿ ಪುತ್ತೂರು ತಾಲೂಕು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹಯೋಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್ ಕೊಂಕೋಡಿ ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅನ್ಯಾನ್ಯ […]

ಜಿಲ್ಲಾಮಟ್ಟದ ಕಬಡ್ಡಿ

ಜಿಲ್ಲಾಮಟ್ಟದ ಕಬಡ್ಡಿ

Saturday, September 16th, 2023

ವಿಭಾಗ ಮಟ್ಟಕ್ಕೆ ಆಯ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ತಂಡದಲ್ಲಿಕೃತಿಕಾ ಜಿ ( ಶ್ರೀ ರವಿ ಮತ್ತುಯಶೋಧ ದಂಪತಿಗಳ ಪುತ್ರಿ), ಆದ್ಯ ಬಿ.ಆರ್(ಶ್ರೀ ರಾಮಣ್ಣಗೌಡ ಮತ್ತುರೇಖಾ ಪಿ ದಂಪತಿಗಳ ಪುತ್ರಿ), ಪಿ ಕವನಶ್ರೀ (ಶ್ರೀ […]

ಯೋಗಾಸನ ಸ್ಪರ್ಧೆ

ಯೋಗಾಸನ ಸ್ಪರ್ಧೆ

Saturday, September 16th, 2023

ಜಿಲ್ಲಾಮಟ್ಟಕ್ಕೆ ಆಯ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನ ಪಡೆದಿರುತ್ತಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಶೃಜನ್ ಜೆ ರೈ ( ಜಗನ್ಮೋಹನ ರೈ ಮತ್ತು ಜಲಜಾ ರೈ ದಂಪತಿಗಳ ಪುತ್ರ)- ಪ್ರಥಮ ಸ್ಥಾನ, ರಿತೇಶ್ ನಾಯಕ್ (ರಾಜೇಶ್ ನಾಯಕ್ ಮತ್ತು ಸಂಧ್ಯಾ […]

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ

Saturday, September 16th, 2023

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರಕಾರಿ ಪ್ರೌಢಶಾಲೆ ಕೊಣಾಲು ಇಲ್ಲಿ ನಡೆದ ಪುತ್ತೂರುತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕರ ತಂಡದಲ್ಲಿ ಮನೀಶ್ (ಚಿದಾನಂದ ಮತ್ತು ಪೂರ್ಣಿಮಾ ದಂಪತಿಗಳ ಪುತ್ರ), ಚಿಂತನ್ (ರವೀಂದ್ರ ಮತ್ತು ಸುನೀತ ದಂಪತಿಗಳ ಪುತ್ರ), ಭವಿಷ್(ಗಿರಿಧರ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರ), ಸೃಜನ್ (ವಸಂತ ಜಿ ಮತ್ತು ಲಲಿತ ದಂಪತಿಗಳ ಪುತ್ರ), ಕೌಶಿಕ್ […]

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟಮಟ್ಟಕ್ಕೆ ಆಯ್ಕೆ

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟಮಟ್ಟಕ್ಕೆ ಆಯ್ಕೆ

Saturday, September 16th, 2023

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಕಲಬುರಗಿ ಜಿಲ್ಲೆಯ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ಇಲ್ಲಿ ನಡೆದ ರಾಜ್ಯಮಟ್ಟದ ಗಣಿತ -ವಿಜ್ಞಾನ ಮೇಳದ ಮೂರ್ತಿಕಲಾ ರಚನಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿ ಕಿಶಾನ್(ಹರೀಶ್ ಗೌಡ ಮತ್ತು ಸವಿತಾ ದಂಪತಿಗಳ ಪುತ್ರ) ಪ್ರಥಮ ಸ್ಥಾನ ಪಡೆದು ರಾಷ್ಟಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ ತರಬೇತಿ ನೀಡಿರುತ್ತಾರೆ.

ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

Saturday, September 16th, 2023

‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುತ್ತಾ ಪ್ರತಿಯೊಂದು ನಂಬಿಕೆ ಆಚರಣೆಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ತಿಳಿದುಕೊಳ್ಳಬೇಕು’ ವಿಜ್ಞಾನ ಸಂಶೋಧನೆಗಳ ಸಾಧನೆಗಳು ಮನುಕುಲದ ಒಳಿತಿಗಾಗಿ ಬಳಸಿಕೊಳ್ಳಬೇಕೇ ಹೊರತು ವಿನಾಶಕ್ಕಲ್ಲ ಎಂಬುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಎಂ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿಜ್ಞಾನ ನಾಟಕ ಸ್ಪರ್ಧೆಯ ಉದ್ಘಾಟನಾ ಸಂದರ್ಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸಂಚಾಲಕರಾದ […]

ರಕ್ಷಾಬಂಧನ

ರಕ್ಷಾಬಂಧನ

Saturday, September 16th, 2023

ರಕ್ಷಾಬಂಧನ ಹಬ್ಬವು ನಮ್ಮ ದೇಶದ ಒಗ್ಗಟ್ಟು, ಸಾಮರಸ್ಯತೆಯನ್ನು ಸಾರುತ್ತದೆ- ಬ.ಗಣರಾಜ್ ಭಟ್ “ಸೃಷ್ಟಿಯಲ್ಲಿ ಪಂಚಮಹಾಭೂತಗಳಿವೆ. ಅವುಗಳಿಂದಲೇ ಮುಂದೆ ಪ್ರಕೃತಿಯ ಬದಲಾವಣೆ ಇಲ್ಲಿ ಭಗವಂತನ ನೆಲೆ ಇದೆ. ತಪಸ್ಸು ಶ್ರದ್ಧೆ, ಸತ್ಯ, ಋತುಗಳೆಲ್ಲ ಅಲ್ಲಿಂದಲೇ ಬೆಳೆದು ಬಂದಿದೆ.ಆದರೆ ಈಗೀಗ ಇದರಲ್ಲಿ ನಂಬಿಕೆ ಕಡಿಮೆಯಾಗಿ ಅಂಧಾನುಕರಣೆಗೆ ಮಾರು ಹೋಗಿದ್ದೇವೆ. ಬ್ರಿಟಿಷರ ಇತಿಹಾಸದಿಂದ ನಾವುಗಳು ಪೂರ್ತಿಯಾಗಿ ಚೇತರಿಸಿಕೊಳ್ಳದೆ ನಮ್ಮತನದಿಂದ ವಂಚಿತರಾಗಿದ್ದೇವೆ. ಈ ರಕ್ಷಾಬಂಧನ ಹಬ್ಬವು ನಮ್ಮದೇಶದಒಗ್ಗಟ್ಟು, ಸಾಮರಸ್ಯತೆಯನ್ನು ಸಾರುತ್ತದೆ” ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ರಕ್ಷಾಬಂಧನ ಆಚರಣೆಯಲ್ಲಿಅಭ್ಯಾಗತರಾಗಿ ಆಗಮಿಸಿದ […]

ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ

ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ

Saturday, September 16th, 2023

ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇವರ ವತಿಯಿಂದ ಇ.ಎಸ್.ಆರ್ ಪ್ರೆಸಿಡೆನ್ಸಿ ಶಾಲೆ ಮರೀಲ್ – ಪುತ್ತೂರು ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಎರಡೂ ವಿಭಾಗಗಳಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಿರಿಯ ಪ್ರಾಥಮಿಕ ವಿಭಾಗ- ತನ್ವೀಶ್ (ವಾಸಪ್ಪ÷್ಪಗೌಡ ಮತ್ತು […]

Highslide for Wordpress Plugin