ಶಿಕ್ಷಣದಲ್ಲಿ ರಂಗಚಟುವಟಿಕೆ ಕಾರ್ಯಾಗಾರ

“ಕಲಾ ಮನೋಭಾವನೆಯನ್ನು ಹೊಂದಿರಬೇಕಾದರೆ ಮೊದಲು ನಾವು ಪ್ರೇಕ್ಷಕರಾಗಿರಬೇಕು” –
ಪುರುಷೋತ್ತಮ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಂಗ ಚಟುವಟಿಕೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನೇಲ್ಯಡ್ಕ ಇಲ್ಲಿಯ ಪ್ರಭಾರ ಮುಖ್ಯೋಪಾಧ್ಯಾಯರಾದ ಪುರುಷೋತ್ತಮ ಇವರು ವಿದ್ಯಾರ್ಥಿಗಳಿಗೆ ವಿವಿಧರಂಗಗೀತಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

                                                                                                                            

ಕಾರ್ಯಾಗಾರದಲ್ಲಿ ಸಂಗೀತ ಕಲಾವಿದರಾದ ಜಯಶಂಕರ, ಜಯಶ್ರೀ, ಲಲಿತಾ, ಮಂಜುಳಾ ಹಾಗೂ ಬಾಲ ಪ್ರತಿಭೆ ದಿಗಂತ್ ಸಹರಿಸಿದರು.
4ರಿಂದ 8ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ರಂಗಗೀತೆಯೊಂದಿಗೆ ಹೆಜ್ಜೆ ಹಾಕುತ್ತಾ ನಲಿದರು. ಶಾಲಾ ಸಹಶಿಕ್ಷಕರಾದ ವೀಣಾಸರಸ್ವತಿ ಹಾಗೂ ಶ್ವೇತಾ ಎಂ ಕಾರ್ಯಾಗಾರವನ್ನು ಆಯೋಜಿಸಿದರು.

Highslide for Wordpress Plugin