ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿ ಪುತ್ತೂರು ತಾಲೂಕು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹಯೋಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್ ಕೊಂಕೋಡಿ ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅನ್ಯಾನ್ಯ ಕಾರ್ಯಕ್ರಮಗಳಿಗೆ ವಿವೇಕಾನಂದ ವಿದ್ಯಾಸಂಸ್ಥೆಗಳ ಸಹಾಯ ಸದಾ ಇದ್ದು, ಇಂದು ನಡೆಯುತ್ತಿರುವ ಪಂದ್ಯಾಟವು ಎಲ್ಲಾ ಸ್ಪರ್ಧಾರ್ಥಿಗಳಲ್ಲೂ ಸ್ಪರ್ಧಾ ಮನೋಭಾವಕ್ಕಿಂತ ಹೆಚ್ಚು ದೈಹಿಕ, ಮಾನಸಿಕ ಹಾಗೂ ಬೌದ್ದಿಕ ಶಕ್ತಿಯನ್ನು ಬೆಳೆಸಲು ಸಹಕಾರಿಯಾಗಲಿ ಎಂದರು.
ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್ ಆರ್ ಇವರು ದೀಪ ಪ್ರಜ್ವಲನೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪಂದ್ಯಾಟದ ಯಶಸ್ಸು ದೈಹಿಕ ಶಿಕ್ಷಕರ, ತರಬೇತುದಾರರ ಹಾಗೂ ಸ್ಪರ್ಧಾರ್ಥಿಗಳ ಸಹಕಾರ ಮನೋಭಾವದಲ್ಲಿದೆ ಎಂದರು. ಸಭಾಧ್ಯಕ್ಷತೆಯ ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಭುವನೇಶ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರೂ, ಮಹಾಲಿಂಗೇಶ್ವರ ಆಡಳಿತ ಸಮಿತಿಯ ಸದಸ್ಯರೂ ಆದ ಡಾ. ಸುಧಾ ರಾವ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ರೂಪಲೇಖ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ, ದೈಹಿಕ ಶಿಕ್ಷಣ ಸಂಘದ ಕಾರ್ಯದರ್ಶಿಗಳಾದ ಹರೀಶ್ ರೈ, ತಾಲೂಕು ಸಂಘದ ಅಧ್ಯಕ್ಷರಾದ ಕೆ ಸೀತಾರಾಮ ಗೌಡ, ಗ್ರೇಡ್ ೨ ರ ಅಧ್ಯಕ್ಷರಾದ ಸುಧಾಕರ ರೈ, ಪ್ರಾಥಮಿಕ ಶಾಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷರಾದ ನವೀನ ರೈ, ಶ್ರೀ ಅಬ್ರಹಾಮ್, ರೇಡಿಯೋ ಪಾಂಚಜನ್ಯದ ಆಡಳಿತ ಸಮಿತಿಯ ಅಧ್ಯಕ್ಷರು ಸಂಪನ್ಮೂಲ ವ್ಯಕ್ತಿಗಳು ಆದ ಶ್ರೀಮತಿ ಕೃಷ್ಣವೇಣಿ ಮುಳಿಯ, ನ್ಯಾಯವಾದಿಗಳಾದ ಹರಿಣಾಕ್ಷಿ ಜೆ ಶೆಟ್ಟಿ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯಂತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ರಾಜ್ಯ ಪ್ರಶಸ್ತಿ ವಿಜೇತರು ಆದ ಶ್ರೀ ದಯಾನಂದ ಕೋರಮಂಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ರವಿನಾರಾಯಣ ಶಾಲಾ ಮುಖ್ಯಗುರು ಸತೀಶ್ ರೈ ಉಪಸ್ಥಿತರಿದ್ದರು.
ಕನ್ನಡ ಶಾಲಾ ಆವರಣದಿಂದ ಚೆಂಡೆ ವಾದ್ಯಗಳೊಂದಿಗೆ ಹೊರಟ ವೈಭವದ ಮೆರವಣಿಗೆಯಲ್ಲಿ ಎಲ್ಲಾ ಅಭ್ಯಾಗತರನ್ನೂ ರಾಜ್ಯ, ಜಿಲ್ಲಾಮಟ್ಟದ ವಿಜೇತ ಮಕ್ಕಳ ತಂಡಗಳು, ಶಿಕ್ಷಕರು, ಪಂದ್ಯಾOಗಣಕ್ಕೆ ಕರೆತಂದರು. ಭಾರತ ಮಾತೆಗೆ ಪುಷ್ಫಾರ್ಚನೆ ನೆರವೇರಿಸಿ ಪ್ರಾರ್ಥನೆಯೊಂದಿಗೆ ಚಾಲನೆ ದೊರೆತ ಪಂದ್ಯಾಟದ ಪ್ರಾಸ್ತಾವಿಕ ಮಾತುಗಳನ್ನಾಡಿದವರು ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರಾದ ಭುವನೇಶ ಇವರು. ಮುಖ್ಯಗುರು ಆಶಾ ಬೆಳ್ಳಾರೆ ಸ್ವಾಗತಿಸಿ, ಶಾಲಾ ಸಂಚಾಲಕರಾದ ವಸಂತ ಸುವರ್ಣ ಧನ್ಯವಾದ ಅರ್ಪಿಸಿದರು. ಅನಂತರ ಎಲ್ಲಾ ಅಭ್ಯಾಗತರ ಉಪಸ್ಥಿತಿಯಲ್ಲಿ ಪಂದ್ಯಾOಗಣದಲ್ಲಿ ತೆಂಗಿನಕಾಯಿ ಹೊಡೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯ ೭ ತಾಲೂಕುಗಳಿಂದ ಏಳು ಬಾಲಕರ ಹಾಗೂ ಏಳು ಬಾಲಕಿಯರ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿ, ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕಿನ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಪ್ರಥಮ ಹಾಗೂ ಕೆ.ಪಿ.ಎಸ್ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ ಹಾಗೂ ಭಗವತಿ ಪ್ರೌಢಶಾಲೆ ಮಂಗಳೂರು ದಕ್ಷಿಣ ದ್ವಿತೀಯ ಸ್ಥಾನ ಪಡೆದುಕೊಂಡರು, ಸಮಾರೋಪದ ಸಮಾಪನ ಮಾತುಗಳನ್ನಾಡಿದ ಪುತ್ತೂರಿನ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಸೇಸಮ್ಮ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ತಮ್ಮ ಶಾಲಾ ದಿನಗಳ ಕ್ರೀಡಾ ಭಾಗವಹಿಸುವಿಕೆಯ ಅನುಭವಗಳನ್ನು ಹಂಚಿಕೊOಡರು. ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಷ್ಣು ಗಣಪತಿ ಭಟ್ ಇವರು ಮುಂದಿನ ಹಂತದ ಭಾಗವಹಿಸುವಿಕೆಗೆ ಶುಭ ಹಾರೈಸಿದರು. ಶಾಂತಿ ಮಂತ್ರದೊOದಿಗೆ ಎಲ್ಲಾ ಕಾರ್ಯಕ್ರಮ ಸಂಪನ್ನಗೊOಡವು.