ವಿದ್ಯಾಭಾರತಿ ಕ್ರೀಡಾಕೂಟ

ವಿದ್ಯಾಭಾರತಿ ಕ್ರೀಡಾಕೂಟ

ಮಂಡ್ಯದ ಕೆರಗೋಡುನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 4×100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ರಿಲೆಯಲ್ಲಿ ಗುಣಶ್ರೀ (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಪ್ರತೀಕ್ಷಾ (ಬಾಲಕೃಷ್ಣ ಮತ್ತು ಶಶಿಕಲಾ ದಂಪತಿಗಳ ಪುತ್ರಿ) ತ್ರಿಶಾ (ಸತೀಶ್ ಮತ್ತು ಪುಷ್ಫಲತಾ ದಂಪತಿಗಳ ಪುತ್ರಿ) ಕೀರ್ತಿ (ಮೋನಪ್ಪ ಮತ್ತು ಲಲಿತ ದಂಪತಿಗಳ ಪುತ್ರಿ) ಪ್ರಥಮ ಸ್ಥಾನ ಹಾಗೂ ಕೀರ್ತಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಗುಣ ಶ್ರೀ 80 ಮೀಟರ್ ಹರ್ಡಲ್ಸ್‍ನಲ್ಲಿ ಪ್ರಥಮ ಸ್ಥಾನ, ವಿಕೃತಿ(ಗೀತಾ ರೈ ಮತ್ತು ಪ್ರವೀಣ್ ಕುಮಾರ್ ದಂಪತಿಗಳ ಪುತ್ರಿ) ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ ರುತಿಕ್ (ಚಂದ್ರಶೇಖರ್ ಮತ್ತು ಸುಮಿತ್ರಾ ದಂಪತಿಗಳ ಪುತ್ರ) ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Highslide for Wordpress Plugin