2025-26ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆ
Tuesday, June 17th, 2025ಕಿಶನ್ ಬಂಗೇರ ಜಿ.ಎಂ. ಕೀರ್ತಿ ಜಾನ್ವಿ ಸೃಜನ್ ಕುಮಾರ್ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ […]
ಕಿಶನ್ ಬಂಗೇರ ಜಿ.ಎಂ. ಕೀರ್ತಿ ಜಾನ್ವಿ ಸೃಜನ್ ಕುಮಾರ್ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ […]
2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಕನ್ನಡ ಮಾಧ್ಯಮದಲ್ಲಿ ರಾಜ್ಯದಲ್ಲಿ 3ನೇ ಸ್ಥಾನ ಪಡೆಯುದರೊಂದಿಗೆ ಗುಣಾತ್ಮಕ ಫಲಿತಾಂಶ ತಂದುಕೊಟ್ಟ ಹತ್ತನೇ ತರಗತಿ ಮಕ್ಕಳಿಗೆ ‘ಸಾಧನಾಭಿವಂದನಾ’ ಸಂಭ್ರಮ ನಡೆಯಿತು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ವೆಂಕಟರಮಣ ರಾವ್ ಅವರು ‘ಕನ್ನಡ ಭಾಷೆ ನಮ್ಮ ಹೃದಯದ ಭಾಷೆ, ಭಾವನೆಗಳ ವ್ಯಕ್ತೀಕರಣದ ಭಾಷೆ ಖಂಡಿತವಾಗಿಯೂ ಕನ್ನಡ ಮಾಧ್ಯಮದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಶಾಲಾ ಕೀರ್ತಿಯನ್ನು ಬೆಳಗಿ ಇದೀಗ ಉತ್ತಮ ಫಲಿತಾಂಶ ತಂದುಕೊಟ್ಟ […]
2025-26ನೇ ವರ್ಷಕ್ಕೆ ಪೂರ್ವಪ್ರಾಥಮಿಕದಿಂದ 10ನೇ ತರಗತಿಯವರೆಗೆ ಹೊಸ ದಾಖಲಾತಿ ಪಡೆದ ಮಕ್ಕಳು ಹಾಗೂ ಫೋ್ಷಕರು ಆಗತ – ಸ್ವಾಗತ ಸಂಭ್ರಮದಲ್ಲಿ ಭಾಗವಹಿಸಿದರು. ಮೂಕಾಂಬಿಕಾ ಗ್ಯಾಸ್ ಏಜೆನ್ಸಿ ಮಾಲಕರಾದ ಶ್ರೀ ಸಂಜೀವ ಆಳ್ವ ಇವರು ದೀಪ ಪ್ರಜ್ವಲಿಸಿ ತಮ್ಮ ಬಾಲ್ಯದ ದಿನಗಳ ನೆನಪನ್ನು ಹಸಿರಾಗಿಸಿದ ಮಕ್ಕಳ ಸ್ವಾಗತ ಸಂಭ್ರಮ ಅವರ ಜೀವನದುದ್ದಕ್ಕೂ ಖುಷಿಯನ್ನು ತಂದು ಸಮಾಜದ ಅನ್ಯಾನ್ಯ ಜವಾಬ್ದಾರಿಗಳನ್ನು ಶಕ್ತಿಯೊಂದಿಗೆ ಬೆಳಗಲಿ ಎಂದು ಶುಭ ಹಾರೈಸಿದರು. […]
ಶಾಲಾ ವಿಜ್ಞಾನ ‘ವೃತಿಕಾ’ ಸಂಘದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 2025-26ನೇ ಸಾಲಿನ ವಿಶ್ವ ಪರಿಸರ ದಿನದ ಧ್ಯೇಯ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಪರಿಸರಕ್ಕೆ ಸಂಬಂಧಿಸಿ ಮಕ್ಕಳ ಮೂಲಕ ಪೊಷಕರಿಗೆ ಪ್ಲಾಸ್ಟಿಕ್ ಬದಲಿ-ಏನು? ಯಾಕೆ? – ಹೇಗೆ? ಎಂಬೀ ಆಶಯದ ಪತ್ರಕವನ್ನು ನೀಡಲಾಯಿತು. ಮಕ್ಕಳು ತಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಬಳಸಿ ಪರಿಸರ ಸ್ನೇಹಿ ಕೈಚೀಲ ತಯಾರಿಸಿದರು. ಪರಿಸರ ಸಂರಕ್ಷಣಾ ಘೋಷ ವಾಕ್ಯಗಳೊಂದಿಗೆ ಮಕ್ಕಳು ಹಾಗೂ ಶಿಕ್ಷಕರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಪ್ರೌಢ ವಿಭಾಗದ ಮಕ್ಕಳು ಪ್ಲಾಸ್ಟಿಕ್ […]
2025-26ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಹೊಸ ಸೇರ್ಪಡೆಗೊಂಡಿರುವ ಹಾಗೂ ಮರು ಸೇರ್ಪಡೆಗೊಂಡಿರುವ ಮಕ್ಕಳ ಹಾಗೂ ಅವರ ಪೆÇೀಷಕರಿಗೆ ಶಾಲಾ ಪುನರಾರಂಭದಂದು ಗಣಹೋಮ ನಡೆಸಿ ಸ್ವಾಗತಿಸಲಾಯಿತು. ಶಾಲಾ ಸಹಶಿಕ್ಷಕಿ ಶ್ರೀಮತಿ ಶಾಲಿನಿ ಮತ್ತು ಸಂದೇಶ್ ಮಯ್ಯ ದಂಪತಿಗಳು ಪ್ರಧಾರ‍್ಚಕರ ಸಮ್ಮುಖದಲ್ಲಿ ದೈವೀ ಕರ‍್ಯ ನೆರವೇರಿಸಿದರು. ಬಂದಂತಹ ಮಕ್ಕಳಿಗೆ ತಿಲಕವಿರಿಸಿ ಆರತಿ ಬೆಳಗಿ ಶುಭ ಕೋರಲಾಯಿತು. ಶಾಲಾ ಆಡಳಿತ ಮಂಡಳಿ, ಅಧ್ಯಕ್ಷರು, ಸಂಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಸಂಸ್ಥೆಯು ನಡೆಸುವ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ಕೌಟ್ ವಿಭಾಗದಲ್ಲಿ ಕೀರ್ತನ್ ಕುಲಾಲ್, ಧನುಷ್, ಯಜ್ಞ […]
ರಥ ಸಪ್ತಮಿಯ ಪ್ರಯುಕ್ತ ಶಾಲೆಯಲ್ಲಿ ಸಾಮೂಹಿಕ ಸೂರ್ಯನಮಸ್ಕಾರವು ನಡೆಯಿತು. ಕಾರ್ಯಕ್ರಮವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಯೋಗ ವರದಿ ಪ್ರಮುಖರಾದ ಶ್ರೀ ಲಕ್ಷ್ಮೀಕಾಂತ ಇವರು ದೀಪಪ್ರಜ್ವಲಿಸಿ ರಥಸಪ್ತಮಿ ಆಚರಣೆಯ ಮಹತ್ವ ಮತ್ತು ಸೂರ್ಯನಮಸ್ಕಾರ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಪರಿಣಾಮ ಬೀರುವ ಕುರಿತು ತಿಳಿಸಿದರು. ಇನ್ನೊರ್ವ ಮುಖ್ಯ ಅಭ್ಯಾಗತರಾದ ಶ್ರೀ ಶ್ರೀಕಾಂತ್ ಪೂಜಾರಿ ಬಿರಾವು ಮಾತನಾಡಿ ಮಕ್ಕಳಿಗೆ ತಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ […]
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಪುತ್ತೂರು ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಚಾಲಕ ಬಂಧುಗಳಿಗೆರಸ್ತೆ ಸುರಕ್ಷತೆ-ಜೀವನ ರಕ್ಷೆ ಎಂಬ ವಿಷಯದ ಕುರಿತು ಮಾಹಿತಿ ನೀಡಲಾಯಿತು. ಪ್ರೌಢ ವಿಭಾಗದ ಸಮಾಜ ವಿಜ್ಞಾನ ವಿಷಯದ ಸಂಯೋಜಕರಾದ ಲೀಲಾವತಿ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗ ೩ ಮಕ್ಕಳಿಗೆ ಸುರಕ್ಷತಾ ಪಟ್ಟಿ ನೀಡಲಾಯಿತು.
ಮೂಲತಃ ಪುತ್ತೂರಿನವರಾದ ಖ್ಯಾತ ಲೇಖಕ, ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ (ಐಅಂ) ವಿನ್ಯಾಸ ಹಾಗೂ ಅಭಿವೃದ್ಧಿ ಕೇಂದ್ರದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ, ಆಖಆಔ ಸಂಸ್ಥೆಯ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ| ಕಲಾಂ ಅವರ ಸಮನ್ವಯಾಧಿಕಾರಿ 7 ವರ್ಷ ಕರ್ತವ್ಯ ನಿರ್ವಹಿಸಿ ತಮ್ಮ ಕಾರ್ಯನಿರ್ವಹಣೆಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ […]
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನಡೆಸಲ್ಪಟ್ಟ 2024-25ನೇ ಸಾಲಿನ ರಾಜ್ಯಪುರಸ್ಕಾರ ಕಬ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ವಿದ್ಯಾರ್ಥಿಗಳಾದ ಮನ್ವಿತ್ ಅಶ್ವಿನ್ ಕುಮಾರ್ ಎನ್ ಆಯುಷ್ ಬಿ […]
ಚಾಮುಂಡಿ ವಿಹಾರ ಸ್ಟೇಡಿಯಂ ಮೈಸೂರಿನಲ್ಲಿ ನಡೆದ ಕ್ರೀಡಾ ಭಾರತಿ ಕರ್ನಾಟಕ – ರಾಜ್ಯ ಕ್ರೀಡಾ ಸಮ್ಮೇಳನದಲ್ಲಿ ನಡೆದ ಘೋಷ್ ಸ್ಪರ್ಧೆಯಲ್ಲಿ ಶಾಲಾ ‘ಶೇಷಾದ್ರಿ-ಘೋಷ್’ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶಾಲಾ ಕಛೇರಿ ಸಹಾಯಕರಾದ ಶ್ರೀ ವಿಜಯ ಕುಮಾರ್ ಇವರು ತಂಡದ ಸಂಯೋಜಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಘೋಷ್ ತರಬೇತುದಾರರಾದ ಶ್ರೀ ವಿನೋದ್, ಶ್ರೀ ಉಮೇಶ್ ಹಾಗೂ ಶ್ರೀ ಚೇತನ್ ಅವರು ತರಬೇತು ನೀಡಿರುತ್ತಾರೆ. ಘೋಷ್ ಹಿರಿಯ ತರಬೇತುದಾರರಾದ ಶ್ರೀ ಅಚ್ಯುತ ಪ್ರಭುಗಳು ಸಲಹೆ ನೀಡಿರುತ್ತಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಕಛೇರಿ ಮಂಗಳೂರು ಇಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ಕೇಂದ್ರ ಅನುಮೋದಿತ ಕ್ರಿಯಾ ಯೋಜನೆಯ ಪಠ್ಯಪುಸ್ತಕಾಧಾರಿತ ನಾಟಕ ಸ್ಪರ್ಧೆಯಲ್ಲಿ ಶಾಲೆಯ ಪ್ರಾಥಮಿಕ ವಿಭಾಗ ಮತ್ತು ಪ್ರೌಢ ವಿಭಾಗದ ಮಕ್ಕಳ ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 7ನೇ ತರಗತಿಯ ಪಠ್ಯಪೂರಕ […]
ಪ್ರೌಢ ಶಾಲಾವಿಭಾಗ ಪ್ರಾಥಮಿಕ ಶಾಲಾವಿಭಾಗ ಶಾಲಾ ಶಿಕ್ಷಣ ಇಲಾಖೆ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಇದರ ವತಿಯಿಂದ ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕಟ್ಟೆ ಪುತ್ತೂರು ಇಲ್ಲಿ ನಡೆದ ತಾಲೂಕುಮಟ್ಟದ ನಾಟಕ ಸ್ಪರ್ಧೆಯಲ್ಲಿ […]
ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳಿಗೆ ಪೂರಕವಾಗಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವಿವೇಕಾನಂದರ ಆದರ್ಶಗಳನ್ನು ಪಾಲಿಸುತ್ತಾ ಸಾಧನೆಗೈಯಬೇಕೆಂದು ಶಾಲಾ ಆಡಳಿತಮಂಡಳಿಯ ಕೋಶಾಧಿಕಾರಿಯಾದ ಶ್ರೀಯುತ ಅಶೋಕ್ ಕುಂಬ್ಳೆ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ ಮತ್ತು ಮಕರ ಸಂಕ್ರಾ0ತಿ ಆಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ಅಭ್ಯಾಗತರಾಗಿ ಆಗಮಿಸಿದ ಶಾಲಾ ಪೋಷಕರಾದ ಶ್ರೀಮತಿ ಗೀತಾ ರೈ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿ ಧನುಷ್.ಡಿ.ಜಿ ವಿವೇಕಾನಂದರ ಚಿಕಾಗೋ ಭಾಷಣದ ಸಾರಾಂಶವನ್ನು ತಿಳಿಸಿದರು. ಕೌಶಿಕ್ ಮಕರ ಸಂಕ್ರಾ0ತಿಯ ವಿಶೇಷತೆಯನ್ನು […]
ಸೂರ್ಯನ ಪಥವು ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಚಲಿಸುತ್ತದೆ. ಅಂತೆಯೇ ನಮ್ಮಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡು ನಮ್ಮ ಪಥವನ್ನು ಸಾಧನೆಯ ಕಡೆಗೆ ಚಲಿಸಬೇಕು ಎಂದು ಶಾಲಾ ಅನ್ನಪೂರ್ಣಾ ಕಾರ್ಯಕಾರಿಣಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ವನಿತಾ ಸುರೇಶ್ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಮಕರ ಸಂಕ್ರಾಂತಿ ಮತ್ತು ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಈ ಮೇಲಿನ ಮಾತುಗಳನ್ನಾಡಿದರು. ಅಭ್ಯಾಗತರಾಗಿ ಆಗಮಿಸಿದ ಶಾಲಾ ಪೋಷಕರಾದ ಶ್ರೀಮತಿ ಸವಿತಾ ಬಹುಮಾನ ವಿತರಿಸಿದರು. ಶಾಲಾ ವಿದ್ಯಾರ್ಥಿಯಾದ ಧನುಷ್ ಡಿ.ಜಿ ವಿವೇಕಾನಂದರ ಆದರ್ಶದ ಕುರಿತು ಮಾತನಾಡಿದರು. […]
ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬವು ಎಳ್ಳು -ಬೆಲ್ಲದ ಸಮ್ಮಿಶ್ರಣದಂತೆ ಎಲ್ಲರ ಬಾಳಿನಲ್ಲೂ ಹೊಸ ಚೈತನ್ಯವನ್ನು ಮೂಡಿಸಲಿ ಎಂದು ಶಾಲಾ ಮಾತೃಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕ್ಷಮಾ ಬಿ.ಎಸ್ ಇವರು ಶಾಲೆಯಲ್ಲಿ ನಡೆದ ಮಕರ ಸಂಕ್ರಾಂತಿ ಆಚರಣೆಯ ಸಂದರ್ಭದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿಈ ಮೇಲಿನ ಮಾತನ್ನಾಡಿದರು. ಅಭ್ಯಾಗತರಾಗಿ ಆಗಮಿಸಿದ ಶಾಲಾ ಪೋಷಕರಾದ ಶ್ರೀಮತಿ ದೀಪಿಕಾರವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಪೂರ್ವಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳು ವಿವೇಕಾನಂದರ ಉಡುಗೆ – ತೊಡುಗೆಯಲ್ಲಿ ಸಂಭ್ರಮಿಸಿದರು. ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ […]
ಶೃತಿ ವಿಸ್ಮಿತ್ ಹರೀಶ್ ಆಚಾರ್ಯ ಶ್ರೀಮತಿ ಗುಲಾಬಿ ಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಗಾನ-ನೃತ್ಯ-ಯಕ್ಷ ಸಂಭ್ರಮದ ಪೋಷಕರ ಸಭೆಯಲ್ಲಿ ಈ ವರ್ಷದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಶೃತಿ ವಿಸ್ಮಿತ್, ಕಾರ್ಯದರ್ಶಿಗಳಾಗಿ ಶ್ರೀ ಹರೀಶ್ ಆಚಾರ್ಯ, ಉಪಕಾರ್ಯದರ್ಶಿಯಾಗಿ […]
“ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಪರಿಶ್ರಮದಿಂದ ಉತ್ಕೃಷ್ಟ ಸಾಧನೆ ಮಾಡಬೇಕು. ಆ ಮೂಲಕ ಗುರುವನ್ನೇ ಮೀರಿಸಿದ ಶಿಷ್ಯ ಎಂದು ಕಲಿಸಿದ ಗುರುಗಳು ಹೆಮ್ಮೆ ಪಡುವಂತಾಗಬೇಕು” ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರರವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಪ್ರತಿಭಾ ಪುರಸ್ಕಾರ’ ೨ನೇ ಅವಧಿಯ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಕೋಶಾಧಿಕಾರಿಗಳಾದ ಶ್ರೀ ಅಶೋಕ್ ಕುಂಬ್ಳೆ ಶುಭ ಹಾರೈಸಿದರು. ಅಭ್ಯಾಗತರಾಗಿ ಆಗಮಿಸಿದ್ದ ಅಡ್ವಾನ್ಸ್ ಟ್ಯಾಕ್ಸ್ ಅನಾಲಿಸ್ಟ್ […]
ಹಿರಿಯರ ಮಾರ್ಗದರ್ಶನ ಮಕ್ಕಳ ಸುಗಮ ಜೀವನಕ್ಕೆ ಆಧಾರ – ಶ್ರೀಮತಿ ವೀಣಾ ನಾಗೇಶ್ ತಂತ್ರಿ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸುವುದರ ಜೊತೆಗೆ ಶೈಕ್ಷಣಿಕವಾಗಿಯೂ ಮುತುವರ್ಜಿವಹಿಸಿ ಉತ್ತಮ ಫಲಿತಾಂಶ ಪಡೆದು ಶಾಲೆಗೂ ಹೆತ್ತವರಿಗೂ ಕೀರ್ತಿ ತರುವಂತಾಗಬೇಕು. ಹಿರಿಯರು ನೀಡುವ ಮಾರ್ಗದರ್ಶನ ಸಂಸ್ಕಾರದಂತೆ ನಡೆದಾಗ ಜೀವನ ಸುಗಮವಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ವೀಣಾ ನಾಗೇಶ್ ತಂತ್ರಿ ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಪ್ರತಿಭಾ ಪುರಸ್ಕಾರ’ ಮೊದಲ ಅವಧಿಯ ಕಾರ್ಯಕ್ರಮವನ್ನು ದೀಪ […]
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ ಶೇ.100 ಬಂದಿರುತ್ತದೆ. ಶಾಲೆಯ ಒಟ್ಟು 40 ವಿದ್ಯಾರ್ಥಿಗಳು ಭಾಗವಹಿಸಿ ತೇರ್ಗಡೆ ಹೊಂದಿದ್ದಾರೆ. ಹೈಯರ್ ವಿಭಾಗದಲ್ಲಿ ಒಟ್ಟು 20 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 15 ವಿದ್ಯಾರ್ಥಿಗಳು ಅತ್ಯುತ್ತಮ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ, 05 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಲೋವರ್ ವಿಭಾಗದಲ್ಲಿ ಒಟ್ಟು 20 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಕು. ಸಾಯೀಶ್ವರಿ ಡಿ ಇವಳು ವಿಶಿಷ್ಠ ಶ್ರೇಣಿಯೊಂದಿಗೆ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ವಿಕಸಿತ ಸಂಭ್ರಮ ನಡೆಯಿತು. ಸ.ಹಿ.ಪ್ರಾ ಉನ್ನತೀಕರಿಸಿದ ಶಾಲೆ, ಅನಂತಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುನೀತಾ ರೈ ಧ್ಜಜಾರೋಹಣಗೈದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಎಸ್ ಆರ್ ಉದ್ಘಾಟಿಸಿ ಉತ್ತಮ ಆಹಾರಾಭ್ಯಾಸ, ಕ್ರೀಡಾ ತರಬೇತಿ ಮತ್ತು ಪ್ರೇರಣೆಯಿಂದಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಸಂಸ್ಥೆ ಗುರುತಿಸುವಂತಾಗಿದೆ ಅದೇ ರೀತಿ ಶೈಕ್ಷಣಿಕವಾಗಿಯೂ ಉತ್ತಮ ಫಲಿತಾಂಶ ಬರುವಂತೆ ಪ್ರಯತ್ನಿಸಿ ಎಂದು ತಿಳಿಸಿದರು. […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಾಂಸ್ಕೃತಿಕ ಸಮನ್ವಯ ‘ವರ್ಷದ ಹಬ್ಬ-2024’ ನಡೆಯಿತು. ಸ್ವಾಮಿ ವಿವೇಕಾನಂದರ ಬದುಕು ನಮಗೆ ಆದರ್ಶವಾಗಲಿ, ಸಾಮಾಜಿಕ ಕೆಡುಕುಗಳನ್ನು ಸಂಹರಿಸುವ ಶ್ರೀಕೃಷ್ಣರಾಗೋಣ – ಕಿಶೋರ್ ಕುಮಾರ್ ಬೊಟ್ಯಾಡಿ – ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅಭ್ಯಾಗತರಲ್ಲಿ ಒಬ್ಬರಾಗಿದ್ದ, ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು, ಪುತ್ತೂರು ಮಹಾಲಿಂಗೇಶ್ವರ ದೇವರ ಕೃಪಾ ಕಟಾಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದ ಮತ್ತು ನಿಮ್ಮಲ್ಲರ ಪ್ರೀತಿ – ಅಭಿಮಾನದ ಬಲದಿಂದ ಇಂದು ನಾನ್ನು ಎಂಎಲ್ಸಿಯಾಗಿ […]
ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮತ್ತು ಹೋಲಿ ರಿಡೀಮರ್ ಶಿಕ್ಷಣ ಸಂಸ್ಥೆಗಳು ಬೆಳ್ತಂಗಡಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಶಾಲೆಯ ಶ್ರೀಕೃಷ್ಣ ಬಿ( ಶ್ರೀ ವೆಂಕಟೇಶ.ಬಿ ಮತ್ತು ಶ್ರೀಮತಿ ಮಂಗಳ ಗೌರಿ ದಂಪತಿಗಳ ಪುತ್ರ) -ಹಿರಿಯ ಪ್ರಾಥಮಿಕ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾನೆ.
ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕಛೇರಿ […]
‘ಅನುಭವ ಜನ್ಯ ಕಲಿಕೆಗೆ ಹೆಚ್ಚು ಮಹತ್ವ ಕೊಡಬೇಕು ‘ – ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ.ಮಾನ್ಯ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ. […]
ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಕೃತಿ ಮಹೋತ್ಸವ ಇದರ ವತಿಯಿಂದ ಸರಸ್ವತಿ ವಿದ್ಯಾ ಮಂದಿರ, ಸಂಸ್ಕೃತಿ ಭವನ, ಋಷಿ ನಗರ, ಉಜ್ಜೈನಿ (ಮಧ್ಯಪ್ರದೇಶ) ಇಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ಸ್ಪರ್ಧೆಯ ಕ್ಲೇ ಮಾಡೆಲಿಂಗ್ ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನಿಖಿಲ್ (ಕೋಡಿಂಬಾಡಿ ನಿವಾಸಿ ಕೃಷ್ಣಪ್ಪ ಮತ್ತು ಧನವತಿ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದಿದ್ದಾನೆ. ಇವನಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ತರಬೇತಿ ಮಾರ್ಗದರ್ಶನ ನೀಡಿದ್ದರು
ತಂಬಾಕಿನಿಂದ ತಯಾರಿಸುವ ವಿವಿಧ ವಸ್ತುಗಳ ಸೇವನೆಯಿಂದ ದೈಹಿಕ, ಮಾನಸಿಕ ಹಾಗೂ ಕೌಟುಂಬಿಕ ಜೀವನದ ಮೇಲೆ ಉಂಟಾಗುವ ದುಷ್ಫರಿಣಾಮಗಳ ಬಗ್ಗೆ ಜೊತೆಗೆ ಮನೆ ಹಾಗೂ ಸುತ್ತಲಿನ ಸಮಾಜದಲ್ಲಿ ಜಾಗೃತಿ ಮೂಡಿಸುವಂತೆ ಉದಾಹರಣೆಗಳ ಮೂಲಕ ವಿವರಿಸುತ್ತಾ ಶಾಲಾ ವಿದ್ಯಾರ್ಥಿಗಳಿಗೆ ‘ತಂಬಾಕು ವ್ಯಸನ ಮುಕ್ತ ಸಮಾಜ ನಿರ್ಮಾಣ” ಮಾಡುವ ಪ್ರಮಾಣ ವಚನವನ್ನು ಶಾಲಾ ಹಿರಿಯ ಶಿಕ್ಷಕಿ ಪೂರ್ಣಿಮಾ ಮಾತಾಜಿ ಬೋಧಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ) ಇವರು ನೀಡುವ ಉತ್ತಮ ಕನ್ನಡ ಶಾಲೆ– 2024ರ ಸನ್ಮಾನಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪಾತ್ರವಾಗಿದೆ. ಶ್ರೀರಾಮ ಶಾಲೆ ಕಲ್ಲಡ್ಕ ಇಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಸನ್ಮಾನಿಸಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ನಡೆದ ವೃತ್ತ ಮಟ್ಟದ ಪ್ರತಿಭಾರಂಜಿಯಲ್ಲಿ ಶಾಲೆಯ ಪೂಜಾ – ಚಿತ್ರಕಲೆ (ಪ್ರಥಮ), ಪ್ರಜ್ಞಾ ನಿಡ್ವಣ್ಣಾಯ – ಸಂಸ್ಕೃತ ಭಾಷಣ(ಪ್ರಥಮ), ಶ್ರೀರಕ್ಷಾ ಎ – ಕವನ ವಾಚನ (ಪ್ರಥಮ), ಕುಶಿತಾ ಬಿ -ಗಝಲ್(ದ್ವಿತೀಯ), ಧನುಷ್ ಡಿ.ಜಿ-ಚರ್ಚಾ ಸ್ಪರ್ಧೆ (ತೃತೀಯ), ಲಾಸ್ಯ ಎನ್.ವಿ-ಭರತನಾಟ್ಯ (ತೃತೀಯ), ಕವ್ವಾಲಿ – ಸಾಯೀಶ್ವರಿ, ಶಾರ್ವರಿ, ಶ್ರೇಯಸ್ ರಾವ್, ಕರಣ್ ಗೌಡ, ಶಿವಪ್ರಕಾಶ್, […]
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ)ಇದರ ವತಿಯಿಂದ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಶಾಲೆಯ ಲಿಖಿತಾ ‘ಜ್ಞಾನ ದರ್ಶಿನಿ’ ಪುಸ್ತಕಾಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಪ್ರಜ್ಞಾ ನಿಡ್ವಣ್ಣಾಯ ‘ಜ್ಞಾನ ವರ್ಷಿಣಿ’ ಪುಸ್ತಕಾಧಾರಿತ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇದರ ವತಿಯಿಂದ ವಿಕ್ಟರ್ಸ್ ಪ್ರೌಢಶಾಲೆ ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆಯಲ್ಲಿ ಶಾಲೆಯ ಶಿಕ್ಷಕರಾದ ಸುಂದರ್ – ಪ್ರೌಢಶಾಲಾ […]
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕು. ಜಿ.ಎಂ.ಕೀರ್ತಿ 17ರ ವಯೋಮಾನದ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಮತ್ತು ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರುಗಳು ತರಬೇತಿ ನೀಡಿರುತ್ತಾರೆ.
ನಮ್ಮ ಮಾತೃ ಭಾಷೆಯಾದ ಕನ್ನಡ ನಮ್ಮ ಹೃದಯದ ಭಾಷೆಯಾಗಿದೆ. ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಕೇವಲ ಮಾತೃ ಭಾಷೆಯಿಂದ ಮಾತ್ರ ಸಾಧ್ಯ . ಆದ್ದರಿಂದ ಭಾಷೆಯ ಸೊಗಡು ಬೇರೆ ಬೇರೆ ಇದ್ದರೂ ಅದನ್ನು ಸವಿಯುವ ಮನೋಭಾವ ನಮ್ಮದಾಗಬೇಕು ಎಂದು ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ರೇವತಿ ನುಡಿದರು. ಕನ್ನಡ ಭಾಷೆಯ ಹಿರಿಮೆ – ಗರಿಮೆ ಹಾಗೂ ಕನ್ನಡ ಭಾಷೆಯಲ್ಲಿ ಲಭ್ಯವಿರುವ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಓದುವಂತೆ ತಿಳಿಸಿದರು. ಮುಖ್ಯ […]
ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಆಚರಣೆಯ ಪ್ರಯುಕ್ತ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ವೈಷ್ಣವ ಜನತೋ ಹಾಗೂ ರಘುಪತಿ ರಾಘವ ರಾಜಾರಾಮ ಹಾಡುಗಳನ್ನು ಸಾಮೂಹಿಕವಾಗಿ […]
ಕ್ರೀಡಾ ಭಾರತಿ, ಕರ್ನಾಟಕ ದಕ್ಷಿಣ, ಇದರ ವತಿಯಿಂದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ತೊಕ್ಕೊಟ್ಟು ಇಲ್ಲಿ ನಡೆದ ಜಿಲ್ಲಾಮಟ್ಟದ ಸ್ಕೂಲ್ ಬ್ಯಾಂಡ್ ಸ್ಪರ್ಧಾಕೂಟ – 2024ರಲ್ಲಿ ಶಾಲಾ ವಿದ್ಯಾರ್ಥಿಗಳ ‘ಶೇಷಾದ್ರಿ’ ಘೋಷ್ ಪತಕ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇವರಿಗೆ ಶಾಲಾ ಘೋಷ್ ಸಂಯೋಜಕರಾದ ವಿಜಯ ಕುಮಾರ್ ಮತ್ತು ತರಬೇತುದಾರರಾಗಿ ಶ್ರೀ ವಿನೋದ್ ಕೊಡ್ಮಣ್ ಮತ್ತು ಶ್ರೀ ಚೇತನ್ ಕುಮಾರ್ ತರಬೇತಿ ನೀಡಿದ್ದರು
ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೊಗ್ರಾಮಿಂಗ್ ಅರ್ಡುಯಿನೋ ಎನ್ನುವ ಕಾರ್ಯಾಗಾರವನ್ನು ನಡೆಸಲಾಯಿತು. ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ , ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ಸ್ ಮತ್ತು ಲೂಪಿಂಗ್ ಸ್ಟೇಟ್ ಮೆಂಟ್ಸ್‍ಗಳ ಬಗೆಗೆ ತಿಳಿಸಿಕೊಡಲಾಯಿತು. ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ ಹಾಗೂ ಉಪನ್ಯಾಸಕ ಕೀರ್ತನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಕಾರ್ಯಾಗಾರವು ನಡೆಯಿತು.
ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ (ಆಡಳಿತ) ಚಿಕ್ಕಮಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಡೂರು ಹಾಗೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಪುರ, ಕಡೂರು ಇಲ್ಲಿ ನಡೆದ 17ರ ವಯೋಮಾನದ ಬಾಲಕರ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ (S.G.F.I) ಗೆ ಆಯ್ಕೆಯಾಗಿದೆ. ಶಾಲೆಯ ಪುನೀತ್ (ಶ್ರೀಧರ ಮತ್ತು ನಳಿನಿ ದಂಪತಿಗಳ ಪುತ್ರ), ಧನ್ವಿತ್ (ನೀಲಪ್ಪ ಗೌಡ ಮತ್ತು ಶಶಿಕಲಾ ದಂಪತಿಗಳ ಪುತ್ರ), ಜಿ ಶೇಖರ (ಗದ್ದೆ ಫಕೀರಪ್ಪ ಮತ್ತು ಹಂಪಮ್ಮ ದಂಪತಿಗಳ ಪುತ್ರ), ನರಸಪ್ಪ […]
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಇದರ ವತಿಯಿಂದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿ ಮಂಗಳೂರು ಇಲ್ಲಿ ನಡೆದ ಮಧ್ಯಕ್ಷೇತ್ರೀಯ ಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ಸ್ಪರ್ಧೆಯ ಕ್ಲೇ ಮಾಡೆಲಿಂಗ್ ನಲ್ಲಿ ಶಾಲೆಯ ನಿಖಿಲ್ (ಕೋಡಿಂಬಾಡಿ ನಿವಾಸಿ ಕೃಷ್ಣಪ್ಪ ಮತ್ತು ಧನವತಿ ದಂಪತಿಗಳ ಪುತ್ರ) ಪ್ರಥಮ ಸ್ಥಾನ ಪಡೆದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಇವನಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ತರಬೇತಿ […]
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ, ನಯನಾಡು, ಬಂಟ್ವಾಳ ಇಲ್ಲಿ ನಡೆದ ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟದಲಿ ್ಲ ಶಾಲಾ ಪ್ರೌಢಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತರುಣ್, ದೀಪಕ್, ಪ್ರಜ್ವಲ್, ಮೇಘರಾಜ್, ಭವಿತ್, ವಿನೀತ್, ಲಿಖಿತ್, ಕೀರ್ತನ್, ದೇಶ್ಚಿತ್, ಭಾಸ್ವತ್ ಎಂದು ಶಾಲಾ ಮುಖ್ಯಗುರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ). ಇದರ ವತಿಯಿಂದ ನಡೆಸಲ್ಪಡುವ ‘ಪ್ರೇರಣಾ’ – ಸಂಘ ಪರಿಚಯ ವರ್ಗ –ಎಂಬ ವಿಷಯದ ಶಿಕ್ಷಕರ ಕಾರ್ಯಾಗಾರವು ಶಾಲೆಯಲ್ಲಿ ನಡೆಯಿತು. ಪ್ರಥಮ ಅವಧಿಯಲ್ಲಿ ಕಾರ್ಯಾಗಾರದ ಉದ್ಘಾಟನೆಯೊಂದಿಗೆ ಸಂಘದ ಪರಿಚಯವನ್ನು ಮಾಡಿದ ನೀಡಿದ ಶ್ರೀ ನಾರಾಯಣ ಶೆಣೈ ಇವರು ವ್ಯಕ್ತಿತ್ವ, ಕರ್ತತ್ವ, ನೇತೃತ್ವ, ವಿವೇಕ, ದೇಶ ಭಕ್ತಿ ನಿರ್ಮಾಣ ಮಾಡುವಲ್ಲಿ ಸಂಘ ಮತ್ತು ಶಾಖೆಗಳ ಪರಿಚಯವನ್ನು ತಿಳಿಸಿಕೊಟ್ಟರು. ಎರಡನೇ ಅವಧಿಯಲ್ಲಿ ಶ್ರೀ ಹರಿಕೃಷ್ಣ ಇವರು ಗತಿವಿಧಿ ಪರಿಚಯ ಎಂಬ ವಿಷಯದಲ್ಲಿ ಕುಟುಂಬ ಪ್ರಭೋದನ, […]
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಉಪನಿರ್ದೇಶಕರ ಕಛೇರಿ, ಸುಳ್ಯ, ಪಿ.ಎಂ ಶ್ರೀ ಸ.ಮಾ.ಹಿ.ಪ್ರಾ ಶಾಲೆ ಗುತ್ತಿಗಾರು, ಸ.ಪ.ಪೂ ಕಾಲೇಜು ಗುತ್ತಿಗಾರು (ಪ್ರೌಢಶಾಲಾ ವಿಭಾಗ) ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೌಢಶಾಲಾ ಬಾಲಕರ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶಾಲಾ ಪ್ರೌಢಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಪುನೀತ್ (ಶ್ರೀಧರ ಮತ್ತು ನಳಿನಿ ದಂಪತಿಗಳ ಪುತ್ರ), ಧನ್ವಿತ್ (ನೀಲಪ್ಪ ಗೌಡ ಮತ್ತು ಶಶಿಕಲಾ […]
ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ನಿಡ್ವಣ್ಣಾಯ, ಚಾರಿತ್ರ್ಯ, ಗಗನ, ದರ್ಶಿನಿ, ಗ್ರೀಷ್ಮಾ, ವಚನ್, ಶಿವಪ್ರಕಾಶ್ ಮತ್ತು ಹರ್ಷವರ್ಧನ್ ಇವರ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.