ಪರಿಸರ ದಿನಾಚರಣೆ


ಶಾಲಾ ವಿಜ್ಞಾನ ‘ವೃತಿಕಾ’ ಸಂಘದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 2025-26ನೇ ಸಾಲಿನ ವಿಶ್ವ ಪರಿಸರ ದಿನದ ಧ್ಯೇಯ ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಪರಿಸರಕ್ಕೆ ಸಂಬಂಧಿಸಿ ಮಕ್ಕಳ ಮೂಲಕ ಪೊಷಕರಿಗೆ ಪ್ಲಾಸ್ಟಿಕ್ ಬದಲಿ-ಏನು? ಯಾಕೆ? – ಹೇಗೆ? ಎಂಬೀ ಆಶಯದ ಪತ್ರಕವನ್ನು ನೀಡಲಾಯಿತು. ಮಕ್ಕಳು ತಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಬಳಸಿ ಪರಿಸರ ಸ್ನೇಹಿ ಕೈಚೀಲ ತಯಾರಿಸಿದರು. ಪರಿಸರ ಸಂರಕ್ಷಣಾ ಘೋಷ ವಾಕ್ಯಗಳೊಂದಿಗೆ ಮಕ್ಕಳು ಹಾಗೂ ಶಿಕ್ಷಕರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಪ್ರೌಢ ವಿಭಾಗದ ಮಕ್ಕಳು ಪ್ಲಾಸ್ಟಿಕ್ ಮಾಲಿನ್ಯ ಮತ್ತು ಮುಕ್ತ ಪರಿಸರದ ಮಹತ್ವದ ಬಗ್ಗೆ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಪ್ರಾತ್ಯಕ್ಷಿಕಾ ಮಾಹಿತಿ ತಿಳಿಸಿದರು. ಪ್ಲಾಸ್ಟಿಕ್‍ನ ಮಿತ ಬಳಕೆ- ಮರುಬಳಕೆಯ ವಿವಿಧ ಯೋಜನೆಗಳೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಂಪೂರ್ಣ ಕಾರ್ಯಕ್ರಮಗಳನ್ನು ಶಾಲಾ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾಯಿತು.

Highslide for Wordpress Plugin