ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
Friday, January 20th, 2023ರೇಡಿಯೋ ಪಾಂಚಜನ್ಯದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಂಜನ್ ಮತ್ತು ಶ್ರೀವತ್ಸ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ರೇಡಿಯೋ ಪಾಂಚಜನ್ಯದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಂಜನ್ ಮತ್ತು ಶ್ರೀವತ್ಸ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಪುತ್ತೂರು ತಾಲೂಕು ಸಂಸ್ಕಾರ ಭಾರತಿ ವತಿಯಿಂದ ನಡೆದ ತಾಲೂಕು ಮಟ್ಟದ ದೇಶ ಭಕ್ತಿಗೀತೆ ಸ್ಪರ್ಧೆಯ 1 ರಿಂದ 4ನೇ ತರಗತಿ ವಿಭಾಗದಲ್ಲಿ ನಮ್ಮ ಶಾಲಾ ಮಕ್ಕಳಾದ ಪ್ರಣತಿ, ಗರಿಮ, ತನುಷಾ, ಮಾತಂಗಿ, ಹಸ್ತ, ವೃದ್ಧಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
51ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂಪಾಯಿ 15,000 ನಗದು ಹಾಗೂ ಫಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ನಮ್ಮ ಶಾಲಾ ಮಕ್ಕಳು.
ವಿವೇಕಾನಂದ ಪದವಿ ಪೂರ್ವ ಕಾಲೇಜು ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆ ನೀಡುವ ನಿಟ್ಟಿನಲ್ಲಿ ಕನಸುಗಳು-2022 ಕಾರ್ಯಕ್ರಮವನ್ನು ದಿನಾಂಕ 11-11-2022 ಹಾಗೂ 12-11-2022ರಂದು ಆಯೋಜಿದ್ದರು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲಾ 59 ಮಕ್ಕಳು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಮಕ್ಕಳ ಪಾಲ್ಗೊಳ್ಳುವಿಕೆ ಹಾಗೂ ಪ್ರದರ್ಶನವನ್ನು ಪರಿಗಣಿಸಿ ನಮ್ಮ ಶಾಲೆಗೆ ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ವತಿಯಂದ ನಡೆದ ಗಣಿತ ವಿಜ್ಞಾನ ಮೇಳದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ನಿಡ್ವಣ್ಣಾಯ 8ನೇ ತರಗತಿ, ಧನುಷ್ ಡಿ ಜಿ 7ನೇ ತರಗತಿ, ಶಿವಾನಿ 7ನೇ ತರಗತಿ ಇವರು ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ, ಗಣಿತ ಮಾದರಿ, ಪ್ರೆಸೆಂಟೇಶನ್, ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗಳು ನಡೆದವು.
ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಗಣಿತ ವಿಜ್ಞಾನ ಮೇಳ ಹೈದರಾಬಾದ್ ತೆಲಂಗಾಣ ಇಲ್ಲಿ ನಡೆದ ಕ್ಷೇತ್ರಿಯ ಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ನಿಡ್ವಣ್ಣಾಯ 8 ನೇ ತರಗತಿ (ಹೆಬ್ಬಾರಬೈಲು ನಿವಾಸಿ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮ ನೂಜಾಜೆ ಇವರ ಪುತ್ರಿ), ಶಿವಾನಿ ಎಸ್ ರೈ 7ನೇ ತರಗತಿ (ಶಿಬರ ಪಂಜಳ ನಿವಾಸಿ ಸೋಮನಾಥ ರೈ ಮತ್ತು ವಸಂತಿ ಕುಮಾರಿ ಇವರ ಪುತ್ರಿ), ಧನುಷ್ ಡಿ ಜಿ 7ನೇ ತರಗತಿ (ಪಾಂಗಳಾಯಿ ನಿವಾಸಿ ಡಿ […]
ಶಾಸ್ತ್ರಿ ಪಬ್ಲಿಕ್ ಸ್ಕೂಲ್ ಹುಣಸೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ತನ್ಮಯ ಕೃಷ್ಣ 10ನೇ ತರಗತಿ ಸೆನ್ಸಾರ್ ಮಾದರಿಯಲ್ಲಿ ಪ್ರಥಮ , ವಿಜ್ಞಾನ ರಸಪ್ರಶ್ನೆಯಲ್ಲಿ ಶಿವಾನಿ ಎಸ್ ರೈ 7ನೇ ತರಗತಿ, ಧನುಷ್ ಡಿ ಜಿ 7ನೇ ತರಗತಿ, ಪ್ರಜ್ಞಾ ನಿಡ್ವಣ್ಣಾಯ -8ನೇ ತರಗತಿ ಇವರು ಪ್ರಥಮ ಸ್ಥಾನ ಪಡೆದು ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಉಪ್ಪಿನಂಗಡಿಯ ಇಂದ್ರಪ್ರಸ್ಥದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ತಾಲೂಕು ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು. ಶಿಶು ವರ್ಗ: ಆಹಾರ ಶೃಂಖಲೆ ಮಾದರಿ ತಯಾರಿ ಗರಿಮಾ – ತೃತೀಯ, ಜಲ ಶುದ್ಧೀಕರಣ ಮತ್ತು ಸಂರಕ್ಷಣೆ ಸುಭಾಷ್- ತೃತೀಯ, ಸೃಜನಾತ್ಮಕ ಮಾದರಿ ತಯಾರಿಕೆ ತರುಣ್ ಕೃಷ್ಣ -ಪ್ರಥಮ, ಸಂಸ್ಕøತಿ ಜ್ಞಾನ ರಸಪ್ರಶ್ನೆ ಶ್ರೀಕೃಷ್ಣ, ದ್ವಿಜನ್,ನಂದನ್ -ಪ್ರಥಮ, ಕಥಾಕಥನ ತನುಷಾ-ಪ್ರಥಮ, ವಿಜ್ಞಾನ ಪ್ರಯೋಗ ಗಾನವಿ-ತೃತೀಯಾ, […]
ಶಂಖನಾದ-ಗಗನ್ ದೀಪ್ ಹತ್ತನೇ ತರಗತಿ – ದ್ವಿತೀಯ ಭಗವದ್ಗೀತೆ ಗೀತೆ ಕಂಠಪಾಠ- ಶ್ರೀ ನಂದನ್ ಒಂಬತ್ತನೇ ತರಗತಿ- ಪ್ರಥಮ ಪ್ರಾರ್ಥನ ಶ್ಲೋಕ – ಕೃತಿಕಾ 6ನೇ ತರಗತಿ- ಪ್ರಥಮ ವೈಷ್ಣವಿ 5ನೇ ತರಗತಿ- ದ್ವಿತೀಯ.
ಅಂಬಿಕಾ ವಿದ್ಯಾಲಯದಲ್ಲಿ ಅಜಾದಿ ಕಾ ಅಮೃತ್ ಉತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ನಮ್ಮ ಶಾಲಾ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಪ್ರಬಂಧ: ಅವನಿ ಬೆಳ್ಳಾರೆ- ಪ್ರಥಮ ಚಿತ್ರಕಲೆ: ಅಗಮ್ಯ- ಪ್ರಥಮ ಭಾಷಣ: ಧಾತ್ರಿ- ತೃತೀಯ ದೇಶ ಭಕ್ತಿ ಗೀತೆ: ಹರಿಣಿ ಮತ್ತು ತಂಡ- ತೃತೀಯ
ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವ ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿ ಬಹುಮಾನ ಪಡೆದುಕೊಂಡಿದ್ದಾರೆ.
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ರಾಷ್ಟ್ರೀಯ ಬಾಲಕಿಯರ ಕಬಡ್ಡಿ ಪಂದ್ಯಾಟ ಉತ್ತರ ಪ್ರದೇಶದ ಛತ್ತಿಸ್‍ಗಢ ಸಾವಿತ್ರಿದೇವಿ ಲಕ್ಷ್ಮಿಬಾಯಿ ಸರಸ್ವತಿ ವಿದ್ಯಾಮಂದಿರ ಕುರ್ಜಾ ಇಲ್ಲಿ ನಡೆದ 17ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ವಿಜೇತರಾಗಿ ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ರಾಷ್ಟ್ರೀಯ ಬಾಲಕಿಯರ ಕಬಡ್ಡಿ ಪಂದ್ಯಾಟ ಉತ್ತರ ಪ್ರದೇಶದ ಛತ್ತಿಸ್‍ಗಢ ಸಾವಿತ್ರಿದೇವಿ ಲಕ್ಷ್ಮಿಬಾಯಿ ಸರಸ್ವತಿ ವಿದ್ಯಾಮಂದಿರ ಕುರ್ಜಾ ಇಲ್ಲಿ ನಡೆದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಮನಗರ, ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಮಟ್ಟದ ಕಬಡ್ಡಿ ಪಂದ್ಯದಲ್ಲಿ ವಿಜೇತರಾಗಿ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಆಡಲು ಆಯ್ಕೆಯಾದ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳು.
ಸುಳ್ಯದಲ್ಲಿ ನಡೆದ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ .ತಂಡದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯರಾದ ಪ್ರನ್ವಿಕಾ,ತೃಷಾ,ಕೃತಿಕಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜಯಪುರದ ಮುದ್ದೇಬಿಹಾಳದಲ್ಲಿ ನಡೆದ ಪ್ರಾಂತೀಯ ಮತ್ತು ಕ್ಷೇತ್ರಿಯ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲಾ ವಿದ್ಯಾರ್ಥಿಗಳು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು, ಪುತ್ತೂರು. ಇಲ್ಲಿ ನಡೆದ ವಲಯ ಮಟ್ಟದ ಬಾಲಕ- ಬಾಲಕಿಯರ(ಪ್ರಾಥಮಿಕ) ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ಶಾಲಾ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ.
” ಭಾರತದ ಹಿರಿಮೆ- ಗರಿಮೆಯನ್ನು ಜಗತ್ತಿನಾತ್ಯಂತ ಸಾರಿದ ಸ್ವಾಮಿ ವಿವೇಕಾನಂದರ ಜನುಮ ದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲು ರಾಷ್ಟ್ರದಾತ್ಯಂತ ಕರೆಕೊಟ್ಟಿರುವ ಹಿನ್ನೆಲೆಯನ್ನು ವಿದ್ಯಾರ್ಥಿ ದಿಶೆಯಿಂದ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ” – ಶ್ರೀ ಹರಿಪ್ರಸಾದ್, ತೃತೀಯ ಬಿಎ ವಿದ್ಯಾರ್ಥಿ, ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು. ದಿನಾಂಕ 12.01.2023ರಂದು ನಮ್ಮ ಶಾಲೆಯಲ್ಲಿ ಜರುಗಿದ ವಿವೇಕಾನಂದ ಜಯಂತಿಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಹರಿಪ್ರಸಾದ್ ಇವರು ಸ್ವಾಮೀಜಿಯವರ ದೃಢಸಂಕಲ್ಪದ ದೃಷ್ಟಾಂತಗಳು ನಮ್ಮಲ್ಲಿ ಭಾರತೀಯತೆಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಗುವ ಬಗೆಯನ್ನು ತಿಳಿಸಿದರು. […]
ಕ್ರೀಡಾ ಭಾರತಿ ಮಂಗಳೂರು ವಿಭಾಗದ ವತಿಯಿಂದ ಮಡಿಕೇರಿಯ ಕುಶಾಲನಗರದ ರೈತಭವನದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಯಾದ ಲಿತಿನ್ ಎಸ್ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಾಥಮಿಕ ಬಾಲಕಿಯರು, ಪ್ರೌಢಶಾಲಾ ಬಾಲಕರು ಮತ್ತು ಪ್ರೌಢಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಶ್ರೀದೇವಿ ಶಾಲೆ ಪುಣಚದಲ್ಲಿ ನಡೆದ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ಬಾಲಕಿಯರ ತಂಡ.
ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಮನ್ವಯ ಕಾರ್ಯಕ್ರಮ ನಡೆಯಿತು. ಇದು ಭಕ್ತ ಬಾಂಧವರ ಮನಸ್ಸಿಗೂ ಮುದವನ್ನು ನೀಡಿರುತ್ತದೆ. ತನ್ಮೂಲಕ ಮಕ್ಕಳು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ ಕೃತಾರ್ಥರಾಗಿರುತ್ತಾರೆ.
ವಿವೇಕಾನಂದ ಪದವಿ ಕಾಲೇಜು ವತಿಯಿಂದ ವಿಜ್ಞಾನ ಹಾಗೂ ಗಣಿತ ಪಠ್ಯ ವಿಷಯಗಳ ಸುಲಭ ಹಾಗೂ ಪರಿಣಾಮಕಾರಿ ಕಲಿಕೆಗೆ ಸಂಬಂಧಿಸಿ ಪ್ರಾಯೋಗಿಕ ಕಾರ್ಯಗಾರ ನಡೆಯಿತು. ವಿವೇಕಾನಂದ ಪದವಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಮಕ್ಕಳು ಅತ್ಯುತ್ತಮ ರೀತಿಯಲ್ಲಿ ಮಕ್ಕಳಿಗೆ ತಿಳಿಸಿಕೊಟ್ಟರು. ಪರೀಕ್ಷಾ ತಯಾರಿ ಹಾಗೂ ತಿಳುವಳಿಕೆಯ ದೃಷ್ಟಿಯಿಂದ ಎಲ್ಲಾ 10ನೇ ತರಗತಿ ವಿದ್ಯಾರ್ಥಿಗಳಿಗೆ ಕಾರ್ಯಗಾರವು ತುಂಬಾ ಸಹಕಾರಿಯಾಗಿತ್ತು. ನಮ್ಮ ಶಾಲಾ ವಿಜ್ಞಾನ ಶಿಕ್ಷಕರುಗಳಾದ ಶ್ರೀಮತಿ ಪೂರ್ಣಿಮ, ಶ್ರೀಮತಿ ಶ್ವೇತಾ, ಶ್ರೀಮತಿ ಪುಷ್ಪಾವತಿ ಭಾಗವಹಿಸಿದರು.
ಶಾಲಾ ಹತ್ತನೇ ತರಗತಿಯ ಮಕ್ಕಳ ಗಣಿತ ಕಲಿಕೆಗೆ ಸಂಬಂಧಿಸಿದಂತೆ ದಿನಾಂಕ 07-01-2023 ಮತ್ತು 08-01-2023ರಂದು ಪ್ರಾಯೋಗಿಕ ಗಣಿತ ಕಾರ್ಯಗಾರ ನಡೆಯಿತು. ಹತ್ತನೇ ತರಗತಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾದ ಶ್ರೀ ಟಿ. ಎನ್ ಪ್ರಸನ್ನಮೂರ್ತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಮಕ್ಕಳ ಗಣಿತ ಪಠ್ಯದ ಕಠಿಣ ಕಲಿಕಾಂಶಗಳನ್ನು ಸುಲಭ ಹಾಗೂ ಸರಳ ರೀತಿಯಲ್ಲಿ ಕಲಿಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪ್ರಯೋಗಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸುತ್ತಾ ಮಕ್ಕಳ ಗಣಿತ ಸಂಬಂಧಿ ಸಂಶಯಗಳಿಗೆ ಉತ್ತರಿಸಿದರು. ಮಕ್ಕಳ ಕ್ರಿಯಾತ್ಮಕ ಭಾಗವಹಿಸುವಿಕೆ ಹಾಗೂ ಅವರ ಆಸಕ್ತಿ ,ಪ್ರತಿಭೆಗಳನ್ನು […]
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ). ಉಡುಪಿ 3ನೇ ರಾಜ್ಯ ಸಬ್ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ […]
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳು, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ ಕಡಬ ಇದರ ಸಹಯೋಗದಲ್ಲಿ ನಡೆದ ಅವಿಭಜಿತ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ೧೦ನೇ ತರಗತಿಯ ವಿದ್ಯಾರ್ಥಿ ಕೃಷ್ಣ […]
ಅನುರಣನ ಪ್ರತಿಭೋತ್ಸವ 2022-23 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಂತಹ ಮಕ್ಕಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅನುರಣನ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ನುಡಿದರು. ಶಾಲಾ ಪೋಷಕರಾದ ಶ್ರೀ ವಿಷ್ಣು ಭಟ್ ಪಾದೆ ಕಲ್ಲು ಮಾತನಾಡಿ ಗುರುಹಿರಿಯರ ಮಾರ್ಗದರ್ಶನದೊಂದಿಗೆ ಬದುಕುತ್ತಾ ಉತ್ತಮ ಕೆಲಸ ಕಾರ್ಯಗಳ ಸಫಲತೆಗೆ ಒಗ್ಗಟ್ಟಿನಲ್ಲಿ ಬಲವಿದ್ದರೆ ಮಾತ್ರ ಸಾಧ್ಯ ಎಂಬುದನ್ನು ಕಥೆಯ […]
ವಿವೇಕಾನಂದ ಕನ್ನಡ ಶಾಲೆ ತೆಂಕಿಲ ಪುತ್ತೂರು ‘ಆಶುಭಾಷಣ’ – ಶ್ರೀ ಕೃಷ್ಣ ಪ್ರಥಮ’ ‘ಕ್ಲೇ ಮಾಡಲಿಂಗ್ ‘ – ಕಿಶಾನ್ ತೃತೀಯ ‘ಆಶುಭಾಷಣ’ – ಶಿವಾನಿ ರೈ ಪ್ರಥಮ ‘ಕಂಠಪಾಠ ‘ – ಶ್ರೀಶ ನಿದ್ವಣ್ಣಾಯ ಪ್ರಥಮ ‘ರಂಗೋಲಿ’ – ಕವನ ಪ್ರಥಮ , ‘ಭರತನಾಟ್ಯ’ – ಅವನಿ ಪ್ರಥಮ ,’ ‘ಸಂಸ್ಕೃತ ಭಾಷಣ’ – ಸಿಂಚನ ದ್ವಿತೀಯ, ‘ಚಿತ್ರಕಲೆ’ – ಅಗಮ್ಯ ದ್ವಿತೀಯ , ‘ಹಾಸ್ಯ’ – ಭವಿಶ್ ತೃತೀಯ ಗುಂಪು ಸ್ಪರ್ಧೆ ‘ಕವಾಲಿ ‘ಅಮೃತ […]
“ಕುಟುಂಬ ವ್ಯವಸ್ಥೆ ವ್ಯಕ್ತಿ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಇದರಲ್ಲೂ ಮದುವೆ ಎಂಬ ಪವಿತ್ರ ಬಾಂಧವ್ಯ ಭಾರತೀಯ ಕುಟುಂಬದ ಭದ್ರ ಬುನಾದಿಯಾಗಿದೆ” – ಸು.ರಾಮಣ್ಣ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಕುಟುಂಬ ಪ್ರಬೋಧನ್ ಪುತ್ತೂರು’ ವತಿಯಿಂದ ನಡೆದ ನವದಂಪತಿ ಸಮಾವೇಶಕ್ಕೆ ಅಭ್ಯಾಗತರಾಗಿ ಆಗಮಿಸಿದ ಹಿರಿಯರಾದ ಸು.ರಾಮಣ್ಣ ಇವರು ‘ಪ್ರಕೃತಿಯ ಕೊಡುಗೆಗಳಲ್ಲಿ ಸಂಸ್ಕೃತಿಯನ್ನು ಪೋಷಿಸುತ್ತಾ ಸಮೃದ್ಧ ಜೀವನ ನಡೆಸುತ್ತಿರುವ ಕುಟುಂಬಗಳು ಭಾರತದ ಶಕ್ತಿ’ ಎಂದರು. ಕುಟುಂಬ ಪ್ರಬೋಧನ್ ನ […]
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಶಾಲೆ ತೆಂಕಿಲದಲ್ಲಿ ಕಾವ್ಯ-ನಾಟ್ಯ-ರಂಗ-ಕಥಾ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ನೃತ್ಯ ಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯಂ ಅವರ ನಾಟ್ಯ ರಂಗ ಪುತ್ತೂರು ವತಿಯಿಂದ ಪ್ರಸ್ತುತಿಗೊಂಡ ಕಾರ್ಯಕ್ರಮದ ತಂಡದಲ್ಲಿ ರಚನಾ ನರಿಯೂರು, ಅನ್ನಪೂರ್ಣ ರಾವ್ ಹಾಗೂ ವಿನಿತಾ ಶೆಟ್ಟಿ ಸಾಥ್ ನೀಡಿದರು. ಜಿ. ಎಸ್. ಶಿವರುದ್ರಪ್ಪ ಅವರ ‘ಹಣತೆ ಹಚ್ಚುತ್ತೇವೆ’ ಕವನ ವಾಚನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹಳೆಗನ್ನಡ ಪದ್ಯ, ಸಾಹಿತಿ ಎಸ್. ದಿವಾಕರ ಅವರ […]