ರಥ ಸಪ್ತಮಿಯ ಪ್ರಯುಕ್ತ ಶಾಲೆಯಲ್ಲಿ ಸಾಮೂಹಿಕ ಸೂರ್ಯನಮಸ್ಕಾರವು ನಡೆಯಿತು. ಕಾರ್ಯಕ್ರಮವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಯೋಗ ವರದಿ ಪ್ರಮುಖರಾದ ಶ್ರೀ ಲಕ್ಷ್ಮೀಕಾಂತ ಇವರು ದೀಪಪ್ರಜ್ವಲಿಸಿ ರಥಸಪ್ತಮಿ ಆಚರಣೆಯ ಮಹತ್ವ ಮತ್ತು ಸೂರ್ಯನಮಸ್ಕಾರ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಪರಿಣಾಮ ಬೀರುವ ಕುರಿತು ತಿಳಿಸಿದರು. ಇನ್ನೊರ್ವ ಮುಖ್ಯ ಅಭ್ಯಾಗತರಾದ ಶ್ರೀ ಶ್ರೀಕಾಂತ್ ಪೂಜಾರಿ ಬಿರಾವು ಮಾತನಾಡಿ ಮಕ್ಕಳಿಗೆ ತಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವರಿಕೆ ಮಾಡಿದರು. ವೇದಿಕೆಯಲ್ಲಿ ಬೆಂಗಳೂರಿನ ಉದ್ಯೋಗಿ ಶ್ರೀ ರಾಘವೇಂದ್ರ ತೇಜಸ್ವಿ, ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ನಮಿತಾ ಕೆ.ಕೆ ನಿರೂಪಿಸಿ ಸ್ವಾಗತಿಸಿ, ಸಹಶಿಕ್ಷಕಿ ಅನುರಾಧ ವಂದಿಸಿದರು. ಶಾಲಾ ಎಲ್ಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಎಲ್ಲಾ 800 ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯನಮಸ್ಕಾರದಲ್ಲಿ ಭಾಗವಹಿಸಿದರು.