ಸಮತ್ವ- ಸಾಮರಸ್ಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ

ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದಲ್ಲಿ ಸಕ್ರಿಯವಾಗಿರುವುದರಿಂದ ನಮ್ಮ ಕಲಿಕೆ- ಉದ್ಯೋಗದ ನಡುವೆಯೂ ಸಾಮಾಜಿಕ ಜವಾಬ್ದಾರಿಗಳ ಪರಿಚಯ ನಮಗಾಗುತ್ತದೆ. ಇದು ನಮ್ಮಲ್ಲಿರುವ ಏಕತಾನತೆಯನ್ನು ದೂರಮಾಡಲು ಸಹಕಾರಿಯಾಗಿದೆ. – ವಿರೂಪಾಕ್ಷ ವಕೀಲರು, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀಯುತರು ಪ್ರಾಸ್ತಾವಿಕ ಮಾತುಗಳೊಂದಿಗೆ ಬಂದಂತಹ ಸರ್ವರನ್ನು ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಡಾ. ಪುನೀತ್ ಅವರು ಶಾಲಾ ಚಟುವಟಿಕೆಗಳೊಂದಿಗೆ ಜೋಡಿಕೊಳ್ಳುವ ಸಾಧ್ಯತೆಗಳನ್ನು ತಿಳಿಸುತ್ತಾ ಶಾಲಾ ಪಠ್ಯ-ಪಠ್ಯಪೂರಕ ಚಟುವಟಿಕೆಗಳ ಪ್ರಸಕ್ತ ದಿನಗಳನ್ನು ತಿಳಿಸಿದರು.

                                                                              

                                                                              

ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರ ಇವರು ಮಾತನಾಡಿ “ನಮ್ಮ ವಿದ್ಯಾಸಂಸ್ಥೆಯಲ್ಲಿ ಪಡೆದುಕೊಂಡ ಸಂಸ್ಕಾರ, ಸನ್ನಡತೆ ಹಾಗೂ ಅನುಭವಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮತ್ತು ಈ ಶಾಲೆಯ ಸಾಧನೆಗಳನ್ನು ಉತ್ತುಂಗಕ್ಕೇರಿಸುವ ರಾಯಭಾರಿಗಳು ನೀವಾಗಬೇಕು” ಎಂದರು.
ಸಂಘದ ಕಾರ್ಯದರ್ಶಿ ಡಾ|ಪ್ರಜ್ಞಾ ಪ್ರಾರ್ಥಿಸಿ, ಹಿರಿಯ ವಿದ್ಯಾರ್ಥಿ ಕಾರ್ತಿಕ್ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ರೇವತಿ ನಿರೂಪಿಸಿದರು.

Highslide for Wordpress Plugin