ವಿದ್ಯಾಭಾರತಿ ಕ್ರೀಡಾಕೂಟ – ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕ್ರೀಡಾಕೂಟ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ವತಿಯಿಂದ ಶ್ರೀ ಸರಸ್ವತಿ ವಿದ್ಯಾ ಪೀಠಂ, ಶಾರದಾ ಧಾಮ, ಹೈದರಾಬಾದ್, ತೆಲಂಗಾಣದಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕೀರ್ತಿ – ಎತ್ತರ ಜಿಗಿತ (ಪ್ರಥಮ) – (ಮೋನಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿ), ಗುಣಶ್ರೀ 80ಮೀ ಹರ್ಡಲ್ಸ್ (ಪ್ರಥಮ)- (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ) , ವಿಕೃತಿ ಕುಮಾರಿ(ಗೀತಾ ರೈ ಮತ್ತು ಪ್ರವೀಣ್ ಕುಮಾರ್ ದಂಪತಿಗಳ ಪುತ್ರಿ) ನಡಿಗೆಯಲ್ಲಿ ದ್ವಿತೀಯ , ಮತ್ತು 14ರ ವಯೋಮಾನದ ಬಾಲಕಿಯರ 4 100 ಮೀ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಮತ್ತು ಕು. ಶ್ರದ್ಧಾ ಶೆಟ್ಟಿ ತರಬೇತಿ ನೀಡಿದ್ದರು.

Highslide for Wordpress Plugin