ಜಿಲ್ಲಾಮಟ್ಟದ ಕಬಡ್ಡಿ

ವಿಭಾಗ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ತಂಡದಲ್ಲಿಕೃತಿಕಾ ಜಿ ( ಶ್ರೀ ರವಿ ಮತ್ತುಯಶೋಧ ದಂಪತಿಗಳ ಪುತ್ರಿ), ಆದ್ಯ ಬಿ.ಆರ್(ಶ್ರೀ ರಾಮಣ್ಣಗೌಡ ಮತ್ತುರೇಖಾ ಪಿ ದಂಪತಿಗಳ ಪುತ್ರಿ), ಪಿ ಕವನಶ್ರೀ (ಶ್ರೀ ಗೋಪಾಲಕೃಷ್ಣ ಮತ್ತು ಶೈಲಜಾ ದಂಪತಿಗಳ ಪುತ್ರಿ), ಬಿಂದುಶ್ರೀ (ಶ್ರೀ ಜನಾರ್ದನ ಮತ್ತು ಶಶಿಕಲಾ ದಂಪತಿಗಳ ಪುತ್ರಿ), ದೀಕ್ಷಿತಾ (ಶ್ರೀ ದೇವಪ್ಪಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಲೋಚನ ಯಂ (ಶ್ರೀ ಸುಂದರಗೌಡ ಮತ್ತು ಉಷಾ ಕೆ ದಂಪತಿಗಳ ಪುತ್ರಿ), ಪೂಜಾ (ಶ್ರೀ ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ), ಮಾನಸ ಎಂ(ಶ್ರೀ ಜಯೇಶ್ ಮತ್ತು ಸುಮಿತ್ರ ದಂಪತಿಗಳ ಪುತ್ರಿ), ಸುಶಾ ಎಂ (ಶ್ರೀ ಕೃಷ್ಣಪ್ಪ ಎಂ ಮತ್ತುಗೀತಾದಂಪತಿಗಳ ಪುತ್ರಿ), ಯಲ್ಲವ್ವ (ಶ್ರೀ ಹನುಮಂತ ಮತ್ತು ಲಕ್ಷಿ ದಂಪತಿಗಳ ಪುತ್ರಿ), ತನುಜಾ (ಅಪ್ಪಸಾಬ ಮತ್ತುಗೌರವ್ವ ದಂಪತಿಗಳ ಪುತ್ರಿ), ಗೋದಾವರಿ (ಶ್ರೀ ಸುನೀಲ ಮತ್ತುಚಂದ್ರಿಮಾ ದಂಪತಿಗಳ ಪುತ್ರಿ) ಭಾಗವಹಿಸಿದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ಶ್ರೀ ದಾಮೋದರ್ ಮತ್ತು ಶ್ರೀಮತಿ ಹರಿಣಾಕ್ಷಿ ಹಾಗೂ ಮನೋಹರ್ ತರಬೇತಿ ನೀಡಿದ್ದರು.

Highslide for Wordpress Plugin