ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ

 ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ

“ನೀರಿನ ಮಿತ ಬಳಕೆಯ ಬಗ್ಗೆ ನಮ್ಮ ಈ ತಲೆಮಾರಿಗೆ ಅರಿವು ನೀಡಿದಾಗ ಭವಿಷ್ಯದಲ್ಲಿ ನೀರಿನ ಸುಸ್ಥಿತಿ ಸಾಧ್ಯ” ಎಂದು KUIDFCಯ ಜಲಸಿರಿ ಯೋಜನೆಯ ಗ್ರಾಮ ಸಂಸ್ಥೆಯ ಜಂಡರ್ ಸ್ಪೆಷಲಿಸ್ಟ್ ಆಗಿರುವ ಶ್ರೀಮತಿ ಅಮೀಶಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ನಡೆದ ಜಲಸಿರಿ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ನುಡಿದರು. ನೀರಿನ ಅಗತ್ಯತೆ ಹಾಗೂ ಸದ್ವಿನಿಯೋಗ ಆದಾಗ ಮಾತ್ರ ಜಲಸಂರಕ್ಷಣೆ ಸಾಧ್ಯ ಎನ್ನುತ್ತಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ ಈ ಕಾರ್ಯಾಗಾರದಲ್ಲಿ ಪ್ರೌಢವಿಭಾಗದ ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಯೋಚನೆಗಳನ್ನು ಹೊರತಂದು ಸ್ಪೂರ್ತಿ ತುಂಬಿದರು. ಜಲಸಿರಿ ಯೋಜನೆಯ ಯಶಸ್ವೀ ಅನುಷ್ಠಾನದ ಬಗೆಗಿನ ವೀಡಿಯೋ ತುಣುಕು ಪ್ರದರ್ಶನ ಕೂಡಾ ನಡೆಯಿತು.

                                               

                                                 

KUIDFCಯ ಜಲಸಿರಿ ಯೋಜನೆಯ ಸಮುದಾಯ ಅಭಿವೃದ್ಧಿ ಸಹಾಯಕರಾದ ಶ್ರೀಯುತ ಉಸ್ಮಾನ್ ಇವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಗ್ರಾಮ ಸಂಸ್ಥೆಯ ಪಬ್ಲಿಕ್ ಕನ್ಸಾಲ್ಟೇಶನ್ ಸ್ಪೆಷಲಿಸ್ಟ್ ಆದ ಕುಮಾರಿ ನವ್ಯ ಹಾಗೂ ಕಮ್ಯೂನಿಟಿ ಆರ್ಗನೈಸರ್ ಆಗಿರುವ ಕು. ಅರ್ಪಿತಾ ಹಾಗೂ ನಮ್ಮ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀ ನಳಿನಿ ವಾಗ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

                                                                                                                          

ಯೋಜನೆಯ ಆಯೋಜಕರು ಈ ಕಾರ್ಯಕ್ರಮದ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ಕೆಲವು ಪುಸ್ತಕಗಳನ್ನು ನೀಡಿದರು. ವಿದ್ಯಾರ್ಥಿನಿ ಕು.ಗಗನ ಇವಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರವನ್ನು ಶಿಕ್ಷಕಿ ಧನ್ಯಶ್ರೀ ಸ್ವಾಗತಿಸಿ, ನಿರ್ವಹಿಸಿದರು

Highslide for Wordpress Plugin