ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – 1-4

ಉತ್ತಮ ಸಂಸ್ಕಾರ ಸಂಸ್ಕೃತಿಯಿಂದ ಮಕ್ಕಳ ಕೌಶಲ್ಯ ಹೆಚ್ಚಲು ಸಾಧ್ಯ – ಉಪೇಂದ್ರ ಬಲ್ಯಾಯ

“ಶಾಲೆಯಲ್ಲಿ ಉತ್ತಮವಾದ ಸಂಸ್ಕಾರ, ಸಂಸ್ಕೃತಿಯಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳು ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಾರೆ, ಹಾಗೆಯೇ ಕನ್ನಡ ಮಾಧ್ಯಮ ಎಂಬ ಯಾವುದೇ ಕೀಳರಿಮೆ ಬೆಳೆಸಿಕೊಳ್ಳಬೇಡಿ” ಎಂದು  ಶಾಲೆಯಲ್ಲಿ ನಡೆದ 1ರಿಂದ 4ನೇ ತರಗತಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಭಾಧ್ಯಕ್ಷ ಸ್ಥಾನವನ್ನು ವಹಿಸಿದ ಮೈಸೂರು ಆಂಗ್ರೋ ಸಪ್ಲೈಸ್ ಸಂಸ್ಥೆಯ ಮಾಲಕರಾದ ಶ್ರೀ ಉಪೇಂದ್ರ ಬಲ್ಯಾಯ ನುಡಿದರು.

                                                        

ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ ಕು. ನಿಶ್ಮಿತಾ ಎಚ್. ಆಚಾರ್ಯ ತನ್ನ ಶಾಲಾ ದಿನಗಳ ನೆನಪಿನೊಂದಿಗೆ ಮಕ್ಕಳಿಗೆ ಶುಭ ಹಾರೈಸಿದರು.

                               

ವೇದಿಕೆಯಲ್ಲಿ ಇನ್ನೋರ್ವ ಅಭ್ಯಾಗತರಾದ ಶಾಲಾ ಪೋಷಕರೂ ಆಗಿರುವ ಶ್ರೀಮತಿ ಲಲಿತಾ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ವೀಣಾ ನಾಗೇಶ್ ತಂತ್ರಿ, ಹಿರಿಯ ಶಿಕ್ಷಕಿ ಶ್ರೀಮತಿ ವೀಣಾಸರಸ್ವತಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ತನ್ವಿ ಪ್ರಾರ್ಥಿಸಿ, ಕು. ಗುಣಶ್ರೀ ಸ್ವಾಗತಿಸಿ, ಕು. ಲಾಸ್ಯ ಮತ್ತು ಕು. ಕುಶಿತಾ ಬಹುಮಾನಿತರ ಪಟ್ಟಿ ವಾಚಿಸಿದರು. ಕು. ಕೃತಿಕಾ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮವನ್ನು ಕು. ದರ್ಶಿನಿ ನಿರೂಪಿಸಿದರು.

Highslide for Wordpress Plugin