ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸಾನಿಧ್ಯ’- ಪೂರ್ವ ಪ್ರಾಥಮಿಕ ಮಕ್ಕಳ ಪೋಷಕರ ಪ್ರಶಿಕ್ಷಣ ಕಾರ್ಯಾಗಾರ

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪೂರ್ವ ಪ್ರಾಥಮಿಕ ಮಕ್ಕಳ ಪೋಷಕರಿಗೆ ಸಾನಿಧ್ಯ- ಪ್ರಶಿಕ್ಷಣ ಕಾರ್ಯಗಾರ ನಡೆಯಿತು. ‘ಆಟದ ಮೂಲಕ ಪಾಠ’ ಪರಿಕಲ್ಪನೆ ಆಧಾರಿತ ಕಾರ್ಯಾಗಾರದಲ್ಲಿ ಅಭಿನಯ ಗೀತೆ, ಕಥಾಯೋಗ, ಸಾಹಸ ಪ್ರದರ್ಶನ, ಕರಕುಶಲ ಕಲಾ ವಸ್ತು ಪ್ರದರ್ಶನ, ಕಲಿಕಾ ಉಪಕರಣಗಳು ಪ್ರದರ್ಶಿತಗೊಂಡವು. ಕಾರ್ಯಗಾರಕ್ಕೆ ಆಗಮಿಸಿದ್ದ ಹಿರಿಯ ದಂಪತಿಗಳಾದ ಪ್ರೊಫೆಸರ್ ನಾರಾಯಣ ಮಜಿ (ನಿವೃತ್ತ ಪ್ರಾಧ್ಯಾಪಕರು) ಹಾಗೂ ಸರಸ್ವತಿ ಪಿ (ನಿವೃತ್ತ ಮುಖ್ಯೋಪಾಧ್ಯಾಯರು) ಉಪಸ್ಥಿತರಿದ್ದು, ಶುಭ ಹಾರೈಸಿದರು.
ಪೋಷಕರನ್ನು ಆಟ ಆಡಿಸುತ್ತಾ ನೀಡಿದ ಪ್ರಶಿಕ್ಷಣವು ಮಗುವಿನ ಜೊತೆಗೆ ಪೋಷಕರು ಇರಬೇಕಾದ ಬಗೆಯೊಂದಿಗೆ, ತಾಯಿಯ ಸ್ಪರ್ಶದಿಂದ ಮಗು ತನ್ನ ಇರುವಿಕೆಯ ಮನ್ನಣೆ ಪಡೆದು ‘ಈ ಜಗತ್ತು ಚೆನ್ನಾಗಿದೆ’ ‘ನಾನು ಸರಿಯಾಗಿದ್ದೇನೆ’ ಎಂದು ಅರ್ಥ ಮಾಡಿಕೊಂಡು ಆರೋಗ್ಯಕರವಾಗಿ ಬೆಳೆಯಲು ಸಹಕಾರಿ ಎಂದರು .
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ ರಮೇಶ್ಚಂದ್ರ ಇವರು ಮಕ್ಕಳ ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಸಂಸ್ಕಾರ ಶಿಕ್ಷಣದ ಮಹತ್ವ ತಿಳಿಸಿದರು. ಪ್ರಶಿಕ್ಷಣದ ಅಂಗವಾಗಿ ಪೋಷಕರಿಗೆ ಸ್ಪರ್ಧೆಗಳನ್ನು ಆಯೋಜಿಸಿ ಪುಸ್ತಕ ರೂಪದ ಬಹುಮಾನ ನೀಡಲಾಯಿತು.ಕಾರ್ಯಕ್ರಮವನ್ನು ಸಹಶಿಕ್ಷಕಿ ಶ್ರೀಮತಿ ಅನುರಾಧ ನಿರೂಪಿಸಿದರು.

             

Highslide for Wordpress Plugin