2023-24ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಹೊಸ ಸೇರ್ಪಡೆಗೊಂಡಿರುವ ಹಾಗೂ ಮರು ಸೇರ್ಪಡೆಗೊಂಡಿರುವ ಮಕ್ಕಳ ಹಾಗೂ ಅವರ ಪೆÇೀಷಕರಿಗೆ ಶಾಲಾ ಪುನರಾರಂಭದಂದು ಗಣಹೋಮ ನಡೆಸಿ ಸ್ವಾಗತಿಸಲಾಯಿತು.
ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರದ ಶ್ರೀಮತಿ ನವೀನಾಕ್ಷಿ ದಂಪತಿಗಳು ಪ್ರಧಾನರ್ಚಕರ ಸಮ್ಮುಖದಲ್ಲಿ ದೈವೀ ಕಾರ್ಯ ನೆರವೇರಿಸಿದರು. ಬಂದಂತಹ ಮಕ್ಕಳಿಗೆ ತಿಲಕವಿರಿಸಿ ಆರತಿ ಬೆಳಗಿ ಶುಭ ಕೋರಲಾಯಿತು. ಶಾಲಾ ಆಡಳಿತ ಮಂಡಳಿ, ಅಧ್ಯಕ್ಷರು, ಸಂಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.