ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

Wednesday, October 31st, 2012

ದಿನಾಂಕ 25-10-2012ರಂದು ವಿವೇಕಾನಂದ ವಿದ್ಯಾ ಸಂಸ್ಧೆಯ ಶಿಕ್ಷಕರಿಗಾಗಿ ಮೂರು ದಿನಗಳ ಶೈಕ್ಷಣಿಕ ಕಾರ್ಯಾಗಾರವು ಉದ್ಘಾಟನೆಗೊಂಡಿತು. ಈ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ತಾಲೂಕು ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಶಶಿಪ್ರಭಾ ಸಂಪ್ಯರವರು ಉದ್ಘಾಟಿಸಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಶಿವಪ್ರಸಾದ ಇ. ಹಾಗೂ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾದ್ಯಮಾ ಶಾಲೆಯ ಮುಖ್ಯಗುರುಗಳಾದ ಶ್ರೀ ಸತೀಶ್ ರೈ, ಶ್ರೀಮತಿ ಅಶಾಬೆಳ್ಳಾರೆ ಉಪಸ್ಧಿತರಿದ್ದರು. ನಂತರದ ಅವಧಿಯಲ್ಲಿ ಪಠ್ಯಕ್ರಮ ಮತ್ತು ಭೋಧನೆ ಎಂಬ ವಿಷಯದಲ್ಲಿ ಕಾರ್ಯಾಗಾರವನ್ನು ಶ್ರೀ ಡಾ| […]

ಪರೀಕ್ಷಾ ಪೂರ್ವ ತಯಾರಿ

ಪರೀಕ್ಷಾ ಪೂರ್ವ ತಯಾರಿ

Saturday, October 20th, 2012

ಜೇಸಿಯ ರಾಷ್ಟ್ರ ತರಬೇತುದಾರ ರಾಜೇಂದ್ರ ಭಟ್ ಬೆಳ್ಮಣ್ಣು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಪರೀಕ್ಷಾ ಪೂರ್ವ ತಯಾರಿ, ಪ್ರೇರಣೆ ಹಾಗೂ ಧನಾತ್ಮಕ ಯೋಚನೆಗಳ ಬಗ್ಗೆ ದಿನಾಂಕ ೧೨.೧೦.೨೦೧೨ ರಂದು ಕಾರ್ಯಾಗಾರ ನಡೆಸಿದರು.     ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ ಕಾರ್ಯಾಗಾರವನ್ನು ಉದ್ಫಾಟಿಸಿ ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯರಾದ ಡಾ.ಸುಲೇಖಾ ವರದರಾಜ್ , ಮುಖ್ಯಗುರುಗಳು , ಶಿಕ್ಷಕ ವೃಂದ ಉಪಸ್ಥಿತರಿದ್ದರು.  

ಭಗವದ್ಗೀತಾಧ್ಯಯನ

ಭಗವದ್ಗೀತಾಧ್ಯಯನ

Saturday, October 20th, 2012

ಸಂಸ್ಕೃತ ಶಬ್ಧಗಳ ತಪ್ಪು ಉಚ್ಛಾರಣೆಯು ಅರ್ಥವ್ಯತ್ಯಾಸವನ್ನುಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಇದರ ಸ್ಪಷ್ಟ, ನಿರ್ದಿಷ್ಟ ಉಚ್ಛಾರಣೆಯ ಕಡೆಗೆ ಗಮನ ಅತೀ ಅಗತ್ಯವಾಗಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ.ಶ್ರೀಶ ಕುಮಾರ್ ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳ ಉಚ್ಛಾರಣಾ ಕ್ರಮದ ಬಗ್ಗೆ ತರಗತಿ ನಡೆಸಿದರು.

ಹಿರಿಯ ವಿದ್ಯಾರ್ಥಿಗಳ ಸಭೆ

ಹಿರಿಯ ವಿದ್ಯಾರ್ಥಿಗಳ ಸಭೆ

Monday, October 15th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೨೦೧೨-೧೩ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ  ಸಭೆಯನ್ನು ದಿನಾಂಕ ೧೪.೧೦.೧೨ ರಂದು ಶಾಲಾ ವಠಾರದಲ್ಲಿ ನಡೆಸಲಾಯಿತು. ಸಭೆಯ ಪ್ರಾರಂಭದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಯಶ್ವಿತ್ ಕುಮಾರ್ ಅಮೀನ್, ಅಭಿಷೇಕ್.ಡಿ ಹಾಗೂ ಇತರರು ಸಿದ್ಧಪಡಿಸಿದ ವಿಕಸನ ವಾರ್ತಾಸಂಚಿಕೆಯ ವೀಡಿಯೋ ಚಿತ್ರಣವನ್ನು ಪ್ರದರ್ಶಿಸಿ ಅವರ ಸಾಧನೆಯನ್ನು ಶ್ಲಾಘಿಸಲಾಯಿತು. ನಂತರ ಹಿರಿಯ ವಿದ್ಯಾರ್ಥಿ ಸಂಘದ  ಪದಾಧಿಕಾರಿಗಳನ್ನು  ಈ ಸಂದರ್ಭದಲ್ಲಿ ಆರಿಸಲಾಯಿತು. ಸಂಘದ ಅಧ್ಯಕ್ಷರಾಗಿ ಪುನೀತ್ ಎನ್.ಎ, ಉಪಾಧ್ಯಕ್ಷರಾಗಿ ಅಂಕಿತಾ.ಜಿ, ಕಾರ್ಯದರ್ಶಿಯಾಗಿ ವಿರೂಪಾಕ್ಷ ಭಟ್, ಸಹಕಾರ್ಯದರ್ಶಿಯಾಗಿ ಜ್ಯೋತಿಶ್ರೀ ಹಾಗೂ […]

ಹರಿಕಥಾ - ಪ್ರವಚನ

ಹರಿಕಥಾ – ಪ್ರವಚನ

Monday, October 15th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ದಿನಾಂಕ ೧೩.೧೦.೨೦೧೨ ರಂದು  ಹರಿಕಥಾ ಮತ್ತು  ಭಾವಗಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಫಾಟನೆಯನ್ನು ಶ್ರೀಮತಿ ವಿದ್ಯಾ ಕಾಂಚನ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರಿ ರವೀಂದ್ರ.ಪಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಶ್ರೀಮತಿ ಆಶಾಬೆಳ್ಳಾರೆ ಉಪಸ್ಥಿತರಿದ್ದರು. ಬಳಿಕ ಚಿ. ಗೌರೀಶ ಕಾರಂತ ರಿಂದ ಭಕ್ತಮಾರ್ಕಂಡೇಯ ಎಂಬ ಹರಿಕಥಾ ಭಾಗವತ ನಡೆಯಿತು. ನಂತರ ಶಾಲಾ ವಿದ್ಯಾರ್ಥಿನಿಯರಿಂದ ಭಾವಗಾನ ಕಾರ್ಯಕ್ರಮ  ನಡೆಯಿತು. ಕಾರ್ಯಕ್ರಮದ ನಿರೂಪಣೆ ಹಾಗೂ […]

ವಿವೇಕಾನಂದ ಕನ್ನಡ ಮಾಧ್ಯಮ - ಸಮಗ್ರ ಪ್ರಶಸ್ತಿ

ವಿವೇಕಾನಂದ ಕನ್ನಡ ಮಾಧ್ಯಮ – ಸಮಗ್ರ ಪ್ರಶಸ್ತಿ

Friday, October 5th, 2012

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಡಬದಲ್ಲಿ ಎರಡು ದಿನಗಳ ಕಾಲ ನಡೆದ  ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.

ಮೊಸರು ಕುಡಿಕೆ - ಸ್ಪರ್ಧಾ ವಿಜೇತರು

ಮೊಸರು ಕುಡಿಕೆ – ಸ್ಪರ್ಧಾ ವಿಜೇತರು

Monday, September 10th, 2012

ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪುತ್ತೂರು ದ.ಕ ಇಲ್ಲಿ ನಡೆದ ೪ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ರಾಮಪ್ರಸಾದ್ ಭಾರತಮಾತೆಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ, ಸ್ವಾತಿಭಟ್, ಭಗವದ್ಗೀತೆ ಪ್ರಥಮ, ಶ್ವೇತಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸ್ಪರ್ಧಾ ವಿಜೇತರು

ಸ್ಪರ್ಧಾ ವಿಜೇತರು

Monday, September 10th, 2012

ಎಲ್.ಐ.ಸಿ ಪುತ್ತೂರು ಇವರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾದ ಶ್ರೀಲಕ್ಷ್ಮೀ ಗಾಯನ ಸ್ಪರ್ಧೆಯಲ್ಲಿ ಪ್ರಥಮ, ಭಗವದ್ಗೀತೆ ಪಠಣದಲ್ಲಿ ವರುಣ್ ದ್ವಿತೀಯ ಹಾಗೂ ಚಿತ್ರಕಲೆಯಲ್ಲಿ ಗೌತಮ್ ದ್ವಿತೀಯ ಅಭಿನಯ ಗೀತೆಯಲ್ಲಿ ಅಧಿತಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಖೋ-ಖೋ ವಿಭಾಗ ಮಟ್ಟಕ್ಕೆ ಆಯ್ಕೆ

ಖೋ-ಖೋ ವಿಭಾಗ ಮಟ್ಟಕ್ಕೆ ಆಯ್ಕೆ

Monday, September 10th, 2012

ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ಬೈಂದೂರಿನಲ್ಲಿ ನಡೆದ ಜಿಲ್ಲಾಮಟ್ಟದ ಹುಡುಗಿಯರ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸಿ ಮೈಸೂರಿನಲ್ಲಿ ನಡೆಯುವ ವಿಭಾಗಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಶಿಕ್ಷಕ - ರಕ್ಷಕ ಸಂಘಕ್ಕೆ ಆಯ್ಕೆ

ಶಿಕ್ಷಕ – ರಕ್ಷಕ ಸಂಘಕ್ಕೆ ಆಯ್ಕೆ

Monday, August 27th, 2012

೨೦೧೨-೧೩ ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ರಾಮಣ್ಣ ಗೌಡ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಭಾರತಿ ಶಶಿಧರ್ ಆಯ್ಕೆಯಾಗಿದ್ದಾರೆ.    

Highslide for Wordpress Plugin