ಸ್ವಗೃಹದಲ್ಲಿ ಗುರುವಂದನೆ - ವಿಶಿಷ್ಠ ಆಚರಣೆ

ಸ್ವಗೃಹದಲ್ಲಿ ಗುರುವಂದನೆ – ವಿಶಿಷ್ಠ ಆಚರಣೆ

Tuesday, July 23rd, 2013

ಸಮಾಜಮುಖಿ ಕಾರ್ಯ ಹಾಗೂ ಗುರುತ್ವದ ಔಚಿತ್ಯ ಸ್ಮರಿಸಿಕೊಂಡಾಗ ಪುತ್ತೂರಿನ ವಿ.ಬಿ ಅರ್ತಿಕಜೆಯವರು ಕಣ್ಮುಂದೆ ಬರುತ್ತಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಪ್ರೇರಕ ಗುರುಗಳ ಸಾಲಿಗೆ ಬರುವ ಕೆಲವರಲ್ಲಿ ಒಬ್ಬರು. ಪ್ರಾಧ್ಯಾಪಕರಾಗಿ ವೃತ್ತಿಯಿಂದ ನಿವೃತ್ತಿ ಹೊಂದಿದರೂ, ಪ್ರವೃತ್ತಿಯಲ್ಲಿ ಮಕ್ಕಳೊಂದಿಗೆ ಮಾತು, ಶಿಕ್ಷಕರಿಗೆ ಕಿವಿಮಾತು, ಸಾಹಿತ್ಯ ಕಲಾ ಪೋಷಕರು ವಿಶೇಷವಾಗಿ ಮನೆಯಲ್ಲೇ ಗ್ರಂಥಾಲಯ ಹೊಂದಿದ್ದು ಗ್ರಂಥಾಲಯ ಮಾಡ ಬಯಸುವ ಮನೆ ಮನಗಳಿಗೆ ಸಹಕಾರ ಇನ್ನೂ ಅನೇಕ. ಗುರುಪೂರ್ಣಿಮೆಯಂದು ಶ್ರೀಯುತರನ್ನು ವಿವೇಕಾನಂದ ಕನ್ನಡ ಮಾಧ್ಯಮದ ಮಕ್ಕಳು ಹಾಗೂ ಶಿಕ್ಷಕ ವೃಂದ […]

ಹಿಂದೂ ಸಾಮ್ರಾಜೋತ್ಸವ

ಹಿಂದೂ ಸಾಮ್ರಾಜೋತ್ಸವ

Saturday, July 6th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 06.07.2013 ರಂದು ‘ಹಿಂದೂ ಸಾಮ್ರಾಜೋತ್ಸವ’ದ ಆಚರಣೆ ಜರುಗಿತು. ಈ ಕಾರ್ಯಕ್ರಮದಲ್ಲಿ ಶಿವಾಜಿಯ ಬಾಲ್ಯ, ದೇಶಭಕ್ತಿ ಎಂಬ ವಿಷಯದಡಿ ವಿವೇಕಾನಂದ ಡಿ.ಇಡಿ ಕಾಲೇಜಿನ ಉಪನ್ಯಾಸಕರಾದ ಶ್ರೀ ರಘುರಾಜ ಯು.ವಿ ರವರು ಮಕ್ಕಳಿಗೆ ಮನದಟ್ಟಾಗುವಂತೆ ಕಥೆ ಹೇಳಿದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ.ಬಿ ರವರು ನೆರವೇರಿಸಿದರು.

ಶಾಲಾ ಚುನಾವಣೆ

ಶಾಲಾ ಚುನಾವಣೆ

Tuesday, June 11th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ದಿನಾಂಕ 08.06.2013 ರಂದು ಶಾಲಾ ಚುನಾವಣೆ ನಡೆಯಿತು. ಪ್ರೌಢಶಾಲಾ ನಾಯಕಿಯಾಗಿ ಕು| ಪ್ರಜ್ಞಾ.ಪಿ.ಆರ್ ಮತ್ತು ಉಪನಾಯಕನಾಗಿ ಪೃಥ್ವಿನಾರಾಯಣ ಇವರು ಬಹುಮತದಿಂದ ಆಯ್ಕೆಯಾದರು. ಪ್ರಾಥಮಿಕ ಶಾಲಾ ನಾಯಕನಾಗಿ ಭವಿಷಿತ್, ಉಪನಾಯಕಿಯಾಗಿ ಕು| ವಿಭಾ ಆಚಳ್ಳಿಯವರು ಆಯ್ಕೆಯಾದರು. ಚುನಾವಣೆಯ ಮುಖ್ಯಗುರುಗಳ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ನಡೆಯಿತು.

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Tuesday, June 11th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 08.06.2013 ರಂದು 2012-13ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೋ|ವಿ.ಬಿ. ಅರ್ತಿಕಜೆಯವರು ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು ಎಂದರು, ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಉಪಸ್ಥಿತರಿದ್ದು, ಸಾಧನೆಗೆ ಸದಾ ಪ್ರಯತ್ನಶೀಲರು ನಾವಾಗಬೇಕು, ನಮ್ಮಲ್ಲಿ ಕನಸು ಇರಬೇಕು, ಆಗ ಮಾತ್ರ ಕನಸನ್ನು ನನಸಾಗಿಸಲು ಸಾಧ್ಯ ಎಂಬುದಾಗಿ […]

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

Monday, June 10th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 06.06.2013 ರಂದು ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸರಕಾರಿ ಪದವಿ ಕಾಲೇಜು ಬಂಟ್ವಾಳ ಇಲ್ಲಿನ ಉಪನ್ಯಾಸಕರಾದ ಡಾ.ಅಜಕ್ಕಳ ಗಿರೀಶ್ ಭಟ್ ರವರು ದೀಪ ಪ್ರಜ್ವಲಿಸಿ ಘೃತಾಹುತಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೋಷಕರೊಂದಿಗೆ ‘ಪರಿಣಾಮಕಾರಿ ಪೋಷಕತ್ವ’ದ ಬಗ್ಗೆ ಸಂವಾದ ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆ ಮತ್ತು ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ […]

ಪ್ರಜ್ಞಾ ಸಾಧಕ ಪ್ರಶಸ್ತಿ

ಪ್ರಜ್ಞಾ ಸಾಧಕ ಪ್ರಶಸ್ತಿ

Monday, June 10th, 2013

ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ (ರಿ.) ಸುಳ್ಯ ಇವರು ನಡೆಸಿದ ‘ಸದಾ ಸಿದ್ಧರಾಗಿರೋಣ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ’ – 2013 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ವಾತಿಕ್ ಶರ್ಮ ಬಿ.ಎಸ್ 5ನೇ ತರಗತಿಯಲ್ಲಿ ‘ಪ್ರಜ್ಞಾ ತಾಲೂಕು ಸಾಧಕ’ ಪ್ರಶಸ್ತಿಯೊಂದಿಗೆ ರೂ 2,000 ನಗದು, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪಡೆದಿರುತ್ತಾನೆ. ಈತನಿಗೆ ಅಭಿನಂದನೆಗಳು.

ಎಸ್.ಎಸ್.ಎಲ್.ಸಿ 2012-13 ಫಲಿತಾಂಶ 93%

ಎಸ್.ಎಸ್.ಎಲ್.ಸಿ 2012-13 ಫಲಿತಾಂಶ 93%

Tuesday, May 21st, 2013

2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 98 ವಿದ್ಯಾರ್ಥಿಗಳಲ್ಲಿ 91 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು  ಶೇಕಡಾ 93 ಫಲಿತಾಂಶ ಬಂದಿರುತ್ತದೆ. ಇದರಲ್ಲಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ,  51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ,  16  ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಮತ್ತು 12 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಜಯಶ್ರೀ.ಪಿ – 593 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿರುತ್ತಾಳೆ. ಶ್ರೀವಿದ್ಯಾ ಕೆ.ಎಂ – 591 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದು ಪುತ್ತೂರು […]

 ಬೀಳ್ಕೊಡಗೆ ಸಮಾರಂಭ

ಬೀಳ್ಕೊಡಗೆ ಸಮಾರಂಭ

Tuesday, March 19th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 18-03-2013 ರಂದು ಎಸ್.ಎಸ್.ಯಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀಮತಿ ಶಶಿಕಲಾ ಅಮ್ಮನವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು ನಂತರ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಅನಿಸಿಕೆಯನ್ನು ಹೇಳಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ರವೀಂದ್ರ.ಪಿ. ರವರು ಮಾತನಾಡಿ “ವಿದ್ಯಾರ್ಥಿ ಜೀವನ ನಿಂತನೀರಲ್ಲಿ ಅದು ಸದಾ ಪ್ರವಾಹಿಸುತ್ತಿರುವ ನೀರು” ಎಂದು ತಿಳಿಸಿ ಶುಭಹಾರೈಕೆಯನ್ನು ಹೇಳಿದರು, ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮ […]

ಶಾರದಾ ಪೂಜೆ ಮತ್ತು ಭಜನೆ ಕಾರ್ಯಕ್ರಮ

ಶಾರದಾ ಪೂಜೆ ಮತ್ತು ಭಜನೆ ಕಾರ್ಯಕ್ರಮ

Monday, February 25th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ 22-02-2013 ರಂದು ವರ್ಷಂಪ್ರತಿ ನಡೆಯುವ ಶಾರದಾ ಪೂಜೆ ಮತ್ತು ಭಜನೆ ನಡೆಯಿತು. ವಿದ್ಯಾರ್ಥಿಗಳು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶ್ರೀದೇವರ ಕೃಪೆಗೆ ಪಾತ್ರರಾದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

Monday, February 25th, 2013

ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇದರ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

Highslide for Wordpress Plugin