ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ

Thursday, August 16th, 2012

ವಿವೇಕಾನಂದ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆ ಇಲ್ಲಿ ದಿನಾಂಕ 15.08.2012 ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾ ಯೋಧರಾದ ಶ್ರೀರಂಗಶಾಸ್ತ್ರೀ ಮಣಿಲರವರು ಭಾಗವಹಿಸಿ ಧ್ವಜಾರೋಹಣವನ್ನು ಗೈದು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಮಹತ್ವವವ್ವು ತಿಳಿಸಿದರು. ಈ ಸಂಧರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಹಾಗೂ ಸಂಚಾಲಕರಾದ ಶ್ರೀ ರವೀಂದ್ರ.ಪಿ, ಆಡಳಿತ ಮಂಡಳಿ ಸದಸ್ಯರಾದ ಶ್ರಿ ಅಚ್ಯುತ್ ನಾಯಕ್ ಇವರು ಘೋಷಣೆಯನ್ನು ಕೂಗಿದರು. ಬಳಿಕ ಶ್ರೀ ಜಯಪ್ರಕಾಶ್ ಕಲ್ಲಡ್ಕ ಇವರಿಂದ ಏಕವ್ಯಕ್ತಿ ಯಕ್ಷಗಾನ […]

ಜಿಲ್ಲಾಮಟ್ಟದ ವಾಲಿಬಾಲ್- ತ್ರೋಬಾಲ್ ಪಂದ್ಯಾಟ

ಜಿಲ್ಲಾಮಟ್ಟದ ವಾಲಿಬಾಲ್- ತ್ರೋಬಾಲ್ ಪಂದ್ಯಾಟ

Monday, August 13th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ ೧೧.೦೮.೨೦೧೨ ರಂದು ವಿದ್ಯಾಭಾರತಿ ಕರ್ನಾಟಕ  ವತಿಯಿಂದ ಜಿಲ್ಲಾ ಮಟ್ಟದ ತ್ರೋಬಾಲ್ ಮತ್ತು ವಾಲಿಬಾಲ್  ಪಂದ್ಯಾಟ ನಡೆಯಿತು. ಈ ಪಂದ್ಯಾಟದ ಉದ್ಫಾಟಕರಾಗಿ ಶ್ರೀ ಮೃತ್ಯುಂಜೇಶ್ವರ  ದೇವಸ್ಥಾನ ಮುಂಡೂರು ಇಲ್ಲಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಜಯಂತ ನಡುಬೈಲು ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಹರೀಶ್ ಪುತ್ತೂರಾಯ ಹಾಗೂ ಅಧ್ಯಕ್ಷರಾಗಿ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದು ಕ್ರೀಡಾಳುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು […]

ಇಂಟರ್ಯಾಕ್ಟ್ ಪದಗ್ರಹಣ ಸಮಾರಂಭ

ಇಂಟರ್ಯಾಕ್ಟ್ ಪದಗ್ರಹಣ ಸಮಾರಂಭ

Tuesday, August 7th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೨೦೧೨-೧೩ ನೇ ಸಾಲಿನ ಇಂಟರ್ಯಾಕ್ಟ್ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವು ಪುತ್ತೂರು ಪೂರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಹರೀಶ್.ಕೆ.ಪುತ್ತೂರಾಯ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ರೋ. ಜಯರಾಮ್ ಭಟ್, ರೋ. ವಿಶ್ವನಾಥ ನಾಯಕ್, ರೋ. ಪ್ರಮೀಳಾರಾವ್ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ನೂತನ ಇಂಟರ್ಯಾಕ್ಟ್ ಸದಸ್ಯರಿಗೆ ಶುಭಹಾರೈಸಿದರು. ಕಿರಣಸುಬ್ರಹ್ಮಣ್ಯ ನೂತನ ಅಧ್ಯಕ್ಷರಾಗಿ, ಪ್ರಜ್ಞಾ. ಪಿ. ಆರ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅಪೂರ್ವಗೌರಿ, ಹರ್ಷಿತಾ, ಪೂಜಾ, ಚಂದನ್, ಕಾರ್ತಿಕ್, ರಕ್ಷಿತ್, ಪವನ್ […]

ತಾಲೂಕು ಮಟ್ಟದ  ಯೋಗಾಸನ

ತಾಲೂಕು ಮಟ್ಟದ ಯೋಗಾಸನ

Tuesday, August 7th, 2012

ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಪರ್ಪುಂಜ ಇದರ ಸುವರ್ಣ ಸಂಭ್ರಮ ವರ್ಷದ ೨೦೧೨  ಇದರ ಅಂಗವಾಗಿ ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಪ್ರೌಢಶಾಲಾ ಬಾಲಕಿಯರ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.  

ಯೋಗಾಸನ ಸ್ಪರ್ಧೆ - ಪ್ರಥಮ ಸ್ಥಾನ

ಯೋಗಾಸನ ಸ್ಪರ್ಧೆ – ಪ್ರಥಮ ಸ್ಥಾನ

Tuesday, July 31st, 2012

ಹುಡುಗರು ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ  ಮಾಧ್ಯಮದ ವಿದ್ಯಾರ್ಥಿಗಳಾದ  ರಾಘವೇಂದ್ರ ಮತ್ತು ತಂಡ ಕಿಶೋರವಿಭಾಗದ ಹುಡುಗರ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಹುಡುಗಿಯರು ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ  ಮಾಧ್ಯಮದ ವಿದ್ಯಾರ್ಥಿಗಳಾದ ಸುಶ್ಮಿತಾ ಮತ್ತು ತಂಡ ಕಿಶೋರ ವಿಭಾಗದ ಹುಡುಗಿಯರ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಖೋ - ಖೋ - ಪ್ರಥಮ ಸ್ಥಾನ

ಖೋ – ಖೋ – ಪ್ರಥಮ ಸ್ಥಾನ

Tuesday, July 31st, 2012

ಬಾಲಕರು ವಿದ್ಯಾಭಾರತಿ ಕರ್ನಾಟಕ ಮತ್ತು ಸರಸ್ವತಿ ವಿದ್ಯಾಲಯ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಖೋ-ಖೋ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ  ಮಾಧ್ಯಮದ  ಕಿಶೋರ ವಿಭಾಗದ ಬಾಲಕರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರು ವಿದ್ಯಾಭಾರತಿ ಕರ್ನಾಟಕ ಮತ್ತು ಸರಸ್ವತಿ ವಿದ್ಯಾಲಯ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಖೋ-ಖೋ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ  ಮಾಧ್ಯಮದ ಕಿಶೋರ ವಿಭಾಗದ ಬಾಲಕಿಯರು ಪ್ರಥಮಸ್ಥಾನ ಪಡೆದುಕೊಂಡಿದ್ದಾರೆ.

ಭಜನೆ - ಪ್ರಥಮ

ಭಜನೆ – ಪ್ರಥಮ

Tuesday, July 31st, 2012

ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ  ಮಾಧ್ಯಮದ ವಿದ್ಯಾರ್ಥಿಗಳಾದ ಈಶ್ವರ ಸಂದೇಶ ಕಿಶೋರ ವಿಭಾಗದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮಸ್ಥಾನ ಹಾಗೂ ಕಿಶೋರ ವಿಭಾಗದ ಭಜನೆಯಲ್ಲಿ ಸಂಗೀತ ಮತ್ತು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಭಜನೆ - ದ್ವಿತೀಯ

ಭಜನೆ – ದ್ವಿತೀಯ

Tuesday, July 31st, 2012

ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ  ಮಾಧ್ಯಮದ ವಿದ್ಯಾರ್ಥಿಗಳಾದ ಸ್ವಾತಿ – ಶಿಶು ವಿಭಾಗದ ಗೀತಕಂಠಪಾಠದಲ್ಲಿ ದ್ವಿತೀಯ, ಹಾಗೂ ಬಾಲವಿಭಾಗದ ಭಜನೆಯಲ್ಲಿ ವರುಣ್ ಮತ್ತು  ತಂಡ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದ್ದಾರೆ.

ಯಾದವಶ್ರೀ ಸಭಾಂಗಣ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮತ್ತು ಪಾಲಕರ ಸಮಾವೇಶ ಅಮಂತ್ರಣ

ಯಾದವಶ್ರೀ ಸಭಾಂಗಣ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮತ್ತು ಪಾಲಕರ ಸಮಾವೇಶ ಅಮಂತ್ರಣ

Tuesday, July 24th, 2012
ಯೋಗಾಸನ ಸ್ಪರ್ಧೆ - ರಾಜ್ಯಮಟ್ಟಕ್ಕೆ ಆಯ್ಕೆ

ಯೋಗಾಸನ ಸ್ಪರ್ಧೆ – ರಾಜ್ಯಮಟ್ಟಕ್ಕೆ ಆಯ್ಕೆ

Thursday, July 19th, 2012

ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾಭಾರತಿ ವತಿಯಿಂದ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಘವೇಂದ್ರ, ಚರಣ್, ಪೃಥ್ವಿನಾರಾಯಣ, ಸುಶ್ಮಿತಾ, ಶಮಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Highslide for Wordpress Plugin