ವಿವೇಕಾನಂದ ತೆಂಕಿಲದಲ್ಲಿ ಸೂರ್ಯ ನಮಸ್ಕಾರ

ವಿವೇಕಾನಂದ ತೆಂಕಿಲದಲ್ಲಿ ಸೂರ್ಯ ನಮಸ್ಕಾರ

Saturday, February 23rd, 2013

ವಿವೇಕಾನಂದ ಮಹೋತ್ಸವ ಸಮಿತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಫೆ. ೧೮ ರಂದು ಬೆಳಿಗ್ಗೆ ತೆಂಕಿಲ ವಿವೇಕನಗರದಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳು, ಬಿ.ಎಡ್ ವಿದ್ಯಾರ್ಥಿಗಳು, ಶಿಕ್ಷಕರು ಸೂರ್ಯನಮಸ್ಕಾರ ಮಾಡಿದರು. ಪುಟಾಣಿಗಳು ಶಾಲಾ ಒಳಾಂಗಣದ ಸಭಾಂಗಣದಲ್ಲಿ ಸೂರ್ಯನಮಸ್ಕಾರ ಮಾಡಿದರು. ಯೋಗ ಶಿಕ್ಷಕಿ ಶ್ರೀಮತಿ ಶರಾವತಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ್ ಹಾಗೂ ವಿವೇಕಾನಂದ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯ […]

ಯಕ್ಷಗಾನ ಪ್ರದರ್ಶನ

ಯಕ್ಷಗಾನ ಪ್ರದರ್ಶನ

Friday, February 15th, 2013

ಕರ್ನಾಟಕ ಸಂಘ ಪುತ್ತೂರು ಹಾಗೂ ವಿವಿಧ ಸಾಹಿತ್ಯಾಸಕ್ತ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಸಾಹಿತ್ಯ ಕಲಾಕುಶಲೋಪರಿ ಸಂಸ್ಕೃತಿ ಸಲ್ಲಾಪ – 2013 ದಿನಾಂಕ 09.02.2013 ರಿಂದ 17.02.2013 ರವರೆಗೆ ಅನುರಾಗ ವಠಾರದಲ್ಲಿ ನಡೆದಿದ್ದು ದಿನಾಂಕ 12.02.2013 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಕೃಷ್ಣ-ಕೃಷ್ಣ ಶ್ರೀ ಕೃಷ್ಣ ಯಕ್ಷಗಾನ ನಡೆಯಿತು. ಶ್ರೀ ರಮೇಶ ಶೆಟ್ಟಿ ಬಾಯಾರು ಇವರ ನಿರ್ದೇಶನದಲ್ಲಿ ಶಾಲಾ ಮಕ್ಕಳು ಯಕ್ಷಗಾನ ಪ್ರದರ್ಶನ ನೀಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ್.ಬಿ ರವರು ನೆರವೇರಿಸಿದರು.

ವಿವೇಕಾನಂದ ಜಯಂತಿ

ವಿವೇಕಾನಂದ ಜಯಂತಿ

Saturday, February 9th, 2013

ಸ್ವಾಮಿ ವಿವೇಕಾನಂದ ೧೫೦ನೇ ವರ್ಷಾಚರಣೆ ಹಾಗೂ ವಿವೇಕಾನಂದ ಜಯಂತಿ ಕಾರ್ಯಕ್ರಮ ವೈವಿಧ್ಯ ಕಿರಿಯ ಪ್ರಾಥಮಿಕ ಮಕ್ಕಳಿಗೆ ಮಕ್ಕಳು ವಿವೇಕಾನಂದರ ವೇಷ ಧರಿಸಿ ವಿವೇಕಾನಂದ ಮಾದರಿ ಶಿಶು ಮಂದಿರದ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವೇಕಾನಂದರ ನುಡಿಮುತ್ತುಗಳು ಹಾಗೂ ಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹಿರಿಯ ಪ್ರಾಥಮಿಕ ಮಕ್ಕಳಿಗೆ ವಿವೇಕಾನಂದ ಬಾಲ್ಯ, ವಿವೇಕಾನಂದರ ಶಿಕ್ಷಣ ಹಾಗೂ ಸ್ವದೇಶ ಪ್ರೇಮದ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವೇಕಾನಂದ ಕಾಲೇಜಿನಲ್ಲಿ ಜರುಗಿದ ವಿವೇಕಾನಂದ ಜಯಂತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. […]

ವಿವೇಕಾನಂದ  ಶಾಲಾ ವಾರ್ಷಿಕ ಕ್ರೀಡಾಕೂಟ

ವಿವೇಕಾನಂದ ಶಾಲಾ ವಾರ್ಷಿಕ ಕ್ರೀಡಾಕೂಟ

Saturday, February 9th, 2013

ಇಲ್ಲಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲಾ ವಾರ್ಷಿಕ ಕ್ರೀಡಾ ಕೂಟವನ್ನು ಜಿ.ಪಂ. ಸದಸ್ಯ ಕೇಶವ ಗೌಡ ಬಜತ್ತೂರು ಉದ್ಫಾಟಿಸಿದರು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಜೀವಂಧರ್ ಜೈನ್, ಶಾಲಾ ಆಡಳಿತ ಮಂಡಳಿ ಪ್ರಮುಖರಾದ ಬಂಗಾರಡ್ಕ ವಿಶ್ವೇಶ್ವರ ಭಟ್, ರವೀಂದ್ರ.ಪಿ, ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಸತೀಶ್ ಉಜಿ ಮತ್ತಿತ್ತರು ಉಪಸ್ಥಿತರಿದ್ದರು.

ಸಾಮೂಹಿಕ ಹುಟ್ಟುಹಬ್ಬ

ಸಾಮೂಹಿಕ ಹುಟ್ಟುಹಬ್ಬ

Saturday, February 9th, 2013

ಚಿಕ್ಕಂದಿನಲ್ಲಿ ಇತರ ಮಕ್ಕಳಂತೆ ಬಾಲ್ಯ ಸಹಜ ಚೇಷ್ಟೆಗಳನ್ನು ತೋರುತ್ತಾ ಬೆಳೆದ ನರೇಂದ್ರ ದೊಡ್ಡವನಾಗಿ ಮಹಾ ತೇಜಸ್ವಿ ವಿವೇಕಾನಂದರಾಗಿ ಜಗದ್ವಿಖ್ಯಾತರಾದಂತೆ ಮಕ್ಕಳೆಲ್ಲರೂ ಅವರ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಶ್ರೀಮತಿ ಶ್ರೀದೇವಿ ಕಾನಾವು ಇವರು ದಿನಾಂಕ ೨೬.೦೧.೨೦೧೩ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ  ಜರುಗಿದ ಸಾಮೂಹಿಕ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಮೇಲಿನ ಮಾತುಗಳನ್ನಾಡಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ಯಾಮಪ್ರಸಾದ ಶಾಸ್ತ್ರೀಗಳು ಶುಭ ಹಾರೈಸಿದರು. ಶ್ರೀಮತಿ ದಾಕ್ಷಾಯಿಣಿ ಮಾತಾಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಸ್ವಾತಿ ಸ್ವಾಗತಿಸಿ, […]

ಗಣರಾಜ್ಯೋತ್ಸವ ದಿನಾಚರಣೆ

Saturday, February 9th, 2013

ದೇಶ ರಕ್ಷಣೆಗೆ ಸೈನಿಕರ ಅವಶ್ಯಕತೆಯಿದ್ದು ಹೆಚ್ಚು ಹೆಚ್ಚು ಯುವಜನರು ಸೇನೆಗೆ ಸೇರಬೇಕು. ಸೇವಾ ನಿವೃತ್ತಿಯ ನಂತರವೂ ಉತ್ತಮ ಸೌಲಭ್ಯಗಳೂ, ಉದ್ಯೋಗವೂ ಸಿಗುವುದು ಎಂಬುದಾಗಿ ಮಾಜಿ ಸೈನಿಕರೂ ಪ್ರಸ್ತುತ ಪುತ್ತೂರಿನ ಕಾರ್ಪೋರೇಶನ್ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿರುವ ಕೆ.ಎಸ್.ದಯಾನಂದರವರು ಹೇಳಿದರು. ಇವರು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಗೈದು ಈ ಮೇಲಿನ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಡಿ.ಜ್ಯೋತ್ಸ್ನಾರವರು ಭಾರತದ ಸಂವಿಧಾನವು […]

ರಾಜ್ಯಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟಕ್ಕೆ ಆಯ್ಕೆ

Friday, January 18th, 2013

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇದರ ವತಿಯಿಂದ ಶಿಕ್ಷಕರಿಗೆ ಏರ್ಪಡಿಸಿದ ಸಹಪಠ್ಯ ಚಟುವಟಿಕೆಯ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ರುಕ್ಮಯ ಪೂಜಾರಿ ಇವರು ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕು| ಲಾವಣ್ಯ ಪಾಠೋಪಕರಣ ತಯಾರಿಕಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಅತ್ಯುತ್ಕ್ರಷ್ಟತೆಯನ್ನು ಸಾಧಿಸಿ - ಸುಲೇಖಾ ವರದರಾಜ್

ಅತ್ಯುತ್ಕ್ರಷ್ಟತೆಯನ್ನು ಸಾಧಿಸಿ – ಸುಲೇಖಾ ವರದರಾಜ್

Tuesday, January 15th, 2013

ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಮಾತಿನಂತೆ ಸಾಧಿಸುವ ಛಲವಿದ್ದರೆ ಯಾವುದೇ ಅಡೆತಡೆಗಳೂ ಗುರಿ ಸಾಧನೆಗೆ ಅಡ್ಡಿಯಾಗಲಾರವು ಎಂಬುದನ್ನು ನೈಜ ದೃಷ್ಟಾಂತಗಳ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವ ಮಾತುಗಳನ್ನಾಡುತ್ತಾ ಸುಲೇಖಾ ವರದರಾಜ್ ರವರು ಕ್ರೀಡೆ, ಕಲೆ, ಕೃಷಿ, ರಾಜಕೀಯ ಇತ್ಯಾದಿ ಯಾವುದೇ ಕ್ಷೇತ್ರವಿರಲಿ ಅವಿರತ ಪರಿಶ್ರಮದ ಮೂಲಕ ಅತ್ಯುತ್ಕ್ರಷ್ಟತೆಯನ್ನು ಸಾಧಿಸಲು ಕರೆ ನೀಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ನಡೆದ ಸಂವಾದ ಸಂದರ್ಭದಲ್ಲಿ ಈ ಮೇಲಿನ ಮಾತನ್ನಾಡುತ್ತಾ ದೂರದರ್ಶನ, ಮೊಬೈಲ್ ಇತ್ಯಾದಿ […]

ಗಾನ - ನೃತ್ಯ - ಯಕ್ಷಗಾನದ ವಾರ್ಷಿಕೋತ್ಸವ

ಗಾನ – ನೃತ್ಯ – ಯಕ್ಷಗಾನದ ವಾರ್ಷಿಕೋತ್ಸವ

Friday, January 11th, 2013

ದಿನಾಂಕ ೦೬.೦೧.೨೦೧೩ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗಾನ-ನೃತ್ಯ-ಯಕ್ಷ ಸಂಭ್ರಮವು ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ಹಿರಿಯ ವಿದ್ಯಾರ್ಥಿಗಳಾದ ಶರಣ್ ಕುಮಾರ್ ಮತ್ತು ದಿವ್ಯಾ.ಬಿ.ಕೆ ರವರು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿದರು. ಇದಾದ ಬಳಿಕ ಸಂಗೀತಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳ ‘ಗಾನ ಸಿಂಚನ’ ನಡೆಯಿತು. ಸುಮಾರು ೪.೩೦ ಗಂಟೆಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶ್ರೀ ಪಿ.ಕಮಲಾಕ್ಷ ಆಚಾರ್ ರವರು ಮಾತನಾಡಿ ಸಂಗೀತ, ಭರತನಾಟ್ಯ, ಯಕ್ಷಗಾನಗಳನ್ನು ಅಭ್ಯಾಸ ಮಾಡುವುದರೊಂದಿಗೆ ವಿದ್ಯಾರ್ಥಿಗಳು ತಮ್ಮ […]

ವಾರ್ಷಿಕ ಕ್ರೀಡಾ ಕೂಟ 2012-13

ವಾರ್ಷಿಕ ಕ್ರೀಡಾ ಕೂಟ 2012-13

Friday, January 4th, 2013
Highslide for Wordpress Plugin