ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನ

Saturday, June 9th, 2012

ದಿನಾಂಕ ೦೫.೦೬.೨೦೧೨ ರಂದು ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ಸ್ ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು ಇವರ ನಿರ್ದೇಶನದಂತೆ ಮೊಟ್ಟೆತ್ತಡ್ಕದ ಪ್ರಗತಿಪರ ಕೃಷಿಕರಾದ ಉಪೇಂದ್ರ ಬಲ್ಯಾಯ ರವರ ಸ್ಥಳದಲ್ಲಿ ಧನ್ವಂತರಿ  ಆರ್ಯುವೇದಿಕ್ ಗಿಡಗಳ ವನವನ್ನು ನಿರ್ಮಿಸಿದರು. ದಿನೇ ದಿನೇ ಪರಿಸರ ವಿನಾಶವಾಗುವ ಈ ಸಂದರ್ಭದಲ್ಲಿ ಆರೋಗ್ಯದಾಯಕವಾದ ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ವಪರಿಸರ ದಿನಾಚರಣೆಗೆ ಅರ್ಥಪೂರ್ಣವಾದ ಮಹತ್ವವನ್ನು ಕೊಡಬೇಕೆಂಬ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಇಂತಹ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂಬ ಅಂಶವನ್ನು […]

೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ

೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ

Saturday, June 9th, 2012

ದಿನಾಂಕ ೦೬/೦೬/೨೦೧೨ ರಂದು ೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ನಾಯಕನಾಗಿ ಹತ್ತನೇ ತರಗತಿಯ ಉತ್ತಮ್.ಎನ್ ಬಹುಮತದಿಂದ ಚುನಾಯಿತರಾದರು. ಉಪನಾಯಕನಾಗಿ ಹತ್ತನೇ ತರಗತಿಯ ಪ್ರವಚನ್ ಆಯ್ಕೆಯಾದರು. ಪ್ರಾಥಮಿಕ ಶಾಲಾ ಮಟ್ಟದ ಚುನಾವಣೆಯಲ್ಲಿ ನಾಯಕಿಯಾಗಿ ಏಳನೇ ತರಗತಿಯ ಕು|ಅಂಕಿತಾ.ವಿ.ಕೆ ಮತ್ತು ಉಪನಾಯಕಿಯಾಗಿ ಏಳನೇ ತರಗತಿಯ ಕು| ಅಶ್ವಿನಿ ನಾಯಕ್ ರವರು ಆಯ್ಕೆಯಾದರು. ಶಾಲಾ ಚುನಾವಣೆಯ ಮುಖ್ಯ ಅಧಿಕಾರಿಯಾಗಿ ಹಿರಿಯ ಶಿಕ್ಷಕರಾದ ಶ್ರೀ ವಿಶ್ವನಾಥ ಮೂಡೂರು ತಮ್ಮ ಕಾರ್ಯ ನಿರ್ವಾಹಿಸಿದರು. ಶಾಲಾ ಶಿಕ್ಷಕರು […]

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

Thursday, June 7th, 2012

ದಿನಾಂಕ ೦೬-೦೬-೨೦೧೨ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಇಲ್ಲಿ  ೨೦೧೨ – ೧೩ನೇ ಸಾಲಿನಲ್ಲಿ ಹೊಸದಾಗಿ ಸೇರಿರುವ ವಿದ್ಯಾರ್ಥಿಗಳ ಶಾಲಾಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಫಾಟಕರಾಗಿ ಕ್ಷೇತ್ರಸಂಪನ್ಮೂಲಕೇಂದ್ರದ ಸಮನ್ವಯಾಧಿಕಾರಿಯಾದ ಶ್ರೀ ನಂದೀಶರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ವೇದವ್ಯಾಸರವರು ಶಾಲೆ ಮತ್ತು ವಿದ್ಯಾರ್ಥಿಗಳ ಶ್ರೇಯಸ್ಸಿಗೊಸ್ಕರ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಹಿರಿದಾದುದು ಎಂಬುದಾಗಿ ಹೇಳಿ ಶುಭ ಹಾರೈಕೆಯನ್ನು ಮಾಡಿದರು. ಸಭಾಧ್ಯಕ್ಷರಾಗಿ ಶಾಲಾ ಆಡಳಿತ […]

'ಮಾತೃಭಾಷಾ  ಶಿಕ್ಷಣ  ಮತ್ತು  ವಿದ್ಯಾರ್ಥಿಯ ಮನೋಸ್ಥಿತಿ’ - ಸಂವಾದ

‘ಮಾತೃಭಾಷಾ ಶಿಕ್ಷಣ ಮತ್ತು ವಿದ್ಯಾರ್ಥಿಯ ಮನೋಸ್ಥಿತಿ’ – ಸಂವಾದ

Monday, June 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲದಲ್ಲಿ ದಿನಾಂಕ ೦೨/೦೬/೨೦೧೨ ರಂದು ೨೦೧೨-೧೩ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಮಾತೃಭಾಷಾ  ಶಿಕ್ಷಣ  ಮತ್ತು  ವಿದ್ಯಾರ್ಥಿಯ ಮನೋಸ್ಥಿತಿ ಎಂಬ ವಿಷಯದ ಬಗ್ಗೆ  ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಸಂಚಾಲಕರಾದ ಶ್ರೀ ರವೀಂದ್ರ.ಪಿ ರವರು ಉಪಸ್ಥಿತರಿದ್ದರು.              

ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ - ಮಾಹಿತಿ ಕಾರ್ಯಾಗಾರ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ – ಮಾಹಿತಿ ಕಾರ್ಯಾಗಾರ

Monday, June 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲದಲ್ಲಿ ದಿನಾಂಕ ೦೨/೦೬/೨೦೧೨ ರಂದು ಶಿಕ್ಷಕರಿಗಾಗಿ ‘ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ  ಮತ್ತು  ಕಲಿಕೆಯನ್ನು ಪರಿಣಾಮಕಾರಿಯಾಗಿ ಬೋಧನೆಯವ ಬಗ್ಗೆ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ಶಿಶುಮಂದಿರದ ಸಂಚಾಲಕರಾದ ಶ್ರೀ ಶ್ಯಾಮ್ ಪ್ರಸಾದ್ ಶಾಸ್ತ್ರಿ ರವರು ಉಪಸ್ಥಿತರಿದ್ದರು.

ಮಾಹಿತಿ ಕಾರ್ಯಗಾರ

ಮಾಹಿತಿ ಕಾರ್ಯಗಾರ

Saturday, June 2nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ  ದಿನಾಂಕ 01/05/2012 ರಂದು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣಾ ಇಲಾಖೆಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಯ ಸಮಕ್ಷಮದಲ್ಲಿ 2011-12ನೇ ಸಾಲಿನ ಶೈಕ್ಷಣಿಕ ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ಸಭೆ ನಡೆಯಿತು.

ಕಂಪ್ಯೂಟರ್ ಕಾರ್ಯಾಗಾರ ತರಗತಿ ಆರಂಭ

ಕಂಪ್ಯೂಟರ್ ಕಾರ್ಯಾಗಾರ ತರಗತಿ ಆರಂಭ

Tuesday, May 22nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಶೈಕ್ಷಣಿಕ ಕಂಪ್ಯೂಟರ್ ಕಾರ್ಯಾಗಾರ ತರಗತಿಗಳು ದಿನಾಂಕ ೧೫.೦೫.೨೦೧೨ ರಿಂದ ಆರಂಭಗೊಂಡಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 96% ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 96% ಫಲಿತಾಂಶ

Tuesday, May 22nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು 2011-12ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 50ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು  ಶೇಕಡಾ 96% ಫಲಿತಾಂಶ ಬಂದಿರುತ್ತದೆ. ಇದರಲ್ಲಿ 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ,  23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು  08   ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಮತ್ತು 05 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.     ಅಮೃತ.ಪಿ – 595 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಮಾನಸ – 572 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ […]

ಹೊಸತನದ ವೆಬ್‍ಸೈಟ್

Wednesday, May 16th, 2012

ನಮ್ಮ ಸಂಸ್ಥೆಯ ವೆಬ್‍ಸೈಟ್ ಹೊಸತನದೊಂದಿಗೆ ಶೀಘ್ರದಲ್ಲಿ ಬರಲಿದೆ.

Highslide for Wordpress Plugin